POLICE BHAVAN KALABURAGI

POLICE BHAVAN KALABURAGI

27 August 2016

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಮೃತ ಸುನಿತಾ ಗಂಡ ಸಂಜುಕುಮಾರ ಹೊಸಮನಿ ಇವಳಿಗೆ ಮದುವೆಯಾಗಿ 09-10 ವರ್ಷ ಗತಿಸಿದ್ದು, ಅವಳ ಗಂಡ ಸಂಜುಕುಮಾರ ಇತನು ಕುಡಿಯಲಿಕ್ಕೆ ಹಣ ಕೊಡದೇ ಇದುದ್ದರಿಂದ ಅವಳಿಗೆ ಹೊಡೆ ಬಡಿ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟು ಹೊಡೆ ಬಡಿ ಮಾಡುತ್ತಾ ಹೊರಟಿದ್ದು, ಅಲ್ಲದೇ ದಿನಾಂಕ 22/08/16 ರಂದು ರಾತ್ರಿ 09-00 ಗಂಟೆ ಸುಮರಿಗೆ ಕುಡಿಯಲಿಕ್ಕೆ ಹಣ ಕೊಡದೇ ಇರುವುದರಿಂದ ಅವಳ  ಮೈಮೇಲೆ ಸೀಮೆಎಣ್ಣೆ ಹಾಕಿ ಕಡ್ಡಿ ಕೊರೆದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಗ್ರಾಶಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಶ್ರೀಮತಿ ಸುನಿತಾ ಇವಳು ದಿನಾಂಕ 22/08/16 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಸುಟ್ಟಗಾಯಗಳಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ ಇಂದು ದಿನಾಂಕ 26/08/16 ರಂದು ಬೆಳಿಗ್ಗೆ 6-00 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಶ್ರೀ ಸಿದ್ಧಪ್ಪ ತಂದೆ ಮಸ್ತಾನಪ್ಪ ವಾಗದಳ್ಳಿ ಸಾ: ಮಾಹಾಗಾಂವ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ವಿಠೋಬ ತಂದೆ ಲಕ್ಷ್ಮಣ ಜಮಾದಾರ ಅಂಕಲಗಾ ಶಾಖೆಯ ಪ್ರಭಾರಿ ಶಾಖಾಧಿಕಾರಿ ಆಗಿದ್ದು, ನಮ್ಮ ಶಾಖೆಯಲ್ಲಿ ಬರುವ ಅಂಕಲಗಾ ಗ್ರಾಮದಿಂದ ಬೋಸಗಾ[ಕೆ] ಹಾದು ಹೋಗಿರುವ 11 ಕೆ ವಿ ಎ ಲೈನ್ ವಾಯರ್ ಸುಮಾರು 5 ಕಂಬಗಳ ವಾಯರ್ ಮತ್ತು ಎರಡು ಕಂಬಗಳು ಮುರಿದು ನೆಲಕ್ಕೆ ಉರಳಿಸಿ ವಾಯರ್ ಕಟ್ಟು ಮಾಡಿಕೊಂಡು ಹೋಗಿದ್ದು, ನಾನು ದಿನಾಂಕ: 10/08/2016 ರಂದು ನಾನು ಕೆಲಸದ ನಿಮಿತ್ಯವಾಗಿ ಇಟಗಾ ಗ್ರಾಮಕ್ಕೆ ಹೋಗುವ ನಾನು ಖುದ್ದಾಗಿ ನೋಡಿದಾಗ ನನಗೆ ಸಂಶಯ ಬಂದು ನೋಡಿದಾಗ ಅಲ್ಲಿ 5[ಕಂಬಗಳ] ವಾಯರ ಮತ್ತು 2 ಕಲಂಬಗಳು ಮುರಿದಿರುವದು ಕಂಡು ಬಂದು ನಾನು ನಮ್ಮ ಸಿಬ್ಬಂದಿಗಳಿಗೆ ಹೇಳಿದಾಗ ಅವರು ನಾವು ಕೂಡಿಕೊಂಡು ನೋಡಿದಾಗ ಅಲ್ಲಿ ನಮ್ಮ ಕಂಪನಿಯ ವಾಯರ್ ಕಂಬಗಳು ವಾಯರ್ ಮುರಿದು ತೆಗೆದುಕೊಂಡು ಹೋಗಿದ್ದು ಅದರ ಅಂದಾಜು ಮೊತ್ತ 35000/- ರೂಪಾಯಿ ಆಗಿರುತ್ತದೆ. ದಿನಾಂಕ: 10/08/2016 ರ ಹಿಂದಿನ ಎರಡು ದಿನಗಳಲ್ಲಿ ಕಳ್ಳತನ ಆಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.