POLICE BHAVAN KALABURAGI

POLICE BHAVAN KALABURAGI

23 February 2014

Gulbarga Dist Reported Crime s

ಅಪಘಾತ ಪ್ರಕರಣಗಳು:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ : ದಿನಾಂಕ 22-02-2014 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಶ್ರೀಮತಿ ಶಕುಂತಲಾ ಗಂಡ ಸುಭಾಕರ ಕಲ್ಯಾಣಿ ಸಾ: ವಿಶ್ವೇಶ್ವರಯ್ಯಾ ನಗರ ಗುಲಬರ್ಗಾ ರವರು ಸುಪರ ಮಾರ್ಕೆಟದಿಂದ ಎಸ್.ವಿ.ಪಿ ಸರ್ಕಲ ಮಧ್ಯದ ರೋಡಿನಲ್ಲಿ ಬರುವ ಟೌನಹಾಲ ಕ್ರಾಸ್ ಹತ್ತಿರ ನಡೆದುಕೊಂಡು ರೋಡ ದಾಟುತ್ತಿರುವಾಗ ಸುಪರ ಮಾರ್ಕೆಟ ಕಡೆಯಿಂದ ಅಟೋರಿಕ್ಷಾ ನಂಬರ ಕೆಎ-32 ಬಿ-2110 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪಘಾತಪಡಿಸಿ ಭಾರಿಗಾಯಗೊಳಿಸಿ ಅಟೋರಿಕ್ಷಾ ಅಲ್ಲೆ ಬಿಟ್ಟು ಚಾಲಕ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ :
ನಿಂಬರ್ಗಾ ಪೊಲೀಸ್ ಠಾಣೆ : ದಿನಾಂಕ 22/02/2014 ರಂದು ನಿಬರ್ಗಾ ಪೊಲೀಸ್ ಠಾಣೆಯ ಶ್ರೀ ಬಾಬುರಾಯ ಸಿಪಿಸಿ, ಶ್ರೀ ಮಡಿವಾಳಪ್ಪ ಸಿಪಿಸಿ, ಶ್ರೀ ಶಿವಶರಣ ಸಿಪಿಸಿ  ರವರು ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಮಾಡಿಯಾಳ ಗ್ರಾಮದ ಮಾಳಿಂಗರಾಯ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಸಿಪಿಐ ಆಳಂದ ರವರ ನೇತೃತ್ವದಲ್ಲಿ ಪಂಚರೊಂದಿಗೆ ಮಾಡಿಯಾಳ ಗ್ರಾಮದ ಮಾಳಿಂಗರಾಯ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ  ಜೂಜಾಟದಲ್ಲಿ ತೊಡಗಿದ್ದ 01]ಅಶೋಕ ತಂ. ಶಿವಶರಣಪ್ಪ ಹೊನಗುಂಡ ಸಾ:ಮಾಡಿಯಾಳ 02]ಶ್ರೀಮಂತ ತಂ. ರೇವಣಸಿದ್ದ ಶಿರೂರ ಸಾ:ಮಾಡಿಯಾಳ 03] ಶಿವಶರಣಪ್ಪ ತಂ. ನಾಗಪ್ಪಾ ಶಿರೂರ, ಸಾ:ಮಾಡಿಯಾಳ 04] ಅಮೋಗೆಪ್ಪ ತಂ. ಪ್ರಭುರಾಯ ಪೂಜಾರಿ ಸಾ:ಮಾಡಿಯಾಳ 05] ಮಾಳಪ್ಪ ತಂ. ಭೂತಾಳಿಪೂಜಾರಿ, ಸಾ:ಮಾಡಿಯಾಳ 06] ಮಲ್ಲಿಕಾರ್ಜುನ ತಂ. ಮುತ್ತಣ್ಣ ಪೂಜಾರಿ, ಸಾ:ಮಾಡಿಯಾಳ ಇವರನ್ನು ದಸ್ತಗೀರ ಮಾಡಿ ಜೂಜಾಟಕ್ಕೆ ಬಳಸಿದ 52 ಇಸ್ಪಿಟ ಎಲೆಗಳು ಮತ್ತು ನಗದು ರೂ 6300/- ಜಪ್ತಿ ಮಾಡಿಕೊಂದು ಆಪಾದಿತರ ವಿರುದ್ದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಠಾಣೆ :  ದಿನಾಂಕ:20/02/14 ರಂದು ಶ್ರೀ ಅಸ್ಲಾಂ ಕಲ್ಯಾಣಿ ತಂದೆ ಮಹ್ಮದ ರಫೀ ಕಲ್ಯಾಣಿ ಸಾ: ಎಂ.ಎಸ್.ಕೆ ಮಿಲ್ ಗುಲಬರ್ಗಾ ರವರು ದೇವರದಾಸಿಮಯ್ಯಾ ನಗರ ಜಫರಾಬಾದ ಮನೆಯಲ್ಲಿದ್ದಾಗ ಮದಿನಾ ಕಾಲೋನಿಯ ಖಯುಮ್ ಪಟೇಲ ತಂದೆ ಸೈಫನ್ ಪಟೇಲ ಮತ್ತು ಅತನ ಮಕ್ಕಳು ಇನ್ನಿತರು 10 12 ಜನರು ಕೂಡಿ ಎರಡು ಜೆ.ಸಿ.ಬಿ (ಬುಲಡೊಜರ್) ಹಾಗೂ ಕಾರ ನಂ ಕೆಎ32ಎನ್3089 ರಲ್ಲಿ ಬಂದು ಮನೆಯ ಒಳಗೆ ಪ್ರವೇಶ ಮಾಡಿ ಖಯುಮ್ ಈತನು ತನ್ನ ಎದೆಯ ಮೇಲಿನ ಅಂಗಿ ಹಿಡಿದು ಅವಾಚ್ಯ ಶಬಗದಗಳಿಂದ ಬಯ್ಯುತ್ತಾ ಜೀವದ ಬೇದರಿಕೆ ಹಾಕಿ ಜೆ.ಸಿ.ಬಿ ಯಂತ್ರಗಳಿಂದ ನಮ್ಮ ಮನೆಗಳ ಕಟ್ಟಡಗಳಿಂದ ನೇಲಸಮ ಮಾಡಿ ಮನೆಯಲ್ಲಿದ್ದ ಹೆಣ್ಣುಗೂ ಸಹ ಕೂದಲು ಹಿಡಿದು ಹೊಡೆದು ಮನೆಗಳು ಕೆಡವಿ ಅಂದಾಜು 15 ಲಕ್ಷ ರೂಪಾಯಿ ಬೆಲೆ ಬಾಳುವ ಮನೆ ನೇಲಸಮ ಮಾಡಿರುತ್ತಾರೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮವಾಗಿ ಮರಳು ಸಾಗಿಸುತ್ತಿದ ಟಿಪ್ಪರ ಜಪ್ತಿ :

ಎಂ.ಬಿ.ನಗರ ಪೊಲೀಸ್ ಠಾಣೆ ಗುಲಬರ್ಗಾ: ದಿನಾಂಕ 21/02/2014 ರಂದು ರಾತ್ರಿ 11:00 ಪಿ.ಎಂ. ದಿಂದ ಬೆಳಗ್ಗೆ 05:00 ಎ.ಎಂ. ರವರೆಗೆ ಶ್ರೀ ಗಜಾನನ ಕೆ. ನಾಯ್ಕ ಪಿ.ಎಸ್.ಐ (ಕಾ.ಸೂ) ಎಂ.ಬಿ ನಗರ ಠಾಣೆ ರವರು ಎಂ.ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಕರ್ತವ್ಯ ಮೇಲಿದ್ದಾಗ ಶಹಾಬಾದ್ ರಿಂಗ್ ರೋಡ್ ಕಡೆಯಿಂದ ಒಂದು ಟಿಪ್ಪರ್ ಚಾಲಕನು ಯಾವುದೆ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮರಳನ್ನು ಕಳ್ಳತನ ಮಾಡಿ ಸಾಗಾಣಿಕೆ ಮಾಡುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಸೇಡಂ ರಿಂಗ್ ರೋಡ್ ಹತ್ತಿರ ಹೋಗಿ ಟಿಪ್ಪರ ಬರುವುದನ್ನು ನೋಡಿ ಕೈಮಾಡಿ ನಿಲ್ಲಿಸುವಂತೆ ಸೂಚಿಸಿದರೊ ಸಹ ಚಾಲಕನು ಟಿಪ್ಪರ್ ನಿಲ್ಲಿಸದೇ ಹಾಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಬೆನ್ನಟ್ಟಿ ಕೆ.ಹೆಚ್.ಬಿ ಕಾಂಪ್ಲೆಕ್ಸ್ ಎದರುಗಡೆ ನಿಲ್ಲಿಸಿ ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ವಿಜಯ ತಂದೆ ಅಭಿಮನ್ಯು ಈಳಿಗೆರ ಸಾಃ ಶಕ್ತಿ ನಗರ ರಾಯಚೂರ ಅಂತಾ ತಿಳಿಸಿದ್ದು ಲಾರಿ ಮಾಲಿಕರ ಹೆಸರು ಅಶೋಕ ತಂದೆ ಅಭಿಮನ್ಯು ಈಳಿಗೆರ ಸಾಃ ಶಕ್ತಿ ನಗರ ರಾಯಚೂರ ಅಂತಾ ತಿಳಿಸಿದ್ದು ಲಾರಿಯಲ್ಲಿ ತುಂಬಲಾದ ಉಸುಕಿನ ಕಾಗದ ಪತ್ರಗಳ ಬಗ್ಗೆ ಹಾಗು ಲಾರಿಯ ಕಾಗದ ಪತ್ರಗಳ ಬಗ್ಗೆ ಕೇಳಲಾಗಿ ಯಾವುದನ್ನು ಹಾಜರು ಪಡಿಸಲಿಲ್ಲಾ. ಆದ್ದರಿಂದ ಉಸುಕು ಎಲ್ಲಿಂದ ತಂದುರುವಿರಿ ಅಂತಾ ಕೇಳಲಾಗಿ ದೇವದುರ್ಗ ತಾಲ್ಲೂಕಿನ ರಾಯಕುಂಪಾ ಗ್ರಾಮದಿಂದ ಗುಲಬರ್ಗಾಕ್ಕೆ ತೆಗೆದುಕೊಂಡು ಬಂದಿರುತ್ತೇನೆ ಅಂತಾ ತಿಳಿಸಿದ್ದು ಸದರಿ ಉಸುಕು ಕಳ್ಳತನ ಮಾಡಿಕೊಂಡು ಬಂದಿರುವುದರಿಂದ ಸ್ಥಳದಲ್ಲಿ ಇಬ್ಬರು ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು ಸದರಿ ಕಳ್ಳತನ ಮಾಡಿ ಸಾಗಿಸುತ್ತಿದ್ದ ಮರಳು ತುಂಬಿದ್ದ Tipper No. KA 35 9189 ಹಾಗೂ ಕಳ್ಳತನದಿಂದ ಸಾಗಿಸುತ್ತಿದ್ದ ಮರಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಟಿಪ್ಪರ ಚಾಲಕನ ಮತ್ತು ಟಿಪ್ಪರ ಮಾಲಿಕನ ವಿರುದ್ದ ಎಂ.ಬಿ.ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.