POLICE BHAVAN KALABURAGI

POLICE BHAVAN KALABURAGI

22 May 2018

KALABURAGI DISTRICT REPORTED CRIMES


ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಅಭಿಮಾನ್ಯತಂದೆಮೂಕಪ್ಪತೆಳಗೇರಿವಯ ಸಾ: ನರಿಬೋಳಗ್ರಾಮತಾ: ಜೇವರಗಿಜಿ; ಕಲಬುರಗಿ ನಮ್ಮೂರ ಗುರುರಾಜ ಸುಭೆದಾರ ಈತನು ಮೊದಲಿನಿಂದಲು ಚುನಾವಣೆಯಲ್ಲಿ ನಾವು ಬಿಜೆಪಿ ಪರವಾಗಿ ಓಡಾಡಿದ ವಿಷಯದಲ್ಲಿ ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದು ನನ್ನ ಮೇಲೆ ದ್ವೇಶಸಾಧಿಸುತ್ತಾಬಂದಿರುತ್ತಾನೆ.ದಿನಾಂಕ 17/05/2018 ರಂದು ಸಾಯಂಕಾಲ ಸುಮಾರಿಗೆ ಬಿಜೆಪಿಯ ಶ್ರೀಯಡಿಯೂರಪ್ಪರವರುಮುಖ್ಯಮಂತ್ರಿಗಳಾಗಿಪ್ರಮಾಣವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರು ಗುರುರಾಜ ಸುಬೇದಾರ ಇವರ ಮನೆಯ ಮುಂದಿನ ರಸ್ತೆಯಲ್ಲಿ ಪಟಾಕಿ ಹೊಡೆದಿರುತ್ತಾರೆ. ಆವಿಷಯದಲ್ಲಿ ಗುರುರಾಜ ಸುಬೇದಾರ ಇತನು ನನಗೆ ನೀಮ್ಮಹುಡುಗರುಈರೀತಿಯಾಕೆ? ಮಾಡುತ್ತಿದ್ದಾರೆಎಂದು ಬೈದಿರುತ್ತಾನೆ. ಹೀಗಿದ್ದು ದಿನಾಂಕ; 18/05/2018 ರಂದು ರಾತ್ರಿ 8-00 ಪಿಎಮ್ಸುಮಾರಿಗೆ ನಾನು ನಮ್ಮ ಅಳಿಯನಾದ ಹಣಮಂತ ತಂದೆ ಮಹಾದೇವಪ್ಪಹೊಟ್ಟೆಗೊಳ ಇವರ ಮನೆಯ ಮುಂದೆಇದ್ದಾಗ 1) ಗುರುರಾಜ ತಂದೆ ಹಣಮಂತರಾಯ ಸುಬೇದಾರ 2) ಮರೆಪ್ಪ ತಂದೆ ಶರಣಪ್ಪ ಹೊಟ್ಟೆ, ಮತ್ತು 3) ಬುಡ್ಡೆಸಾಬ ತಂದೆ ಹಾಜಿಸಾಬ ಕಡಬೂರ 4)  ನಬೀಸಾಬ ತಂದೆ ಉಸ್ಮಾನಸಾಬ ವಸ್ತಾದ 5) ಗೂಡುಸಾಬ ತಂದೆ ಉಸ್ಮಾನ ನಾಯ್ಕೊಡಿ 6) ಸಿದ್ದಪ್ಪ ತಂದೆ ಶಿವಶರಣಪ್ಪ ಏಡಿ, 7)  ಶರಣಬಸಪ್ಪ ತಂದೆ ಸಿದ್ದಪ್ಪ ಏಡಿ, 8) ನಾಗಪ್ಪ ತಂದೆ ಬಸವರಾಜ ಏಡಿ ಸಾಃ ಎಲ್ಲರೂ ನರಿಬೊಳ ಇವರೆಲ್ಲರೂ ಅಕ್ರಮಕೂಟಕಟ್ಟಿಕೊಂಡು ನನ್ನ ಹತ್ತಿರ ಬಂದುಏರಂಡಿಮಗನೆ ಅಬೀಮಾನ್ಯ ಸೂಳೆಮಗನೆ ನೀವು ಬಿಜೆಪಿ ಪರ ಓಟಹಾಕುತ್ತೀರಿ ಭೋಸಡಿ ಮಕ್ಕಳೆ ಮತ್ತು ಊರಲ್ಲಿ ಪಟಾಕಿ ಹೊಡೆಸುತಿ ರಂಡೀಮಗನೆ ಎಂದು ನನಗೆ ಅವಾಚ್ಯವಾಗಿ ಬೈಯಹತ್ತಿದ್ದರು ಆಗ ನಾನು ಎಲ್ಲಿ ಅವರಸಂಗಡ ಕಿರಕಿರಿ ಎಂದು ಅಲ್ಲಿಂದ ಹೊಗುತ್ತಿದ್ದಾಗ ಮರೆಪ್ಪ ಹೊಟ್ಟೆಇತನು ಬಂದು ನನಗೆ ತಡೆದು ನಿಲ್ಲಿಸಿದನು. ಸಿದ್ದಪ್ಪಏಡಿ, ಮತ್ತು ನಬೀಸಾಬ ವಸ್ತಾದ ಇವರುಏ ಬೇಡ ಜಾತಿ ಸೂಳಿ ಮಗನೆ ನೀನು ನಮಗೆ ನುಕೇಳುತ್ತಿ ಊರಲ್ಲಿ ನಿನ್ನದು ಸೊಕ್ಕುಬಹಳ ಆಗಿದೆ. ಎಂದು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿರುತ್ತಾರೆ. ಮತ್ತು ಗುರುರಾಜ ಸುಬೇದಾರ ಮತ್ತು ಉಳಿದವರು ಕೂಡಿ ಬೋಸಡಿ ಮಗನೆ ನೀನು ಬಿಜೆಪಿ ಪಕ್ಷದ ಕಡೆಗೆ ಓಟುಮಾಡುತ್ತಿ ಮಗನೆ ನೀನು ಇನ್ನು ಮುಂದೆ ಊರಲ್ಲಿ ಹೇಗೆ ಜೀವನಮಾಡುತ್ತಿ ನಿನಗೆ ನೋಡಿಕೊಳ್ಳುತ್ತೇವೆ ಎಂದು ಹೊಡೆಯಲು ಬಂದರು. ಆಗ ಈಘಟನೆಯನ್ನು ನೋಡಿ ನನ್ನ ಹೆಂಡತಿ ಮರೆಮ್ಮ ಗಂಡ ಅಭಿಮಾನ್ಯ ತಳಗೇರಿ ಹಾಗು ನಮ್ಮಅಣ್ಣನ ಮಗಳು ಸಾಬಮ್ಮ ಗಂಡ ಹಣಮಂತ ಹೊಟ್ಟೆ ಇವರು ಬಿಡಿಸಲು ಬಂದಾಗ ಅವರಿಗೂ ಕೂಡಾಏಬ್ಯಾಡ ಸೂಳೆಯರೆ ಇಲ್ಲಿಂದ ಹೋಗಿರಿ ಎಂದು ಅವಾಚ್ಯವಾಗಿ ಜಾತಿ ಎತ್ತಿ ಬೈದಿರುತ್ತಾರೆ. ಅಷ್ಟರಲ್ಲಿಯೇ ನಮ್ಮೂರ ಕಾಸೀಮಸಾಬ  ಕೊತವಾಲ, ಭೀಮರಾಯ ತಂದೆ ಸಾಬಣ್ಣ ಲಾಡ್ಲಾಪೂರ,  ಈಶಪ್ಪ ತಂದೆ ಬಸಪ್ಪ ದೊಡ್ಮನಿ ಇವರು ಬಂದು ಜಗಳ ಬಿಡಿಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ಗುರುರಾಜ ತಂದೆ ಹಣಮಂತರಾವ ಸುಭೆದಾರ ಸಾ: ನರಿಬೋಳ ಗ್ರಾಮ ತಾ: ಜೇವರಗಿ ಜಿ; ಕಲಬುರಗಿ ರವರು ನಮ್ಮೂರ ಮಹಾದೇವ ತಂದೆ ಸೈಬಣ್ಣ ಲಾಡ್ಲಾಪೂರ ಈತನು ಮೊದಲಿನಿಂದಲು ಚುನಾವಣೆಯಲ್ಲಿ ನಾವು ಕಾಂಗ್ರೇಸ್ ಪರವಾಗಿ ಮತದಾನ ಮಾಡಿದ ವಿಷಯವಾಗಿ ಮತ್ತು ಕಾಂಗ್ರೇಸ್ ಪರವಾಗಿ ಓಡಾಡಿದ ವಿಷಯದಲ್ಲಿ ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದು ನನ್ನ ಮೇಲೆ ದ್ವೇಶ ಸಾಧಿಸುತ್ತಾ ಬಂದಿರುತ್ತಾರೆ. ಮತ್ತು ದಿನಾಂಕ; 17/05/2018 ರಂದು ಸಾಯಂಕಾಲ 7-00 ಪಿಎಮ್ ಸುಮಾರಿಗೆ ನರಿಬೋಳ ಗ್ರಾಮದ ಪಂಚಾಯತಿ ಹತ್ತಿರ 01) ಮಹಾದೇವ ತಂದೆ ಸೈಬಣ್ಣ ಲಾಡ್ಲಾಪೂರ 02) ಅಭಿಮಾನ್ಯೂ ತಂದೆ ಮೂಕಪ್ಪ ತೆಳಗೇರಿ 03) ಶರಣಪ್ಪ ಚಿಕ್ಕಜೇವರಗಿ 04) ಮಲ್ಲಪ್ಪ ತಂದೆ ಮೂಕಪ್ಪ ತೆಳಗೇರಿ 05) ಮಲ್ಲಪ್ಪ ಕೊಳ್ಳುರು 06) ಸಿದ್ದಪ್ಪ ತಂದೆ ಜನ್ನಪ್ಪ ಕಿರದಳ್ಳಿ 07) ಸಾಬಣ್ಣ ತಂದೆ ಬಸಪ್ಪ ದೊಡಮನಿ 08) ಮಾರ್ತಂಡ್ ತಂದೆ ಮೂಕಪ್ಪ ತೆಳಗೇರಿ ಸಾ: ಎಲ್ಲರೂ ನರಿಬೋಳ ಗ್ರಾಮ ಇವರು ಕೂಡಿ ಬೋಸಡಿ ಮಕ್ಕಳೆ ನೀವು ಕಾಗ್ರೇಸ್ ಗೆ ಓಟು ಹಾಕುತ್ತೀರಿ ನೀವು ಊರಲ್ಲಿ ಹೇಗೆ ಸಂಸಾರ ಮಾಡುತ್ತೀರಿ ಕಬ್ಬಲಿಗೆರೆ ಎಂದು ಅವಾಚ್ಯವಾಗಿ ಬೈದು ಬಾಯಿ ತಕರಾರು ಮಾಡಿ ಚಪ್ಪಲಿಯಿಂದ ಶಿವಶರಣಪ್ಪ ಈತನಿಗೆ ಹೊಡೆದಿರುತ್ತಾರೆ. ಆಗ ನಾನು ಚುನಾವಣೆಯಲ್ಲಿ ಅವರ ಮನಸಿಗೆ ಬಂದವರಿಗೆ ಓಟು ಹಾಕುತ್ತಾರೆ ಹೋಗಲಿ ಬಿಡರಿ ಎಂದು ತಿಳಿಸಿ ಹೇಳಿ ಜಗಳ ಬಿಡಿಸಿರುತ್ತೇನೆ. ಆಗ ನನಗೆ ಕೂಡ ತಕರಾರು ಮಾಡಿರುತ್ತಾರೆ ದಿನಾಂಕ; 18/05/2018 ರಂದು ರಾತ್ರಿ 8-00 ಪಿಎಮ್ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ಮನೆಯ ಮುಂದೆ 01) ಮಹಾದೇವ ತಂದೆ ಸೈಬಣ್ಣ ಲಾಡ್ಲಾಪೂರ 02) ಅಭಿಮಾನ್ಯೂ ತಂದೆ ಮೂಕಪ್ಪ ತೆಳಗೇರಿ 03) ಶರಣಪ್ಪ ಚಿಕ್ಕಜೇವರಗಿ 04) ಮಲ್ಲಪ್ಪ ತಂದೆ ಮೂಕಪ್ಪ ತೆಳಗೇರಿ 05) ಮಲ್ಲಪ್ಪ ಕೊಳ್ಳುರು 06) ಸಿದ್ದಪ್ಪ ತಂದೆ ಜನ್ನಪ್ಪ ಕಿರದಳ್ಳಿ 07) ಸಾಬಣ್ಣ ತಂದೆ ಬಸಪ್ಪ ದೊಡಮನಿ 08) ಮಾರ್ತಂಡ್ ತಂದೆ ಮೂಕಪ್ಪ ತೆಳಗೇರಿ ಸಾ: ಎಲ್ಲರೂ ನರಿಬೋಳ ಗ್ರಾಮ ಇವರೆಲ್ಲರು ಕೂಡಿ ಅಕ್ರಮ ಕೂಟ ಕಟ್ಟಿಕೊಂಡು ಬಂದು ಬೇಡ ಜಾತಿಯವರಾದ ಅಭಿಮಾನ್ಯೂ ತೆಳಗೇರಿ ಮತ್ತು ಕುರುಬ ಜಾತಿಯವನಾದ ಸಿದ್ದಪ್ಪ ಕಿರದಳ್ಳಿ ಇವರು ಕೂಡಿ ಏ ರಂಡಿ ಮಕ್ಕಳೆ ನೀವು ಕಾಂಗ್ರೇಸಗೆ ಓಟ ಹಾಕುತ್ತೀರಿ ಭೋಸಡಿ ಮಕ್ಕಳೆ ನಿಮಗೆ ಕುಡಿಯಲು ನೀರು ಇಲ್ಲದಂತೆ ಮಾಡುತ್ತೇವೆ ಊರಲ್ಲಿ ಹೇಗೆ ಜೀವನ ಮಾಡುತ್ತೀರಿ ನಿಮಗೆ ನೋಡಿಕೊಳ್ಳುತ್ತೇವೆ. ಎಂದು ಬೈದು ನಮ್ಮ ಮನೆಯ ಮುಂದೆ ಇದ್ದ ನೀರಿನ ನಳದ ಮೇಲೆ ಕಲ್ಲು ಹಾಕಿ ಹಾಳು ಮಾಡಿರುತ್ತಾರೆ. ಆಗ ನಾನು ಕೇಳಲು ಹೋದರೆ. ಮಹಾದೇವ ಲಾಡ್ಲಾಪೂರ ಈತನು ಏ ಬೇಡ ಜಾತಿ ಸೂಳಿ ಮಗನೆ ನೀನು ಏನು ಕೇಳುತ್ತಿ ಊರಲ್ಲಿ ನಿನ್ನದು ತಿಂಡಿ ಬಾಳ ಆಗಿದೆ. ಎಂದು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿರುತ್ತಾನೆ. ಮತ್ತು  ಮಲ್ಲಪ್ಪ ತಳಗೇರಿ ಹಾಗು ಮಾರ್ತಂಡ್ ತಳಗೇರಿ ಮತ್ತು ಉಳಿದವರು ಕೂಡಿ ಬೋಸಡಿ ಮಗನೆ ನೀನು ಕಾಂಗ್ರೇಸ್ ಪರವಾಗಿ ಓಟು ಮಾಡುತ್ತಿ ಮಗನೆ ನೀನು ಇನ್ನು ಮುಂದೆ ಊರಲ್ಲಿ ಹೇಗೆ ಜೀವನ ಮಾಡುತ್ತಿ ನಿನಗೆ ನೋಡಿಕೊಳ್ಳುತ್ತೇವೆ ಎಂದು ಬಡಿಗೆ ಮತ್ತು ಕಲ್ಲಿನಿಂದ ನನಗೆ ಹೊಡೆಯಲು ಬಂದರು. ಆಗ ಈ ಘಟನೆಯನ್ನು ನೋಡಿ ಅಲ್ಲಿಯೇ ನಮ್ಮ ಮನೆಯ ಪಕ್ಕದಲ್ಲಿದ್ದ ರಾಮು ತಂದೆ ಮರೆಪ್ಪ ಹೊಟ್ಟೆ, ಮಲ್ಲಪ್ಪ ತಂದೆ ಭೀಮರಾಯ ಹುಲಕಲ್, ಮಹೇಶ ತಂದೆ ಮರೆಪ್ಪ ಮೇಲಿನ ಮನಿ ಹಾಗು ನರಸಪ್ಪ ತಂದೆ ಹಣಮಂತ ರಾವೂರ ಇವರೆಲ್ಲರು ಕೂಡಿ ಬಂದು ಜಗಳ ಬಿಡಿಸಿರುತ್ತಾರೆ. ನಂತರ ನಾನು ಅವರಿಂದ ಜೀವಕ್ಕೆ ಹೆದರಿ ತಪ್ಪಿಸಿಕೊಂಡು ನಮ್ಮ ಮನೆಯಲ್ಲಿ ಓಡಿ  ಹೋಗಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ :  ಶ್ರೀ ಶರಣಪ್ಪ ತಂದೆ ಭೀಮಪ್ಪ ಮಾದರ ಸಾ|| ಕರನಾಳ ತಾ|| ಸಿಂದಗಿ ಹಾ|||| ಏವೂರ ತಾ|| ಸುರಪೂರ ರವರ ಅಣ್ಣತಮ್ಮಕಿಯ ಸಂಗಪ್ಪ ಮಾದರ ಮತ್ತು ಅವನ ಮಗ ಬೀರಪ್ಪ ಮಾದರ ರವರೊಂದಿಗೆ ಆಸ್ತಿ ವಿಷಯಕ್ಕೆ ಮತ್ತು ನಾನು ಸಂಗಪ್ಪನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುತ್ತೇನೆ ಅಂತಾ ತಿಳಿದು ನನ್ನೊಂದಿಗೆ ತಕರಾರು ಮಾಡಿಕೊಂಡು ವೈಶಮ್ಯ ಬೆಳೆಸುತ್ತಾ ಬಂದಿರುತ್ತಾರೆ, ಆದ್ದರಿಂದ ನಾನು ಈಗ ಸುಮಾರು ವರ್ಷಗಳಿಂದ ನನ್ನ ಹೆಂಡತಿವೂರಾದ ಸುರಪೂರ ತಾಲೂಕಿನ ಏವೂರ ಗ್ರಾಮದಲ್ಲೇ ವಾಸವಾಗಿರುತ್ತೇನೆ. ನಾವು 5 ಜನ ಅಣ್ಣತಮ್ಮಂದಿರರಿದ್ದು, ಅವರೆಲ್ಲರು ಸಿಂದಗಿ ತಾಲೂಕಿನ ರಾಂಪೂರ ಗ್ರಾಮದಲ್ಲಿ ವಾವಸವಾಗಿರುತ್ತಾರೆ. ದಿನಾಂಕ 21-05-2018 ರಂದು ನಾನು ಮತ್ತು ನನ್ನ ಗೆಳೆಯ ಗೊಲ್ಲಾಳಪ್ಪ ತಂದೆ ಮಡಿವಾಳಪ್ಪ ಮಾದರ ರವರೊಂದಿಗೆ ನನ್ನ ಮೋಟರ ಸೈಕಲ್ ನಂ ಕೆ.-28/.ಕೆ-9583 ನೇದ್ದರ ಮೇಲೆ ಏವೂರ ಗ್ರಾಮದಿಂದ ರಾಂಪೂರ ಗ್ರಾಮಕ್ಕೆ ಹೋಗುತ್ತಿದ್ದೇ, ನಾನು 12;30 ಪಿ.ಎಂ ಸುಮಾರಿಗೆ ಮಾಗಣಗೇರಾ ಗ್ರಾಮ ಅಗಸಿ ಹತ್ತಿರ ಇದ್ದಾಗ ನಮ್ಮ ಅಣ್ಣತಮ್ಮಕಿಯ ಬೀರಪ್ಪ ತಂದೆ ಸಂಗಪ್ಪ ಮಾದರ ಮತ್ತು ಅವನೊಂದಿಗೆ ಶಿವಪ್ಪ ತಂದೆ ಮಹಾದೇವಪ್ಪ ಮಾದರ ಸಾ|| ಇಬ್ಬರು ಕರನಾಳ ಗ್ರಾಮ ರವರು ತಮ್ಮ ಮೋಟರ ಸೈಕಲ್ ನಂ ಕೆ.-28/.ಕೆ-2565 ನೇದ್ದರ ಮೇಲೆ ಬಂದು ಒಮ್ಮೇಲೆ ನಮ್ಮ ಮುಂದೆ ಬಂದು ನಮಗೆ ತಡೆದರು, ಆಗ ಬೀರಪ್ಪನು ತನ್ನೊಂದಿಗೆ ತಂದ ಕಬ್ಬಿಣದ ಬಾಚಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದು ರಂಡಿಮಗನೆ ಶರಣ್ಯಾ ನಿನ್ನಿಂದ ನಮ್ಮ ಸಂಸಾರ ಹಾಳಾಗ್ಯಾದ, ನಿನಗ ಬಹಳ ದಿನದಿಂದ ಕಾಯುತ್ತಿದ್ದೇ, ಇವತ್ತ ಸಿಕ್ಕಿದಿ ಮಗನಾ ನಿನಗ ಖಲಾಸೆ ಮಾಡುತ್ತೇನೆ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ಬಾಚಿಯಿಂದ ನನ್ನ ಹೆಡಕಿಗೆ ಹೊಡೆದನು ಆಗ ನಾನು ನನ್ನ ಎಡಗೈ ಅಡ್ಡ ತಂದಿದ್ದಕ್ಕೆ ನನ್ನ ಎಡಗೈ ಹಸ್ತಕ್ಕೆ ಜೋರಾಗಿ ಏಟು ಬಿದ್ದು ರಕ್ತಗಾಯವಾಯಿತು, ಶಿವಪ್ಪ ಇವನು ಸುಳಿಮಗನಿಗಿ ಬಿಡಬ್ಯಾಡ ಹೊಡೆದು ಖಲಾಸೆ ಮಾಡು ಅಂತಾ ಅಂದು ಕಾಲಿನಿಂದ ನನಗೆ ಒದ್ದನು, ಅಷ್ಟರಲ್ಲಿ ನನ್ನೊಂದಿಗೆ ಇದ್ದ ಗೊಲ್ಲಾಳಪ್ಪ ತಂದೆ ಮಡಿವಾಳಪ್ಪ ಮಾದರ ಮತ್ತು ಮಾಗಣಗೇರಾ ಗ್ರಾಮದ ಮೌನೇಶ ತಂದೆ ಶಂಕ್ರೆಪ್ಪ ದೊಡಮನಿ ಎಂಬುವರು ಹಾಗು ಇತರರು ಬಂದು ಬಡಿಸಿಕೊಂಡರು, ಇಲ್ಲದಿದ್ದರೆ ನನಗೆ ಕೋಲೆ ಮಾಡುತ್ತಿದ್ದರು. ನಂತರ ಸ್ಥಳದಲ್ಲಿ ಬಹಳಷ್ಟು ಜನ ಬರುತ್ತಿದ್ದನ್ನು ನೋಡಿ ಬೀರಪ್ಪ ಈತನು ತನ್ನ ಕೈಯಲ್ಲಿದ್ದ ಬಾಚಿಯನ್ನು ಸ್ಥಳದಲ್ಲೆ ಬಿಸಾಕಿ ತನ್ನ ಮೋಟರ ಸೈಕಲ್ ಮೇಲೆ ಇಬ್ಬರು ಕುಳಿತು ಇವತ್ತ ಉಳದಿದಿ ಮಗನಾ ಇನ್ನೊಮ್ಮೆ ಸಿಕ್ಕರ ಖಲಾಸೆ ಮಾಡುತ್ತೇವೆ ಅಂತಾ ಅಂದು ಅಲ್ಲಿಂದ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.