POLICE BHAVAN KALABURAGI

POLICE BHAVAN KALABURAGI

31 May 2011

GULBARGA DISTRICT REPORTED CRIMES

ವರದಕ್ಷಣಿ ಕಿರುಕಳ ಮಹಿಳೆಯ ಸಾವು :
ಗ್ರಾಮೀಣಠಾಣೆ ;
ಶ್ರೀ ಖೀಜರ ಅಹ್ಮದ ತಂದೆ ಶಬ್ಬೀರ ಅಹ್ಮದ ಸಾ ಖಾಜಾ ಕಾಲನಿ ಗುಲಬರ್ಗಾ ತಂಗಿಯಾದ ನಿಖೀತ ಪರವೀನ ಎಂಬುವಳನ್ನು ಅಬ್ದುಲ ಗಫೂರ ಜೀಲಾನಿ @ ಮುನ್ನಾ ಎಂಬುವನಿಗೆ ಕೊಟ್ಟು ಲಗ್ನ ಮಾಡಿದ್ದು ಲಗ್ನವಾದ 6 - 7 ತಿಂಗಳ ಮಾತ್ರ ಸುಖಾವಾಗಿ ನೋಡಿಕೊಂಡು ನಂತರ ದಿನಾಲು ಗಂಡ , ಅತ್ತೆ , ಮೈದನರು ತವರು ಮನೆಯಿಂದ ವರದಕ್ಷಣೆ , ಬಂಗಾರ , ತಂದಿಲ್ಲಾ ಅಡುಗೆ ಮಾಡಲು ಬರುವದಿಲ್ಲಾ , ಮನೆ ಕೆಲಸ ಸರಿಯಾಗಿ ಬರುವದಿಲ್ಲಾ ಎಂದು ಹೊಡೆ ಬಡೆ ಮಾಡುವುದು ಮತ್ತು ಕಿರುಕುಳ ಕೊಡುವುದು ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದು ಈ ವಿಷಯವನ್ನು ಅವಳ ಗಂಡನ ಮನೆಗೆ ತಂದೆ , ತಾಯಿಯವರು ಮತ್ತು ಇತರರು 3 - 4 ಸಲಾ ಹೋಗಿ ಬುದ್ದಿವಾದ ಹೇಳಿ ಗಂಡ ಮತ್ತು ಗಂಡಮನೆಯವರು ವರದಕ್ಷಣೆ ಕಿರುಕುಳ ಕೊಡುವದನ್ನು ನಿಲ್ಲಿಸಿರುವದಿಲ್ಲಾ ದಿನಾಂಕ 12-05-2011 ರಂದು ಬೆಳಗ್ಗೆ ಅಡುಗೆ ಮಾಡಿ ಎಲ್ಲರಿಗೂ ಊಟಕ್ಕೆ ಕೊಟ್ಟಾಗ ಮತ್ತೆ ಗಂಡ , ಮತ್ತು ಗಂಡನ ಮನೆಯವರು ನಿನ್ನಗೆ ಅಡುಗೆ ಸರಿಯಾಗಿ ಮಾಡಲು ಬರುವದಿಲ್ಲಾ , ಮನೆ ಕೆಲಸ ಬರುವದಿಲ್ಲಾ , ಇನ್ನು 2 ತೊಲೆ ಬಂಗಾರ ಮತ್ತು 25,000 /- ರೂ. ವರದಕ್ಷಣೆ ತರಬೇಕು ಎಷ್ಟು ಸಲಾ ಹೇಳಿದರು ತರುತ್ತಿಲ್ಲಾ ನಿನ್ನಿಂದ ನಮ್ಮಗೆ ಯಾವ ಲಾಭ ಇವರುದಿಲ್ಲಾ ಅಂತಾ ಗಂಡ , ಅತ್ತೆ , ಮೈದಿನರು ಕೈಯಿಂದ ಹೊಡೆ ಬಡೆ ಮಾಡಿ ಹಾಕಿ ಸ್ಟಿಕ್ ದಿಂದ ಕಾಲಿನಿಂದ ಹೊಡೆದು ಅವಮಾನಗೊಳಿಸಿದ್ದರಿಂದ ಅದನ್ನು ತಾಳದೆ ಅವಳು ಸೀಮೆ ಎಣ್ಣೆಯನ್ನು ಸುರಿದುಕೊಂಡು ಸುಟ್ಟಿಕೊಂಡಿರುತ್ತಾಳೆ ಅದರ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾ ನಂತರ ಮೇರಾಜ ಆಸ್ಪತ್ರೆಗೆ ತದನಂತರ ಹೆಚ್ಚಿನ ಉಪಚಾರ ಕುರಿತು ಮುಂಬೈಗೆ ತೆಗೆದುಕೊಂಡು ಹೋದಾಗ ಬೈಕಳದ ಮಸಿನಾ ಆಸ್ಪತ್ರೆಯಲ್ಲಿ ರಾತ್ರಿ 9 ಗಂಟೆಗೆ ಮೃತಪಟ್ಟಿರುತ್ತಾಳೆ ಅಮತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣಗಳು ;

ಮಾಡಬೂಳ ಠಾಣೆ ; ಶ್ರೀ ಮೋಹನ ತಂದೆ ಢಾಕು ಚವ್ಹಾಣ ಸಾ; ಲಕ್ಷಮಣ ನಾಯಕ ತಾಂಡಾ ಕಾಳಗಿ ರವರ ಕಾಕನ ಮಗನಾದ ಸುನೀಲ ತಂದೆ ಹರೀಶ್ಚಂದ್ರ ಚವ್ಹಾನ ಮತ್ತು ರಾಹುಲ ತಂದೆ ಥಾವರು ಕುಡಿಕೊಂಡು ತಮ್ಮ ಮೊಟಾರ ಸೈಕಲ್ ಮೇಲೆ ಹೋಗುತ್ತಿರುವಾಗ ಹೆಬ್ಬಾಳದ ಅಶೋಕ ನಗರದ ಹತ್ತಿರ ಟಿಪ್ಪರ ನಂ ಕೆಎ – 37 2206 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ದ್ವೀಚಕ್ರವಾಹನಕ್ಕೆ ಅಪಘಾತಪಡಿಸಿದ್ದು ಸುನೀಲ ಇತನು ಸ್ಥಳದಲ್ಲೆ ಮೃತಪಟ್ಟಿದ್ದು ಹಾಹುಲನೆಗೆ ಭಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ರೇವೂರ ಠಾಣೆ ;
ದಿನಾಂಕ 29-05-2011 ರಂದು ಶ್ರೀ ಭೀರಪ್ಪ ತಂದೆ ನಿಂಗಪ್ಪಾ ಮೋನುಟಗಿ ಸಾ; ಇಂಗಳಗಿ ಇವರು ಇಂಗಳಗಿ ಕ್ರಾಸ ಹತ್ತಿರಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ ಗುಲಬರ್ಗಾ ಕಡೆಯಿಂದ ಲಾರಿ ನಂ ಎಮ್.ಎಚ್. -12 ಎಫ್.ಸಿ.-8874 ನೇದ್ದರ ಚಾಲಕನಾದ ಭರತ ತಂದೆ ಅರ್ಜುನ ಪವಾರ ಸಾ ಮೊಹಲ ಜಿ; ಸೊಲ್ಲಾಪೂರ ಮಾಹಾರಾಷ್ಟ್ರ ಇತನು ತನ್ನ ಲಾರಿಯನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ರೋಡಿನ ಪಕ್ಕಕ್ಕೆ ಇರುವ ಗಿಡಕ್ಕೆ ಡಿಕ್ಕಿ ಪಡಿಸಿದ್ದು ಲಾರಿಯ ಕ್ಲೀನರ ಅಮೂಲ ತಂದೆ ಮೋತಿನಾಥ ಚೌಗಲೆ ಸಾ; ವಾಗೋಲಿ ಜಿ;ಅಹಮ್ಮದ ನಗರ ಮಾಹಾರಾಷ್ಟ್ರ ಇವನು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.