POLICE BHAVAN KALABURAGI

POLICE BHAVAN KALABURAGI

11 September 2017

KALABURAGI DISTRICT REPORTED CRIMES

ಇಸ್ಟೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 10-09-2017 ರಂದು   ಅಫಜಲಪೂರ ಎಪಿಎಮ್ ಸಿ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಜೆ.ಎಚ್. ಇನಾಮದಾರ ಸಿಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಎಪಿಎಮ್ ಸಿ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಎಪಿಎಮ್ ಸಿ ಹತ್ತಿರ ರೋಡಿನ ಬಾಜು ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಇಸ್ಪೆಟ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಡುತಿದ್ದ ಎಲ್ಲಾ 10 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ರಾಜಕುಮಾರ ತಂದೆ ಮಲ್ಲಪ್ಪ ಗುಣಾರಿ ಸಾ|| ಅಫಜಲಪೂರ ಅಂತಾ 2) ಮಲ್ಲಪ್ಪ ತಂದೆ ಚಿದಾನಂದ ಪತ್ತಾರ ಸಾ|| ಬಜಾರ ಏರಿಯಾ ಅಫಜಲಪೂರ 3) ಸುಬಾಷ ತಂದೆ ಬಾಬುರಾವ ಜೇವರ್ಗಿ ಸಾ|| ಅಫಜಲಪೂರ 4) ಗಂಗಾಧರ ತಂದೆ ಪ್ರಭು ಉಡಗಿ ಸಾ|| ಅಫಜಲಪೂರ  5) ನಾಗೇಶ ತಂದೆ ಮಲ್ಲಪ್ಪ @ ಗದಿಗೆಪ್ಪ ಪಾಟೀಲ (ಉಟಗಿ) ಸಾ|| ಇಂದಿರಾ ನಗರ ಅಫಜಲಪೂರ 6) ಶಿವಪ್ರಸಾದ ತಂದೆ ಶಂಕ್ರೇಪ್ಪ ಕತ್ತನಳ್ಳಿ  ಸಾ|| ಇಂದಿರಾ ನಗರ ಅಫಜಲಪೂರ 7) ಬೀರಣ್ಣ ತಂದೆ ನಿಂಗಪ್ಪ ಕರಜಗಿ ಸಾ|| ಸಿದ್ರಾಮೇಶ್ವರ ಗುಡಿ ಹತ್ತಿರ ಅಫಜಲಪೂರ 8) ಸಂತೋಷ ತಂದೆ ಕಲ್ಲಪ್ಪ ನರೋಣಿ ಸಾ|| ಕಲಬುರಗಿ ಹಾ|| || ಅಫಜಲಪೂರ 9) ಗುರುಶಾಂತ ತಂದೆ ಶಾಂತಪ್ಪ ಯಳಸಂಗಿ ಸಾ|| ಜೈ ಭೀಮ ನಗರ ಅಫಜಲಪೂರ 10) ಜಗದೀಶ ತಂದೆ ಬಸಣ್ಣ ಅವಟೆ  ಸಾ|| ಮಹಾಂತೇಶ ಚಿತ್ರ ಮಂದಿರದ ಹಿಂದುಗಡೆ ಅಫಜಲಪೂರ  ಅಂತಾ ತಿಳಿಸಿದ್ದು ಸದರಿಯವರಿಂದ  ಜೂಜಾಟಕ್ಕೆ ಬಳಸಿದ 40,820/- ರೂ ನಗದು ಹಣ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ರವರು ದಿನಾಂಕಃ 09.09.2017 ರಂದು  ಮುಂಜಾನೆ ಮನೆಯಲ್ಲಿ  ತನ್ನ ಮಗಳನ್ನು ಮನೆಯಲ್ಲಿ ಬಿಟ್ಟು ಎಲ್ಲರು ನಾವು ಪಾಲಿಗೆ ಮಾಡಿದ  ಹೊಲಕ್ಕೆ ಹೋಗಿದ್ದೇವು.  ಸಾಯಂಕಾಲ 4 ಗಂಟೆಗೆ  ಹೊಲದಿಂದ ನಾವೆಲ್ಲರು ಮನೆಗೆ ಬಂದಾಗ  ನನ್ನ ಮಗಳು ಅಳುತ್ತಾ ನಮಗೆ ಹೇಳಿದ್ದೇನೆಂದರೆನಾನು ಮನೆಯಲ್ಲಿ ಮಧ್ಯಾಹ್ನ 2.00ಗಂಟೆಯ  ಸುಮಾರಿಗೆ  ಮನೆಯ ಬಾಗಿಲ ಮುಂದೆ ಮಾಡಿ ಒಬ್ಬಳೆ ಮಲಗಿಕೊಂಡಾಗ ಬಾಜು ಮನೆಯ   ಯಲ್ಲಾಲಿಂಗ ತಂದೆ ಶಂಕ್ರೆಪ್ಪಾ ಮೈಲಾರಿ ಇತನು ನಮ್ಮ ಮನೆಯಲ್ಲಿ  ಬಂದು ನನ್ನ  ಪಕ್ಕದಲ್ಲಿ ಮಲಗಿಕೊಂಡು ನನ್ನ ನೈಟಿ  ಮೇಲೆ ಎತ್ತಿ ನನಗೆ  ಜಬರದಸ್ತಿಯಿಂದ ಜಬರಿ ಸಂಬೋಗ ಮಾಡುವಾಗ ನಾನು ಚೀರಾಡಿ ಬಿಡಿಕೊಳ್ಳಲು ಪ್ರಯತ್ನಿಸುವಾಗ, ನನಗೆ ನೀನು  ಸುಮ್ಮನೆ ಇರಲಿಲ್ಲವೆಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಪ್ರಾಣ ಬೆದರಿಕೆ ಹಾಕಿ  ಜಬರಿ ಸಂಭೋಗ ಮಾಡಿರುತ್ತಾನೆಆಗ ಅವನ ಹೆಂಡತಿ  ನಿಂಗಮ್ಮಾ  ಇವಳು  ನಮ್ಮ ಮನೆಗೆ  ಬಂದು  ಹೊರಗಡೆಯಿಂದ  ಬಾಗಿಲು ಕೀಲಿಹಾಕಿ ಜನರಿಗೆ ಕರೆಯಿಸಿ ಬಾಗಿಲು ತೆರೆದು  ನಮಗೆ ಹೊರಗೆ ತಂದು  ನನಗೆ  ರಂಡಿ ನನ್ನ  ಗಂಡನಿಗೆ  ಇಟ್ಟುಕೊಂಡಿದ್ದಿ ಏನು  ಅಂತಾ ಬೈಯ್ದು ಕೈಯಿಂದ  ಬೆನ್ನಿಗೆ ಹೊಡೆದು  ಕಟ್ಟೆಯ ಮೇಲಿಂದ  ಎಳೆದಾಡಿ ಕೆಳಗೆ ಕಡವಿ, ಈಗಾಗಲೆ ನಿನ್ನ ಒಂದು  ಕಾಲು ಕುಂಟು ಇದ್ದು ಇನ್ನೊಂದು  ಕಾಲು ಮುರಿಯುತ್ತೇನೆ ಅಂತಾ ಬೈಯ್ದಿರುತ್ತಾಳೆ ಅಂತಾ ನನ್ನ ಮಗಳು ನಮಗೆ  ತಿಳಿಸಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಫರತಾಬಾದ ಠಾಣೆ : ದಿನಾಂಕ 10-09-2017 ರಂದು ಶಹಾಬಾದ ಕ್ರಾಸ ಮಾರ್ಗ ವಾಗಿ ಅಲ್ಲಿಂದಲೊ ಅಕ್ರಮವಾಗಿ ಅನಧಿಕೃತವಾಗಿ  ಕಳ್ಳತನದಿಂದ  ಮರಳನ್ನು ಟಿಪ್ಪರಗಳಲ್ಲಿ ಸಾಗಣೆ ಮಾಡುತ್ತಿದ್ದಾರೆ  ಅಂತಾ ಖಚಿತ ಬಾತ್ಮಿ ಬಂದ  ಮೇರೆಗೆ, ಶ್ರೀ ವಾಹಿದ ಕೊತವಾಲ ಪಿ.ಎಸ್.ಐ. ಫರತಾಬಾದ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಹಾಬಾದ ಕ್ರಾಸ ಹತ್ತಿರ ಹೊಗಿ ನಿಂತಾಗ ಶಹಾಬಾದ ಕಡೆಯಿಂದ ಎರಡು  ಟಿಪ್ಪರ ಗಳು ಬರುತ್ತಿರುವುದ್ದನ್ನು ನೋಡಿ ನಮಗೆ ಸಂಶಯ ಬಂದು ಸದರಿ ಟಿಪ್ಪರಗಳನ್ನು ಸಿಬ್ಬಂದಿಯವ ಸಹಾದಿಂದ ಸನ್ನೆ ಮಾಡಿ ನಿಲ್ಲಿಸಿದ್ದು, ಸದರಿ ಟಿಪ್ಪರಗಳಲ್ಲಿ ಚೆಕ್ಕ ಮಾಡಲಾಗಿ ಮರಳು ತುಂಬಿದ್ದು, ಸದರಿ ಟಿಪ್ಪರ ಚಾಲಕರುಗಳಿಗೆ  ಸದರಿ ವಾಹನಗಳಲ್ಲಿ ಮರಳು ಸಾಗಾಣಿಕೆಗೆ ಸಂಬಂದ ಪಟ್ಟ ದಾಖಲಾತಿಗಳು ಇರುವ ಬಗ್ಗೆ ಕೇಳಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲ ನಮ್ಮ ಮಾಲಿಕರ ಸೂಚನೆ ಮೇರೆಗೆ ಮರಳನ್ನು ಅಕ್ರಮವಾಗಿ ಕಳ್ಳತನ ಮಾಡಿ ತುಂಬಿಕೊಂಡು ಮಾರಾಟ ಸಲುವಾಗಿ ಬರುತ್ತಿದ್ದೇವೆ ಅಂತಾ ತಿಳಿಸಿದ್ದು, ಸದರಿ ಚಾಲಕರಿಗೆ ಕೂಡಲೆ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ತಮ್ಮ ಹೆಸರು 1) ದರ್ಶನ ತಂದೆ ಬಸವರಾಜ ಹೋಸಮನಿ ಉಃ ಟಿಪ್ಪರ ಚಾಲಕ ಸಾಃ ಮಲ್ಲಾಬಾದ ತಾಃ ಜೇವರ್ಗಿ ಜಿಃ ಕಲಬುರಗಿ ಹಾ.ವಃ ಸಾಯಿ ಮಂದಿರ ಹತ್ತಿರ ಕಲಬುರಗಿ 2) ಸೋಮಯ್ಯ ತಂದೆ ರೇವಣಯ್ಯ ಹೀರೆಮಠ ಉಃ ಟಿಪ್ಪರ ಚಾಲಕ ಸಾಃ ಭೀಮಪೂರ ತಾಃ ಆಳಂದ ಜಿಃ ಕಲಬುರಗಿ ಹಾ.ವಃ ಆನಂದೇಶ್ವರ ನಗರ ಸಾಯಿ ಮಂದಿರ ಹತ್ತಿರ ಕಲಬುರಗಿ ಅಂತಾ ತಿಳಿಸಿದ್ದು, ಸದರಿ ಟಿಪ್ಪರಗಳನ್ನು ಪರಿಶೀಲಿಸಿ ನೋಡಲಾಗಿ ಅವುಗಳ ನಂಬರ 1) ಕೆಎ-32 ಬಿ-6233 2) ಕೆಎ-32 ಬಿ-7871 ನೇದ್ದವು ಇದ್ದವು, ನಂತರ ಟಿಪ್ಪರ ನಂ ಕೆಎ-32 ಬಿ-6233 ನೆದ್ದರ ಮಾಲಿಕನ ಬಗ್ಗೆ ವಿಚಾರಿಸಲಾಗಿ ತಿಮಯ್ಯ ತಂದೆ ಯಲ್ಲಪ್ಪ ಸಾಃ ಸಿರನೂರ ಅಂತಾ ತಿಳಿಸಿದ್ದು, ಟಿಪ್ಪರ ನಂ ಕೆಎ-32 ಬಿ-7871 ನೇದ್ದರ ಮಾಲಿಕನ ಬಗ್ಗೆ ವಿಚಾರಿಸಲಾಗಿ  ರಾಕೇಶ ತಂದೆ ಬಸವರಾಜ ರೆಡ್ಡಿ ಸಾಃ ಸಿರನೂರ ಅಂತಾ ತಿಳಿಸಿದರು. ನಂತರ ಟಿಪ್ಪರ ನಂ ನಂ ಕೆಎ-32 ಬಿ-6233 ಅ.ಕಿಃ 5,00,000/-ರೂ ಹಾಗೂ ಅದರಲ್ಲಿನ ಮರಳು ಅ.ಕಿಃ 10,000/-ರೂ ಮತ್ತು ಟಿಪ್ಪರ ನಂ ಕೆಎ-32 ಬಿ-7871 ಅ.ಕಿಃ 5,00,000/-ರೂ ಹಾಗೂ ಮರಳು ಅ.ಕಿಃ 10,000/-ರೂ  ರಂದು ನೇದ್ದವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಇಂದು ದಿನಾಂಕ 10/09/2017 ರಂದು 10.00 ಎ.ಎಮದ ದಿಂದ 11.00 ಎ.ಎಮದ ವರೆಗೆ ಪಂಚರ ಸಮ ಕ್ಷಮದಲ್ಲಿ ಜಪ್ತಿಪಡಿಸಿಕೊಂಡು, ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಅಭ್ಯರ್ಥಿಗಳ ಬಂಧನ :
ಫರತಾಬಾದ ಠಾಣೆ : ಶ್ರೀ ಜಗದೀಶ ತಂದೆ ಶರಣಪ್ಪಾ ದೊಡ್ಡಮನಿ ಸಾಃ ವಿದ್ಯಾ ನಗರ ಕಲಬುರಗಿ ಹಾ.ವಃ ಸಂತ್ ಕ್ಷೇವಿಯರ್ ಪದವಿ ಪೂರ್ವ ಕಾಲೇಜ ಸಿರನೂರ ಕಲಬುರಗಿ ಇವರು ಈಗ ಸುಮಾರು 04 ವರ್ಷಗಳಿಂದ ಸಂತ್ ಕ್ಷೇವಿಯರ್ ಪದವಿ ಪೂರ್ವ ಕಾಲೇಜ ಸಿರನೂರದಲ್ಲಿ ಉಪನ್ಯಾಸಕ ಅಂತಾ ಕೆಲಸ ಮಾಡಿಕೊಂಡಿದ್ದು . ಕೆ.ಪಿ.ಎಸ್.ಸಿ ವತಿಯಿಂದ ಕರೆಯಲಾಗಿರುವ ಅಸಿಸ್ಟೆಂಟ ಇಂಜಿನೀಯರ ಹುದ್ದೆಗಳ ನೇಮಕಾತಿ ಕುರಿತು ಪರೀಕ್ಷೆಯನ್ನು ದಿನಾಂಕ 09/09/2017 ರಂದು ಶನಿವಾರ ಮತ್ತು ದಿನಾಂಕ 10/09/2017 ರಂದು ಬಾನುವಾರ ನಡೆಯುತ್ತಿದ್ದು, ಸದರಿ ಪರೀಕ್ಷೆಗೆ ನಮ್ಮ ಸಂತ್ ಕ್ಷೇವಿಯರ್ ಪದವಿ ಪೂರ್ವ ಕಾಲೇಜ ಸಿರನೂರ ಪರೀಕ್ಷಾ ಕೇಂದ್ರವಾಗಿ ನಿಗಧಿ ಪಡಿಸಿದ್ದರಿಂದ, ನಾನು ಈ ಪರೀಕ್ಷೆ ಕೇಂದ್ರ ಮುಖ್ಯಸ್ಥನಾಗಿರುತ್ತೇನೆ. ದಿನಾಂಕ: 09/09/2017 ರಂದು ನಿಗದಿಪಡಿಸಿದ ನಮ್ಮ ಕಾಲೇಜಿನಲ್ಲಿ ಪರೀಕ್ಷೆಗಳು ನಡೆಸಿದ್ದು ಇರುತ್ತದೆ. ದಿನಾಂಕ;10/09/2017 ರಂದು ಬೆಳಿಗ್ಗೆ 10.00 ಗಂಟೆ ಯಿಂದ 11.30 ಎ.ಎಮದ ವರೆಗೆ ನಮ್ಮ ಕಾಲೇಜಿನಲ್ಲಿ ಅಸಿಸ್ಟೆಂಟ ಇಂಜಿನೀಯರ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸಿದ್ದು, ನಂತರ ಮದ್ಯಾಹ್ನ 2.00 ಗಂಟೆಯಿಂದ 4.00 ಪಿ.ಎಮದ ವರೆಗೆ ಪರೀಕ್ಷೆಗಳು ನಡೆದಿದ್ದು, ಆ ಸಮಯದಲ್ಲಿ ನಮ್ಮ ಕಾಲೇಜಿನ ರೂಮ್ ನಂ 14 ರಲ್ಲಿ  ಪರೀಕ್ಷೆಗೆ ಕುಳಿತ ಅಭ್ಯರ್ಥಿ ಯಾದ ನಿಲೇಶ ತಂದೆ ಬಸವರಾಜ ಜಾಧವ  ರೆಜಿಸ್ಟಾರ ನಂ 1051830 ಮತ್ತು ರೂಮ ನಂ 25 ರಲ್ಲಿ ಪರೀಕ್ಷೆಗೆ ಕುಳಿತ್ತಿದ್ದ ಅಭ್ಯರ್ಥಿ ಶೌಕತ ಅಲಿ ತಂದೆ ಅಬ್ದುಲ ಅಜೀಜ್  ರೆಜಿಸ್ಟಾರ ನಂ 1052088 ಇವರುಗಳು ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆಗಳಿಗೆ ಉತ್ತರ ಬೀಡಿಸಲು ಅನುಕೂಲವಾಗುವ ಉದ್ದೇಶದಿಂದ ಅಭ್ಯರ್ಥಿಗಳು ಸೀಮ್ ಕಾರ್ಡ ಇರುವ ಬ್ಲೂಟೂತ್ ಮೈಕ್ರೋ ಪೋನ ಸಾಧನಗಳನ್ನು ಬಳಸಿ ಪರೀಕ್ಷೆಗೆ ಕುಳಿತುಕೊಂಡು ಹೊರಗಡೆಯಿಂದ ಉತ್ತರಗಳನ್ನು ಪಡೆದುಕೊಂಡು ಪರೀಕ್ಷೆ ಬರೆಯುವ ಕಾಲಕ್ಕೆ ಕೊಠಡಿ ಸಂಖ್ಯೆ 14 ರ ಸಂವಿಕ್ಷಕರಾದ ಶ್ರೀ ಮಹೇಶ ಕಾಂಭ್ಳೆ ಮತ್ತು ಕೊಠಡಿ ಸಂಖ್ಯೆ 25 ರ ಸಂವಿಕ್ಷಕರಾದ ಶ್ರೀ ರಾಜಕುಮಾರ ಹಬಾಡೆ ಇವರುಗಳು ನೋಡಿ ನಕಲು ಮಾಡುತ್ತಿದ್ದು ಅಭ್ಯರ್ಥಿಗಳನ್ನು ಹಾಗೂ ಅವರುಗಳು ನಕಲು ಮಾಡಲು ಬಳಸುತ್ತಿದ್ದ ಸೀಮ್ ಕಾರ್ಡ ಇರುವ ಬ್ಲೂಟೂತ್ ಮೈಕ್ರೋ ಪೋನ ಸಾಧನಗಳನ್ನು ತಂದು ನನ್ನ ಮುಂದೆ ಹಾಜರಪಡಿಸಿದ್ದು. ಆ ಅಬ್ಯರ್ಥಿಗಳಿಗೆ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ರಜೀಸ್ಟರ್‌ ನಂಬರ 1051830 ನಿಲೇಶ ತಂದೆ ಬಸವರಾಜ ಜಾಧವ ಸಾ: ವಡ್ಡರ ಗಲ್ಲಿ ಬ್ರಹ್ಮಪೂರ ಕಲಬುರಗಿ ಹಾಗೂ 2) ರೆಜಿಸ್ಟಾರ ನಂ 1052088  ಶೌಕತ ಅಲಿ ತಂದೆ ಅಬ್ದುಲ ಅಜೀಜ ಸಾ: ಬಸವೇಶ್ವರ ನಗರ ಜೇವರ್ಗಿ ಅಂತಾ ತಿಳಿಸಿದ್ದು ಇರುತ್ತದೆ. ಇಂದು ನಡೆದ ಕೆ.ಪಿ.ಎಸ್.ಸಿ ವತಿಯಿಂದ ಕರೆಯಲಾಗಿರುವ ಅಸಿಸ್ಟೆಂಟ ಇಂಜಿನೀಯರ ಹುದ್ದೆಗಳ ನೇಮಕಾತಿ ಕುರಿತು ಪರೀಕ್ಷೆಗೆ ಹಾಜರಾದ ಅಬ್ಯರ್ಥಿಗಳು ಮೋಸದಿಂದ  ಸೀಮ್ ಕಾರ್ಡ ಇರುವ ಬ್ಲೂಟೂತ್ ಮೈಕ್ರೋ ಪೋನ ಸಾಧನಗಳನ್ನು ಬಳಸಿ ಹೊರಗಡೆಯಿಂದ ಉತ್ತರಗಳನ್ನು ಪಡೆದುಕೊಂಡು ಪರೀಕ್ಷಾ ಮಂಡಳಿಗೆ ಮೋಸ ಹಾಗೂ ವಂಚನೆ ಎಸಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಕಳವು ಪ್ರಕರಣ :
ನರೋಣಾ ಠಾಣೆ : ಶ್ರೀ.ನಾಗಣ್ಣಾ ತಂದೆ ಕಾಶಿರಾಯ ಮಾದಗೊಂಡ ಸಾ||ಕಡಗಂಚಿ ಇವರು 2011ನೇ ಸಾಲಿನಲ್ಲಿ ಟಾಟಾ ಇಂಡಿಕಾ ಕಾರ್ ನಂ-ಕೆ.ಎ. 32 ಎಮ್ 4424 ನೇದ್ದನ್ನು ಖರೀದಿ ಮಾಡಿರುತ್ತೇನೆ. ಈ ಕಾರನ್ನು ನಾನು ದಿನಾಲು ಉಪಯೋಗಿಸಿದ ನಂತರ ನಮ್ಮ ಅಳಿಯನಾದ ಶ್ರೀ.ಶಾಂತಪ್ಪ ತಂದೆ ಕಾಶಿರಾಯ ಜವಳಿ ಮು||ಕಡಗಂಚಿ ತಾ||ಆಳಂದ ಇವರ ಮನೆಯ ಮುಂದೆ ನಿಲ್ಲಿಸುತ್ತಿದ್ದೆ. ಅದರಂತೆ ದಿನಾಂಕ: 26-08-2017 ರಂದು ರಾತ್ರಿ ನಾನು ನನ್ನ ಕಾರನ್ನು ನಮ್ಮ ಅಳಿಯನಾದ ಶ್ರೀ.ಶಾಂತಪ್ಪ ಇವರ ಮನೆಯ ಮುಂದೆ ನಿಲ್ಲಿಸಿ ಅವರಿಗೆ ತಿಳಿಸಿ ನಮ್ಮ ಮನೆಗೆ ಹೋಗಿರುತ್ತೇನೆ. ಮರುದಿವಸ ದಿನಾಂಕ:27-08-2017 ರಂದು ನಸುಕಿನ ಜಾವ 04-45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಅಳಿಯನಾದ ಶಾಂತಪ್ಪ ಇವರು ನನಗೆ ಫೋನಮಾಡಿ ಮನೆಯ ಮುಂದೆ ನಿಲ್ಲಿಸಿದ ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿದ ಮೇರೆಗೆ ನಾನು ನಮ್ಮ ಅಳಿಯನ ಮನೆಗೆ ಹೋಗಿ ನೋಡಲಾಗಿ ನನ್ನ ಕಾರು ಇರಲಿಲ್ಲ ಅವರ ಮನೆಯ ಪಕ್ಕದಲ್ಲಿರುವ ಶ್ರೀ.ಕರಬಸಪ್ಪ ತಂದೆ ಗುರುಶಾಂತಪ್ಪ ಕುಡಕಿ ಮತ್ತು ನಾನು ಹಾಗೂ ನಮ್ಮ ಅಳಿಯ ಮೂವರು ಸೇರಿ ಕರಸಬಸಪ್ಪ ಇವರ ಕಾರಿನಲ್ಲಿ ಧರ್ಮವಾಡಿ ಹಾಗೂ ದಂಗಾಪೂರ ಕಡೆಗೆ ಹುಡಕಾಡಿ ನೋಡಲಾಗಿ ಕಾರು ಸಿಕ್ಕಿರುವುದಿಲ್ಲ. ಕಳೆದು ಹೋಗಿರುವ ನನ್ನ ಕಾರಿನ ಈಗಿನ ಅಂದಾಜು ಕಿಮ್ಮತ್ತು 49,000/- ಗಳು ಆಗಿರುಬಹುದು ಮಾನ್ಯರು ಕಳೆದು ಹೋಗಿರುವ ನನ್ನ ಕಾರನ್ನು ಪತ್ತೆಮಾಡಿ ಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಕಲ್ಲಪ್ಪಾ ತಂದೆ ಲಕ್ಷ್ಮಣ ಕೋಳಿ ಸಾ ಸಾವಳೇಶ್ವರ ತಾ : ಆಳಂದ ರವರು ದಿನಾಂಕ:05/09/2017 ರಂದು ಬಾಂಬೆಯಿಂದ ಗ್ರಾಮಕ್ಕೆ ಹೋಗಬೇಕೆಂದು ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಗೊವಿಂದ ಕೋಳಿ ಇಬ್ಬರು ಕೂಡಿಕೊಂಡು  ಆಳಂದಕ್ಕೆ ಬೆಳಿಗ್ಗೆ ಬಂದು ನಂತರ ಗ್ರಾಮಕ್ಕೆ ಹೊಗಲು ಏನಾದರೂ ತೆಗೆದುಕೊಂಡು ಹೊಗಬೇಕೆಂದು ನಾನು ಮತ್ತು ಗೊವಿಂದ ಕೂಡಿಕೊಂಡು ಮಾರ್ಕಟದಲ್ಲಿ ಇರುವ ಹಳೆಯ ಪೊಲೀಸ ಠಾಣೆಯ ಹಿಂದುಗಡೆಯ ಸಣ್ಣ ರಸ್ತೆಯ ಮೇಲೆ ನಿಂತ್ತಿದ್ದಾಗ ಯಾರೋ ಇಬ್ಬರು ಅಪರಿಚಿತರು ನಮಗೆ ಬಂದು ನಾನು ಪೊಲೀಸ ಇದ್ದೇನೆ ನೀವು ರೀತಿಯಾಗಿ ಯ್ಯಾಕೆ ಕೊರಳಲ್ಲಿ ಲಾಕೇಟ ಹಾಕಿಕೊಂಡಿದ್ದಿರಿ ಮತ್ತು ಕೈಯಲ್ಲಿ ಬಂಗಾರದ ಉಂಗುರ ಹಾಕಿಕೊಂಡಿದಿರಿ ಇಲ್ಲಿ ಕಳ್ಳರು ಇದ್ದಾರೆ  ಅದನ್ನು ಮೊದಲು ಬಿಚ್ಚಿ ನಿಮ್ಮ ಬ್ಯಾಗಿನಲ್ಲಿ ಇಟ್ಟಿಕೊಳ್ಳಿ ಅಂದಾಗ ನಾನು ನನ್ನ ಕೊರಳ್ಳಲ್ಲಿ ಇದ್ದ ಎರಡು ತೊಲೆಯ ಬಂಗಾರದ ಲಾಕೇಟ ಅಂದಾಜು ಕಿಮತ್ತು 50,000/-  ಹಾಗು ಕೈಯಲ್ಲಿ ಇದ್ದ ಅರ್ದ ತೊಲೆಯ ಉಂಗರ ಅಂದಾಜು ಕಿಮತ್ತು 10,000/- ರೂಪಾಯಿ ಅದನ್ನು ತೆಗೆದು ಬ್ಯಾಗಿನಲ್ಲಿ ಇಡುವಾಗ ಅದನ್ನು ಸರಿಯಾಗಿ ಇಡಬೇಕು ಅಂತಾ ನನ್ನ ಗಮನ ಬೇರೆಕಡೆಗೆ ಸೇಳೆದು ನನ್ನ ಬ್ಯಾಗಿನಲ್ಲಿ ಕೈ ಹಾಕಿ ಬ್ಯಾಗಿನಿಂದ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ನನ್ನ ಬ್ಯಾಗದಲ್ಲಿ ನೋಡಿದರೆ ಬಂಗಾರ ಇರಲಿಲ್ಲಾ ನಂತರ ನಾವು ಅವರು ಹೋದ ಕಡೆ ನೋಡಿದರೆ ಅವರು ಸಿಕ್ಕಿರುವುದಿಲ್ಲಾ ನಂತರ ನಮ್ಮ ಗ್ರಾಮದ ಶ್ರೀಕಾಂತ ತಂದೆ ದತ್ತಾತ್ತೇಯ ಸಿನ್ನೂರಕರ್  ರವರು ಸಹ ಬಂದಾಗ ಅವರು ನಾವು ಎಲ್ಲಾ ಕಡೆಗೆ ಹುಡುಕಾಡಿದರೂ ಅವರು ಸಿಕ್ಕಿರುವುದಿಲ್ಲಾ ನನ್ನ ಬ್ಯಾಗಿನಲ್ಲಿ ಇದ್ದ ಎರಡೂವರೆ ತೊಲೆ ಬಂಗಾರ ಅಂದಾಜು ಕಿಮತ್ತು 60,000/- ರೂಪಾಯಿ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ದಿನಾಂಕ:05/09/2017 ರಂದು ಮದ್ಯಾಹ್ನ 01:00 ಗಂಟೆಯಿಂದ 01:30 ಮದ್ಯದಲ್ಲಿ ಅವದಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.