POLICE BHAVAN KALABURAGI

POLICE BHAVAN KALABURAGI

26 April 2012

GULBARGA DIST REPORTED CRIME


ಮೋಟಾರ ಸೈಕಲ ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ ಮುಕುಂದಪ್ಪ ತಂದೆ ನಿರಂಜನ  ಸಾ|| ಶೇಖರೋಜಾ  ಶಹಾಬಜಾರ ಗುಲಬರ್ಗಾ ರವರು ನಾನು ದಿನಾಂಕ: 23/04/2012 ರಂದು ಸಾಯಂಕಾಲ 7-20 ಗಂಟೆಗೆ ವೀರಶೈವ ಕಲ್ಯಾಣ ಮಂಟಪ ಎದುರುಗಡೆ ಪಬ್ಲಿಕ ಗಾರ್ಡನದಲ್ಲಿ  ಕೆಎ 32 ಎಸ್ 2743 ದ್ವಿಚಕ್ರ ವಾಹನ ಹೊಂಡಾ ಶೈನ ||ಕಿ|| 20,443/- ನೇದ್ದನ್ನು ನಿಲ್ಲಿಸಿದ್ದು, ನಂತರ   ಮರಳಿ ಬಂದು ನೋಡಲು, ನಿಲ್ಲಿಸಿರುವ ಸ್ಥಳದಲ್ಲಿ  ವಾಹನವು ಇರುಲಿಲ್ಲ ನಾನು ಎಲ್ಲಾ ಕಡೆ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವದಿಲ್ಲ.ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ51/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಶಂಕ್ರೆಪ್ಪಾ ತಂದೆ ಮಲ್ಲಪ್ಪಾ ಮಡಿವಾಳ ಸಾ:ಯನಗುಂಟಿ ತಾ:ಜೇವರ್ಗಿರವರು ನನ್ನ ಮಗಳಾದ ಗೀತಾ ಇವಳಿಗೆ ಹೊಸೂರು ಗ್ರಾಮದ ನಾಗಪ್ಪನ ಮಗನಾದ ಸಾಯಿಬಣ್ಣಾ ಇತನ ಮದುವೆ ದಿನಾಂಕ:25/04/2012 ರಂದು 12-30 ಗಂಟೆಗೆ ಅಕ್ಷತೆ ಇದ್ದುದರಿಂದ  ನಾವು ಯನಾಗುಂಟಿಯಿಂದ ಹೊಸುರ ಗ್ರಾಮಕ್ಕೆ ಲಾರಿ ನಂ.ಎಮ್‌ಹೆಚ್‌-12/ಕ್ಯೂಎ-9329 ನೇದ್ದರಲ್ಲಿ ಬರುವಾಗ ಚಾಲಕನಾದ ಚಂದ್ರಕಾಂತ ತಂದೆ ಮಲ್ಲಿಕಾರ್ಜುನ ನೆಲೋಗಿ ಇತನು ತನ್ನ ಲಾರಿಯನ್ನು ಚಲಾಯಿಸುತ್ತಿದ್ದನು.ಅದರಲ್ಲಿ  ನಾನು ಮತ್ತು ನಮ್ಮೂರ ಜನರು  ಸದರಿ  ಲಾರಿಯಲ್ಲಿ ಕುಳಿತು  ಲಾರಿಯು ಜೇವರ್ಗಿ ಮಾರ್ಗವಾಗಿ ತೊನಸಳ್ಳಿ ಹತ್ತಿರ ಬರುವಾಗ ರಾಜು ಮೇಸ್ತ್ರೀ ರವರ ಹೊಲದ ಹತ್ತಿರ ರೋಡಿನ ಮೇಲೆ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಓವರ ಟೇಕ ಮಾಡುತ್ತಿದ್ದಾಗ ರೋಡಿನ ಬಲ ಬದಿಗೆ ಮಣ್ಣಿನ  ದಿಬ್ಬಿಯ ಕಡೆಗೆ ತೆಗೆದುಕೊಂಡಿದ್ದಿರಂದ ಲಾರಿಯಿಂದ ಕೆಳಗೆ ಬಿದ್ದ ಕಾಳಪ್ಪಾ ತಂದೆ ತಿಪ್ಪಣ್ಣಾ ಬಡಿಗೇರ ಇತನಿಗೆ ಬಲ ಹಣೆಗೆ ಒಳಪೆಟ್ಟಾಗಿ ರಕ್ತಗಾಯ ವಾಗಿರುತ್ತದೆ. ಪ್ರಭು ತಂದೆ ಸಾಯಿಬಣ್ಣಾ ಪ್ರಭಾ ಬಲ ಗೈ ಮುಂಗೈ ಗೆ ಭಾರಿ ಒಳಪೆಟ್ಟಾಗಿರುತ್ತದೆ.ಶಿವಾನಂದ ತಂದೆ ನಿಂಗಪ್ಪಾ ಇತನಿಗೆ ತಲೆಗೆ ರಕ್ತಗಾಯ ಮತ್ತು ಎಡಗಾಲ ತೊಡೆಗೆ ಭಾರಿ ರಕ್ತಗಾಯ ಮತ್ತು ಪಾದಕ್ಕೆ ರಕ್ತಗಾಯ ವಾಗಿರುತ್ತದೆ. 4.ನಾಗಪ್ಪಾ ತಂದೆ ಈರಣ್ಣಾ ದೊಡ್ಡಮನಿ ಇತನಿಗೆ ಬಲ ಗೈ ಭುಜಕ್ಕೆ ಒಳಪೆಟ್ಟಾಗಿ ಗುಪ್ತಗಾಯವಾಗಿರುತ್ತದೆ 5.ಶಿವಮ್ಮಾ ಗಂಡ ಹಣಮಂತ ಇವಳಿಗೆ ಬೆನ್ನಿನ ಮಗ್ಗಲಿಗೆ ಒಳಪೆಟ್ಟಾಗಿರುತ್ತದೆ. ಹಾಗೂ ಆನಂದ ತಂದೆ ಶರಣಪ್ಪಾ ಇತನಿಗೆ ಟೊಂಕಕ್ಕೆ ಒಳಪೆಟ್ಟಾಗಿ ಬಲಗಾಲಿಗೆ ತರಚಿದ ಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 47/2012 ಕಲಂ 279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಳ್ಳಲಾಗಿದೆ.