POLICE BHAVAN KALABURAGI

POLICE BHAVAN KALABURAGI

24 May 2017

KALABURAGI DISTRICT REPRTED CRIMES

ಕೊಲೆ ಯತ್ನ ಪ್ರಕರಣ:-
ಸೇಡಂ ಪೊಲೀಸ್ ಠಾಣೆ:- ದಿನಾಂಕ:23-05-2017  ರಂದು ಶ್ರೀ  ಮೊಹ್ಮದ್ ಮತೀನ್ ತಂದೆ ಮೊಹ್ಮದ್ ಮಲಂಗ, , ಸಾ:ಶಹಾಬಾದ ರವರು ತಮ್ಮ ಹೇಳಿಕೆ ಫಿರ್ಯಾದಿಯಲ್ಲಿ ತಾನು ಶ್ರೀ ಸಿಮೆಂಟ್ ಕಂಪನಿಯಲ್ಲಿ ಕಾಂಟ್ರಾಕ್ಟರ್ ಕೆಲಸ ಮಾಡಿಕೊಂಡಿದ್ದು ಪ್ರತಿದಿನ ಹೋಗಿಬರುವ ಕುರಿತು ತನ್ನ ಫಾರಚೂನರ್ ಕಾರ ನಂಬರ್ KA32N9544 ಉಪಯೋಗಿಸುತ್ತಿದ್ದು. ಹೀಗೆ ದಿ:20-05-2017 ರಂದು ಎಂದಿನಂತೆ ಶ್ರೀ.ಸಿಮೆಂಟ್ ಫ್ಯಾಕ್ಟರಿಗೆ ತನ್ನ ಫಾರಚೂನರ ಕಾರಿನಲ್ಲಿ ಶ್ರೀ ಸಿಮೆಂಟ್ ಕಂಪನಿಯ ಗೇಟ್ ಮುಂದುಗಡೆ ನಿಂತಾಗ ಬೆನಕನಹಳ್ಳಿ ಗ್ರಾಮದ 20 ರಿಂದ 25 ಜನರು ಬಂದು ನಿಮ್ಮೊಂದಿಗೆ ಮಾತಾಡಬೇಕಾಗಿದೆ ನೀವು ನಮ್ಮೊಂದಿಗೆ ನಮ್ಮ ಊರಿಗೆ ಬನ್ನಿ ಎಂದಾಗ ನಾನು ನನ್ನ ಕಾರಿನಲ್ಲಿ ಬರುತ್ತೇನೆ ನೀವು ನಡೆಯಿರಿ ಎಂದರೊ ಅವರುಗಳು ನನ್ನ ಮಾತು ಕೇಳದೇ ನನಗೆ ಜಬರದಸ್ತಿಯಿಂದ ನನ್ನನ್ನು ಅಪಹರಿಸಿ ಒಂದು ಆಟೋದಲ್ಲಿ ಕೂಡಿಸಿಕೊಂಡು ಹೋದರು, ನಂತರ ನನ್ನ ಫಾರಚೂನರ ಕಾರ ಚಾಲಕ ನನ್ನ ಅಳಿಯ ಮುಸ್ತಾಕ ಅಹ್ಮದ್ ಪಟೇಲ್ ಇತನಿಗೆ ಹೆದರಿಸಿ ಆತನಿಗೆ ಸಹ ಕರೆದುಕೊಂಡು ನನ್ನ ಕಾರ ತೆಗೆದುಕೊಂಡು ಇಬ್ಬರಿಗೊ ಬೆನಕನಹಳ್ಳಿ ಗ್ರಾಮದ ದರ್ಗಾದ ಮುಂದುಗಡೆ ಕರೆದುಕೊಂಡು ಬಂದು ನಿಲ್ಲಿಸಿ ಆ 20-25 ಜನರಲ್ಲಿ ಕೆಲವು ಜನರು ನನಗೆ ನೋಡಿ ಅವಛ್ಯ ಶಬ್ದಗಳಿಂದ ಬಯ್ಯುತ್ತಾ ಈತ  ನನ್ನ ಮಗನಿಗೆ ಹಾವು ಕಚ್ಚಿದಾಗ ಹಾವು ಕಚ್ಚಿದ್ದ ಜಾಗಕ್ಕೆ ದಸ್ತಿ ಕಟ್ಟಿದ್ದರಿಂದ ನನ್ನ ಮಗ ಸತ್ತಿರುತ್ತಾನೆ ಇವನಿಗೆ ಬಿಡಬ್ಯಾಡರಿ ಅಂತ ಹೇಳುತ್ತಾ 5-6 ಜನ ನನಗೆ ಹಿಡಿದುಕೊಂಡು ಬಡಿಗೆಯಿಂದ ಹೊಡೆದು ರಕ್ತಗಾಯಪಡಿಸಿದರು. ಹಾಗೊ ಉಳಿದವರು ಹೊಟ್ಟೆಯಲ್ಲಿ ಬೆನ್ನಿಗೆ, ಮುಖಕ್ಕೆ, ಬಲಗಣ್ಣಿಗೆ, ಭುಜಕ್ಕೆ ಹೊಡೆದು ಭಾರಿ ಗುಪ್ತ ಪೆಟ್ಟು ಪಡೆಯಿಸದರು. ನಂತರ ಕೆಲವು ಜನರು  ಕಾರು ನಡೆಯಿಸುತ್ತಿದ್ದ ನನ್ನ ಅಳಿಯ ಮುಸ್ತಾಕ ಅಹ್ಮದ್ ಪಟೇಲ್ ಇವನಿಗೆ ಸಹ ಹೊಡೆದು ಗುಪ್ತ ಪೆಟ್ಟು ಮಾಡಿ ನಮಗೆ ಕೊಲೆ ಮಾಡಲು ಪ್ರಯತ್ನ ಮಾಡಿ. ನನ್ನ ಹತ್ತಿರ ಇದ್ದ ಎ.ಟಿ.ಎಮ್. ಕಾರ್ಡ, ಪ್ಯಾನ ಕಾರ್ಡ, ಡ್ರೈವಿಂಗ್ ಲೈಸೆನ್ಸ, ಮೂರು ಮೊಬೈಲ್ ಫೋನಗಳು ಹಾಗೂ ನನ್ನ ಅಳಿಯನ ಹತ್ತಿರ ಇದ್ದ ಒಂದು ಮೊಬೈಲ್ ಫೋನ ತೆಗೆದುಕೊಂಡಿರುತ್ತಾರೆ. ನಂತರ ನಮಗೆ ದರ್ಗಾದಲ್ಲಿ ಕೂಡಿ ಹಾಕಿ. ಫಾರಚೂನರ್ ಕಾರನ್ನು ಅದೇ ಜನರು ಕಲ್ಲುಗಳಿಂದ ಕಾರಿನ ಗ್ಲಾಸ್ ಒಡೆದು ಹಾಕಿರುತ್ತಾರೆ. ನಾನು ಶ್ರೀಸಿಮೆಂಟ್ ಕಂಪನಿಯಲ್ಲಿ ಕಾಂಟ್ರಕ್ಟರ್ ಕೆಲಸ ಮಾಡುತ್ತಿದ್ದ ಬಗ್ಗೆ ಸಹಿಸದ ಕೆಲವರು ನನ್ನ ಜೊತೆ ವೈಶಮ್ಯ ಬೆಳೆಯಿಸಿ ಈ ರೀತಿ ಹೊಡೆಬಡೆ ಮಾಡಿ ನನಗೆ ಕೊಲೆ ಯತ್ನ ಪ್ರಯತ್ನಿಸಿದವರ ವಿರುದ್ದ ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:-

ಶಹಾಬಾದ ನಗರ ಪೊಲೀಸ್ ಠಾಣೆ :- ದಿನಾಂಕ: 23/05/2017 ರಂದು ಶ್ರೀಮತಿ ಸಕ್ರಿಬಾಯಿ ಗಂಡ ಜಗನ್ನ ರಾಠೋಡ ಸಾ: ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ: 20/05/2017 ರಂದು ಮುಂಜಾನೆ ತನ್ನ ಮಗನಾದ ದೀಪಕ ವಯಾ: 34 ವರ್ಷ ಇತನು ಶಹಾಬಾದನ ಬಜಾರಕ್ಕೆ ಹೋಗುತ್ತಿದ್ದಾಗ ಮಡ್ಡಿ ಏರಿಯಾದ ಕಟ್ಟಿಗೆ ಅಡ್ಡಾದ ಹತ್ತಿರ ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬರುತ್ತಿದ್ದ ಕ್ರೋಜರ ನಂಬರ ಕೆ.ಎ. 32 ಎ 3489 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಮಗ ದೀಪಕ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ಮಗನ ಎರಡು ಕಾಲುಗಳಿಗೆ ರಕ್ತಗಾಯಾ ಮತ್ತು ತರಚಿದಂತಾ ಬಲಗಡೆ ಹಣೆ ಗುಪ್ತಪೆಟ್ಟಾಗಿ ಸ್ಥಳದಲ್ಲಿ ಬೇಹುಷ ಆಗಿದ್ದು . ಅಪಘಾತದ ನಂತರ ಕ್ರೋಜರ ಚಾಲಕನು ತನ್ನ ಕ್ರೋಜರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು. ತನ್ನ ಮಗನಿಗೆ ಅಪಘಾತ ಪಡಿಸಿದ ಕ್ರೋಜರ ಚಾಲಕನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ಪಿರ್ಯಾದಿ ಸಾರಂಶದ ಮೇಲಿಂದ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.