POLICE BHAVAN KALABURAGI

POLICE BHAVAN KALABURAGI

15 November 2013

Gulbarga District Reported Crimes

ಮದುವೆಯಾಗುತ್ತೆನೆ ಅಂತಾ ನಂಬಿಸಿ ಜಬರಿ ಸಂಭೋಗ ಮಾಡಿದ ಪ್ರಕರಣ :
ಚಿಂಚೋಳಿ ಠಾಣೆ : ದಿನಾಂಕ 13-11-2013 ರಂದು ರಾತ್ರಿ 0900 ಗಂಟೆ ಸುಮಾರಿಗೆ ತನ್ನ ಪಕ್ಕದ ತಾಂಡಾದ ನಿವಾಸಿಯಾದ ಪ್ರೆಮಸಿಂಗ ರಾಟೋಡ ಎಂಬುವವನು ತನ್ನ ತಾಂಡಾದ ಸೇವಾಲಾಲ ಮಂದಿರ ಹತ್ತಿರ  ಬಂದು ನಿಂತು ತನಗೆ ಪೋನಮಾಡಿ ಅಲ್ಲಿಗೆ ಬರಲು ಹೇಳಿದ್ದರಿಂದ ತಾನು ಅಲ್ಲಿಗೆ ಹೊಗಿದ್ದು ಅಲ್ಲಿಗೆ ಹೋದ ತನಗೆ ಹೀರೋ  ಹೊಂಡಾ ಮೊಟಾರ ಸಯಕಲ ನಂ. ಕೆ.ಎ- 32 ಇಇ- 2743 ನೇದ್ದರ ಮೇಲೆ ಕೂಡಿಸಿಕೊಂಡು ನಿನಗೆ ಮದುವೆಯಾಗುತ್ತೆನೆ ನಡೆ ಹೋಗೋನಾ ಅಂತಾ ಅಂದು ಚಿಮ್ಮನಚೋಡ – ಸಲಗರ ಬಸಂತಪೂರ ರಸ್ತೆಯ ಮದ್ಯ  ಸೇರಿ ಕ್ರಾಸ ಹತ್ತಿ ತೊಗರಿ ಹೊಲವೊಂದರಲ್ಲಿ ಕರೆದುಕೊಂಡು ಹೋಗಿ ತಾನು ಒಲ್ಲೆ ಅಂತಾ ಅಂದರೂ ನಿನಗೆ ಮದುವೆಯಾಗುತ್ತೆನೆ  ಅಂತ ಹೇಳಿ ನಿನ್ನೆ ದಿನಾಂಕ 13-11-2013 ರ ರಾತ್ರಿ 11.00 ಗಂಟೆಗೆ ತೋಗರಿ ಬೆಳೆಗಳ ಸಾಲುಗಳ ಮದ್ಯ ಬಲ ಜಬರಿ ಸಂಭೋಗ ಮಾಡಿರುತ್ತಾನೆ  ಇದಕ್ಕಿಂತ ಮುಂಚೆ  2 ತಿಂಗಳಗಳ ಹಿಂದೆ ಬಲ ಸಂಭೋಗ ಮಾಡಿರುತ್ತಾನೆ. ಸದರಿ ವಿಷಯದ ಬಗ್ಗೆ ನಮ್ಮ ತಾಯಿ-ತಂದೆಯವರಿಗೆ ಹೇಳಿದರೆ ಬಯ್ಯುತ್ತಾರೆ ಅಂತ ತಿಳಿದು ಹೆಳಿರುವುದಿಲ್ಲಾ ಇಂದು ದಿನಾಂಕ 14.11.2013 ರ ರಾತ್ರಿ 01.00 ಗಂಟೆಗೆ  ಮರಳಿ ಅಲ್ಲಿಂದ ನಮ್ಮ ಮನೆಗೆ ಬಂದಿರುತ್ತೆನೆ. ಇಂದು ದಿನಾಂಕ 14-11-2013 ರ ಬೇಳೆಗ್ಗೆ ಸುಮಾರಿಗೆ ಸದರಿ ಪ್ರೆಮಸಿಂಗನಿಗೆ ನಾವು ಯಾವಾಗ ಮದುವೆ ಯಾಗೋಣ ಅಂತ ಕೇಳಿದಕ್ಕೆ  ಅವನು ತಾನು ಮದುವೆ ಯಾಗುವುದಿಲ್ಲಾ ಅಂತ ಅಂದನು ಅದಕ್ಕೆ ತಾನು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ ಮನೆಯಲ್ಲಿದ್ದ ಕ್ರಿಮಿನಾಶಕ ಔಷದವನ್ನು ಸೇವಿಸಿ ಆತ್ಮ ಹತ್ಯ ಮಾಡಿಕೊಳ್ಳಲು ಪ್ರಯತ್ನಿಸಿರುತ್ತೆನೆ  ಅಂತಾ ಕುಮಾರಿ ಸಾ|| ಪಾಲ್ತ್ಯಾನ ತಾಂಡಾ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಗೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಕಮಲಾಪೂರ ಠಾಣೆ : ದಿನಾಂಕ 14-11-2013 ರಂದು ಬೆಳಗ್ಗೆ 8-30 ಗಂಟೆಗೆ ಕಾಳಮಂದರಗಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಇರುವ ಆಲದ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದನ್ನು ನೋಡಿಪಂಚರ ಸಮಕ್ಷಮದಲ್ಲಿ ನಾನುಮತ್ತು ಸಿಬ್ಬಂದಿಯವರು ದಾಳಿ ಮಾಡಿದ್ದು. ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದ 08 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಿಚಾರಿಸಿಅಂಗ ಶೋಧನೆ ಮಾಡಲಾಗಿ, 1. ಶಂಭುಲಿಂಗ ತಂದೆ ನಾಗಮೂರ್ತಿ ಸುತಾರ  2. ತಿಪ್ಪಣ್ಣಾ ತಂದೆ ಅಣ್ಣಾರಾವ ಜಮಾದಾರ 3. ಕವಿರಾಜ ತಂದೆ ಮಾಣಿಕಪ್ಪಾ ಬಿರೆದಾರ 4. ಅವಿನಾಶ ತಂದೆ ಭೀಮಶ್ಯಾ ಮೇತ್ರೆ 5. ಪ್ರಭು ತಂದೆ ಕರಬಸಪ್ಪಾ ಅಳ್ಳಕಟ್ಟಿ ಇವನ 6. ರಾಘವೇಂದ್ರ ತಂದೆ ಬಸವಣ್ಣಾಪ್ಪಾ ಬಿರಾದಾರ 7. ಸುನೀಲ ತಂದೆ ಬಸವಣ್ಣಾ ವಡ್ಡನಕೇರಿ 8. ಈಶ್ವರ ತಂದೆ ಕರಬಸಪ್ಪಾ ಅಳಕಟ್ಟಿ ಇವನ ಹತ್ತಿರ 870-00 ರೂ ಸಾಃ ಎಲ್ಲರೂ ಕಾಳಮಂದರಗಿ  ತಾಃಗುಲಬರ್ಗಾ ಹಾಗು ಎಲ್ಲರ ನಡುವ ಪಣಕ್ಕೆ ಹಚ್ಚಿದ ಹಣ ರೂ ಒಟ್ಟು 7100-00 ರೂ. ಮತ್ತು 52 ಇಸ್ಪೇಟ ಎಲೆಗಳನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಕಳ್ಳರ ಬಂಧನ :
ಬ್ರಹ್ಮಪೂರ ಠಾಣೆ :  ದಿನಾಂಕ 14-11-2013  ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಮಾರುತಿ ಎ,ಎಸ್.ಐ. ಬ್ರಹ್ಮಪೂರ ಪೊಲಿಸ್ ಠಾಣೆ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ತಮ್ಮ ವರದಿಯೊಂದಿಗೆ4 ಜನ ಆರೋಪಿತರು ಮತ್ತು ಮುದ್ದೆಮಾಲು ಹಾಗೂ ಪಂಚನಾಮೆ ಹಾಜರಪಡಿಸಸಿದ್ದು ವರದಿಯ ಸಾರಾಂಶ ಎನೆಂದರೆ ದಿನಾಂಕ 14-11-2013 ರಂದು ಬೆಳಗ್ಗೆ 8 ಗಂಟೆಗೆ ಬ್ರಹ್ಮಪೂರ ಪೊಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಾನು ಮತ್ತು ನಮ್ಮ ಅಪರಾಧ ವಿಭಾಗದ ಸಿಬ್ಬಂದಿಯವರಾದ ಪ್ರಕಾಶ ಹೆಚ್.ಸಿ.259ಶಿವಲಿಂಗಪ್ಪ ಪಿಸಿ 320ಉದಯಕುಮಾರ ಪಿಸಿ 272 ರವರೊಂದಿಗೆ ಸ್ವತ್ತಿನ ಅಪರಾಧ ಪತ್ತೆ ಮಾಡುವ ಕುರಿತು ಪೇಟ್ರೋಲಿಂಗ್ ಮಾಡುತ್ತಾ ಸಂತ್ರಾಸವಾಡಿ ಮುಖಾಂತರ ಸಾತಗುಂಬಜ್ ಕಾರ್ನರ ಹತ್ತಿರ ಹೋಗುತ್ತಿದಂತೆ ಬೆಳಗ್ಗೆ 9 ಗಂಟೆಗೆ ಎದುರುಗಡೆ ನ್ಯಾಶನಲ್ ಕಾಲೇಜ ಕಡೆಯಿಂದ ಒಂದು ಟಂಟಂ ಟ್ರ್ಯಾಲಿ ವಾಹನದಲ್ಲಿ ಇಬ್ಬರೂ ಹೆಣ್ಣು ಮಕ್ಕಳು ಒಬ್ಬ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ ಕೂಡಿಕೊಂಡು ಟ್ರ್ಯಾಲಿಯಲ್ಲಿ ಸಾಮಾನುಗಳನ್ನು ತುಂಬಿಕೊಂಡು ಬರುತ್ತಿರುವಾಗ ನಮಗೆ ನೋಡಿ ಅವರು ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಮಗೆ ಸಂಶಯ ಬಂದು ಸದರಿ ವಾಹನವನ್ನು ತಡೆದು ನಿಲ್ಲಿಸಿ ಅದರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಅವೇಜ ತಂದೆ ಗೋರೆಭಾಯಿ ಸಾ|| ಮಿಜಗುರಿ ಗುಲಬರ್ಗಾ ಅಂತಾ ಹೇಳಿದನು.  ಇಬ್ಬರೂ ಹೆಣ್ಣು ಮಕ್ಕಳಿಗೆ ವಿಚಾರಿಸಲು ಒಬ್ಬಳ್ಳು ತನ್ನ ಹೆಸರು ಅಗ್ನಿ ತಂದೆ ರಾಮು ಕಾಳೆ ಸಾ|| ಬಾಪೂ ನಗರ ಗುಲಬರ್ಗಾ ಅಂತಾ ಹೇಳಿದ್ದು ಇನ್ನೊಬ್ಬಳು ಮಾಲನ ಗಂಡ ಸಿದ್ರಾಮ ಉಪಾದ್ಯ ಸಾ|| ಬಾಪೂ ನಗರ ಗುಲಬರ್ಗಾ ಅಂತಾ ಹೇಳಿದ್ದು ಮತ್ತು ಇನ್ನೊಬ್ಬ ವ್ಯಕ್ತಿಯನ್ನು ವಿಚಾರಿಸಲು ತನ್ನ ಹೆಸರು ನಜೀರ್ ಅಹ್ಮದ್ ತಂದೆ ಅಜೀಜ್ಉರ್ ರಹಿಮಾನ ಸಾ|| ಸಂತ್ರಾಸವಾಡಿ ಗುಲಬರ್ಗಾ ಅಂತಾ ಹೇಳಿದನು. ಆಗ ನಮಗೆ ಸಂಶಯ ಬಂದು ಟಂಟಂ ಟ್ರ್ಯಾಲಿ ಚಕ್ಕ್ ಮಾಡಲಾಗಿ ಅದರಲ್ಲಿ ಪಿ.ಡಬ್ಲ್ಯೂ.ಡಿ. ಇಲಾಖೆಗೆ ಸಂಭಂದಪಟ್ಟ 150 ಹಣ ಸ್ವೀಕರಿಸುವ ಪ್ರೀಟೆಂಡ್ ಬುಕ್ಕಗಳು ಮತ್ತು 40 ಗೇಟ್ ಪಾಸ್ ಬುಕ್ಕಗಳು ಇದ್ದು ಅವುಗಳ ಬಗ್ಗೆ ಸದರಿಯವರಿಗೆ ವಿಚಾರಿಸಲು ಯಾವುದೇ ಸಮಪರ್ಕವಾದ ಉತ್ತರ ಕೊಡದೆ ಇದ್ದಾಗ ಸದರಿ ವಸ್ತುಗಳು ಎಲ್ಲಿಯಾದರೂ ಕಳ್ಳತನ ಮಾಡಿಕೊಂಡು ಬಂದಿರಬೇಕು ಅಂತಾ ನಮಗೆ ಬಲವಾದ ಸಂಶಯ ಬಂದಿರುವದರಿಂದ ಸ್ಥಳಕ್ಕೆ ಇಬ್ಬರೂ ಪಂಚರಾದ  ಬರ ಮಾಡಿಕೊಂಡು ಇವರ ಸಮಕ್ಷಮ ಮೂರು ಚಕ್ರವುಳ್ಳ ಟಂಟಂ ಟ್ರ್ಯಾಲಿ ನಂಬರ ಕೆಎ-32  2814  ಮತ್ತು ಅದರಲ್ಲಿ ಇದ್ದ ಲೋಕೊಪಯೋಗಿ ಇಲಖೆಗೆ ಸಂಬಂದಪಟ್ಟ 150  ಹಣ ಸ್ವೀಕರಿಸುವ ಪ್ರೀಟೆಂಡ್ ಬುಕ್ಕಗಳು ಮತ್ತು 40 ಗೇಟ್ ಪಾಸ್ ಬುಕ್ಕಗಳು ಬಗ್ಗೆ ಜಪ್ತಿ ಪಂಚನಾಮೆ ಬರೆಯಿಸಿಕೊಂಡು ಜಪ್ತ ಆದ ಮಾಲು ಜಪ್ತಿ ಪಂಚನಾಮೆ ಹಾಗೂ 4 ಜನ ಆರೋಪಿತರೊಂದಿಗೆ  ಠಾಣೆಗೆ ಬಂದು ಸಲ್ಲಿಸಿದ ವರದಿಯ ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಜಾತಿನಿಂದನೆ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ವಿಠಲ ತಂದೆ ಶಂಕರ ವಗ್ಗನ ಸಹ ಶಿಕ್ಷಕರು ಭೀಮಳ್ಳಿ ತಾಃ ಜಿಃ ಗುಲಬರ್ಗಾ ರವರು ದಿನಾಂಕ 16-09-2013 ರಂದು ಉಪ ನಿರ್ದೆಶಕರಾದ ಟಿ. ಜಯರಾಮ ರವರನ್ನು ಅವರ ಚೆಂಬರದಲ್ಲಿ ಹೋಗಿ ತನ್ನ ಅಮಾನತ್ತಿನ ಕಡತ ಮುಕ್ತಾಯಗೊಳಿಸಿ ಎಂದು ಕೆಳಿಕೊಂಡಾಗ ಆಗ ಉಪ ನಿರ್ದೆಶಕರಾದ ಶ್ರೀ ಟಿ.ಜಯರಾಮ ರವರು "ಏ ಭೊಳಿ ಮಗನೆ ಹೊಲೆಯ ಸುಳೇ ಮಗನೆ" ನಾನೊಬ್ಬ ಜಿಲ್ಲಾ ಅಧಿಕಾರಿ ನನಗೆ ಯಾವನೊ ಸಹಿ ಮಾಡಿಕೊಟ್ಟಂತಹ ಸುಳ್ಳು ಕಾಗದಗಳನ್ನು ನನ್ನ ಮುಂದೆ ತಂದು ಇಟ್ಟು ಆರೋಪದಿಂದ ಮುಕ್ತಗೊಳಿಸು ಅಂತಾ ಕೆಳುತ್ತಿಯಾ "ಏನಲೆ ಸುಳೆ ಮಗನೆ" ಅಂತಾ ನನಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲದೆ ತನ್ನ ಜಾತಿಗೆ ಅಪಮಾನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಇಮಾಮಸಾಬ ತಂ, ಬಾಸುಮೀಯಾ ಕಂದಗೋಳ, ರವರು ದಿನಾಂಕ 113-11-2013 ರಂದು  ಮೋಹರಂ ಹಬ್ಬದ 8 ನೇ ದಿವಸ ಜಾತ್ರೆ ಇದ್ದು ನಮ್ಮೂರಿನ ಚಾಂದಸಾಬ ಹಾಗೂ ಇತರರು ಕೂಡಿ ನಾನು ಇಟ್ಟ ಮನೆಗೆ ಉರಿಯುವ ಕಟ್ಟಿಗೆಗಳನ್ನು ಮೋಹರಂ ದೇವರ ಹತ್ತಿರ ಒಯ್ದು ಸುಟ್ಟಿದ್ದರಿಂದ ಆತನೊಂದಿಗೆ ಬಾಯಿ ಮಾತಿನ ಜಗಳ ಮಾಡಿದ್ದಕ್ಕೆ ರಾತ್ರಿ 10:00 ಗಂಟೆ ಸುಮಾರಿಗೆ ನಮ್ಮೂರ ಡೆಂಗೆ ನವರ ಬಾವಿ ಹತ್ತಿರ ಚಾಂದಸಾಬ ತಂ, ಹುಸೇನಸಾಬ ಝಂಡಾ, ಇಮಾಮಸಾಬ ತಂಚಾಂದಸಾಬ ಝಂಡಾ, ಇಸಾಖ ತಂ, ಚಾಂದಸಾಬ ಝಂಡಾ, ಮಸ್ತಾನಸಾಬ ತಂ, ಚಾಂದಸಾಬ ಝಂಡಾ, ಮಸ್ತಾನಸಾಬ ತಂ, ಉಸ್ಮಾನಸಾಬ ಝಂಡಾ, ಖಾಸೀಂಸಾಬ ತಂ, ಮಸ್ತಾನಸಾಬ ಝಂಡಾ, ಮುಸ್ತಾಫ್ ತಂ, ಹುಸೇನ್ ಸಾಬ ಮೋಮಿನ್ ರಜಾಬ ಅಲೀ ತಂ, ಹುಸೇನಸಾಬ ಮೋಮಿನ್, ಮಹಿಬೂಬ ಸಾಬ ತಂ, ಖತಲಸಾಬ ಡಬರಿದ, ಹುಸೇನಸಾಬ ತಂ, ರುಕ್ಮೋದ್ದೀನ್ ಝಂಡಾ ಇವರೆಲ್ಲರೂ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಬಡಿಗೆಯಿಂದ, ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ಶ್ರೀ ಹುಶೇನಸಾಬ ತಂ ರುಕ್ಮೊದ್ದಿನ ಜಂಡಾ ಸಾ| : ಹರಸೂರ ತಾ:ಜಿ:ಗುಲಬರ್ಗಾ ಇವರು ದಿನಾಂಕ 13-11-2013 ರಂದು ಮೋಹರಂ ಹಬ್ಬದ 8 ನೇ ದಿವಸ ಜಾತ್ರೆ ಇದ್ದು ನಮ್ಮೂರಿನ ಇಮಾಮಸಾಬ ತಂ ಬಾಸುಮಿಯಾ ಕಂದಗೂಳ ಇಬ್ರಾಹಿಂ ತಂ ಬಾಸುಮಿಯಾ ಕಂದಗೂಳ ಬಾಸುಮಿಯಾ ತಂ ಫಕೀರಸಾಬ ಕಂದಗೂಳ ಇವರು ತಮ್ಮ ಕಟ್ಟೆಗೆಗಳನ್ನು ಏಕೆ ತಂದು ಸುಟ್ಟಿರುವಿರಿ ಅಂತಾ ದಿನಾಂಕ 14-11-2013  ರಂದು ಬೆಳಗ್ಗಿನ ಜಾವ 1.00 ಗಂಟೆಯ ಸುಮಾರಿಗೆ ತಡೆದು ನಿಲ್ಲಿಸಿ ಕೈಯಿಂದ ಹೋಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಕುಮಾರಿ ಕವಿತಾ ಚವ್ಹಾಣ  ಮ.ಹೆಚ್.ಸಿ. 94 ನರೋಣಾ ಪೊಲೀಸ್ ಠಾಣೆ ತಾ: ಆಳಂದ ಜಿ: ಗುಲಬರ್ಗಾ ಇವರು ದಿನಾಂಕ 16-09-2013  ರಂದು ಪ್ರತಿದಿನದಂತೆ ಗುಲಬರ್ಗಾದಿಂದ ನರೋಣಾ ಠಾಣೆಗೆ ಹೋಗಿ ಸಾಯಂಕಾಲ ಮರಳಿ ಬರುವ ಕಾಲಕ್ಕೆ 7 ಪಿ.ಎಂ.ಕ್ಕೆ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಕೆಳಗೆ ಇಳಿಯುವ ಕಾಲಕ್ಕೆ ಯಾರೋ ಕಳ್ಳರು ನನ್ನ ಕೊರಳಲ್ಲಿಯ 1 ವರೇ ತೊಲೆ ಬಂಗಾರದ ಚೈನ್ ಕಳವು ಮಾಡಿಕೊಂಡಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಳೆದ ಹೋದ ಬಂಗಾರದ ಚೈನ್ ಬೇಲೆ 35,000/- ರೂ ಇಲ್ಲಿಯವರೆಗೆ ಸಾಕಷ್ಟು ಪ್ರಯತ್ನ ಮಾಡಿದರೂ ಪತ್ತೆಯಾಗಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.