POLICE BHAVAN KALABURAGI

POLICE BHAVAN KALABURAGI

10 August 2011

GULBARGA DISTRICT REPORTED CRIMES

ಹಲ್ಲೆ ಪ್ರಕರಣ:

ರಾಘವೇಂದ್ರ ನಗರ ಪೊಲೀಸ್ ಠಾಣೆ : ಶ್ರೀ ಸಂತೋಷ ತಂದೆ ರಾಮಚಂದ್ರ ಹೊಸಪೇಟ ಗುಲಬರ್ಗಾ ನಾನು ಚೌಡೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ಎದುರುಗಡೆ ಇರುವ ಕಟಿಂಗ್ ಶಾಪ್ ಹತ್ತಿರ ನಿಂತಾಗ, ದೇವು, ಸಿದ್ದು ಮತ್ತು ಸತೀಷ ಈ ಮೂರು ಜನರು ಒಟ್ಟಿಗೆ ಕೂಡಿಕೊಂಡು ಕೈಯಲ್ಲಿ ತಲಾ ಒಂದೊಂದು ಕ್ರಿಕೆಟ್ ಸ್ಟಂಪ್ ಹಿಡಿದುಕೊಂಡು ನನಗೆ ಸುತ್ತುವರೆದು, ಅವಾಚ್ಯವಾಗಿ ಬೈದು ಜಗಳ ಮಾಡಿ ಸಿದ್ದು ಹಾಗು ಸತೀಷ ಇವರು ಕೈಯಲ್ಲಿದ್ದ ಕ್ರಿಕೆಟ್ ಸ್ಟಂಪದಿಂದ ನನ್ನ ತಲೆಗೆ ಹಾಗು ಬೆನ್ನಿನ ಮೇಲೆ ಹೊಡದು ಗಾಯ ಪಡಿಸರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ :
ಶ್ರೀ.ಶಬೀರ ಷಾ ತಂದೆ ಗರೀಬಷಾ ಫಕೀರ, ಸಾ|| ಕಪನೂರ ಖಬರಸ್ತಾನ ಗುಲಬರ್ಗಾ ರವರು ನಾನು ಅಬ್ದುಲ ಕರೀಂ ಇವರ ಹತ್ತಿರ ಮಗಳ ಮದುವೆಗೋಸ್ಕರ 1,00,000/- ರೂಪಾಯಿ ಕೈ ಗಡ ಸಾಲ ತೆಗೆದುಕೊಂಡಿದ್ದು, ಸದರಿ ಹಣದ ಕಾಗದ ಪತ್ರ ಮಾಡೋಣ ಅಂತಾ ಅಬ್ದುಲ ಕರೀಂ ಇವರು ನನ್ನ ಹೆಸರಿನಲ್ಲಿ ಇದ್ದ 2 ಎಕರೆ ಜಮೀನು ತನ್ನ ಹೆಸರಿಗೆ ಮಾಡಿಕೊಂಡು ಮಹೆಬೂಬ ಎನ್ನುವವನಿಗೆ ಸಾಕ್ಷಿಯನ್ನಾಗಿ ಮಾಡಿದ್ದು, ಈ ಬಗ್ಗೆ ನಮಗೆ ಗೊತ್ತಾದಾಗ ತಹಶೀಲ ಕಾರ್ಯಾಲಯದಲ್ಲಿ ತಕರಾರು ಹಾಕಿದ್ದು, ಈ ತಕರಾರು ಬಗ್ಗೆ ವಿಚಾರಣೆ ಗೊಸ್ಕರ ದಿ: 09/08/2011 ರಂದು ಸಾಯಂಕಾಲ ತಹಶೀಲ ಕಾರ್ಯಾಲಯಕ್ಕೆ ಬಂದು ಹೊರಗಡೆ ಆವರಣದಲ್ಲಿ ನಿಂತಾಗ ಆಬ್ದುಲ ಕರಿಂ, ಮಹೆಬೂಬ, ಸಲೀಂ ಸಾ|| ಗುಲಬರ್ಗಾರವರು ಜಾಗೆಯ ಖರೀದಿ ಸಂಬಂಧ ಜಗಳ ತೆಗೆದು ನನಗೆ ಮತ್ತು ನನ್ನ ತಮ್ಮ ಜೀಲಾನಿ ಷಾ ಖಾಸಿಂ ಷಾ ಮತ್ತು ನಮ್ಮ ಮನೆಯ ಹೆಣ್ಣು ಮಕ್ಕಳು ಮೊಕ್ತಂಬಿ, ರಂಜಾನಬೀ ರವರೆಲ್ಲರಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಮಾಡಿ ಸಾಕ್ಷಿ ನಾಶ ಮಾಡಿದ ಬಗ್ಗೆ :

ಮಾಡಬೂಳ ಠಾಣೆ: ಶ್ರೀ ಹುಸೇನಿ ತಂದೆ ರೇವಣಸಿದ್ದ ಜಮಾದಾರ ಸಾ:ಪೇಠಶೀರೂರ ರವರು ನನ್ನ ತಮ್ಮನ ಹೆಂಡತಿ ನಾಗಮ್ಮ ಇವಳು ಪೇಠಶೀರೂರ ಗ್ರಾಮದ ವಿಠ್ಠಲ ತಂದೆ ನಾಗಯ್ಯಾ ಈತನೊಂದಿಗೆ ಅನೈತಿಕ ಸಂಬಂದ ಹೊಂದಿದ್ದು. ಇದರ ಬಗ್ಗೆ ನನ್ನ ತಮ್ಮ ( ಮೃತ ) ಮಹಾದೇವಪ್ಪ ಇತನು ಹೆಂಡತಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದರಿಂದ ತಮ್ಮ ಅನೈತಿಕ ಸಂಬಂದ ಚಟುವಟಿಕಿಗೆ ಅಡ್ಡಿ ಉಂಟಾಗಬಹುದೆಂದು ಭಾವಿಸಿ ವಿಠ್ಠಲ ಸರ್ವಶೇಟ್ಟಿ ಈತನ ಕುಮ್ಮಕನಿಂದ ತನ್ನ ಗಂಡನಿಗೆ ಊಟದಲ್ಲಿ ವಿಷ ಹಾಕಿ ಮೃತ ಪಡಿಸಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ :
ಫರಹತಾಬಾದ ಠಾಣೆ
: ಶ್ರೀ ಶಶಿಕುಮಾರ ತಂದೆ ನಾಗಪ್ಪಾ ಆರೆಕರ ಸಾ: ಜೈಭೀಮ ನಗರ ಕಾಲೋನಿ ಅಫಜಲಪೂರ ರವರು ನಾನು ನನ್ನ ಗೆಳೆಯರೊಂದಿಗೆ ದಿನಾಂಕ: 9-8-2011 ರಂದು ಸಾಯಂಕಾಲ ಗುಲಬರ್ಗಾದಿಂದ ಅಫಜಲಪೂರಕ್ಕೆ ಮೊಟಾರ ಸೈಕಲ ಮೇಲೆ ಹೋಗುತ್ತಿದ್ದಾಗ ಅಫಜಲಪೂರ ರೋಡಿನ ಶರಣಸಿರಸಗಿ ದಾಟಿ ನಾಗ ದೇವತೆ ಗುಡಿಯ ಹತ್ತಿರ ರೋಡಿನ ಮೇಲೆ 6 ಜನ ಅಪರಿಚಿತರು ಎರಡು ಮೊಟಾರ ಸೈಕಲ ನಂಬರ ಕೆಎ 32 ಯು. 6455, ಮತ್ತು ಕೆಎ 32 ಎ 1315 ನೇದ್ದರ ಮೇಲೆ ಬಂದು ನನ್ನ ಮತ್ತು ನನ್ನ ಗೆಳೆಯನಿಂದ ಬಂಗಾರದ ಆಭರಣಗಳು ಮತ್ತು ನಗದು ಹಣ ಹಾಗು ಮೋಬಾಯಿಲ್ ಹೀಗೆ ಒಟ್ಟು 51,400=00 ರೂ. ಬೆಲೆ ಬಾಳುವದನ್ನು ಚಾಕು ತೋರಿಸಿ ಜಬರ ದಸ್ತಿಯಿಂದ ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಹಲ್ಲೆ ಪ್ರಕರಣ :
ವಿಶ್ವವಿದ್ಯಾಲಯ ಪೊಲೀಸ ಠಾಣೆ :
ಶ್ರೀ ಸಂತೋಷ ತಂದೆ ಧನಸಿಂಗ ರಾಠೋಡ ಸಾ: ಬಾಪು ನಾಯಕ ತಾಂಡಾ ನಂದೂರ(ಬಿ) ಗ್ರಾಮ ರವರು ನಾನು ಊಟ ಮುಗಿಸಿಕೊಂಡು ಕಟ್ಟೆಯ ಮೇಲೆ ಕುಳಿತಾಗ ನನ್ನ ಅಣ್ಣಂದಿರಾದ ವಿಶ್ವನಾಥ ಮತ್ತು ನೀಲಕಂಠ ಇವರು ನಮ್ಮ ಮನೆಗೆ ಬಂದು ಆಸ್ತಿಯಲ್ಲಿ ಪಾಲು ಸರಿಯಾಗಿ ಕೊಟ್ಟಿಲ್ಲ ಅಂತಾ ಅಂದಿದ್ದಕ್ಕೆ ನಾನು ಆಸ್ತಿ ಪಾಲು ಊರ 4 ಜನರ ಸಮಕ್ಷಮ ಮಾಡಿ 2 ವರ್ಷಗಳಾಗಿದೆ. ಈಗ ಸರಿ ಆಗಿಲ್ಲ ಅಂದರೆ ಹೇಗೆ ಅಂತಾ ಅಂದಿದ್ದಕ್ಕೆ ಅವಾಚ್ಯವಾಗಿ ಬೈದು ವೀಶ್ವನಾಥ ಮತ್ತು ನೀಲಕಂಠ ಇವರು ಚಾಕುವಿನಿಂದ ನನಗೆ ಹೊಡೆಯಲು ಬಂದಾಗ ನಾನು ಎಡಗೈ ಅಡ್ಡ ತರಲು ಚಾಕುವಿನ ತುದಿ ನನ್ನ ಎಡಗೈ ಹಸ್ತದ ಮೇಲೆ ಮತ್ತು ಎಡಗೈ ಮುಂಗೈಗೆ ರಕ್ತಗಾಯವಾಗಿರುತ್ತದೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ :
ವಿಶ್ವವಿದ್ಯಾಲಯ ಪೊಲೀಸ ಠಾಣೆ :
ಶ್ರೀಮತಿ ಚಂದ್ರಕಲಾ ಗಂಡ ರೇವಣಸಿದ್ದಪ್ಪ ಜವಳಗೇರ ಅಜಾದಪೂರ ಸಿಮೇಯ ಕಲಬುರ್ಗಿ ಇವರ ಹೊಲದ ರೋಡ ಬದಿಯಲ್ಲಿ ನಾನು ಇಂದು ದಿನಾಂಕ 09-08-2011 ರಂದು ಕಾಯಲಿಕ್ಕೆ ಹೋಗಿದ್ದು, ನಮ್ಮೂರ ಸೀಮೆಯ ಶಿವಶರಣಪ್ಪಾ ಕಣಿ ಇವರ ಹೊಲದಲ್ಲಿ ಮೇಯಿಸುತ್ತಾ ಬಿಟ್ಟು ನಾನು ರೋಡ ಬದಿಗೆ ನಿಂತಿದ್ದು ಆಗ ಯಾರೋ ಅಪರಿಚಿತ 25 ರಿಂದ 30 ವರ್ಷ ವಯಸ್ಸಿನ ವ್ಯಕ್ತಿ ನನ್ನಲ್ಲಿಗೆ ಬಂದು ಅಜ್ಜಿ ನನಗೆ ಕುರಿ ಬೇಕಾಗ್ಯವ ಕುರಿ ಅದವ್ ಏನು ಅಂತಾ ಅಂದಾಗ ನಾನು ನನ್ನಲ್ಲಿ ಕುರಿ ಇಲ್ಲಾ ಅಂತಾ ಹೇಳುತ್ತಿದ್ದಾಗ ನನಗೆ ಅವಾಚ್ಯವಾಗಿ ಬೈದು ನನ್ನ ಕೊರಳಲ್ಲಿಯ ಬಂಗಾರ ತೆಗಿ ಅಂತಾ ಅಂದು ಬೆನ್ನ ಹಿಂದಿನಿಂದ ಒಂದು ತಲವಾರ ತೆಗೆದು ನನಗೆ ತೋರಿಸಿ ಕೊರಳಲ್ಲಿಯ ಬಂಗಾರದ ತಾಳಿ ಪತ್ತಿ ಹರಿದುಕೊಂ

ಡು ಮತ್ತು ಎರಡು ಕಿವಿಯಲ್ಲಿಯ ಬಂಗಾರದ ಹೂವಾ ಹರಿದುಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಂಬಿ ಮತ್ತು ಹಲ್ಲೆ ಪ್ರಕರಣ

ಬ್ರಹ್ಮಪೂರ ಪೊಲೀಸ್ ಠಾಣೆ : ಶ್ರೀ ಮಹೆಬೂಬಸಾಬ ತಂದೆ ಅಬ್ದುಲ ರಹೆಮಾನ ಸಾ|| ಆಜಾದಾಪೂರ ರೋಡ ಗುಲಬರ್ಗಾ ರವರು ನಾನು ಹಾಗೂ ಸೈಯದ ಸಲಿಂ, ದಸ್ತಗಿರ ತಂದೆ ಬಾಬುಮಿಯಾ, ಬಾಬಾ ತಂದೆ ಹನ್ನುಮಿಯಾ ಎಲ್ಲರೂ ಕೂಡಿ ತಹಶೀಲ ಕಾರ್ಯಾಲಯದ ಹತ್ತಿರ ನಿಂತಿರುವಾಗ  ನಾಸೀರ ಮೌಲಾನ, ನಾಸೀರ ಮೌಲಾನನ  ತಮ್ಮ,, ಶಬೀರ ಶಾ, ಜಿಲಾನಿ ಶಾ, ಖಾಸಿಂ ಶಾ, ರಂಜಾನಬಿ, ಶಬೀರ ಶಾನ ತಮ್ಮ, ಜಿಲಾನಿ ಶಾನ ಹೆಂಡತಿ,  ಎಲ್ಲರೂ ಸಾ|| ಗುಲಬರ್ಗಾರವರು ಬಂದು ನನ್ನೊಂದಿಗೆ ಜಗಳಕ್ಕೆ ಬಿದ್ದು, ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಸಂಚಾರಿ ಪೊಲೀಸ್ ಠಾಣೆ : ರಾಜಶೇಖರ ತಂದೆ ಶಿವಲಿಂಗಪ್ಪ ಪೊಲೀಸ್  ಸಾಃ  ಆದರ್ಶ ನಗರ  ಗುಲಬರ್ಗಾ  ರವರು ನಾನು ಸಂತ್ರಾಸವಾಡಿ ಕ್ರಾಸ್ ದಿಂದ ಬಸವೇಶ್ವರ ಕಾಲೋನಿ ಕಡೆಗೆ ರಸ್ತೆಯಿಂದ ನಡೆದುಕೊಂಡು ಹೋಗುವಾಗ ತನ್ನ ಹಿಂದಿನಿಂದ ಯಾವುದೋ ಒಂದು ಟಂ ಟಂ ಚಾಲಕನು ತನ್ನ ವಾಹನ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು  ಫಿರ್ಯಾದಿಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಕ್ರಮ:

ಬ್ರಹ್ಮಪೂರ ಠಾಣೆ : ಶ್ರೀ.ಗಜೇಂದ್ರ ಸಿ.ಪಿ.ಸಿ 549 ಬ್ರಹ್ಮಪೂರ ರವರು ತಮ್ಮ ವರದಿ ಸಲ್ಲಿಸಿದ್ದು ಸಾರಾಂಶವೆನೆಂದರೆ ನಾನು ಸಾಯಂಕಾಲ 5:00 ಗಂಟೆಯಿಂದ ನಾನು ಮತ್ತು ತುಕಾರಾಮ ಸಿ.ಪಿ.ಸಿ 689 ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು  ಹೋದಾಗ ನಗರದ ಸಿಟಿ ಬಸ ನಿಲ್ದಾಣದ ಹತ್ತಿರ ರಾತ್ರಿ 8 ಸುಮಾರಿಗೆ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವರನ್ನು ಹಿಡಿದು ಹೆಸರು ಮತ್ತು ವಿಳಾಸ  ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ ಇವರನ್ನು ಹೀಗೆಯೇ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಢಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಕೂಲಂಕೂಶವಾಗಿ ವಿಚಾರಿಸಿ ಶಿವಲಿಂಗ ತಂದೆ ಸಾಯಿಬಣ್ಣ ಹೊಲೆನವರ್, ಶಿವಕುಮಾರ ತಂದೆ ಅರ್ಜುನ ಮದ್ಯಾಣಕರ್, ರವರನ್ನು ದಸ್ತಗಿರಿ ಮಾಡಿ ಮುಂಜಾಗ್ರತೆ ಕ್ರಮವಾಗಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಲಲಾಗಿದೆ.