POLICE BHAVAN KALABURAGI

POLICE BHAVAN KALABURAGI

05 July 2015

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಂಜುನಾಥ ತಂದೆ ಮಹಾದೇವ ಮಾಯನ್ನವರ ಉ;ಕೆ.ಎಸ್.ಆರ್.ಟಿ.ಸಿ. ಡಿಪೂ ನಂ.2 ನೆದ್ದರಲ್ಲಿ ಮ್ಯಾನೇಜರ ಸಾ; ಮನೆ ನಂ.ಎಂ.ಐ.ಜಿ.-19 ರಾಜೀವ ನಗರ ಚಿಕ್ಕೋಡಿ ಜಿ;ಬೆಳಗಾಂವ ಹಾವ; ಕ್ವಾರಟರ್ಸ ನಂ. 6 ಕೆ.ಎಸ್.ಆರ್.ಟಿ.ಸಿ.ಕ ಆಫೀಸರ ಕ್ವಾಟರ್ಸ ಕಲಬುರಗಿ ಇವರು ದಿನಾಂಕ.4-7-2015 ರಂದು ಮುಂಜಾನೆ ನನ್ನ ಗೆಳೆಯರಾದ ಸಂಕೇತ ತಂದೆ ಶಶೀಕಾಂತ ಚಿಕ್ಕಡೆ  ಸಾ;ಚಿಕ್ಕೋಡಿ , ಮತ್ತು ಆಶಿಷ ತಂದೆ ಪ್ರಕಾಶ ಕಟ್ಟಿ ಸಾ;  ಮಿಲಿಟರಿ ಕ್ಯಾಂಪ ಹತ್ತಿರ ಬೆಳಗಾಂವ ಇವರು ನನ್ನನ್ನು ಬೇಟಿಯಾಗಲು ಚಿಕ್ಕೊಡಿಯಿಂದ ಕಲಬುರಗಿಗೆ ಬಂದಿದ್ದು ನಾನು ಮತ್ತು ಸದರಿ ನನ್ನ ಇಬ್ಬರ ಗೆಳೆಯರು ಕೂಡಿಕೊಂಡು ಸಂಕೇತ ಚಿಕ್ಕಡೆ ಇತನು ತೆಗೆದುಕೊಂಡು ಬಂದ ತನ್ನ ಟೋಯೋಟೋ ಕರೋಲಾ ಕಾರ ನಂ. ಎಂ.ಹೆಚ.12 ಸಿ.ಡಿ-8252 ನೆದ್ದರಲ್ಲಿ ಮೂರು ಜನರು ಹೊರಗಡೆ ಊಟ ಮಾಡಿಬರಲು ಕಲಬುರಗಿ ಆಳಂದ ರೋಡಿನ ಕೆರಿಬೋಸಗಾ ಕ್ರಾಸ ಹತ್ತಿರ ಇರುವ ದಾಬಕ್ಕೆ ಹೋಗಿದ್ದೇವು ರಾತ್ರಿ 11-00 ಗಂಟೆಯ ಸುಮಾರಿಗೆ ದಾಬಾದಲ್ಲಿ ಊಟ ಮಾಡಿ ಮರಳಿ ಕಲಬುರಗಿಗೆ ಬರುವಾಗ ಸದರಿ ಕಾರನ್ನು ಸಂಕೇತ ಚಿಕ್ಕಡೆ ನಡೆಯಿಸುತ್ತಿದ್ದನು ಅವನ ಪಕ್ಕದ ಶೀಟನಲ್ಲಿ ನಾನು ಕುಳಿತಿದ್ದೆ.  ನನ್ನ ಹಿಂದೆ ಆಶೀಷ ಕಟ್ಟಿ ಇತನು ಕುಳಿತಿದ್ದನು ದಾಬಾದಿಂದ ಹೊರಟು ವೇಗವಾಗಿ ಹೋಗುತ್ತಿರುವಾಗ ಕೆರಿಬೋಸಗಾ ಕ್ರಾಸ ಹತ್ತಿರ ಎದರುಗಡೆಯಿಂದ ವಾಹನಗಳು ಬರುತ್ತಿದ್ದು ಅವುಗಳ ಬೆಳಕಿನಲ್ಲಿ ಕೆರಿಬೋಸಗಾ ಕ್ರಾಸ ಕರ್ವಿನಲ್ಲಿರುವ ಜಂಪಗಳನ್ನು ಕಾಣದೆ ಇದ್ದಾಗ ಕಾರನ ವೇಗ ಕಂಟ್ರೋಲ ಮಾಡದಕ್ಕೆ ಆಗದೆ ರೋಡ ಜಂಪಗಳಲ್ಲಿ ನಾವು ಕುಳಿತ ಕಾರು ಪಲ್ಟಿಯಾಗಿರುತ್ತದೆ. ಇದರಿಂದ ನನಗೆ ಬಲಗೈ ಅಂಗೈಗೆ ರಕ್ತಗಾಯ , ಎಡಗೈ ಮೋಳಕೈಗೆ ತರಚಿದಗಾಯ , ಬಲಗಾಲು ಮದ್ಯದ ಬೆರಳಿಗೆ ರಕ್ತಗಾಯ , ತಲೆಗೆ ಗುಪ್ತ ಪೆಟ್ಟಾಗಿರುತ್ತದೆ ಹಾಗೂ ನನ್ನ ಹಿಂದೆ ಕುಳಿತಿದ್ದ ಆಶೀಷ ಕಟ್ಟಿ ಇತನಿಗೆ ಬಲಗೈ ಮುಂಗೈ ಹತ್ತಿರ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ.  ಮತ್ತು ನಾವು ಕುಳತ ಕಾರು ನಡೆಯಿಸುತ್ತಿದ್ದ ನನ್ನ ಗೆಳೆಯ ಸಂಕೇತ ಚಿಕ್ಕಡೆ ಇತನಿಗೆ  ತಲೆಯ ಬಲಭಾಗದಲ್ಲಿ,ತಲೆಯ ಮೇಲಿನಬಾಗದಲ್ಲಿ ಮುಖಕ್ಕೆ ಭಾರಿಗಾಯವಾಗಿ ತಲೆಯಿಂದ ಮೂಗಿನಿಂದ ,ಬಾಯಿಯಿಂದ ,ಕಿವಿಯಿಂದ ರಕ್ತಸ್ರಾವವಾಗುತ್ತಿತ್ತು. ಆಗ ನಾವು ಚಿರಾಡುವಾಗ ರೋಡಿಗೆ ಹೋಗುತ್ತಿದ್ದ ಒಬ್ಬ ವ್ಯಕ್ತಿ ಬಂದಿದ್ದು ಹೆಸರು ಕೇಳಿಗೊತ್ತಾದ  ರವಿಕುಮಾರ ತಂದೆ ಲಕ್ಷ್ಮಣರಾವ ಕಟವಟಿ ಸಾ;ಪುಟಾಣಿ ಗಲ್ಲಿ ಕಲಬುರಗಿ  ಇತನು ಬಂದಿದ್ದು ಇತನು ಮತ್ತು ನಾನು ಹಾಗೂ ಆಶಿಷ ಕಟ್ಟಿ ಕೂಡಿಕೊಂಡು ಒಂದು ಆಟೋರಿಕ್ಷಾದಲ್ಲಿ ಸಂಕೇತ ಚಿಕ್ಕಡೆ ಇತನಿಗೆ ಕೂಡಿಸಿಕೊಂಡು ಉಪಚಾರ ಕುರಿತು ಕಲಬುರಗಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯಾದಿಕಾರಿಗಳಿಗೆ ತೋರಿಸಲು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಸೇಡಂ ಠಾಣೆ : ಶ್ರೀ. ರಾಜಶೇಖರ ತಂದೆ ಶಿವಪ್ಪ ಜಟ್ಟೂರ ಸಾ:ನಿಡಗುಂದಾ ರವರು ದಿನಾಂಕ :02-07-2015 ರಂದು ಕಾಳಗಿ ಗ್ರಾಮದಲ್ಲಿ ಸಂಗೀತ ಕಾರ್ಯಕ್ರಮವಿದ್ದು ಅಲ್ಲಿಗೆ ಹೋಗಿ ಸಂಗೀತ ಮುಗಿಸಿಕೊಂಡು ಟೆಂಗಳಿ ಗ್ರಾಮದಲ್ಲಿ ವಸತಿ ಮಾಡಿ ದಿ:03-07-2015 ರಂದು ಕಲಬುರಗಿಗೆ ಹೋಗಿ ಮರಳಿ ನಿಡಗುಂದಾ ಗ್ರಾಮಕ್ಕೆ ಹೋಗಬೇಕೆಂದು ರಾತ್ರಿ 08-00 ಗುಲಬರ್ಗಾ ಬಿಟ್ಟು ಸೇಡಂಕ್ಕೆ ರಾತ್ರಿ 10-00 ಗಂಟೆಗೆ ಬಂದಾಗ  ಹಸಿವು ಆಗಿದ್ದರಿಂದ ಅಯೊಧ್ಯಾ ಹೋಟೆಲ್ ಗೆ ಹೋಗಿ ಊಟ ಮಾಡಿಕೊಂಡು ಕೈತೊಳೆದುಕೊಳ್ಳಲು ಹ್ಯಾಂಡ ವಾಶಗೆ ಹೋದಾಗ ಅಲ್ಲಿ ಸೇಡಂ ಪಟ್ಟಣದ ತನಗೆ ಪರಿಚಯ ಇರುವ ಮಲ್ಲು ಡೀಲ್  ಇವರು ಕೈ ತೊಳೆದುಕೊಳ್ಳುತ್ತಿದ್ದರು. ಅವರು ಕೈ ತೊಳೆದುಕೊಂಡ ಮೇಲೆ ನಳ ಹಾಗೆ ಚಾಲು ಇರಲಿ ಅಂತ ಹೇಳಿದ್ದಕ್ಕೆ ಅವರುಗಳು ತನಗೆ ಯಾವುದೋ ಕಾರಣಕ್ಕೆ ನನ್ನ ಮೇಲೆ ಸಿಟ್ಟಿಗೆ ಬಂದು ಮಾದಿಗ ಸೂಳೆಮಗನೇ ನಿನ್ನ ಕೈಗೆ ಏನಾಗಿದೆ ಅಂತ ಬೈಯ ಹತ್ತಿದ್ದನ್ನು, ಅದಕ್ಕೆ ನಾನು ನಿಮಗೆ ಏನು ಹೇಳಿದ್ದೀನಿ ಅಂತ ಕೇಳಿದರೆ, ಮಲ್ಲು ತನ್ನ ಕೈಯಲ್ಲಿದ್ದ ಸ್ಟೀಲ್ ಗ್ಲಾಸಿನಿಂದ ನನ್ನ ಎಡಭಾಗದ ತಲೆಗೆ ಹೊಡೆದನು, ಸತೀಶ ಖಾನವಳಿ ಇತನು ಕೈ ಮುಷ್ಠಿ ಮಾಡಿ ಎಡಗಣ್ಣಿನ ಮೇಲೆ ಹಾಗೂ ಬಲಮಗ್ಗಲಿಗೆ ಹೊಡೆದು ಹೊಟೆಲ್ ನಿಂದ ನನಗೆ ಹೊರಗೆ ಎಳೆದು ತಂದಿದ್ದು ಅಲ್ಲಿ ಅವರ ಗೆಳೆಯರಾದ, ರವಿ ಗುಡ್ಡದ್, ನಾಗು ಗುಡ್ಡದ್, ಉಮೇಶ ಬಡಿಗೇರ ಇವರು ಇದ್ದು ಇವರೂ ಸಾಹ ಅವರೊಂದಿಗೆ ಬಂದು ಏನಂತನ ಮಾದಿಗ ಸೂಳೆ ಮಗನೇ ಅಂತ ಜಾತಿ ಎತ್ತಿ ಬೈದು ಸಿಕ್ಕಾ ಪಟ್ಟೆ ಎಲ್ಲರೂ ಕೂಡಿ ಬೈದು ಕೈಯಿಂದ ಮೈಮೇಲೆ ಹೊಡೆದು ಗಾಯಗೊಳೀಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.