POLICE BHAVAN KALABURAGI

POLICE BHAVAN KALABURAGI

30 November 2014

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ಬಸ್ಸುಗೌಡ ತಂದೆ ಅಮೃತಗೌಡ ಬಿರದಾರ ಸಾ: ಗಂವ್ಹಾರ ದಿನಾಂಕ 10/09/2014 ರಂದು ನಾನು ಮತ್ತು ನನ್ನ ಕಾಕನ ಮಗ ಕರಬಸಣ್ಣ ಬಿರಾದಾರ ಇತನೊಂದಿಗೆ  ಆತನ ವೇತನ ಪಡೆಯಲು ನನ್ನ ಮೋಟಾರ ಸೈಕಲ್ ಮೇಲೆ ಜೇವರ್ಗಿಗೆ ಬರುತ್ತಿದ್ದಾಗ ಮದ್ಯಾಹ್ನ 4-00 ಗಂಟೆಗೆ ಜೇವರ್ಗಿ ಶಾಹಾಪುರ ರಸ್ತೆ ಗಂವ್ಹಾರ ಕ್ರಾಸ್ ಹತ್ತಿರ ಕರಬಸಣ್ಣ ಇತನಿಗೆ ಲಘು ಶಂಕೆ ಮಾಡುವುದಕ್ಕಾಗಿ ಮೋಟಾರ ಸೈಕಲ್ ನಿಲ್ಲಿಸಿದೆನು ಕರಬಸಣ್ಣ ಇತನು ರಸ್ತೆ ದಾಟುವಾಗ ಜೇವರ್ಗಿ ಕಡೆಯಿಂದ ಮೋಟಾರ ಸೈಕಲ್ ನಂ ಕೆಎ-32-ಕೆ-6221 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಕರಬಸಣ್ಣನಿಗೆ ಡಿಕ್ಕಿ ಪಡಿಸಿ ಭಾರಿ ಗಾಯಪಡಿಸಿ ಓಡಿ ಹೋಗಿರುತ್ತಾನೆ ನಂತರ ನಾನು ಖಾಸಗಿ ಅಂಬುಲೇನ್ಸದಲ್ಲಿ ಕರಬಸಣ್ಣನಿಗೆ ಹಾಕಿಕೊಂಡು ಗುಲಬರ್ಗಾದ ಕಾಮರೆಡ್ಡಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದಾಗ ಅಲ್ಲಿನ ವೈಧ್ಯರು ಹೆಚ್ಚಿನ ಉಪಚಾರಕ್ಕಾಗಿ ಸೊಲಾಪುರದ ಗಂಗಾಮಯಿ ಆಸ್ಪತ್ರೆಗೆ ಹೋಗಲು ಹೇಳಿದ್ದರಿಂದ ರಾತ್ರಿಯೇ ಅಂಬುಲೆನ್ಸ ವಾಹನದಲ್ಲಿ ಹಾಕಿಕೊಂಡು ಸದರ ಸೋಲ್ಲಾಪುರ ಗಂಗಾಮಯಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದೇನು ನಂತರ ನನ್ನ ಕಾಕನ ಮಗ ಕರಬಸಪ್ಪ ಇತನಿಗೆ ಉಪಚಾರ ಫಲಕಾರಿಯಾಗದೆ ದಿನಾಂಕ 15/09/2014 ರಂದು ಮದ್ಯಾಹ್ನ 3-00 ಗಂಟೆಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 28/11/2014 ರಂದು ಸಾಯಂಕಾಲ 05-15 ಗಂಟೆ ಸುಮಾರಿಗೆ ನನ್ನ ಗಂಡನಾದ ವಿಜಯಕುಮಾರ ಇತನು ತನ್ನ ಮೋ/ಸೈಕಲ್ ನಂ: ಕೆಎ 32 ಇಇ 3864 ನೆದ್ದನ್ನು ರಾಮ ಮಂದಿರ ರಿಂಗ ರೋಡ ದಿಂದ ಆರ್.ಪಿ.ಸರ್ಕಲ್ ರೋಡಿನಲ್ಲಿ ಬರುವ ವೆಂಕಟಗಿರಿ ಹೊಟೇಲ ಎದುರಿನ ರೋಡ ಮೇಲೆ ವಿಜಯಕುಮಾರ ಇತನು ತನ್ನ ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಎಡ ಬಲ ಕಟ್ ಹೊಡೆದು ಒಮ್ಮೇಲೆ ಬ್ರೇಕ್ ಹಾಕಿ ಮೋ/ಸೈಕಲ್ ಸ್ಕಿಡ ಮಾಡಿ ತನ್ನಿಂದ ತಾನೆ ಬಿದ್ದು ಎಡಗಡೆ ಹುಬ್ಬಿಗೆ, ಎಡ ಮೆಲಕಿನ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ  ಅಂತಾ ಶ್ರೀಮತಿ ಶಿವಲಿಲಾ ಗಂಡ ವಿಜಯಕಯಮಾರ ಸಾ: ಪಿರೋಜಾಬಾದ ತಾ:  ಕಲಬುರಗಿ ಹಾ;ವ: ಗಾಂಧಿ ನಗರ ಗಂಜ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವಾದಿರಾಜ ತಂದೆ ಶ್ಯಾಮರಾವ ಬೇಟಗೇರಿ ಸಾ: ಜಮಖಂಡಿ ಹಾ.ವ: ಎನ್.ಜಿ.ಓ ಕಾಲೋನಿ ಬೇಂದ್ರೆ ನಗರ ಕಲಬುರಗಿ ರವರು ದಿನಾಂಕ 23/11/14 ರಂದು ತನ್ನ ಹೆಂಡತಿ ವಿಜಯಶ್ರೀ ಅರವರು ಹುಬ್ಬಳಿಯಲ್ಲಿ ಕಾರ್ಯಕ್ರಮದ  ನಿಮಿತ್ಯ ಹೋಗಿದ್ದು ನಾನು ದಿನಾಂಕ 27/11/2014 ರಂದು ನನ್ನ ಮನೆಗೆ ಕೀಲಿ ಹಾಕಿ ರಾತ್ರಿ 7 ಗಂಟೆಗೆ ಕಲಬುರಗಿದಿಂದ ಹುಬ್ಬಳಿಗೆ ಹೋಗಿ ನಾನು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮ ಮುಗಿಸಿಕೊಂಡು ಇಂದು ದಿನಾಂಕ 29/11/14 ರಂದು ಸಾಯಂಕಾಲ 6-30 ಪಿ.ಎಂ.ಕ್ಕೆ ನಾನು ನನ್ನ ಹೆಂಡತಿ ಕಲಬುರಗಿಗೆ ಬಂದು ನೋಡಲಾಗಿ ನಮ್ಮ ಮನೆಗೆ ಹಾಕಿದ ಮುಖ್ಯ ಬಾಗಿಲದ ಕೀಲಿ ಮುರಿದು ಬಿದ್ದಿದ್ದು ಬಾಗಿಲು ಸ್ವಲ್ಪ ತೆರೆದಿದ್ದು ಗಾಬರಿಗೊಂಡು ಒಳಗೆ ಹೋಗಿ ನೋಡಲಾಗಿ ಬೆಡ್ ರೂಮ್ ಕೊಣೆಯಲ್ಲಿ ಅಲಮಾರಿ ಕೊಂಡಿ ಹಾರಿಸಿ ತೆರೆದು ಲಾಕರದಲ್ಲಿ ಇಟ್ಟ ಬಂಗಾರದ ಆಭರಣಗಳು,  ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 1,77,000/- ರೂ ಬೇಲೆ ಬಾಳುವ  ಆಭರಣಗಳನ್ನು ಯಾರೋ ಕಳ್ಳರು ದಿನಾಂಕ 28/29-11-2014 ರಂದು ಮದ್ಯರಾತ್ರಿ ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಗಂಗುಬಾಯಿ ಗಂಡ ಸುರೇಶ ತಳವಾರ ಸಾ|| ನಿಂಬರ್ಗಾ ಹಾ|||| ಎಸ್,ಎಮ್ ಕೃಷ್ಣಾ ಕಾಲೋನಿ ಕಲಬುರಗಿ ಇವರ ಮಗನಾದ ಪ್ರದೀಪ 12 ವರ್ಷ ಈತನು ದಿನಾಂಕ: 24/11/2014 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ತನ್ನ ಮನೆಯಿಂದ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ, ಕಾಣೆಯಾಗಿದ್ದಾನೋ ಅಥವಾ  ಅಪಹರಣಕ್ಕೀಡಾಗಿದ್ದಾನೋ ಗೋತ್ತಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.