POLICE BHAVAN KALABURAGI

POLICE BHAVAN KALABURAGI

05 April 2015

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:-04/04/2015 ರಂದು ಮುಂಜಾನೆ ರಮೇಶ ಇತನ ಚಾಲನೆಯಲ್ಲಿ ಮೋಟಾರ ಸೈಕಲ್ ನಂ ಎಂ.ಎಚ್-13 ಎವಾಯ್-3962 ನೇದ್ದರ ಮೇಲೆ ತಮ್ಮೂರಿನಿಂದ ಶ್ರೀ ಬಾಳು ತಂದೆ ಭಜರಂಗ ಡುಬಲ್ ಸಾ:ಅಜನ್ ಸೊಂಡಾ ತಾ:ಪಂಡರಪುರ ಜಿ;ಸೋಲಾಪುರ  ಕರ್ನಾಟಕ ರಾಜ್ಯದ ಹುಮನಾಬಾದಕ್ಕೆ ಹೋಗಿ ವೀರಭದ್ರಶ್ವರ ದೇವರ ದರ್ಶನ ಮುಗಿಸಿಕೊಂಡು ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಹೋಗುವಾಗ ಮೃತ ರಮೇಶ ಇತನು ಫಿರ್ಯಾದಿಗೆ ಹಿಂದೆ ಕೂಡಿಸಿಕೊಂಡು ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ಚಲಾಯಿಸಿ ಅವರಾದ ದಾಟಿ ಸ್ವಾಮಿ ಸಮರ್ಥ ಆಶ್ರಮದ ಹತ್ತಿರ ರೋಡಿನ ಬದಿಗೆ ಇದ್ದ ಗಿಡಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಮೃತನಿಗೆ ಒಳಪೆಟ್ಟು ಮತ್ತು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟಿದ್ದು ಫಿರ್ಯಾದಿಗೂ ಸಹಾ ಭಾರಿ ಗಾಯಗಳಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಘಾ ಠಾಣೆ : ಶ್ರೀಮತಿ ಸಕ್ಕುಬಾಯಿ ಗಂಡ ರಮೇಶ ರಾಠೋಡ ಸಾ: ಕೋರಳ್ಳಿ ತಾಂಡಾ ಹಾ:ವ ನಿಂಬರ್ಗಾ ಇವರ ಪಾಲಿಗೆ ಬರಬೇಕಾದ ಹೊಲ ಮನೆ ಕೇಳಿದಕ್ಕೆ ಮೋಹನ ತಂದೆ ಧನಸಿಂಗ್ ರಾಠೋಡ ಸಂಗಡ 02 ಜನರು ಸಾ : ಎಲ್ಲರೂ ಕೋರಳ್ಳಿ ತಾಂಡಾ  ಸೇರಿ ದಿನಾಂಕ 03-04-2015 ರಂದು ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಮಾನ ಭಂಗಕ್ಕೆ ಯತ್ನಿಸಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ಗೌರಮ್ಮ ಗಂಡ ಬಸವರಾಜ ನಾವಿ ಸಾ|| ಘತ್ತರಗಾ ಇವರು ದಿನಾಂಕ 04-04-2015 ರಂದು ನನ್ನ ಅಣ್ಣನ ಹೊಲದಲ್ಲಿರುವ ಶ್ರೀ ಲಕ್ಷ್ಮಿ ದೇವಿಗೆ ಪೂಜೆ ಮಾಡಲು ಹೋಗಿದ್ದು ಪೂಜೆ ಮಾಡಿಕೊಂಡು ಮರಳಿ ಬರುವಾಗ ನಮ್ಮ ಗ್ರಾಮದವರಾದ ಶ್ರೀ ಮುದಕಪ್ಪ (ಅವ್ವಪ್ಪ ತಂದೆ ಕಾಂತಪ್ಪ ಬಂಟನೂರ ಎನ್ನುವ ವ್ಯಕ್ತಿ ಆಜು ಬಾಜು ಯಾರು ಇಲ್ಲದನ್ನು ನೋಡಿಕೊಂಡು ಮಹಿಳೆಯಾದ ನನಗೆ ಅಡ್ಡಗಟ್ಟಿ ಕೈಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಿದ್ದು, ನಾನು ಎದುರು ಮಾತನಾಡಿದಾಗ ನನ್ನ ಮೇಲೆ ಹಲ್ಲೆ ಮಾಡಿರುತ್ತಾರೆ ನನ್ನ ಕೈಯಲ್ಲಿರುವ ಬಳೆಗಳು ಒಡೆದು ರಕ್ತ ಸ್ರಾವವಾಗಿದೆ ಅವಾಚ್ಯವಾಗಿ ಬೈದು ಜೀವ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆಮರಿಸಿಕೊಂಡ ಆರೋಪಿತನ ಬಂಧನ :
ರೋಜಾ ಠಾಣೆ : ರೋಜಾ ಪೊಲೀಸ್ ಠಾಣೆಯ 1] ಗುನ್ನೆ ನಂ.90/2011, 2] ಗುನ್ನೆ ನಂ. 84/2011, 3] ಗುನ್ನೆ ನಂ. 70/2012, ನೇದ್ದರ ಕೇಸುಗಳಲ್ಲಿ ಬಹಳ ದಿನಗಳಿಂದ ತಲೆಮರೆಸಿಕೊಂಡಿರುವ ವಾರೆಂಟ ಆರೋಪಿ ಮಿರ್ಜಾ ಅಕ್ಬರ ಕಲಿಮ ಬೇಗ @ ಕಲಿಮ @ ಮಿರ್ಜಾ ಅನ್ವರ ಕಲಿಮ ಬೇಗ @ ಕಲಿಮ ಡಾನ ತಂದೆ ಮಿರ್ಜಾ ಮಹೆಬೂಬ ಬೇಗ ಸಾ: ಮನೆ ನಂ. 7-22/1202 ಮದೀನಾ ಮಂಜಿಲ್ ಕೆ.ಬಿ.ಎನ್ ಇಂಜಿನಿಯರಿಂಗ ಕಾಲೇಜ ಎದುರುಗೆಡ ಬಿಲಾಲಾಬಾದ ಕಾಲೋನಿ ಕಲಬುರಗಿ ಹಾ:ವಾ: ಹೈದ್ರಾಬಾದ ಈತನಿಗೆ ಇಂದು ದಿನಾಂಕ: 04/04/2015 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ಬಂದನಕ್ಕೆ ಕಳುಹಿಸಿಲಾಗಿದೆ.