POLICE BHAVAN KALABURAGI

POLICE BHAVAN KALABURAGI

01 April 2013

GULBARGA DISTRICT REPORTED CRIMES

ಮನುಷ್ಯ ಕಾಣೆಯಾದ ಬಗ್ಗೆ:
ಫರತಬಾದ ಪೊಲೀಸ್ ಠಾಣೆ:ಶ್ರೀಮತಿ, ಗೌರಮ್ಮ ಗಂಡ ರಮೇಶ ಬಂಡಾರದವರು ವಯ: 30 ವರ್ಷ ಉ:ಭಾರತಿಯ ವಿದ್ಯಾ ಕೇಂದ್ರ ಶಿರನೂರದಲ್ಲಿ ಅಡುಗೆ ಮಾಡುವ ಕೆಲಸ ಜಾತಿ: ಲಿಂಗಾಯತ ಸಾ: ಕನಕಪುರ ತಾ:ಚಿಂಚೋಳಿ ಹಾ:ವ: ಭಾರತಿಯ ವಿದ್ಯಾ ಕೇಂದ್ರ ಶಿರನೂರ ರವರು ನನ್ನ ಗಂಡ ರಮೇಶ ಇತನು ದಿನಾಂಕ:19-02-2013 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ನಮ್ಮೂರಿನ ಮನೆಯ ದೇವತೆಯಾದ ಲಕ್ಷ್ಮೀದೇವಿ ಜಾತ್ರೆಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಭಾರತೀಯ ವಿಧ್ಯಾ ಮಂದಿರದ ಶಾಲೆಯಿಂದ ಹೋಗಿರುತ್ತಾನೆ.  ನಾನು 4-5 ದಿವಸಗಳು ಆದ ಮೇಲೆ ನಮ್ಮ ಅತ್ತೆಯಾದ ಕುಸುಮಾವತಿ ಇವಳಿಗೆ ಫೊನ ಮಾಡಿ ಕೇಳಲು ರಮೇಶನು ಮನೆಗೆ ಬಂದಿರುವುದಿಲ್ಲ ಅಂತಾ ತಿಳಿಸಿದರು. ನಾವೇಲ್ಲರೂ ಹುಡಕಾಡಿದರೂ ಇಲ್ಲಿಯವರೆಗೆ ಪತ್ತೆಯಾಗಿರುವದಿಲ್ಲ, ಕಾರಣ ಮಾನ್ಯರವರು ಕಾಣೆಯಾದ ನನ್ನ ಗಂಡನಿಗೆ ಹುಡುಕಿ ಕೂಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 41/2013 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಮಹಾತ್ಮ ಬಸವೇಶ್ವರ ನಗರ  ಪೊಲೀಸ್ ಠಾಣೆ:ದಿನಾಂಕ 31/03/2013 ರಂದು 3:15 ಪಿ.ಎಂ. ಕ್ಕೆ ಖಚಿತವಾದ ಬಾತ್ಮಿ ಮೇರೆಗೆ ಶ್ರೀ ಶ್ರೀಮಂತ ಇಲ್ಲಾಳ ಮತ್ತು ಅವರ ಸಿಬ್ಬಂದಿಯವರು ಗಣೇಶ ನಗದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಅಂದರ ಬಾಹರ ಜೂಜಾಟ ಆಡುತ್ತಿರುವವರ ಮೇಲೆ ದಾಳಿ ಮಾಡಿ  1)ಸುನೀಲ ತಂದೆ ಶಾಮು ಚವ್ಹಾಣ ವಯಃ 24 ವರ್ಷ ಉಃ ವಿದ್ಯಾರ್ಥಿ ಜಾತಿಃ ಲಂಬಾಣಿ ಸಾಃ ಗಣೇಶ ನಗರ ಗುಲಬರ್ಗಾ, 2) ಅನೀಲ ತಂದೆ ಶಾಮು ಚವ್ಹಾಣ ವಯಃ 22 ವರ್ಷ ಉಃ ವಿದ್ಯಾರ್ಥಿ ಜಾತಿಃ ಲಂಬಾಣಿ ಸಾಃ ಗಣೇಶ ನಗರ ಗುಲಬರ್ಗಾ, 3) ಮಹೇಶ ತಂದೆ ಶಾಮು ಚವ್ಹಾಣ ವಯಃ 20 ವರ್ಷ ಉಃ ವಿದ್ಯಾರ್ಥಿ ಜಾತಿಃ ಲಂಬಾಣಿ ಸಾಃ ಗಣೇಶ ನಗರ ಗುಲಬರ್ಗಾ, 4) ಬಬಲೇಶ ತಂದೆ ಶಾಮು ಚವ್ಹಾಣ ವಯಃ 19 ವರ್ಷ ಉಃ ವಿದ್ಯಾರ್ಥಿ ಜಾತಿಃ ಲಂಬಾಣಿ ಸಾಃ ಗಣೇಶ ನಗರ ಗುಲಬರ್ಗಾ, ಮತ್ತು 5) ರಾಘವೇಂದ್ರ ತಂದೆ ಬಸವರಾಜ ಚವ್ಹಾಣ ವಯಃ 24 ವರ್ಷ ಉಃ ವಿದ್ಯಾರ್ಥಿ ಜಾತಿಃ ಲಂಬಾಣಿ ಸಾಃ ಗಣೇಶ ನಗರ ಗುಲಬರ್ಗಾ ರವರನ್ನು ವಶಕ್ಕೆ ಅವರಿಂದ ನಗದು ಹಣ  2050/- ರೂ.  ಹಾಗು ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ.35/2013 ಕಲಂ 87 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ  ಪೊಲೀಸ್ ಠಾಣೆ: ದಿನಾಂಕ:31-03-13 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಸೈಯ್ಯದ ಚಿಂಚೋಳಿ ಕ್ರಾಸ ಹತ್ತಿರ ಇರುವ ಖೇಮಜಿ ಇವರ ಹೊಲದಲ್ಲಿರುವ ದನಗಳ ಕೊಟ್ಟಿಗೆ ಪಕ್ಕದಲ್ಲಿ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಆನಂದರಾವ ಪಿ.ಎಸ.ಐ ಮತ್ತು ಅವರ ಸಿಬ್ಬಂದಿಯವರು ಜೂಜಾಟದಲ್ಲಿ ನಿರತರಾದವರ ಮೇಲೆ ದಾಳಿ ಮಾಡಿ ಅನೀಲ ತಂದೆ ನಾಗೇಂದ್ರಪ್ಫಾ ಪಾಟೀಲ ಸಂಗಡ ಇನ್ನೂ 5 ಜನರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ ನಗದು ಹಣ 6200 ರೂ. ಮತ್ತು ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 165/2013 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ: ದಿನಾಂಕ:31/03/2013 ರಂದು ಮಧ್ಯಾಹ್ನ 12.30 ಗಂಟೆಯಿಂದ 2.00 ಪಿಎಂ  ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಆಲಮಾರದಲ್ಲಿನ ಲಾಕರದಲ್ಲಿಟ್ಟಿದ್ದ 1) ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಸಾಮಾನುಗಳು ಹೀಗೆ ಒಟ್ಟು 97,200/-ರೂ ಕಿಮ್ಮತ್ತಿನವುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಶ್ರೀ ಸುನೀಲ ತಂದೆ ಬಾಬುರಾವ ಸೂರ್ಯವಂಶಿ ವ:40 ಜಾ:ಮರಾಠ ಉ:ವ್ಯಾಪಾಸ ಸಾ:ಲಕ್ಷ್ಮೀಗಂಜ ಶಹಾಬಾದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 48/2013  ಕಲಂ:454, 380 ಐಪಿಸಿ  ಪ್ರಕಾರಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.