POLICE BHAVAN KALABURAGI

POLICE BHAVAN KALABURAGI

04 March 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಮತಿ ಅಂಬುಬಾಯಿ ಗಂಡ ಸೋಮಲು ರಾಠೋಡ ಸಾ: ಕೊರಂಟಿ ಹನುಮಾನ ತಾಂಡಾ ಗುಲಬರ್ಗಾ ರವರು ದಿನಾಂಕ: 03-03-2012 ರಂದು ಸಾಯಂಕಾಲ ಸುಮಾರಿಗೆ ಸಿ.ಟಿ.ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಾ ನಿಂತಿರುವ ಕೆ.ಎಸ್.ಆರ್.ಟಿ.ಸಿ.ಬಸ್ ನಂ:ಕೆಎ-33 ಎಫ್-07 ನೇದ್ದರ ಚಾಲಕ ಸಲೀಮ ಪಾಶಾ ಈತನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎಡಗಾಲಿನ ಮೇಲೆ ಬಸ್ ಹಾಯಿಸಿಕೊಂಡು ಹೋಗಿ ಭಾರಿಗಾಯ ಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 29/2012 ಕಲಂ: 279,338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :
ಶ್ರೀ ಹುಚ್ಚಪ್ಪ ತಂದೆ ಕಾಲಪ್ಪ ಸಾಲೋಟಗಿ ಸಾ ಆನಂದೇಶ್ವರ ನಗರ ರಾಮಮಂದಿರ ಗುಲಬರ್ಗಾ ರವರು ನನ್ನ ಮಗ ಮೃತ ಅಜೇಯ ಹಾಗೂ ಅವನ ಗೆಳೆಯರಾದ ಮಲ್ಲಿಕಾರ್ಜುನ ಸಣ್ಣುರ ಹಾಗೂ ಇನ್ನೊಬ್ಬ ದಿನಾಂಕ 03/03/2012 ರಂದು ಸಾಯಂಕಾಲ ಮೋಟಾರ ಸೈಕಲ ನಂಬರ ಕೆಎ-32 ಇಎ-354 ನೇದ್ದರ ಮೇಲೆ ಸುಲ್ತಾನಪೂರ ಕ್ರಾಸ ರಿಂಗ ರೋಡ ಮೇಲೆ ಹೋರಟಾಗ ಪಿಲ್ಟರ ಬೆಡ ಕಡೆಗೆ ಒಂದು ಆಟೋ ನಂ ಕೆಎ-32 7028 ನೇದ್ದರ ಚಾಲಕ ಯಾವುದೇ ಮೂನ್ಸೂಚನೆಯನ್ನು ನೀಡದೆ ಅತೀವೇಗ ಹಾಗೂ ಅಲಕ್ಷತನ ದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲಗೆ ಒಮ್ಮೇಲೆ ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ ಸವಾರರು ಕೆಳೆಗೆ ಬಿದ್ದು ಗಾಯ ಹಾಗೂ ಭಾರಿಗಾಯವಾಗಿದ್ದು ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಅಜೇಯನು ಮೃತ್ತಪಟ್ಟಿದ್ದು, ಮಲ್ಲಿಕಾರ್ಜುನ ಇತನ ಗಾಯಗೊಂಡು ಪ್ರಜ್ಷೆಹೀನಾ ಸ್ಥಿತಿಯಲ್ಲಿದ್ದು ಇನ್ನು ಒಬ್ಬನು ಯಾರು ಅಂತ ತಿಳಿದು ಬಂದಿರುವುದಿಲ್ಲ. ಸದರಿ ಆಟೋ ಚಾಲಕನು ತನ್ನ ಆಟೋವನ್ನು ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 67/2012 ಕಲಂ 279 337 338 304(ಎ) ಐಪಿಸಿ ಸಂ/187ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಆಕಸ್ಮಿಕ ಬೆಂಕಿ ಅಪಘಾತ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ ಶರಣಮ್ಮ ಗಂಡ ಪ್ರಕಾಶ ಜಮಾದಾರ ಸಾ ನಿಲೂರ ಸಾ ಅಪಜಲಪೂರ ಹಾವ ಸಾವಳಗಿ ತಾ ಜಿ ಗುಲಬರ್ಗಾ ರವರು ನನ್ನ ಗಂಡನಾದ ಪ್ರಕಾಶ ತಂದೆ ಪೀರಪ್ಪ ಜಮಾದಾರ ಈತನು ಮನೆಯಲ್ಲಿ ಮಲಗಿದಾಗ ಮನೆಯ ಬಾಟಿಯ ಮೇಲೆ ದೀಪ ಹಚ್ಚಿ ಇಟ್ಟಿದ್ದು ಇಲಿ ದೀಪ ಊರುಳಿಸಿದ್ದರಿಂದ ಮೃತನ ಮೈಮೇಲೆ ದೀಪ ಬಿದ್ದು ಅವನ ಮುಖ, ಎದೆ, ಎರಡು ಕೈಗಳು, ಎರಡು ಭುಜ, ರಟ್ಟೆಗಳು ಬೆನ್ನ ಸುಟ್ಟಿದ್ದು ಸುಟ್ಟ ಗಾಯಗಳಿಂದ ಉಪಚಾರ ಹೊಂದುತ್ತಾ ದಿನಾಂಕ 03-03-2012 ರಂದು ಮಧ್ಯಾಹ್ನ ಸರಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಮೃಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 9/2012 ಕಲಂ 174 ಸಿ.ಆರ್‌.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.