POLICE BHAVAN KALABURAGI

POLICE BHAVAN KALABURAGI

15 July 2011

GULBARGA DIST REPORTED CRIMES

ಹಲ್ಲೆ ಪ್ರಕರಣ :

ಆಳಂದ ಪೊಲೀಸ ಠಾಣೆ : ಕಾಶಿನಾಥ ತಂದೆ ನಾಗಪ್ಪ ಅಣದೂರಗಿ ಸಾ: ಜಮಗಾ (ಜೆ)
ರವರು ನನಗೆ ಹಳೇ ದ್ವೇಶದ ಹಿನ್ನೆಲೆಯಲ್ಲಿ ಶರಣಬಸಪ್ಪಾ ತಂದೆ ವಿಠಲ್ ಕಾಳಮಂದರಿ ಸಂಗಡ 3 ಜನರು ಕೂಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ರಕ್ತ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಹಲ್ಲೆ ಪ್ರಕರಣ :

ಆಳಂದ ಪೊಲೀಸ ಠಾಣೆ : ಶರಣಬಸಪ್ಪ ತಂದೆ ವಿಠಲ ಕಾಳಮದರಿ ಸಾ: ಜಮಗಾ (ಜೆ) ರವರು ನನಗೆ ಕಾಶಿನಾಥ ತಂದೆ ನಾಗಪ್ಪ ಅಣದೂರಗಿ ಸಂಗಡ 3 ಜನರು ಕ್ಷುಲ್ಲಕ ಕಾರಣಕ್ಕಾಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಹಲ್ಲೆ ಪ್ರಕರಣ:

ಆಳಂದ ಠಾಣೆ : ಶ್ರೀ ಪದ್ಮನಾಜ ತಂದೆ ಹಿರಾಚಂದ ದುರ್ಗೆ ಸಾ:ಜೈನ ಗಲ್ಲಿ ಆಳಂದ ರವರು ನನಗೆ ಮಗನದ ಹಿರಾಚಂದ ಇತನು ಹೊಲ ಕೆರೆಯಲ್ಲಿ ಹೊಗಿದು ಹಣ ಬಂದಿದೆ ಹಣ ಕೊಡು ಅಂತ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಮತ್ತು ಕೈಯಿಂದ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಅಪಘಾತ ಪ್ರರಕಣ :
ಆಳಂದ ಪೊಲೀಸ ಠಾಣೆ
: ಪ್ರಭಾಕರ ಸೂಗುರ
A.E. ಜೆಸ್ಕಾಂ ಶಾಖಾಧಿಕಾರಿಗಳು ಆಳಂದ ರವರು ಕೆಎ 32. 5557 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಾಯಕ ನಗರದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಕಂಬ ಮುರಿದು ಜೆಸ್ಕಾಂಗೆ ಅಂದಾಜು 9000/- ರೂಪಾಯಿ ಹಾನಿ ಮಾಡಿದ್ದು ವಾಹನದ ಚಾಲಕ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಮತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಆಕಸ್ಮಿಕ ಸಾವು :

ಗ್ರಾಮೀಣ ಪೊಲೀಸ ಠಾಣೆ: ಶ್ರೀ ಸಂತೋಷ ತಂದೆ ರುಕ್ಕಯ್ಯಾ ಕಲಾಲ ಸಾಃ ಸಿಂದಗಿ ತಾಃ ಜಿಃ ಗುಲಬರ್ಗಾ ರವರು ನನ್ನ ತಂಗಿಯಾದ ಸುಶಿಲಾಬಾಯಿ ದಿನಾಂಕ 13/7/2011 ರಂದು 10 ಎಎಮ್ ಕ್ಕೆ ಹೊಲಕ್ಕೆ ಕಾಯಿಪಲ್ಲೆ ತರಲು ಹೋಗಿದ್ದು ಸಾಯಾಂಕಾಲ ಆದರು ಮನೆಗೆ ಬರದೆ ಇರುವದರಿಂದ ನಮ್ಮ ತಂದೆ ತಾಯಿ ಹಾಗೂ ತಮ್ಮ ಇವರೆಲ್ಲರೂ ಹುಡುಕಾಡಿದರು ಸಿಕ್ಕಿರುವದಿಲ್ಲ ದಿನಾಂಕ 14/7/2011 ರಂದು ಮುಂಜಾನೆ ನಮ್ಮ ತಮ್ಮನಾದ ರವಿ ಇತನು ನಮ್ಮ ಹೊಲಕ್ಕೆ ಹೋಗಿದ್ದು ಹೊಲದಲ್ಲಿಯ ಭಾವಿಯ ಹತ್ತಿರ ಹೋಗಿ ನೋಡಲಾಗಿ ಭಾವಿಯಲ್ಲಿ ಸುಶಿಲಾಬಾಯಿ ಇವಳ ಶವ ತೆಲುತ್ತಿರುವದನ್ನು ನೋಡಿ ನನಗೆ ಹಾಗೂ ನಮ್ಮ ತಂದೆ ತಾಯಿಗೆ ಫೋನ ಮಾಡಿ ತಿಳಿಸಿದ್ದು ನಾವು ಹೋಗಿ ನೋಡಲಾಗಿ ಸದರಿ ಶವವು ನಮ್ಮ ತಂಗೆಯಾದ ಸುಶಿಲಾಬಾಯಿ ಇವಳದ್ದು ಭಾವಿಯಲ್ಲಿ ನೀರು ತರಲು ಹೋಗಿದ್ದು ಕಾಲು ಜಾರಿ ಆಕಸ್ಮಿಕವಾಗಿ ಭಾವಿಯಲ್ಲಿ ಬಿದ್ದು ನೀರು ಕುಡಿದು ಉಸಿರು ಗಟ್ಟಿ ಮೃತ ಪಟ್ಟಿರಬಹುದು ಅವಳ ಸಾವಿನಲ್ಲಿ ನಮಗೆ ಯಾರೆ ಮೇಲೆ ಸಂಶಯವಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.