POLICE BHAVAN KALABURAGI

POLICE BHAVAN KALABURAGI

26 January 2015

Kalaburagi District Reported Crimes

ಸುಲಿಗೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ರಾಕೇಶ ತಂದೆ ರುದ್ರಶೆಟ್ಟಿ ವಾಡಿ ಸಾ:ಆರ್.ಎಸ. ಕಾಲೋನಿ ಕಲಬುರಗಿ ರವರು ದಿನಾಂಕ: 24/01/2015 ರಂದು ಸಾಯಂಕಾಲ ಕಾಳನೂರ ದಾಬಾಕ್ಕೆ ತನ್ನ ಮೊಟಾರ ಸೈಕಲ ಮೇಲೆ ಹೋಗಿ ಮರಳಿ ಕಲಬುರಗಿಗೆ ಬರುವಾಗ ದಾಭಾದಿಂದ ಸ್ವಲ್ಪ ಮುಂದೆ ಬಂದಾಗ ಯಾರೋ ಒಬ್ಬ ವ್ಯಕ್ತಿ ಎದುರುಗಡೆಯಿಂದ ಬಂದು ನನಗೆ ತಡೆದು ನಿಲ್ಲಿಸಿ ಮಾತನಾಡುವ ನೆಪ ಮಾಡಿ ಮಾತಾಡಿಸುತ್ತಿದ್ದಾಗ ಇನ್ನೊಬ್ಬ ಅವನ ಹಿಂದೆಯ ಒಂದು ಮೊಟಾರ ಸೈಕಲ ತೆಗೆದುಕೊಂಡು ಬಂದು ನನಗೆ ಜಬರದಸ್ತಿಯಿಂದ ನನ್ನ ಮೊಟಾರ ಸೈಕಲ ಮೇಲಿಂದ ಕೆಳಗೆ ನೂಕಿಸಿಕೊಟ್ಟರು ಮತ್ತು ನನ್ನ ಕೊರಳಿಗೆ ಕೈ ಹಾಕಿ ನನ್ನ ಕೊರಳಲ್ಲಿದ್ದ ಅಂದಾಜು 30 ಗ್ರಾಮ ಬಂಗಾರದ ಲಾಕೇಟ ಅ:ಕಿ: 75,000/-ರೂ ನೇದ್ದನ್ನು ಕಸಿದುಕೊಂಡನು. ಆಗ ನನ್ನ ಮತ್ತು ಅವರ ನಡುವೆ ಜಟಾಪಟಿಯಾಗಿರುತ್ತದೆ. ಸದರಿಯವರು ನನಗೆ ಕೆಳಗಡೆ ಬಿಳಿಸಿ ಅವರಿಬ್ಬರು ತಾವು ತಂದಿರುವ ಮೊಟಾರ ಸೈಕಲ ಮೇಲೆ ನನ್ನ ಕೊರಳ್ಳಲ್ಲಿಯ ಲಾಕೆಟ ಕಸಿದುಕೊಂಡು ಅಲ್ಲಿಂದ ತಮ್ಮ ಮೊಟಾರ ಸೈಕಲ ಮೇಲೆ ಗುಲಬರ್ಗಾ ಕಡೆಗೆ ಓಡಿ ಹೋಗಿರುತ್ತಾರೆ. ಸದರಿಯವರು ನನ್ನ ಕೊರಳ್ಳಲ್ಲಿಯ ಲಾಕೇಟ ಕಸಿದುಕೊಂಡು ಓಡಿ ಹೋಗುವಾಗ ನಾನು ನನ್ನ ಮೊಟಾರ ಸೈಕಲ ಲೈಟಿನ ಬೆಳಕಿನಲ್ಲಿ ಅವರ ಮೊಟಾರ ಸೈಕಲ ನೋಡಿದ್ದು. ಸದರಿ ಮೊಟರ ಸೈಕಲ ಹಿರೊ ಸ್ಪ್ಲೇಂಡರ ಇದ್ದು ಅದರ ನಂಬರ ಕೆಎ-32-ಇಜಿ-5853 ಇತ್ತು. ಸದರಿ ವ್ಯಕ್ತಿಗಳಿಗೆ ನಾನು ಪುನಃ ನೋಡಿದರೆ ಗುರ್ತಿಸುತ್ತೇನೆ. ಇಬ್ಬರು ಅಂದಾಜು 25-28 ವರ್ಷ ವಯಸ್ಸಿನವರಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಉದಯಕುಮಾರ ತಂದೆ ಆನಂದ ಅಯಾಜಿತ  ಸಾ: ಜಾಧವ ಲೇಔಟ ಬಿದ್ದಾಪೂರ ಕಾಲೋನಿ ಕಲಬುರಗಿ  ಮತ್ತು ಗೌರಿ ಇವರು ದಿನಾಂಕ 24-01-2015 ರಂದು ರಾತ್ರಿ 08-30 ಗಂಟೆ ಸುಮಾರಿಗೆ ಫಿರ್ಯಾದಿಯು ತನ್ನ ಮೋ/ಸೈಕಲ ನಂಬರ ಕೆಎ-32 ಇಬಿ-3118 ನೇದ್ದರ ಹಿಂದುಗಡೆ ಅವರ ಹೆಂಡತಿಯಾದ ಗೌರಿ ಇವಳನ್ನು ಕೂಡಿಸಿಕೊಂಡು ಕೊರಂಟಿ ಹನುಮಾನ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು ವಾಪಸ್ಸ ಆರ್.ಪಿ. ಸರ್ಕಲ, ರಾಮ ಮಂದಿರ ರಿಂಗ ರೋಡ ಮುಖಾಂತರ ಬಿದ್ದಾಪೂರ ಕಾಲೋನಿ ಕಡೆಗೆ ಹೋಗುವಾಗ ವೆಂಕಟಗೀರಿ ಹೋಟಲ ಎದುರುಗಡೆ ಒಬ್ಬ ಮೋಟಾರ ಸೈಕಲ ನಂಬರ ಕೆಎ-32 ಇಬಿ-7603 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಫಿರ್ಯಾದಿ  ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ  ಎಡಗೈ ರಿಸ್ಟ ಜೊಯಿಂಟ ಹತ್ತಿರ ಭಾರಿಪೆಟ್ಟು ಬಲಗೈ ಮುಂಗೈ ಹತ್ತಿರ ತರಚಿದಗಾಯ, ಬಲಗಾಲು ತೋಡೆಗೆ ಪೆಟ್ಟು ಬಿದ್ದಿತ್ತು. ಫಿರ್ಯಾದಿ ಹೆಂಡತಿಯಾದ ಗೌರಿ ಇವರಿಗೆ ಟೊಂಕಿಗೆ ಒಳಪೆಟ್ಟು, ಬಲಗೈ ತರಚಿದ ಗಾಯವಾಗಿದ್ದು ಮೋ/ಸೈಕಲ ಸವಾರನು ತನ್ನ ಮೋಟಾರ ಸೈಕಲ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.       
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮಹ್ಮದ ಸಿರಾಜೋದ್ದಿನ ತಂದೆ ಡಾ: ಮಹ್ಮದ ಫಾರುಕೆ  ಸಾ: ಲೋಕಮಾನ ಡಿಗ್ರಿ ಕಾಲೇಜ ಹಿಂದುಗಡೆ ಉಮರಾ ಕಾಲೋನಿ ಸೇಡಂ ರೋಡ ಕಲಬುರಗಿ  ರವರು ದಿನಾಂಕ 24-01-2015 ರಂದು ರಾತ್ರಿ 8-25 ಗಂಟೆಗೆ ಮನೆಯಿಂದ ಕಾರ ನಂಬರ ಕೆಎ-32 ಎನ್-2793 ನೇದ್ದನ್ನು ಚಲಾಯಿಸಿಕೊಂಡು ಆನಂದ ಹೋಟಲ ಮುಖಾಂತರ ಕೋರ್ಟ ಹಿಂದುಗಡೆ ಬರುವ ಜಿ.ಪಿ. ನಗರದಲ್ಲಿರುವ ನನ್ನ ಚಿಕ್ಕಪ್ಪನ ಮನೆಗೆ ಹೋಗುವಾಗ ದರ್ಶನಾಪೂರ ರವರ ಮನೆಯ ಎದುರಿನ ರೋಡ ಮೇಲೆ ಮೋ/ಸೈಕಲ ನಂಬರ ಕೆಎ-32 ವಿ-1085 ರ ಸವಾರ ರಾಮ ಇತನು ಮದ್ಯ ಸೇವನೆ ಮಾಡಿ ರಾಮ ನಗರ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ  ಕಾರಿನ ಅಡ್ಡವಾಗಿ ಬಂದು ಕಾರಿನ ಬಲಗಡೆ ಸೈಡಿಗೆ ಡಿಕ್ಕಿ ಪಡಿಸಿ ಡ್ಯಾಮೇಜ ಮಾಡಿ  ಮೋಟಾರ ಸೈಕಲ ಹಿಂದುಗಡೆ ಕುಳಿತ ಅಂಬು ಇತನಿಗೆ ಗಾಯಗೊಳಿಸಿದ್ದು  ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ನಿಲಕಂಠ ತಂದೆ ಕಾಶಿರಾಯ ವಾಡಿ ಸಾ: ಅಂಬಾಭವಾನಿ ಗುಡಿಯ ಹತ್ತಿರ ಶಕ್ತಿ ನಗರ ಕಲಬುರಗಿ ಇವರು ದಿನನಿತ್ಯದ ಕೆಲಸಕ್ಕಾಗಿ ಹಿರೋ ಹೊಂಡಾ ಸ್ಲೇಂಡರ ಪ್ಲಸ ಗಾಡಿ ನಂ. ಕೆ.ಎ-32 ಇಡಿ-6674 ನೇದ್ದು ಉಪಯೋಗಿಸುತ್ತಿದ್ದು ಇದರ  ಇಂಜನ ನಂ. HA10EJDHE31946 ಚಸ್ಸಿ ನಂ. MBLHA101MDHE28228 ಸಿಲ್ವರ ಕಲರ, 2013 ಮಾಡಲ್,  ಅ.ಕಿ. 30,000/- ರೂ ಇರುತ್ತದೆ. ದಿನಾಂಕ 28/12/2014 ರಂದು ಶಕ್ತಿ ನಗರದ ಮನೆಯ ಮುಂದೆ ರಾತ್ರಿ 8-30 ಪಿ.ಎಂ.ಕ್ಕೆ ನನ್ನ ಮೋಟಾರ ಸೈಕಲ್  ಕೆ.ಎ-32 ಇಡಿ-6674 ನಿಲ್ಲಿಸಿದ್ದು ದಿನಾಂಕ 29/12/2014 ರಂದು ಬೆಳಿಗ್ಗೆ 5-30 ಎ.ಎಂ.ಕ್ಕೆ ನೋಡಲಾಗಿ ನನ್ನ ಹಿರೋ ಹೊಂಡಾ ಸ್ಲೇಂಡರ ಪ್ಲಸ ಗಾಡಿ ಇರಲಿಲ್ಲಾ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.