POLICE BHAVAN KALABURAGI

POLICE BHAVAN KALABURAGI

15 July 2017

Kalaburagi District Reported Crimes

ಅಪಘಾತ ಪ್ರಕರಣ :
ಮಳಖೇಡ ಠಾಣೆ : ಶ್ರೀ ನಿಸಾರ ಮೈನುದ್ಧಿನ  ತಂದೆ ಮಹ್ಮದ ಮಶಾಖ,  ಸಾ: ಮೋಮಿನಪೂರ ಮಳಖೇಡ ಗ್ರಾಮ, ತಾ: ಸೇಡಂ. ರವರ ತಮ್ಮ ಮಹ್ಮದ ಖಾಲೀದ ತಂದೆ ಮಹ್ಮದ ಮಶಾಖ ಈತನು ಕೆಲವು ವರ್ಷ ಇಂಜಿನೀಯರಿಂಗ ವಿದ್ಯಾಭ್ಯಾಸ ಮಾಡಿದ್ದು ಸದರಿಯವನು ಮಾನಸಿಕ ಅಸ್ವಸ್ಥಗೊಂಡಿದ್ದು ದಿನಾಂಕ 10-07-2017 ರಂದು ಸಾಯಂಕಾಲ ಮನೆಯಿಂದ ಹೊರಗೆ ಹೋಗಿದ್ದು ರಾತ್ಇ ನಮಗೆ ಪರಿಚಯದವರಾದ ಅಶೋಕ ಬಂಡಿ ಇವರು ಪೋನ  ಮಾಡಿ ತಿಳಿಸಿದ್ದೇನೆಂದರೆ ನಿಮ್ಮ ತಮ್ಮ ಸಾಯಂಕಾಲ ಮಳಖೇಡ ಮೇನ ರೋಡ ದಾಟುತ್ತಿರುವಾಗ  ಒಂದು ಗೂಡ್ಸ ಟಂಟಂ ನಂ ಕೆಎ 32 ಎ 9448 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಗೂಡ್ಸ ಟಂಟಂ ವಾಹನವನ್ನು ಅತೀ ವೇಗ ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಿಮ್ಮ ತಮ್ಮ  ಮಹ್ಮದ ಖಾಲೀದ ಇವನಿಗೆ ಅಪಘಾತಪಡಿಸಿದ್ದು ಸದರಿ ಅಪಘಾತದಿಂದ ನಿಮ್ಮ ತಮ್ಮನಿಗೆ ಭಾರಿಗಾಯಗಳಾಗಿದ್ದು ಭೇಹೊಶ ಆಗಿರುತ್ತಾನೆ ಅಂತಾ ತಿಳಿಸಿದ್ದರ ಮೇರೆಗೆ ನಾನು ಬಂದು ನೋಡಲು ನಿಜವಿರುತ್ತದೆ. ಸದರ  ಗುಡ್ಸ ಟಂ ಟಂ ನಂ ಕೆಎ 32 ಎ 9448 ಇರುತ್ತದೆ. ನನ್ನ ತಮ್ಮ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಅವನನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು  ಗಾಯಾಳು ಮಹ್ಮದ ಖಾಲೀದ ತಂದೆ ಮಹ್ಮದ ಸಾ: ಮೋಮಿನಪೂರ ಮಳಖೇಡ ಗ್ರಾಮ, ತಾ:ಸೇಡಂ ಇತನು ಉಪಚಾರ ಹೊಂದುತ್ತಾ, ಗುಣಮುಖ ಹೊಂದದೆ  ಇಂದು  ದಿನಾಂಕ 14-07-2017 ರಂದು ಬೆಳಿಗ್ಗೆ 11-05 ಗಂಟೆಯ ಸುಮಾರಿಗೆ ಮಹ್ಮದ ಖಾಲೀದ ಇತನು ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗೃಹಿಣಿಗೆ ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪ್ರೇಮಾ ಗಂಡ ಚಂದ್ರಕಾಂತ ಸಾ: ಕಾಂತಾ ಕಾಲೋನಿ ಕಲಬುರಗಿ  ರವರು ಚಂದ್ರಕಾಂತ ಅವರೊಂದಿಗೆ 16 ವರ್ಷಗಳ ಹಿಂದೆ ಮದುವೆಯಾಗಿದ್ದು ,4 ಜನ ಮಕ್ಕಳಿದ್ದು 8 ವರ್ಷಗಳ ಹಿಂದೆ ನನಗೆ ಮತ್ತು ನನ್ನ 4 ಜನ ಮಕ್ಕಳಿಗೆ ಊಟ ಬಟ್ಟೆ  ಕೋಡದೇ ನನಗೂ ಕೂಡಾ ನೋಡಲಾರದೇ ಮನೆಯಿಂದ ಹೊರ ಹಾಕಿದ್ದು   8 ವರ್ಷಗಳಿಂದ  ನಾನು ನನ್ನ ತಾಯಿ ಆಸರೆಯಿಂದ  ಬೇರೆ ಮನೆ ಮಾಡಿ ನಾನು 4 ಜನ ನನ್ನ ಮಕ್ಕಳನ್ನು ಕೂಲಿಕೆಲಸ ಮಾಡಿ ಸಾಕುತ್ತಿದ್ದು ಹೀಗಿದ್ದು ದಿನಾಂಕ 27-8-2016 ರಂದು ನನ್ನ ಮಕ್ಕಳ ಜೀವನಾವಶ್ಯಕ್ಕಾಗಿ ಕೌಟುಂಬಿಕ ಜಲ್ಲಾ ನ್ಯಾಯಾಲಯ ಕಲಬುರಗಿಯಲ್ಲಿ ದಾವೆ ನಡೆದಿದ್ದು ದಿನಾಂಕ 12-7-2017 ರಂದು ದಾವೆಯ ದಾಖಲು ಮಾಡಿರುವ  ದಾವೆಯ ದಿನಾಂಕ ವಿದ್ದು ಕೊರ್ಟಿಗೆ ಹಾಜರಾಗಲು ಅಂದಿನ ಸಾಕ್ಷಿ ನಡೆಯುವ ದಿನವಿದ್ದು ದಿನಾಂಕ 08-07-2017 ರಂದು ಸಮಯ ಬೆಳಗ್ಗೆ 9-30 ಗಂಟೆಯ ಚಂದ್ರಕಾಂತ ಸೂರನ  ನಾನು ವಾಸವಿರುವ ಮನೆಗೆ ಬಂದು ನಮ್ಮ ಮನೆಯಲ್ಲಿ ನನ್ನ ಮಕ್ಕಳು ಶಾಲೆಗೆ ಹೋಗಿದ್ದ ಸಮಯವನ್ನು ನೋಡಿ ಮನೆಗೆ ನುಗ್ಗಿ ಒಳಗಿನಿಂದ ಬಾಗಿಲ ಚಿಲಕಾ ಹಾಕಿ ನನ್ನ ಬಾಯಿ ಮುಚ್ಚಿ ನನ್ನ ಕೆಳಗಡೆ ಹಾಕಿ ಕುತ್ತಿಗೆ ಒತ್ತಿ ಕೊಲೆ ಮಾಡಲು ಯತ್ನಿಸಿದ್ದನು ನಾನು ಚಿರಾಡುತ್ತಿಯಿದರು ಕೂಡಾ ಕೇಳದೆ ಬಾಯಿ ಮುಚ್ಚಿ ಉಸಿರುಗಟ್ಟಿಸಿ ಇವತ್ತು ನಿನಗೆ ಖಲಾಸ ಮಾಡಿಯೇ ಬಿಡುತ್ತೇನೆ  ಇಲ್ಲದಿದ್ದರೆ ನನ್ನ  ಮೇಲೆ ಹಾಕಿರುವ ದಾವೆ ಹಿಂತೆಗೆಯಬೇಕು  ಅಂತಹ ಒದರಾಡುತ್ತಿದ್ದನು ನನ್ನ ಚೀರಾಡವುದನ್ನು ಕೇಳಿ ನಮ್ಮ ಮನೆಯ ಅಕ್ಕಪಕ್ಕದವರು ಬಂದು ನಮ್ಮ ಬಾಗಿಲು ಮುರಿದು  ನನ್ನನ್ನು ಹೊರಗೆ ತಂದರು ನನಗೆ ಉಪಚಾರ ಕುರಿತು ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು   ನಾನು . ಉಪಚಾರ ಹೊಂದಿದ್ದು ಇರುತ್ತದೆ  ಸದರಿ ನನ್ನ ಗಂಡನಾದ ಚಂದ್ರಕಾಂತ ಸೂರನ  ಕೊಲೆ ಮಾಡಲು ಯತ್ನ ಮಾಡಿರುವುದರಿಂದ ಸದರಿ ಚಂದ್ರಕಾಂತ ಸೂರನ  ಇತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ  : ಶ್ರೀ ಮಹ್ಮದ ಹುಸೇನ ತಂದೆ ಅಲ್ಲಾಪಟೇಲ ವಾಡಿ ಸಾ: ಕೋಳಕುರ ತಾ: ಜಿ: ಕಲಬುರಗಿ ರವರು ದಿನಾಂಕ  13/07/17 ರಂದು 6 ಪಿಎಮ ಸುಮಾರಿಗೆ ನಾನು ಮತ್ತು ನಮ್ಮ  ತಮ್ಮ ರಶೀದ ಇಬ್ಬರೂ ತಮ್ಮ ಹೊಲದಿಂದ ಆಪಾದಿತರ ಹೊಲದ ಬಂದಾರಿಯಿಂದ ನಡೆದುಕೊಂಡು ಹೋಗುವಾಗ ಶರಣಪ್ಪ ತಂದೆ ಚಂದಪ್ಪ ಜಮಾದಾರ  ಸಂಗಡ ಇನ್ನೂ ಮೂರು ಜನರು ಕೊಳ್ಳುರ ಗ್ರಾಮ ರವರು ಬಂದು ನಮ್ಮ ಬಂದಾರಿಯಿಂದ ಹೋಗಬೇಡಿ ಅಂತಾ ಜಗಳ ತೆಗೆದು  ಅವ್ಯಾಚ್ಛವಾಗಿ ಬೈದು ಹೊಡೆ ಬಡೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.