POLICE BHAVAN KALABURAGI

POLICE BHAVAN KALABURAGI

23 June 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :

ವಾಡಿ ಠಾಣೆ:
ಶ್ರೀ ಸುರೇಶ ತಂದೆ ನರಸಪ್ಪಾ ಹಡಪದ ಸಾ|| ಶಹಾಬಾದ ತಾ|| ಚಿತ್ತಾಪೂರ ರವರು ನನ್ನ ಮಗಳಾದ ಮಿನಾಕ್ಷಿ ಇವಳು ಶಹಾಬಾದ ಪಟ್ಟಣದ ಗಂಗಮ್ಮ ಶಾಲೆಯಲ್ಲಿ 10 ನೇ ತಗತಿಯಲ್ಲಿ ವಿದ್ಯಬ್ಯಾಸ ಮಾಡುತ್ತಿದ್ದಾಳೆ ಇದೆ ಗ್ರಾಮದ ನಾಗರಾಜ ತಂದೆ ಭೀಮರಾಯ ಪೂಜಾರಿ ಇತನು ದಿನಾಂಕ: 29-05-2011 ರಂದು ನನ್ನ ಅಪ್ರಾಪ್ತ ಮಗಳಿಗೆ ಶಹಾಬಾದದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.

ಕಾಣೆಯಾದ ಪ್ರಕರಣ :

ಚೌಕ ಠಾಣೆ :
ಶ್ರೀ ದಿಗಂಬರಾವ ತಂದೆ ಮಾಣಿಕರಾವ ಗೌಳಿ ಸಾ|| ಶಿವಾಜಿ ನಗರ ಗುಲಬರ್ಗಾ ರವರು ನನ್ನ ಮಗನಾದ ಸೋಮುಖ @ ವಿಶಾಲ ಇತನು 10 ನೇ ತರಗತಿಯಲ್ಲಿ ಓದುತ್ತಿದ್ದು , ಸಾದಾರಣ ಮೈಕಟ್ಟು, ದುಂಡು ಮುಖ, ಕೆಂಪು ಬಣ್ಣ ಹೊಂದಿದವನಾಗಿದ್ದು, ಕನ್ನಡ ಹಿಂದಿ ಮರಾಠಿ ಬಾಷೆಗಳನ್ನು ಬಲ್ಲವನಗಿರುತ್ತಾನೆ. ಸದರಿಯವನು ದಿನಾಂಕ: 22-06-2011 ರಂದು ಮದ್ಯಾಹ್ನ 08123097465 ನೇದ್ದರ ಸಿಮ್ ಇರುವ ಮೊಬಾಯಿಲ್ ದಲ್ಲಿ ಹಾಡುಗಳನ್ನು ಹಾಕಿಸಿಕೊಂಡು ಬರುತ್ತೆನೆಂದು ಅಂತಾ ಹೇಳಿ ಹೋದವನು ಮನೆಗೆ ಮರಳಿ ಬಂದಿರುವದಿಲ್ಲ. ಕಾರಣ ಮಗನ ಪತ್ತೆ ಮಾಡಿಕೊಡಲು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.