POLICE BHAVAN KALABURAGI

POLICE BHAVAN KALABURAGI

23 September 2011

Gulbarga District Reported Crimes

ಅಪಘಾತ ಪ್ರಕರಣಗಳು :

ಗ್ರಾಮೀಣ ಠಾಣೆ :ದಿನಾಂಕ 22-09-11 ರಂದು ಮುಂಜಾನೆ ಶ್ರೀ ರಾಮು @ ರಾಮಚಂದ್ರ ತಂದೆ ಮರೆಪ್ಪ ಮಾದರ ಸಾ: ಇಟಗಾ (ಕೆ) ಗ್ರಾಮ ತಾ:ಜಿ: ಗುಲಬರ್ಗಾ ಮತ್ತು ತನ್ನ ಮಗ ಮಾಹಾಂತಪ್ಪ ಹಾಗೂ ಗ್ರಾಮದ ತಾರಾಬಾಯಿ ಗಂಡ ಬಾಬು ರಾಠೋಡ, ಮಲ್ಲಪ್ಪ ತಂದೆ ಕಲ್ಲಪ್ಪ ತಳವಾರ, ಅಂಬು ತಂದೆ ಮಲ್ಲಪ್ಪ ಪೂಜಾರಿ, ಶಿವಲಿಂಗಪ್ಪ ತಂದೆ ಶರಣಪ್ಪ ಶೇರಿಕಾರ ಹಾಗೂ ಇನ್ನೂ ಕೆಲವು ಜನರು ಕೂಡಿ ತಮ್ಮೂರನಿಂದ ತುಳಜಾಪೂರ ದೇವಿ ದರ್ಶನಕ್ಕೆ ಪಾದಯಾತ್ರೆ ಹೊರಟಿದ್ದು ಸಂಜೆ 7-30 ಗಂಟೆ ಸುಮಾರಿಗೆ ನಮ್ಮ ಹಿಂದುಗಡೆಯಿಂದ ಅಂದರೆ ಗುಲಬರ್ಗಾ ಕಡೆಯಿಂದ ಹಿರೋ ಹೊಂಡಾ ಸ್ಪೆಂಡರ ಕೆಎ 32 ಯು 7885 ಮೋಟಾರ ಸೈಕಲ ಸವಾರ ತನ್ನ ಹಿಂದೆ ಮತ್ತೊಬ್ಬನನ್ನು ಕೂಡಿಸಿಕೊಂಡು, ಮೋಟಾರ ಸೈಕಲನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಅಡ್ಡಾ ತಿಡ್ಡಿಯಾಗಿ ನಡೆಯಿಸಿಕೊಂಡು ಬಂದವನೇ ರೋಡ ಎಡ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಮಾಹಾಂತಪ್ಪ ಮತ್ತು ತಾರಾಬಾಯಿ ಇಬ್ಬರಿಗೂ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬಿದಿದ್ದು ಇರುತ್ತದೆ. ಮೋಟಾರ ಸೈಕಲ ಚಾಲಕ ವೇಗದಲ್ಲಿದ್ದರಿಂದ ಹಾಗೇ ಸ್ವಲ್ಪ ಮುಂದೆ ಹೋಗಿ ರೋಡಿನ ಎಡಭಾಗದ ತೆಗ್ಗಿನಲ್ಲಿ ಮೋಟಾರ ಸೈಕಲದೊಂದಿಗೆ ಬಿದ್ದರು. ಅದನ್ನು ನಾವು ನೋಡಿ ಓಡುತ್ತಾ ಹೋಗಿ ನೋಡಲಾಗಿ ನನ್ನ ಮಗನ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ :ದಿನಾಂಕ: 22-09-11 ರಂದು ಮುಂಜಾನೆ ಶ್ರೀ. ರಾಹುಲ ತಂದೆ ಸಂತೋಷ ಮಾಲಿಪಾಟೀಲ ಸಾ: ಶಿವಶಕ್ತಿ ನಗರ ಸುಲ್ತಾನಪೂರ ರೋಡ ತಾ: ಜಿ: ಗುಲಬರ್ಗಾ ಮತ್ತು ನನ್ನ ಚಿಕ್ಕಪ್ಪ ಇಬ್ಬರೂ ಕಮಲಾ ಪೂರಕ್ಕೆ ತಮ್ಮ ಮೋ ಸೈಕಲ ನಂ ಕೆಎ 32 ಎಕ್ಸ್ 4391 ನೇದ್ದರ ಮೇಲೆ ಹೊರಟಾಗ ಉಪಳಾಂವ ಗ್ರಾಮದ ಬ್ರೀಡ್ಜಿನ ಹತ್ತಿರ ಲೋಡ ಆಗಿ ನಿಂತ ಲಾರಿ ನಂ ಎಪಿ 36 ಟಿ-7475 ನೇದ್ದಕ್ಕೆ ಅತೀವೇಗ ಹಾಗೂ ಅಜಾಗರೂಕತೆಯಿಂದ ನಡೆಯಿಸಿಕೊಂಡು ಹೋಗಿ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ ಲಾರಿಯಲ್ಲಿ ಸಿಕ್ಕಿಬಿದ್ದು ಇಬ್ಬರು ರಸ್ತೆಯ ಮೇಲೆ ಬಿದ್ದು ಗಾಯ ಹಾಗೂ ಬಾರಿಗಾಯ ಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    

ಗ್ರಾಮೀಣ ಠಾಣೆ :ದಿನಾಂಕ 22-09-2011 ರಂದು ಯುನಿವರಸಿಟಿಯಲ್ಲಿ ಕ್ಯಾಂಪಸನಲ್ಲಿ ಅಡಿಗೆ ಮಾಡುವುದು ಇರುವದರಿಂದ ಶ್ರೀ. ರಾಜಕುಮಾರ ತಂದೆ ಶರಣಪ್ಪ ಕಲಶೆಟ್ಟಿ ಸಾ: ಸಿದ್ರಾಮೇಶ್ವರ ನಗರ ಆಳಂದ ಚೆಕ್ಕ ಪೋಸ್ಟ ಗುಲಬರ್ಗಾ ತನ್ನ ಟಂ ಟಂ ನಂ ಕೆಎ 32 ಬಿ- 3283 ನೇದ್ದರಲ್ಲಿ ಅಡಿಗೆ ಮಾಡುವರರಾದ ಸರೂಬಾಯಿ ಜೇವರ್ಗಿ, ಪೀರಮ್ಮ ದುತ್ತರಗಾಂವ, ಮಾಯಮ್ಮ ಗಡಸಿ ಹಾಗು ನಮ್ಮ ಅಳಿಯನಾದ ಶ್ರೀಶೈಲ ಕೂಡಿಕೊಂಡು ಟಂಟಂದಲ್ಲಿ ಯುನಿವರಸಿಟಿಗೆ ಹೋಗಿ ಸಾಯಕಾಂಲದವರೆಗೆ ಅಡಿಗೆ ಮಾಡಿ ವಾಪಸ್ಸ ಮನೆಗೆ ಹೋಗಬೇಕೆಂದು ನನ್ನ ಟಂ ಟಂದಲ್ಲಿ ಬರುವಾಗ ಹುಮನಾಬಾದ ರಿಂಗ ರೋಡಮುಖಾಂತರ ಹೋಗುವಾಗ ಕಾಕಡೆ ಚೌಕ ಹತ್ತಿರ ರೋಡಿನ ಮೇಲೆ ಎಡಗಡೆಯಿಂದ ಹೋಗುವಾಗ ಆಗ ಎದುರಗಡೆಯಿಂದ ಒಂದು ಟಂ ಟಂ ಗೂಡ್ಸ ನಂ ಕೆಎ 32 ಎ.7659 ನೆದ್ದರ ಚಾಲಕನು ಅತೀವೇಗದಿಂದ ಅಲಕ್ಷತನದಿಂದ ಎದುರಿನಿಂದ ಬಂದವನೆ ನನ್ನ ಟಂ ಟಂ ನೇದ್ದಕ್ಕೆ ಹಾಯಿಸಿದ್ದರಿಂದ ಆಗ ನಾನು ಕೆಳಗೆ ಇಳಿದು ನೋಡಲು ನನ್ನ ಟಂ ಟಂ ಹಿಂದುಗಡೆ ಕುಳಿತ ವರಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಮಾಡಿಕೊಳ್ಳುತ್ತೆನೆಂದು ನಂಬಿಸಿ ಅಪ್ರಾಪ್ತ ಬಾಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ :
ಚಿಂಚೋಳೀ ಠಾಣೆ :ಶ್ರೀ ತುಳಜಪ್ಪಾ ತಂದೆ ಹುಸನಪ್ಪಾ ನಾಗರಾಳ ಸಾ: ಚೆನ್ನೂರ ಇವರ ಮಗಳಾದ
ಶ್ರೀದೇವಿ ವ: 16 ವರ್ಷ ಇವಳು ಐನಾಪೂರ ಪ್ರೌಢ ಶಾಲೆಯಲ್ಲಿ 10ನೇ ತರಗತಿ ಅಭ್ಯಾಸ ಮಾಡುತ್ತಿರುತ್ತಾಳೆ, ನನ್ನ ಹಿರಿಯ ಮಗಳಾದ ಕಾವೇರಿ ಇವಳಿಗೆ ಹಲಚೇರಿ ಗ್ರಾಮದ ನಾಗಪ್ಪಾ ತಂದೆ ಶರಣಪ್ಪಾ ದೋಟಿಕೋಳ ಇತನ ಸಂಗಡ ಮದುವೆ ಮಾಡಿದ್ದು ಸದರಿಯವಳ ಮೈದುನ ವಿನೋದ ಇತನು ಆಗಾಗೆ ನಮ್ಮೂರಿಗೆ ಬಂದು ನನ್ನ ಮಗಳಾದ ಶ್ರೀದೇವಿ ಸಂಗಡ ಅತೀ ಸಲುಗೇಯಿಂದ ಇರುತ್ತಿದ್ದು. ದಿನಾಂಕ: 15.08.2011 ರಂದು ಬೆಳಿಗ್ಗೆ 08.00 ಗಂಟೆಗೆ ವಿನೋದನು ನನ್ನ ಮಗಳಿಗೆ ನಿನ್ನನ್ನು ಮಧುವೆ ಮಾಡಿಕೊಳ್ಳುತ್ತೆನೆ ಅಂತಾ ಪುಸುಲಾಯಿಸಿ ಅಪಹರಿಸಿಕೊಂಡು ಹೋಗಿ ಚಿಮ್ಮಾಯಿದಲಾಯಿ ಕ್ರಾಸ ಹತ್ತರ ತೋಗರಿ ಹೋಲದಲ್ಲಿ ಕರೆದುಕೊಂಡು ಹೋಗಿ ಜಬರಿ ಸಂಭೋಗ ಮಾಡಿ ನಂತರ ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತಾನೆ ಇದಕ್ಕೆ ಸದರ ಘಟನೆಗೆ ವಿನೋದ ತಂದೆ ಶರಣಪ್ಪಾ ತಾಯಿ ಪದ್ಮಾವತಿ, ಅಣ್ಣ ಸುಭಾಸ ಇವರೆಲ್ಲರೂ ಕುಮ್ಮಕ ನೀಡಿರುತ್ತಾರೆ. ಅಂತಾ ನೀಡಿರುವ ದೂರು ಸಾರಾಂಶದ ಮೇಲಿಂದ ಪಿರ್ಯಾದಿ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.