POLICE BHAVAN KALABURAGI

POLICE BHAVAN KALABURAGI

09 October 2015

KALABURAGI DISTRICT POLICE REPORTED CRIMES .

ಜೇವರ್ಗಿ ಪೊಲೀಸ ಠಾಣೆ : ದಿನಾಂಕ 08.10.2015 ರಂದು ಮುಂಜಾನೆ 06:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರ ಅರ್ಜಿ ಹಾಜರುಪಡಿಸಿದ್ದು ಸಾರಾಂಶವೇನೆಂದರೆ ದಿನಾಂಕ 07.10.2015 ರಂದು ರಾತ್ರಿ 08:00 ಗಂಟೆಗೆ ಚಿಗರಳ್ಳಿ ಕ್ರಾಸ್ ಸಮೀಪ ದರ್ಗಾ ಹತ್ತಿರ ಜೇವರಗಿ ಶಹಾಪುರ ಮುಖ್ಯ ರಸ್ತೆಯ ಮೇಲೆ ನಾನು ಮತ್ತು ನಮ್ಮ ದೊಡ್ಡಮ್ಮನ ಮಗನಾದ ಲೋಕೇಶ ತಂದೆ ವಸಂತ ಲೋಕೆಕರ್ ವಯಾ|| 23 ವರ್ಷ ಈತನೊಂದಿಗೆ ನಡೆದುಕೊಂಡು ಚಿಗರಳ್ಳಿ ಕ್ರಾಸ್ ದಿಂದ ದರ್ಗಾ ಕಡೆಗೆ ಬರುತ್ತಿದ್ದಾಗ ಅದೇ ವೇಳೆಗೆ ಜೇವರಗಿ ಕಡೆಯಿಂದ ಕಾರ್ ನಂ ಕೆ.ಎ32ಎಮ್4506 ನೇದ್ದರ ಚಾಲಕ ತನ್ನ ಕಾರ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಲೋಕೆಶನಿಗೆ ಡಿಕ್ಕಿ ಪಡಿಸಿದ್ದರಿಂದ ಲೋಕೇಶನಿಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಅಪಘಾತನದ ನಂತರ ಕಾರ್‌ ಚಾಲಕನು ತನ್ನ ಕಾರ್‌ ನೊಂದಿಗೆ ಓಡಿ ಹೋಗಿದ್ದು ಕಾರಣ ಸದರಿ ಕಾರ್‌ಮತ್ತು ಚಾಲಕನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಲು ವಿನಂತಿಅಂತ ವಗೈರೆ ಫಿರ್ಯಾದಿ  ಸಾರಾಂಶದ ಮೇಲಿಂದ ಗುನ್ನೆ ದಾಖಲಾಗಿರುತ್ತೆದೆ.