POLICE BHAVAN KALABURAGI

POLICE BHAVAN KALABURAGI

10 October 2018

KALABURAGI DISTRICT REPORTED CRIMES

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 09-10-2018 ರಂದು ಮಣುರ ಗ್ರಾಮದಲ್ಲಿ  ಟಿಪ್ಪರಗಳಲ್ಲಿ ಮರಳು ತುಂಬಿ ಮರಳು ಸಾಗಾಣಿಕೆ ಮಾಡುತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ, ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಣುರ ಗ್ರಾಮ ದಾಟಿ ಹೋಗುತಿದ್ದಾಗ ಶೇಷಗಿರಿ ಕ್ರಾಸ ಹತ್ತಿರ ಒಂದು ಮರಳು ತುಂಬಿದ ಟಿಪ್ಪರ ಹೋಗುತಿದ್ದದನ್ನು ನೋಡಿ ನಮ್ಮ ಜೀಪ ಟಿಪ್ಪರ ಮುಂದೆ ಹೋಗಿ ಟಿಪ್ಪರನ್ನು ನಿಲ್ಲಿಸಿ ಅದರ ಚಾಲಕನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶೇಖರ ತಂದೆ ಚಂದ್ರಕಾಂತ ಜಾಧವ ಸಾ||ಹೈದ್ರಾ ತಾ||ಅಕ್ಕಲಕೋಟ ಅಂತಾ ತಿಳಿಸಿದ್ದು, ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ ಮಾಡಲಾಗಿ, ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದು ಅದರ ಮೇಲೆ ನೊಂದಣಿ ನಂಬರ ಇರಲಿಲ್ಲಾ ಅದರ ಇಂಜಿನ ನಂ 400. 952-D-0053058  ಅಂತಾ ಇರುತ್ತದೆ. ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧಿಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದನು. ಸದರಿ ಟಿಪ್ಪರ ಅಂದಾಜು 10,00,000/- ರೂ ಇದ್ದು, ಅದರಲ್ಲಿದ್ದ ಮರಳು ಅಂದಾಜು 10,000/- ರೂ ಕಿಮ್ಮತ್ತಿನದು ಇದ್ದು ಸದರಿ ಟಿಪ್ಪರ ಮತ್ತು ಚಾಲಕನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 09-10-2018 ರಂದು ಅಫಜಲಪೂರ ಪಟ್ಟಣದ ರೇವಣಸಿದ್ದೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿಐ ಸಾಹೇಬರ ಮಾರ್ಗದರ್ಶನದಂತೆ ಅಫಜಲಪೂರ  ಪಟ್ಟಣದ ರೇವಣಸಿದ್ದೇಶ್ವರ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸಂಜೀವಕುಮಾರ ತಂದೆ ಶರಣಗೌಡ ಪಾಟೀಲ ಸಾ|| ಗೌರ (ಬಿ) ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 5800/-  ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ದೊರೆತವು,  ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸುರಜ ತಂದೆ ರಾಮದಾಸ ಪಾಲನಕರ ಸಾ:ಮಹಾಲಕ್ಷ್ಮೀ ಲೇಔಟ ಕಲಬುರಗಿ ರವರಿಗೆ ಸ್ನೇಹಾ :14 ವರುಷ ಮತ್ತು ಸಮರ್ಥ :12 ವರ್ಷ ಅಂತಾ ಇಬ್ಬರೂ ಮಕ್ಕಳಿದ್ದು ಇಬ್ಬರೂ ಶಾಲೆಗೆ ಹೋಗುತ್ತಾರೆ. ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಪೂಜಾ ಮತ್ತು ನನ್ನ ಮಕ್ಕಳು ಇರುತ್ತೇವೆ ನನ್ನ ಮಗನಾದ ಸಮರ್ಥ ಇತನ ಪರೀಕ್ಷೆ ನಡೆದಿದ್ದು ಅವನಿಗೆ ಪರೀಕ್ಷೆ ಸಂಬಂಧ ಪ್ರತ್ಯೇಕ ಕೋಣೆ ಮಾಡಿ ಓದಲು ಅನುಕೂರ ಮಾಡಿಕೊಟ್ಟಿದ್ದು ಅದರಂತೆ ನನ್ನ ಮಗನಿಗೆ ಓದಲು ಹೇಳಿದರು ನಿರ್ಲಕ್ಷ ಮಾಡುತ್ತಾ ಬಂದಿದ್ದು ಇರುತ್ತದೆ. ಇಂದು ದಿ:08/10/2018 ರಂದು ಬೆಳಗ್ಗೆ 10.00 ಗಂಟೆಗೆ ನಾನು ನನ್ನ ಕೆಲಸದ ಸಂಬಂಧ ಅಂಗಡಿಗೆ ಹೋಗಿದ್ದು ಮನೆಯಲ್ಲಿ ಹೆಂಡತಿ ಮಕ್ಕಳು ಇದ್ದರು ಸಾಯಂಕಾಲ 6.30 ಗಂಟೆಗೆ ನನ್ನ ಹೆಂಡತಿ ಅಳುತ್ತಾ ನನಗೆ ಪೋನ ಮಾಡಿ ನನ್ನ ಮಗ ಸಮರ್ಥ ನೇಣು ಹಾಕಿಕೊಂಡಿದ್ದಾನೆ ಅವನಿಗೆ ಚಿರಾಯು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದು ನಾನು ಗಾಬರಿಗೊಂಡು ಚಿರಾಯು ಆಸ್ಪತ್ರೆಯಲ್ಲಿ ಬಂದು ನೋಡಲು ಆಸ್ಪತ್ರೆಯ ವೈದ್ಯರು ನನ್ನ ಮಗನಿಗೆ ಪರಿಕ್ಷಿಸಿ ಮೃತ ಪಟ್ಟಿದ್ದಾನೆ ಅಂತಾ ತಿಳಿಸಿದ್ದು ಆಗ ನಾನು ನನ್ನ ಹೆಂಡತಿಯನ್ನು ವಿಚಾರಿಸಲು ಅವಳು ತಿಳಿಸಿದ್ದೆನೆಂದರೆ, ಸಮರ್ಥ ಇತನು ಓದದೇ ಹೊರಗಡೆ ತಿರುಗಾಡುತ್ತಾ ಸಾಯಂಕಾಲ 5.00 ಗಂಟೆಗೆ ಅವನಿಗೆ ಓದಲು ಹೇಳಿದ್ದು ಆಗ ಅವನು ಪಾನಿಪುರಿ ತೆಗೆದುಕೊಂಡು ಬಾ ನಾನು ಓದುತ್ತೇನೆಂದು ಹೇಳಿದ್ದು ಅದರಂತೆ ನಾನು ಪಾನಿಪುರಿ ತೆಗೆದುಕೊಂಡು ಸಾಯಂಕಾಲ 6.15 ಗಂಟೆ ಸುಮಾರಿಗೆ ಪಾನಿಪುರಿ ತೆಗೆದುಕೊಂಡು ಮನೆಗೆ ಬಂದು ನೋಡಲು ಸಮರ್ಥ ಇತನು ತನ್ನ ಕೋಣೆಯಲ್ಲಿ ಒಳಗಿನ ಕೊಂಡಿ ಹಾಕಿಕೊಂಡಿದ್ದು ನಾನು ಕರೆದರು ಪ್ರತಿಕ್ರೀಯೆ ನೀಡದೆ ಇದ್ದರಿಂದ ರೂಮಿನ ಕಿಡಕಿ ತೆಗೆದು ನೋಡಲು ಸಮರ್ಥ ಇತನು ರೂಮನಲ್ಲಿ ಫ್ಯಾನಗೆ ನೇಣು ಹಾಕಿಕೊಂಡಿದ್ದು ಆಗ ನಾನು ಗಾಬರಿಗೊಂಡು ಚಿರಾಡುತ್ತಿದ್ದಾಗ ಪಕ್ಕದ ಮನೆಯ ತಿವಾರಿ ಮತ್ತು ಅವಳ ಮಗಳು ಬಂದು ನೋಡಿ ನಂತರ ಎಲ್ಲರೂ ಕೂಡಿ ಬಾಗಿಲು ಕೊಂಡಿ ಮುರಿದು ಬಾಗಿಲು ತೆರೆದು ಸಮರ್ಥ ಇತನ ನೇಣಿನ ಕುಡುಕಿಯಿಂದ ಬಿಡಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ ಅಂತಾ ತಿಳಿಸಿದ್ದು ಇರುತ್ತದೆ. ನನ್ನ ಮಗನು ಓದಿನಲ್ಲಿ ಆಸಕ್ತಿ ಇರದಕ್ಕೆ ಪರೀಕ್ಷೆಯ ಭಯದಿಂದ ಮತ್ತು ಫಲಿತಾಂಶ ದಿಂದ ಭಯಗೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.