POLICE BHAVAN KALABURAGI

POLICE BHAVAN KALABURAGI

06 December 2014

Kalaburagi District Reported Crimes

ಜಾತಿ ನಿಂದನೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ರಾಜಶೇಖರ ತಂದೆ ಯಲ್ಲಪ್ಪಾ ಭೊಸಗಾ ಸಾ|| ಅಫಜಲಪೂರ ಇವರು ದಿನಾಂಕ 04/12/2014 ರಂದು ಬೆಳಿಗ್ಗೆ ಹತ್ತು ಗಂಟೆಗೆ ನಾನು ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿ ಪರೀಕ್ಷೆ ಕೋಣೆಯಲ್ಲಿ ಬ್ರೆಂಚಿನ ಮೇಲೆ ಕುಳಿತುಕೊಂಡಾಗ ನನ್ನ ಪಕ್ಕದ ಬ್ರೇಂಚಿನಲ್ಲಿ ಕ್ಲಾಸಮೆಂಟನಾದ ರವಿಕಾಂತ ಬೂಜರಿ ಇವನು ನನಗೆ ತಾಗುವತ್ತೆ ತನ್ನ ಕಾಲು ಚಾಚಿ ಕುಲಿತು ಕೊಂಡಿದ್ದು ಆಗ ನಾನು ರವಿಕಾಂತನಿಗೆ ಕಾಲ ತಗೆ ಅಂತ ಹೇಳಿದಕ್ಕೆ ಅವನಿಗೆ ನನಗು ಜಗಳವಾಗಿರುತ್ತದೆ ಆಗ ರವಿಕಾಂತ ವನು ನನಗೆ ನೋಡಿಕೊಳ್ಳತ್ತೆನೆ ಅಂತ ಹೇಳಿರುತ್ತಾನೆ ನಂತರ 12.30 ಪಿಎಮ್ ಸುಮಾರಿಗೆ ಪರಿಕ್ಷೆ ಮುಗಿಸಿಕೊಂಡು ಮನೆ ಮುಂದೆ ಬಂದಾಗ ರವಿಕಾಂತ ಬೂಜರಿ ಇತನು ಅನಿಲ ಕುಮಾರ ಚಲಗೇರಿ ಇತನೊಂದಿಗೆ ಬಂದು ನನಗೆ ನಿಲ್ಲಿಸಿ ಏನೋ ಹೊಲೆಯ ಸುಳೆಮಗನೆ ಕಾಲೇಜಿನಲ್ಲಿ ನನ್ನ ಜೊತೆಗೆ ಜಗಳ ತಗೆತಿಯಾ ಅಂತ  ಇಬ್ಬರು ನನಗೆ ನನ್ನ ಕೂತ್ತಿಗೆ ಇತ್ತಿ ಹಿಡಿದ್ದು ಕೈಯಿಂದ ಹೊಟ್ಟೆಯ ಮೇಲೆ ಗುದ್ದಿ ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ:-05/12/2014 ರಂದು ಮಧ್ಯಾಹ್ನ 1510 ಗಂಟೆ ಶ್ರೀನಿವಾಸ ಕಲ್ಯಾಣರಾವ ಕುಲಕರ್ಣಿ ಈತನು ತನ್ನ ಮನೆಗೆ ಹೋಗುವ ಸಂಬಂಧ ಹುಮ್ನಾಬಾದ ರಿಂಗ ರೋಡ ಆಳಂದ ಚೆಕ್ ಪೋಸ್ಟದ ಮಧ್ಯದ ರಾಮ ನಗರ ಕಾಕಡೆ ಚೌಕ ಮಧ್ಯೆ ತನ್ನ ಮೋಟಾರ್ ಸೈಕಲ್ ನಂ: ಕೆಎ-32ಇಎ-1725 ನೇದ್ದನ್ನು  ತೆಗೆದುಕೊಂಡು ಹೋಗುವಾಗ ಅದೆ ಸಮಯಕ್ಕೆ ಯಾವುದೋ ಒಂದು ಟೀಪ್ಪರ್ ಚಾಲಕನು ಅತಿ ವೇಗ & ನಿಸ್ಕಾಳಜಿತನದಿಂದ ಚಲಾಯಿಸಿ ಶ್ರೀನಿವಾಸನಿಗೆ ಡಿಕ್ಕಿ ಹೊಡೆದಿದ್ದರಿಂದ ತಲೆಗೆ ಹಾಗೂ ಹಣೆಗೆ ಹೊಟ್ಟೆಗೆ ಇತರೆ ಭಾಗಕ್ಕೆ ಭಾರಿ ರಕ್ತಗಾಯ ಮತ್ತು ಒಳಪೇಟ್ಟಾಗಿ ಎಡಕಿವಿಯಿಂದ ರಕ್ತಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಗುರುರಾಜ ತಂದೆ ಕಲ್ಯಾಣರಾವ ಕುಲಕರ್ಣಿ ಸಾ : ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಗ್ರಾಮೀಣ ಠಾಣೆ : ದಿನಾಂಕ 5-12-2014 ರಂದು 10-30 ಪಿ.ಎಂಶ್ರೀಮತಿ        ಜಬಿನಾ ಬೇಗಂ ಗಂಡ ಮಹಮ್ಮದ ರಹಿಮೊದ್ದಿನ ಸಾ; ಆಶೀಫ ನಗರ ಜರಾಬಡಿ ಮಜೀದ ಹತ್ತಿರ ಹೈದ್ರಾಬಾದ ಇವರು ದಿನಾಂಕ. 05-12-2014 ರಂದು ಬೆಳಗ್ಗೆ ಕಲಬುರಗಿ ಕೆ.ಬಿ.ಎನ್. ಖಾಜಾ ಬಂದೇನವಾಜ ದೇವರ ದರ್ಶನ ಮಾಡುವ ಕುರಿತು 9-00.ಎಂ.ದಸುಮಾರಿಗೆ ನನ್ನ ಗಂಡ  ಪರಿಚಯದವರಾದ ರವೂಫ ಇವರ ಕ್ವಾಲೀಸ್ ನಂ..ಪಿ.10.ಆರ್. 5796 ನೆದ್ದರಲ್ಲಿ ನಾನು ಮತ್ತು ನನ್ನ ಗಂಡ ಮಹಮ್ಮದ ರಹಿಮೊದ್ದಿನ . ಮೈದುನ  ಮಹಮ್ಮದ ಜಲೀಲ್ , ನಮ್ಮ ತಾಯ ಖದರುನಿಸ್ ತಂದೆ ಮಹಮ್ಮದ ಎಕ್ಬಾಲ್ , ಮಗಳು ಅಲಿಯಾಬೇಗಂ ವಯ;7 ವರ್ಷ ಮತ್ತು ನನ್ನ ಗಂಡನ ಗೆಳೆಯ ಗೋರಾಬಾಯಿ ಕುಳಿತುಕೊಂಡು  ಹೈದ್ರಬಾದದಿಂದ ಕಲಬುರಗಿಗೆ ಹೊರಟಿದ್ದು ಮದ್ಯಾನ 3-00 ಗಂಟೆಯ ಸುಮಾರಿಗೆ ಅವರಾದ  ಗ್ರಾಮ ದಾಟಿ ಎಸ್.ಬಿ. ಪಾಟೀಲ್ ಸಾವಳ ಫ್ಯಾಕ್ಟರಿ ಹತ್ತಿರ ಬಂದಾಗ ಚಾಲಕ ರವೂಫೆ ಇವರು ಗಾಡಿ ಇಂಜಿನ ಗರಮ ಆಗಿದೆ ತಣ್ಣ ಗಾದನಂತರ ಹೋಗೋಣ ಅಂತಾ ಹೇಳಿ ರೋಡಿನ ಬದಿಯಲ್ಲಿ  ತನ್ನ ಕ್ವಾಲಿಸ್ ನಿಲ್ಲಿಸಿದನು , ಗಾಡಿಯಲ್ಲಿ ಕುಳಿತಿದ್ದ ನಾವೆಲ್ಲ ಇಳಿದು ರೋಡಿನ ಬದಿಗೆ ನಿಂತಿದ್ದು  ಅದರಂತೆ ಮಗಳು  ಅಲಿಯಾ ಬೇಗಂ ವಯ;7 ವರ್ಷ ಇವಳು  ರೋಡ ಬದಿಯಲ್ಲಿ ನಿಂತಿದ್ದು  ಅದೇಸಮಯಕ್ಕೆ ಕಲಬುರಗಿ ಕಡೆಯಿಂದ ಒಂದು ಬಿಳಿ ಬಣ್ಣ ಬುಲೆರೋ ಜೀಪ ಚಾಲಕನು ತನ್ನ ವಶದಲ್ಲಿಇದ್ದ ಬುಲೆರೋ ಜೀಪನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದವನೆ ರೋಡ ಬದಿ ನಿಂತ ನನ್ನ ಮಗಳು ಅಲಿಯಾಬೇಗಂ ಇವಳಿಗೆ  ಡಿಕ್ಕಿ ಹೊಡೆದು  ಅಪಘಾತ ಪಡಿಸಿ ಸ್ವಲ್ಪ ಮುಂದೆ ಹೋಗಿ  ತನ್ನ ವಾಹನ ನಿಲ್ಲಿಸಿದನು ಬುಲೇರೋ ವಾಹನ ನಂಬರ ನೋಡಲಾಗಿ ಎಂ.ಹೆಚ. 13 .ಎನ್.  7632 ನೆದ್ದು ಇತ್ತು ನಂತರ ಬುಲೇರೋ ಚಾಲಕ ತನ್ನ ವಾಹನವನ್ನು ಹಾಗೇ ಓಡಿಸಿಕೊಂಡು ಹೊದನು , ನನ್ನ ಮಗಳು ರೋಡಿನ ಮೇಲೆ ಬಿದ್ದಿದ್ದು  , ಅವಳಿಗೆ ನೋಡಲಾಗಿ  ತೆಲಗೆ ಭಾರಿ ರಕ್ತಗಾಯವಾಗಿ , ಬೇಹೋಶ  ಆಗಿದ್ದು  ನನ್ನ ಗಂಡ ಮಹಮ್ಮದ  ರಹಮೊದ್ದಿನ   ಇವರು ದಾರಿಗೆ ಹೊರಟ ಯಾವುದೇ ಮೋಟಾರ ಸೈಕಲ ಮೇಲೆ ಮಗಳಿಗೆ ಕೂಡಿಸಿಕೊಂಡು ಉಪಚಾರ ಕುರಿತು ಜಿಲ್ಲಾ  ಆಸ್ಪತ್ರೆ ಗುಲಬರ್ಗಾಕ್ಕೆ ತಂದಾಗ ವೈದ್ಯರು  ನೋಡಿ  ನನ್ನ ಮಗಳು ಮೃತ ಪಟ್ಟಿರುತ್ತಾಳೆ  ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 05-12-2014 ರಂದು ಶ್ರೀ ಮಹ್ಮದ ಉಸ್ಮಾನ ತಂದೆ ಶೇಖ ಮಂಜಿಲಿ ಸಾಬ ಸಾಃ ಮದಿನಾ ಕಾಲೂನಿ ಶಹಾಜಿಲಾನಿ ದರ್ಗಾ ಹತ್ತಿರ ಕಲಬುರಗಿ ರವರು ತನ್ನ ಅಟೋರಿಕ್ಷ ನಂ. ಕೆ.ಎ 32 ಎ 3541ನೇದ್ದರಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕಡೆಯಿಂದ ಆರ್.ಟಿ.ಓ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಆರ್.ಟಿ.ಓ ಕ್ರಾಸ್ ಹತ್ತಿರ ಇರುವ ನಾಲಾ ಹತ್ತಿರ ಹಿಂದಿನಿಂದ ಯಾವುದೊ ಒಂದು ಕಾರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಟೋರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನಕಾರ ಸಮೇತ ಓಡಿ ಹೋಗಿದ್ದು ಅಪಘಾತದಲ್ಲಿ ಫಿರ್ಯಾದಿ ಎಡಗಾಲು ಹಿಮ್ಮಡಿಯ ಹತ್ತಿರ ರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯ ಮಾಳಿಗೆ ಕುಸಿದು ಸಾವು ಪ್ರಕರಣ :
ಮುಧೋಳ ಠಾಣೆ : ದಿನಾಂಕ: 06-12-14 ರಂದು 2 ಎ ಎಮ್ ಕ್ಕೆ ಶ್ರೀ  ಫೀರ ಅಹಮ್ಮದ ತಂದೆ ಮಹಮ್ಮದ ಹುಸೇನ ಚಾಂದವಾಲೆ ಸಾ|| ರಾಮಬೊಡ ಏರೀಯಾ ಮುಧೋಳ ಇವರು ನಿವೃತ್ತ ನೌಕರನಾಗಿರುತ್ತೇನೆ ಈಗ ಸುಮಾರು 5 ವರ್ಷಗಳ ಹಿಂದ ನಾನು ಮನೆಯನ್ನು ಕಟ್ಟಿ ಮನೆಯ ಛಾವಣೆಯು ಕಟ್ಟಿಗೆಯ ಭೀಮಹಾಕಿ ಅದರ ಮೇಲೆ ಕಟ್ಟಿಗೆಗಳು ಜಂತಿಗಳು ಹಾಕಿ ಮೇಲೆ ಪರಶೀ ಕಲ್ಲುಗಳು ಹಾಕಿ ಮಾಡಿರುತ್ತೆನೆ. ದಿನಾಂಕ: 05-12-14 ರಂದು ರಾತ್ರಿ 10 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ  ಹಮೀದಾಬೇಗಂ ಗಂಡ ಫೀರಅಹಮ್ಮದ ಹಾಗೂ ನನ್ನ ಮಕ್ಕಳಾದ, ಕುಮಾರಿ ಸಮೀನಾ ತಂದೆ ಫೀರಅಹಮ್ಮದ, ನಾಜೀಯಾ ತಂದೆ ಫೀರಅಹಮ್ಮದ, ರೇಷ್ಮಾ ತಂದೆ ಫೀರಅಹಮ್ಮದ ಇವರೆಲ್ಲರೂ ಕೂಡಿ ಊಟ ಮಾಡಿ ಮಲಗಿಕೊಂಡಿದ್ದೇವು ಎಲ್ಲರಿಗೂ ನಿದ್ರೆ ಹತ್ತಿದ್ದು ದಿನಾಂಕ: 05-12-14 ರಂದು ರಾತ್ರಿ 11:15 ಗಂಟೆ ಸುಮಾರಿಗೆ ನಮ್ಮ ಮನೆಯ ಮೇಲಿನ ಕಟ್ಟಿಗೆಗಳು ಹಾಗೂ ಪರಶೀ ಕಲ್ಲಿನ ಛಾವಣಿಗಳು ಒಮ್ಮೇಲೆ ಆಕಸ್ಮಿಕವಾಗಿ ಕುಸೀದು ಬಿದ್ದು  ಮನೆಯಲ್ಲಿ ಮಲಗಿ ಕೊಂಡಿದ್ದ 5 ಜನರ ಮೇಲೆ ಬಿದ್ದಿದ್ದು  ಇದರ ಆವಾಜ ಕೇಳೆ ಆಜು ಬಾಜು ಜನರು ಸ್ಥಳಕ್ಕೆ ಬಂದು ನಮ್ಮ ಮೈಮೇಲೆ ಬಿದ್ದ ಪರಶೀ ಕಲ್ಲುಗಳು ಹಾಗೂ ಕಟ್ಟಿಗೆಗಳು ಸರಸಿ ನಮಗೆ ಅಲ್ಲಿಂದ ಹೊರಗೆ ತೆಗೆದರು. ಈ ಘಟನೆಯಲ್ಲಿ ನನಗೆ ಮತ್ತು ನನ್ನ ಹೆಂಡತಿಯಾದ ಹಮೀದಾಬೇಗಂ ಇವಳಿಗೆ ಗಾಯಗಳು ಆಗಿರುತ್ತವೆ. ಮತ್ತು ನನ್ನ ಮಗಳಾದ ಕುಮಾರಿ ಸಮೀನಾ ಇವಳಿಗೆ ಭಾರಿ ಗಾಯಗಳಾಗಿರುತ್ತವೆ. ಹಾಗೂ ನನ್ನ ಮಕ್ಕಳಾದ ನಾಜೀಯಾ ವ|| 21 ವರ್ಷ, ರೇಷ್ಮಾ ವ|| 18 ವರ್ಷ ಇವರುಗಳಿಗೆ ಭಾರಿ ಗಾಯಗಳಾಗಿ ಬೇವೂಷ ಆಗಿ ಬಿದ್ದಿರುವುದನ್ನು ನೊಡಿ ಸ್ಥಳಕ್ಕೆ ಅಂಬ್ಯುಲೇನ್ಸ ತರಸಿ ಅದರಲ್ಲಿ ಇವರಿಬ್ಬರಿಗೂ ಹಾಕಿಕೊಂಡು ಮುಧೋಳ ಸರ್ಕಾರಿ ಆಸ್ಪತ್ರೆಗೆ ತರುವ ಕಾಲಕ್ಕೆ ಧಾರಿಯಲ್ಲಿ ಮೃತಪಟ್ಟಿರುತ್ತಾರೆ. ಈ ಘಟನೆಯು ಆಕಸ್ಮಿಕವಾಗಿ ಜರೂಗಿರುತ್ತದೆ ಮತ್ತು ಮನೆಯ ಛಾವಣಿಯು ಒಮ್ಮೇಲೆ ಕುಸಿದು ಕೆಳಗೆ ಬಿದ್ದಿದ್ದರಿಂದ ಈ ಘಟನೆ ಸಂಬಂವಿಸಲು ಕಾರಣವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಮಾದನ ಹಿಪ್ಪರಗಾ ಠಾಣೆ : ಶ್ರೀ.ಗುರುಶರಣ ತಂದೆ ಶಿವಲಿಂಗಪ್ಪ ಪೊಲೀಸ್ ಪಾಟೀಲ ಸಾ:ಝಳಕಿ(ಕೆ) ತಾ:ಆಳಂದ ಜಿ: ಕಲಬುರಗಿ ರವರು  ದಿನಾಂಕ 05/12/2014 ರಂದು ಮದ್ಯಾಹ್ನ ಮನೆಯಲ್ಲಿ ಇದ್ದಾಗ ನಮ್ಮೂರಿನ ಬಸವರಾಜ ತಂದೆ ಕಾಮಣ್ಣಾ ಚವಾಡಪೂರ ಇವರು ಬಂದು ತಿಳಿಸಿದೆನೆಂದರೆ ನಮ್ಮೂರಿನ ಭೀಮಾಶಂಕರ ದೇವಸ್ಥಾನದ ಹತ್ತಿರ ಇರುವ ಸರ್ಕಾರಿ ಭಾವಿಯ ನೀರಿನಲ್ಲಿ ಒಂದು ಗಂಡಸಿನ ಶವ ತೇಲುತ್ತಿದ್ದು ಅವನ ವಯಸ್ಸು ಸುಮಾರು 25-30 ವರ್ಷ ವುಳ್ಳವನಾಗಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನಮ್ಮೂರಿನ ಪ್ರಮುಖ ಗ್ರಾಮಸ್ಥರು ಕೂಡಿಕೊಂಡು ಹೋಗಿ ನೋಡಲಾಗಿ ಒಂದು ಗಂಡಸಿನ ಮೃತದೇಹ ತೇಲುತ್ತಿದ್ದು ಮೃತನ ಮೈಮೇಲೆ ಚಾಕ್ಲೇಟ್ ಬಿಳಿ ಕೆಂಪು ಪಟ್ಟಿಯ ಡಿಜೈನವುಳ್ಳ ಹಾಫ್ ತೋಳಿನ ಟೀ ಶರ್ಟ ಇರುತ್ತದೆ & ಕೇಂಪು ಬನಿಯನ್ ಕಂಡುಬರುತ್ತದೆ. ಹಾಗೂ ಕಪ್ಪು ಬಣ್ಣಿನ ಜೀನ್ಸ್ ಪ್ಯಾಂಟಿನಂತೆ ಕಂಡು ಬರುತ್ತದೆ. ಮೃತನು ಅಂದಾಜು ಎತ್ತರ 5 ಫೀಟ್ 6 ಇಂಚು, ದುಂಡು ಮುಖ ಸದೃಡ ಶರೀರ ಸಾದಾ ಕಪ್ಪು ಬಣ್ಣವುಳ್ಳವನಾಗಿರುತ್ತಾನೆ. ಮೃತನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ ಮೃತನು 2 -3 ದಿವಸಗಳ ಹಿಂದೆ ನೀರಿನಲ್ಲಿ ಬಿದ್ದು ಸತ್ತಂತೆ ಕಂಡುಬರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.