POLICE BHAVAN KALABURAGI

POLICE BHAVAN KALABURAGI

16 October 2012

GULBARGA DISTRICT REPORTED CRIMES

ಬುದ್ದಿ  ಮಾಂದ್ಯ ಬಾಲಕಿಯರ ಬಾಲ ಮಂದಿರದಿಂದ ಹುಡಗಿ ಕಾಣೆಯಾದ ಬಗ್ಗೆ:
ಮಹಿಳಾ ಪೋಲಿಸ ಠಾಣೆ: ಕು: ಸುವರ್ಣಲತಾ ತಂದೆ ಯಲ್ಲಪ್ಪಾ ಚಂದ್ರಗೀರಿ ವ:56 ವರ್ಷ ಉ: ಅದೀಕ್ಷಕರು ಸಾ:ಬುದ್ದಿಮಾಂದ್ಯ ಬಾಲಕಿಯರ ಬಾಲ ಮಂದಿರ ಆಳಂದ ರಸ್ತೆ ಗುಲಬರ್ಗಾ ರವರು ನಮ್ಮ ನಿಲಯದಲ್ಲಿ ವಾಸವಾಗಿದ್ದ ದುರ್ಗಾವ್ವಾ ಅನ್ನುವ 15 ವರ್ಷದ ಹುಡಗಿ ದಿನಾಂಕ:29.09.2012 ರಂದು ಮದ್ಯಾಹ್ನ 4.00 ಗಂಟೆಯಿಂದ ಓಡಿ ಹೋಗಿರುತ್ತಾಳೆ. ಸಂಸ್ಥೆಯ ಆವರಣದ ಎಲ್ಲಾ ಕಡೆ ಹುಡಕಾಡಿದರು ಸಿಕ್ಕಿರುವದಿಲ್ಲ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 73/12 ಕಲಂ 363  ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಾಡಬೂಳ ಪೊಲೀಸ್ ಠಾಣೆ:ದಿನಾಂಕ:16/10/2012 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಟೆಂಗಳಿ ಕ್ರಾಸ ಹತ್ತಿರ ಅಪಘಾತವಾಗಿ ಒಬ್ಬ ವ್ಯಕ್ತಿ ಮೃತ ಪಟ್ಟಿರುತ್ತಾನೆ ಅಂತ ತಿಳಿದು ಬಂದ ಮೇರೆಗೆ ನಾನು ನೋಡಲಾಗಿ ಸುಮಾರು 2-3 ತಿಂಗಳ ಹಿಂದೆ ಒಬ್ಬ ಅರೆ ಹುಚ್ಚ ಮನುಷ್ಯ ಬಸ್ ನಿಲ್ದಾಣದ ಹತ್ತಿರ ಇರುತ್ತಿದ್ದು. ತನ್ನಲ್ಲಿಯೇ ಮಾತನಾಡುತ್ತಾ, ವಿಚಿತ್ರವಾಗಿ ವರ್ತಿಸುತ್ತಿದ್ದ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಸದರಿಯವನಿಗೆ ದಿನಾಂಕ: 15-16/10/2012 ರ ರಾತ್ರಿ ವೇಳೆಯಲ್ಲಿ ಯಾವುದೋ ಒಂದು ವಾಹನ  ಡಿಕ್ಕಿ ಹೊಡೆದಿದ್ದು, ಡಿಕ್ಕಿ  ಹೊಡೆದ ರಭಸಕ್ಕೆ ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತ ಶ್ರೀ ಮಹ್ಮದ ಸಾಬ ತಂದೆ ಅಜೀಜಮೀಯಾ ಮಾಸುಲ್ದಾರ ಸಾ|| ದಂಡೋತಿ  ತಾ|| ಚಿತ್ತಾಪೂರ ರವರು ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 90/2012 ಕಲಂ: 279,304(ಎ) ಐ.ಪಿ.ಸಿ. ಸಂ.187 ಐ.ಎಮ್.ವಿ.ಅಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ

GULBARGA DISTRICT REPORTED CRIMES


ಹಲ್ಲೆ ಮಾನಭಂಗಕ್ಕೆ ಪ್ರಯತ್ನ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಧೂಳಮ್ಮಾ ಗಂಡ ಹಣಮಯ್ಯಾ ಗುತ್ತೇದಾರ ಸಾ: ಭೂಸನೂರ ರವರು ಮನೆಯಲ್ಲಿ ದಿನಾಂಕ:14-10-2012 ರಂದು ರಾತ್ರಿ 11-00 ಗಂಟೆಗೆ ಊಟ ಮಾಡಿ ಮಲಗಿಕೊಂಡಿದ್ದಾಗ ಮಧ್ಯರಾತ್ರಿ  00-15 ಗಂಟೆ ಸುಮಾರಿಗೆ  ವಿಜಯಕುಮಾರ ತಂದೆ ಬಾಬುರಾವ ಖೇತ್ರಿ ಮತ್ತು ಪರಸುರಾಮ ತಂದೆ ನರಸಿಂಗ ಹೊಟ್ಕರ ಇವರುಗಳು ನನ್ನ ಮನೆಯಲ್ಲಿ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಮಾನಭಂಗಕ್ಕೆ ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 88/2012 ಕಲಂ 448, 323, 354, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಮಶಾಕ ತಂದೆ ಶಬ್ಬೀರಸಾಬ ಹೊನಗುಂಟಾ ಸಾ: ತರನಳ್ಳಿ  ತಾ:ಚೀತಾಪೂರ ಜಿ||ಗುಲಬರ್ಗಾ ರವರು ನಾನು  ಮತ್ತು ಖಾಸಿಂ ತಂದೆ ಮೋದೀನ @ ಬಾಬುಮಿಯ್ಯ ಸಾ: ತರನಳ್ಳಿ  ತಾ:ಚೀತಾಪೂರ ಇಬ್ಬರೂ ಕೂಡಿಕೊಂಡು ಮೋಟಾರ ಸೈಕಲ  ನಂ ಕೆಎ-34 ಯು-8364 ನೇದ್ದರ ಮೇಲೆ ದಿನಾಂಕ:14/10/2012 ರಂದು ಆಳಂದ ಚೆಕ್ಕ ಪೋಸ್ಟ ಹತ್ತಿರ ಬರುತ್ತಿದ್ದಾಗ ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ನಡೆಯಿಸಿ ಅಪಘಾತ ಪಡಿಸಿದನು. ನನಗೆ ಮತ್ತು ಖಾಸಿಂ ಇತನಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 331/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ: 15/10/12 ರಂದು 5 ಪಿಎಮ ಸುಮಾರಿಗೆ ಆಳಂದ ರಸ್ತೆಯ ಕೃಷಿ ಸಂಶೋಧನೆ ಕೇಂದ್ರದ ಕಂಪೌಂಡ ಹತ್ತಿರ ಇರುವ ಮುಳ್ಳಿನ ಕಂಟಿಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಜೂಜಾಟವಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಗೂ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅಲಿಮೋದ್ದಿನ ತಂದೆ ಫಕರೊದ್ದಿನ ಅಂಕಣೆ, ಕರಣ ತಂದೆ ರಾಜಕುಮಾರ ಠಾಕೂರ, ವಿಜಯಕುಮಾರ ತಂದೆ ನಾರಯಣರಾವ , ಮಹಮದ ನುಮಾನ ತಂದೆ ಅಬ್ದಲ ಗಫಾರ , ಪಿರೋಜ ತಂದೆ ಅಬ್ದುಲ ರಹುಫ್, ಲಕ್ಷ್ಮಿಕಾಂತ ತಂದೆ ಪುಂಡಲೀಕರಾವ,ಮುಜೀಬ ತಂದೆ ಖಾಸಿಂ ಅಲಿ, ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ  ರೂ. 31710/- ರೂ ಹಾಗೂ ಇಸ್ಪೇಟ ಎಲೆಗಳನ್ನು  ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 332/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವಾಹನದ ಮೇಲೆ ಪ್ರಯಾಣಿಕರನ್ನು ಕೂಡಿಸಿಕೊಂಡು ಹೋಗುತ್ತಿರುವ ಚಾಲಕ ಮೇಲೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ:15/10/2012 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಉಪಳಾಂವ ಕ್ರಾಸ ಹತ್ತಿರ ರಾಹುಲ ತಂದೆ ಶಾಂತಪ್ಪ ಕಟ್ಟಿಮನಿ ಸಾ: ಸಂಜೀವ ನಗರ ಗುಲಬರ್ಗಾ ಇತನು ತನ್ನ ಕ್ರೋಜರ ವಾಹನ ಕೆಎ-32 ಬಿ-0305 ನೇದ್ದರ ಚಾಲಕ ತನ್ನ ವಾಹನದ ಟಾಪ ಮೇಲೆ ಪ್ರಯಾಣಿಕರನ್ನು ಅಪಾಯದ ರೀತಿಯಲ್ಲಿ ಕೂಡಿಸಿಕೊಂಡು ಅತೀವೇಗವಾಗಿ ಅಲಕ್ಷತನದಿಂದ ಚಲಾಯಿಸುತ್ತಿರುವಾಗ ಆತನ ಮೇಲೆ ಠಾಣೆ ಗುನ್ನೆ ನಂ: 333/2012 ಕಲಂ 279, 336 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.