POLICE BHAVAN KALABURAGI

POLICE BHAVAN KALABURAGI

18 January 2014

Gulbarga District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ  17-01-2014 ರಂದು ಶ್ರೀ  ಚಿದಾನಂದ ತಂದೆ ಸಂಗಮೇಶ ಬಿಸನಾಳ, ಸಾಃ ಎಮ್.ಎಸ್.ಕೆ ಮಿಲ್ ರೋಡ ಅಶೋಕ ನಗರ ಗುಲಬರ್ಗಾ ರವರು  ತನ್ನ ಹೊಸ್ ಫ್ಯಾಷನ್ ಪ್ರೋ ಮೋಟಾರ ಸೈಕಲ ಮೇಲೆ ಹಿಂದ ತನ್ನ ತಮ್ಮ ಮಂಜುನಾಥ ಈತನನ್ನು ಕೂಡಿಸಿಕೊಂಡು ಆರಾಧನಾ ಶಾಲೆಗೆ ಹೋಗುವ ಕುರಿತು ಅಗ್ನಿ ಶಾಮಕ ಠಾಣೆ ಹತ್ತಿರ ರೋಡಿನ ಮೇಲೆ ಹೋಗುತ್ತಿದ್ದಾಗ ಆರೋಪಿ ಸೂರ್ಯಕಾಂತ ತಂದೆ ಶಿವರಣಪ್ಪಾ ಹರಳಯ್ಯಾ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಇಇ 7254 ನೇದ್ದನ್ನು ಶಹಾ ಬಜಾರ ನಾಕಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಿವಕುಮಾರ  ತಂದೆ ಹಣಮಂತರಾವ ಪಾಟೀಲ ರವರು ದಿನಾಂಕ:  17-01-2014 ರಂದು  ರಾತ್ರಿ  21-30 ಗಂಟೆಗೆ   ತನ್ನ ಮೋ/ಸೈಕಲ್ ನಂ: ಕೆಎ 32 ಎಸ್ 9380 ರ ಮೇಲೆ ಗೆಳೆಯನಾದ ಸಾಗರ ಇವರಿಗೆ ನನ್ನ ಮೋ/ಸೈಕಲ್ ನ ಮೇಲೆ ಹಿಂದೆ ಕೂಡಿಸಿಕೊಂಡು ಶರಣಬಸವೆಶ್ವರ ದೇವಸ್ಥಾನ ಕಡೆಯಿಂದ ಆನಂದ ಹೊಟೇಲ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಕಾರ ಚಾಲಕ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು  ಹೋಗಿ ಫಿರ್ಯಾದಿ ಮೋ/ಸೈಕಲಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ಫಿರ್ಯಾದಿ ಮತ್ತು ಆತನ ಗೆಳೆಯ ಸಾಗರ ಇವರಿಗೆ  ಭಾರಿಗಾಯಗೊಳಿಸಿ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರಣಾಂತಿಕ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀಮತಿ ರಕ್ಷಿತಾ ಇವರು ಸಧ್ಯದ ಪರಸ್ಥಿತಿಯಲ್ಲಿ ಹೇಳಿಕೆಯನ್ನು ಕೊಡುವ ಸ್ಥಿತಿಯಲ್ಲಿ ಇಲ್ಲವೆಂದು ವೈದ್ಯಾಧಿಕಾರಿಗಳು ಲಿಖಿತ ರೂಪದಲ್ಲಿ ತಿಳಿಸಿದ್ದ ಕಾರಣ ಅವರ ಗಂಡ ಶ್ರೀ ಸೂರ್ಯಾಕಾಂತ ತಂ, ಮಲ್ಕಪ್ಪ ಕರಮಲಕರ್ ಸಾ||ಹೋಳಕುಂದಾ ತಾ|ಜಿ||ಗುಲಬರ್ಗಾ ರವರ ತಮ್ಮನಾದ ಹಣಮಂತ ಇತನು ಹೋಳಕುಂದಾ ಗ್ರಾಮದ ದರ್ಗಾದ ಸಿಡಿಯ ಹತ್ತಿರ ಬಸೀರ ಇತನು ಕಟ್ಟಿಸಿದ ನೀರಿನ ಟಾಕಿಗೆ ನೆನ್ನೆ ನೀರು ಕುಡಿಯಲು ಹೋದಾಗ ಅಸ್ತವ್ಯಸ್ಥ ಇದ್ದ ಆ ನೀರಿನ ಪೈಪ್ ಕಿತ್ತು ಹೋಗಿದ್ದರಿಂದ ಆ ಪೈಪನ್ನು ನನ್ನ ತಮ್ಮ ಹಣಮಂತ ಇತನೆ ತೆಗೆದುಕೊಂಡು ಮನೆಗೆ ಹೋಗಿರುತ್ತಾನೆ ಅಂತಾ ದ್ವೇಷ ಹೊಂದಿ 1.ಬಸೀರ ತಂ, ಖಾದರಸಾಬ ಹೂಗಾರ 2. ವಜೀರ ತಂ, ಬಸೀರ ಹೂಗಾರ, 3. ಹುಸೇನ್ ತಂ, ಬಸೀರ ಹೂಗಾರ, 4. ಬಾಬಾ ತಂ, ಮಶಾಖ ಪಟೇಲ ಕೌನಳ್ಳಿ, 5. ಮದರ ಪಟೇಲ ತಂ, ಬಾಬುಸಾಬ ಹೂಗಾರ 6. ಮಶಾಖಪಟೇಲ ತಂ, ಹುಸೇನ್ ಪಟೇಲ ಕೌನಳ್ಳಿ 7. ಖಾಸಿಂ ಪಟೇಲ ತಂ, ಶಾಖುಪಟೇಲ ಖಾನಗಾರ, 8. ಮಹಿಬೂಬ ತಂ, ಅಮೀನಪಟೇಲ ಖಾನಗಾರ, 9.ಅಜರಪಟೇಲ ತಂ, ಶಮೀರಪಟೇಲ  ಸಾ||ಎಲ್ಲರೂ ಹೋಳಕುಂದಾ ತಾ||ಜಿ|| ಗುಲಬರ್ಗಾ  ರವರು ಅಕ್ರಮ ಕೂಟ ರಚಿಸಿಕೊಂಡು ದಿನಾಂಕ: 16-01-2014 ರಂದು 7:45 ಪಿ.ಎಮ್ ಕ್ಕೆ ತಮ್ಮ ಕೈಯಲ್ಲಿ ಬಡಿಗೆ ಕಲ್ಲುಗಳನ್ನು ಹಿಡಿದುಕೊಂಡು ಬಂದವರೇ ಫಿರ್ಯಾದಿದಾರನು ವಾಸಿಸುವ ಮನೆಯಲ್ಲಿ ಬಂದು ಕುಳಿತ ಹಣಮಂತ ಇತನಿಗೆ ಹೊಡೆಯುವ ಸಲುವಾಗಿ ಎಲ್ಲರೂ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ  ನನ್ನ ಹೆಂಡತಿ ರಕ್ಷಿತಾ ಇವಳಿಗೆ ಬಡಿಗೆಯಿಂದ ಕಾಲಿನ ಮೇಲೆ ಬೆನ್ನ ಮೇಲೆ ಮತ್ತು ಬಾಯಿಯ ಮೇಲೆ ಹೊಡೆದಿದ್ದರಿಂದ ಮೇಲಿನ ತುಟ್ಟಿ ಹರಿದು ರಕ್ತಗಾಯವಾಗಿ ಹಲ್ಲು ಬಿದ್ದು ಹೋಗಿರುತ್ತದೆ ಮತ್ತು ಕೈಯಿಂದ ಕೂಡ ಸಿಕ್ಕಾಪಟ್ಟೆ ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.