POLICE BHAVAN KALABURAGI

POLICE BHAVAN KALABURAGI

15 June 2015

Kalaburagi District Reported Crimes

            ಗ್ರಾಮೀಣ ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ 03 ವರ್ಷಗಳ ಹಿಂದೆ ನಡೆದ ಕೊಲೆ ಕೇಸಿನ ಮೂರು ಜನ ಆರೋಪಿತರ ಬಂಧನ.
ಗ್ರಾಮೀಣ ಠಾಣೆ :  ದಿನಾಂಕ 23/04/2012 ರಂದು ರಾತ್ರಿ 9:00 ಸುಮಾರಿಗೆ ತಾವರಗೇರಾ ಗ್ರಾಮದ ಅಡವಯ್ಯ ತಂದೆ ವೀರಯ್ಯ ಮಠಪತಿ ಈತನು ಬಹರ್ಿದೆಸೆಗೆಂದು ಹೋದಾಗ, ಮಹಾಂತಯ್ಯ ಮಠಪತಿ ಎಂಬುವವರಿಗೆ ಸೇರಿದ ಜಮೀನಿನ ಪಶ್ಚಿಮದ ಮೂಲೆಯಲ್ಲಿ ಯಾರು ದುಷ್ಕಮರ್ಿಗಳು ಯಾವುದೋ ಉದ್ದೇಶಕ್ಕಾಗಿ ರಾತ್ರಿ ವೇಳೆಯಲ್ಲಿ ಅಡವಯ್ಯನಿಗೆ ಕಲ್ಲಿನಿಂದ ತಲೆಯ ಹಿಂಭಾಗಕ್ಕೆ ಹೊಡೆದು, ಮಮರ್ಾಂಗವನ್ನು ಹಿಸುಕಿ ಕೊಲೆ ಮಾಡಿದ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆತನ ಹೆಂಡತಿ ಅನ್ನಪೂರ್ಣ @ ಅರೂಣಾ ಇವರು ಕೊಟ್ಟ ಫಿಯರ್ಾದಿ ಮೇಲಿಂದ ಮೊಕದ್ದಮೆ ಸಂ. 127/2012 ಕಲಂ 302 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.    
            ಈ ಪ್ರಕರಣಕ್ಕೆ ಸಂಭಂದಪಟ್ಟಂತೆ ಮೂರು ವರ್ಷದಿಂದ ಮೊದಲಿನ ಅಧಿಕಾರಿಗಳು ಮತ್ತು ಸಿಬ್ಬಂದಿರವರು ಸತತವಾಗಿ ಪತ್ತೆ ಕಾರ್ಯ ಕೈಕೊಂಡಿರುತ್ತಾರೆ. 
            ಪಕರಣದಲ್ಲಿ ಪತ್ತೆಗಾಗಿ ಮಾನ್ಯ ಎಸ್.ಪಿ ಕಲಬುರಗಿ, ಮಾನ್ಯ ಅಪರ ಎಸ್.ಪಿ ಕಲಬುರಗಿ ಹಾಗೂ ಮಾನ್ಯ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ, ಇವರ ಮಾರ್ಗದರ್ಶನದಲ್ಲಿ ಕಲಬುರಗಿ ಗ್ರಾಮೀಣ ವೃತ್ತದ ಸಿಪಿಐರವರಾದ ಶ್ರೀ ಎ. ವಾಜೀದ ಪಟೇಲ್ ರವರ ನೇತೃತ್ವದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಶರಣಬಸಪ್ಪ ಕೋಡ್ಲಾ, ಶ್ರೀ ಉದ್ದಂಡಪ್ಪ ಮಣ್ಣೂರಕರ ಪಿಎಸ್ಐ(ಅ.ವಿ) ಸಿಬ್ಬಂದಿ ಜನರಾದ ಸಲಿಮೋದ್ದಿನ ಹೆಚ್.ಸಿ 130, ಶಿವಕುಮಾರ ಹೆಚ್,ಸಿ: 304, ಪಿಸಿಗಳಾದ ಹುಸೇನಬಾಷಾ ಪಿಸಿ: 678, ಕೇಸುರಾಯ ಪಿಸಿ: 1211, ಅಂಬಾಜಿ ಪಿಸಿ: 954, ರಾಜಕುಮಾರ ಪಿಸಿ: 550, ಶರಣಗೌಡ ಪಿಸಿ: 1215, ಮತ್ತು ಕಂಠೆಪ್ಪ ಸಿಪಿಸಿ 289 ಇವರೊಂದಿಗೆ ತಂಡವನ್ನು ರಚಿಸಿಕೊಂಡು ಆರೋಪಿತರ ಪತ್ತೆ ಮತ್ತು ಶೋದದಲ್ಲಿರುವಾಗ, ದಿನಾಂಕ 15/06/2015 ರಂದು ಖಚಿತವಾದ ಬಾತ್ಮಿ ಮೇಲಿಂದ ಅನೀಲ ತಂದೆ ಅಪ್ಪಾರಾವ ಮಠಪತಿ, ಸಾ: ತಾವರಗೇರಾ ಈತನು ತನ್ನ ಸ್ವಂತ ಚಿಕ್ಕಪ್ಪನಾದ ಅಡವಯ್ಯ ಈತನಿಗೆ ಸಂಭಂದಪಟ್ಟ ಹೊಲವು ಹಿರಿಯರ ಅಸ್ತಿಯ ವಿಷಯದಲ್ಲಿ ವಿವಾದವಿದ್ದು, ಅನೀಲ ಮಠಪತಿ ಈತನಿಗೆ ವಿಚಾರಣೆಗೆ ಒಳಪಡಿಸಿದಾಗ, ಆತನು ಇದೆ ಆಸ್ತಿಯ ವಿಷಯದಲ್ಲಿ ತನ್ನ ಸಹಚರರಾದ ಕಾಶಿರಾಯ ತಂದೆ ಭಗವಂತರಾಯ ಮಡಿವಾಳ್, ಸಾ: ತಾವರಗೇರಾ ಮತ್ತು ಮಡೆಪ್ಪ ತಂದೆ ಪೀರಪ್ಪ ಮಡಿವಾಳ್, ಸಾ: ತಾವರಗೇರಾ ಇವರೊಂದಿಗೆ 03 ವರ್ಷಗಳ ಹಿಂದೆ  ದಿನಾಂಕ:23/04/2012 ರಂದು ರಾತ್ರಿ 9:30 ಗಂಟೆ ಸುಮಾರಿಗೆ ತಾವೆ ಕೊಲೆ ಮಾಡಿರುವದಾಗಿ ತನಿಖೆಯಲ್ಲಿ ತಿಳಿದುಬಂದಿದ್ದಕ್ಕೆ ಈ ಮೂರು ಜನರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಂಗ ಬಂಧನ ಕುರಿತು ಕಳುಹಿಸಿಕೊಡಲಾಗಿದೆ. ಈ ವಿಷಯದಲ್ಲಿ ಮಾನ್ಯ ಎಸ್.ಪಿ.ಸಾಹೇಬರು ಕಲಬುರಗಿ ರವರು ತನಿಖಾ ತಂಡಕ್ಕೆ ಶ್ಲಾಘನೆ ಮಾಡಿರುತ್ತಾರೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಹಮೀದಾಬಾನು ಗಂಡ ರಾಜಾಸಾಬ ಹಿರಿಯಾಳ ಸಾ|| ಉಡಚಾಣ ಗ್ರಾಮ ರವದದೊಂದು ಹೊಲ ಇದ್ದು ಅದರ ಸರ್ವೆ ನಂ 145/4 ಇರುತ್ತದೆ. ನಮ್ಮ ಹೊಲಕ್ಕೆ ಹೊಂದಿಕೊಂಡು ನಮ್ಮೂರ ನೆಹರು ತಂದೆ ದೋಂಡಿಬಾ ಹೋರತಿ ರವರ ಹೊಲ ಇರುತ್ತದೆ. ನೇಹರು ಇವರು ತಮ್ಮ ಹೊಲ ನಮ್ಮ ಹೊಲದಲ್ಲಿ ಹೆಚ್ಚಿಗೆ ಬಂದಿದೆ ಅಂತಾ ಸೂಮಾರು ಸಲ ತಕರಾರು ಮಾಡಿದ್ದು ಇರುತ್ತದೆ. 3-4 ಸಲ ಸರ್ವೆದವರಿಗೆ ಕರೆಯಿಸಿ ಭೂ ಮಾಪನ ಮಾಡಿಸಿದ್ದು ಇರುತ್ತದೆ. ಆದರು ಸಹ ನೇಹರು ರವರು ಕೇಳದೆ ನಮ್ಮೋಂದಿಗೆ ತಕರಾರು ಮಾಡಿಕೊಳ್ಳುತ್ತಾ ಬಂದಿರುತ್ತಾರೆ. ಹೀಗಿದ್ದು ದಿನಾಂಕ 14-06-2015 ರಂದು ಮದ್ಯಹ್ನ ನಮ್ಮ ಹೊಲದಲ್ಲಿ ನಮ್ಮೂರ ಪರಶುರಾಮ ತಂದೆ ಮಹಾದೇವಪ್ಪಾ ಹಲಸಗಿ ರವರ ಟ್ರ್ಯಾಕ್ಟ್ರದಿಂದ ನೆಗಲ ಹೊಡೆಯುತ್ತಿದ್ದೆವು. ಆಗ ನಾನು ಮತ್ತು ನಮ್ಮ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪಾ ತಂದೆ ಹುಚ್ಚಪ್ಪಾ ದೊಡಮನಿ ಮತ್ತು ಮಹಾದೇವ ತಂದೆ ಹುಚ್ಚಪ್ಪಾ ದೊಡಮನಿ ರವರು ಇದ್ದೇವು, ಅದೇ ಸಮಯಕ್ಕೆ ನಮ್ಮ ಬಾಜು ಹೊಲದವರಾದ ನೆಹರು ತಂದೆ ದೋಂಡಿಬಾ ಹೊರತಿ ಮತ್ತು ಅವರ ಹೆಂಡತಿ ಜಯಶ್ರೀ ರವರು ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ನೆಹರು ಇವರು ನಿಮಗ ಎಷ್ಟು ಸಲ ಹೇಳಬೇಕು ನಮ್ಮ ಹೊಲ ನಿಮ್ಮ ಹೊಲದಲ್ಲಿ ಬಂದಿದೆ ಅಂತಾ, ಆದರು ಕೇಳುತ್ತಿಲ್ಲಾ, ನಮಗೆ ನಮ್ಮ ಹೊಲ ಬಿಟ್ಟು ಕೊಡಿ ಇಲ್ಲದಿದ್ದರೆ ನಿಮಗ ಸಾಗುವಳಿ ಮಾಡಲು ಬಿಡುವುದಿಲ್ಲಾ ಅಂತಾ ಅಂದನು. ಆಗ ನಾನು ಈ ವಿಷಯವನ್ನು ನಮ್ಮ ಮನೆಯವರೊಂದಿಗೆ ಮಾತಾಡು ಅಂತಾ ಅಂದಾಗ ಜಯಶ್ರೀ ಇವಳು ಏ ರಂಡಿ ನಮ್ಮ ಹೊಲ ನಮಗೆ ಬಿಟ್ಟು ಕೊಟ್ಟರೆ ಸರಿ ಇಲ್ಲದಿದ್ದರೆ ನಿಮಗ ಜೀವ ಸಹಿತ ಬಿಡುವುದಿಲ್ಲಾ ಅಂತಾ ಅಂದರು, ನಂತರ ನಾವು ಕೆಲಸವನ್ನು ಅಷ್ಟಕ್ಕೆ ಬಿಟ್ಟು ಮನೆಗೆ ಬಂದಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalaburagi District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ  ಬೂಪರಾಯ ತಂದೆ ಶಿವಶರಣಪ್ಪ ಅಲ್ಲಾಪುರ ಸಾ|| ಹರವಾಳ ಹಾ|||| ಗೊಬ್ಬುರ ಬಿ ತಾ|| ಅಫಜಲಪುರ  ರವರು ದಿನಾಂಕ 16.06.2015 ರಂದು ಸಾಯಂಕಾಲ ಕ್ರೂಸರ್ ಜೀಪ್ ನಂ ಕೆ.ಎ32ಬಿ3927 ನೇದ್ದರಲ್ಲಿ ಕೂಳಿತುಕೊಂಡು ನಾನು ಮತ್ತು ನಮ್ಮೂರ ಶರಣು ತಂದೆ ಜಗದೇವಪ್ಪ ಅಲ್ದಿ, ಕಲ್ಯಾಣರಾವ್ ತಂದೆ ಶಂಕ್ರೆಪ್ಪ ಪಡಶೆಟ್ಟಿ, ಸಂಜೀವಕುಮಾರ ತಂದೆ ಶಿವಲಿಂಗಪ್ಪ ಹರಳಯ್ಯ ಜೇವರಗಿ ಪಟ್ಟಣದ ಬೂತಪುರ ಕಲ್ಯಾಣ ಮಂಟಪದ ಹತ್ತಿರ ಜೇವರಗಿ ಶಹಾಪುರ ಮುಖ್ಯ ರಸ್ತೆಯ ಮೇಲೆ ಬರುತ್ತಿದ್ದಾಗ ಸದರಿ ಕ್ರೂಜರ್ ಜೀಪ್‌ ಚಾಲಕನು ತನ್ನ ಜೀಪ್‌ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ನಾಯಿ ಅಡ್ಡ ಬಂದಿದ್ದರಿಂದ ಒಮ್ಮೇಲೆ ಜೀಪ್‌ನ್ನು ಕಟ್ ಹೋಡೆದು ಪಲ್ಟಿ ಮಾಡಿ ನಮಗೆಲ್ಲರಿಗೆ ಗಾಯಪೆಟ್ಟುಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಇರ್ಪಾನ ಅಲಿ ತಂದೆ ಮಹ್ಮದ ಅಲಿ ಸಾ:ಮ.ನಂ 11/1041/120/18, ಗಾಲಿಬ ಕಾಲೋನಿ ಜಿಲಾನಾಬಾದ ತಾ:ಜಿ:ಕಲಬುರಗಿ ನಿವಾಸಿತನಿದ್ದು ನನ್ನ ಮಹೀಂದ್ರ ಡೂರೊ  ದ್ವಿಚಕ್ರ ವಾಹನ ನಂ; KA 25-ED W-8442 ಬ್ರೌನ ಕಲರ, ಚೆಸ್ಸಿ ನಂ:MC4ND1B1VA1A06652 ಇಂಜಿನ ನಂ: PFEAA240540 ಅ.ಕಿ 25,000/-ರೂ ಬೆಲೆಬಾಳುವದನ್ನು, ನನ್ನ ದಿನನಿತ್ಯದ ಕೆಲಸದ ಸಲುವಾಗಿ ಉಪಯೋಗಿಸುತಿದ್ದು, ದಿನಾಂಕ: 03-06-2015 ರಂದು  ಬೆಳಿಗ್ಗೆ 08:00 ಗಂಟೆಗೆ ಕಣ್ಣಿ ಮಾರ್ಕೆಟ ಮುಖ್ಯ ರಸ್ತೆಯ ಪಕ್ಕದಲ್ಲಿ  ಫುಟಫಾತ ಮೆಲೆ ನನ್ನ ದ್ವಿಚಕ್ರ ವಾಹನ ನಿಲ್ಲಿಸಿ ತರಕಾರಿ ಖರೀದಿಸಲು ಹೋಗಿದ್ದು, ನಂತರ 08:30 ಗಂಟೆಗೆ ಮರಳಿ ಬಂದಾಗ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿ ಚಕ್ರ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.