POLICE BHAVAN KALABURAGI

POLICE BHAVAN KALABURAGI

15 September 2017

KALABURAGI DISTRICT PRESS NOTE

ಪೊಲೀಸ ಪ್ರಕಟಣೆ
         ಕಲಬುರಗಿ ನಗರದ ವಿವಿದ ಸಂಘಗಳ ಸದಸ್ಯರಿಗೆ, ಕೆ.ಎಸ್.ಆರ್.ಟಿ.ಸಿ ಚಾಲಕರು,ಅಟೋರಿಕ್ಷಾ ಚಾಲಕರನ್ನು ಮತ್ತು ಬೀದಿ ವ್ಯಾಪಾರಿಗಳನ್ನು ದಿನಾಂಕ; 13/09/2017 ರಂದು ಸಾಯಂಕಾಲ 5-00 ಗಂಟೆಗೆ ಜಿಲ್ಲಾ ಪೊಲೀಸ ಭವನದಲ್ಲಿ ಕರೆಯಿಸಿ ಮಾನ್ಯ ಐ.ಜಿ.ಪಿ ಸಾಹೇಬರು ಈಶಾನ್ಯ ವಲಯ ಕಲಬುರಗಿ ರವರ ನೇತ್ರತ್ವದಲ್ಲಿ ನಾನು ಮತ್ತು ಅಪರ್ ಎಸ್.ಪಿ ಕಲಬುರಗಿ, ಡಿ.ಎಸ್.ಪಿ. (ಬಿ) ಉಪವಿಭಾಗ ಕಲಬುರಗಿ , ಪಿ.ಐ ಸಂಚಾರಿ ಪೊಲೀಸ ಠಾಣೆ ಕಲಬುರಗಿ ರವರೊಂದಿಗೆ ರಸ್ತೆ ಸುರಕ್ಷತಾ ಸಭೆಯನ್ನು ಕೈಕೊಂಡು ಸದರಿ ಸಭೆಯಲ್ಲಿ ರಸ್ತೆ ಸುರಕ್ಷತಾ ಹಾಗೂ ಸುಗಮ ಸಂಚಾರ ಬಗ್ಗೆ ಸಮಾಲೋಚನೆ ನಡೆಯಿಸಿ ನಗರದಲ್ಲಿ ಶೀಘ್ರವಾಗಿ ಟ್ರಾಫೀಕ ಡ್ರೈವ ಕೈಕೊಳ್ಳಲಿದ್ದು ಈ ಸಮಯದಲ್ಲಿ ಎಲ್ಲಾ ಸಂಘದ ಸದಸ್ಯರು ಮತ್ತು ಕಲಬುರಗಿ ಜಿಲ್ಲೆಯ ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು ನಗರದಲ್ಲಿ ದಿನದಿಂದ ದಿನಕ್ಕೆ ಜನರು ಮತ್ತು ವಾಹನಗಳು ಅತಿವೇಗದಲ್ಲಿ ಬೆಳೆಯುತ್ತಿದ್ದು ರಸ್ತೆಗಳ ಅಪಘಾತಗಳು, ವಾಹನ ದಟ್ಟಣೆ, ಜನ ದಟ್ಟಣೆ, ಆಗುತ್ತಿದ್ದು ಹೀಗಾಗಿ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರ ಮಾಡಲು ಕಂಟಕವಾಗುತ್ತಿದೆ. ಆದ್ದರಿಂದ ಸುವ್ಯವಸ್ಥಿತವಾಗಿ ಸಮ ಮತ್ತು ಬೇಸ ಸಂಖ್ಯೆ ಪಾರ್ಕಿಂಗ ವ್ಯವಸ್ಥೆಯನ್ನು ಮಾಡಿ ಸುಗಮ ಸಂಚಾರ ನೋಡಿಕೊಳ್ಳಲು ಸಾರ್ವಜನಿಕರು ಸಹಕರಿಸುವಂತೆ ಪತ್ರಿಕೆಯಲ್ಲಿ ಪ್ರಕಟಣೆ ಮಾಡಲು ಕೋರಲಾಗಿದೆ.
                                                                             ಸಹಿ/-
                                                                    ಪೊಲೀಸ ಅಧೀಕ್ಷಕರು
                                                                       ಕಲಬುರಗಿ ಜಿಲ್ಲೆ

KALABURAGI DISTRICT REPORTED CRIMES

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ತಾನಾಬಾಯಿ ಗಂಡ ಖೇಮು ಚವ್ಹಾಣ ಸಾ: ಬಡದಾಳ ತಾಂಡಾ  ರವರು  ದಿನಾಂಕ 14-09-2017 ರಂದು  ಬೆಳಿಗ್ಗೆ ಮನೆಯಲ್ಲಿದ್ದಾಗ ನನ್ನ ಮೊಮ್ಮಗಳಾದ ಮಿಟಾಲಿ ಇವಳು ಜಳಕ ಮಾಡದೆ ಹಾಗೆ ತಿರುಗಾಡುತ್ತಿದ್ದಳು, ಆಗ ನಾನು ನನ್ನ ಮೊಮ್ಮಗಳಿಗೆ ಜಳಕ ಮಾಡು ಇನ್ನು ಏಕೆ ಜಳಕ ಮಾಡಿಲ್ಲ ಎಂದು ಕೇಳಿದಕ್ಕೆ, ಮಿಟಾಲಿ ಇವಳು ತನ್ನ ತಂದೆ ಅಂದರೆ ನನ್ನ ಮಗನಾದ ಸಂಜು ಈತನಿಗೆ ಹೋಗಿ ನನಗೆ ಆಯಿ ಬೈಯುತ್ತಿದ್ದಾಳೆ ಎಂದು ಹೇಳಿದ್ದರಿಂದ, ನಾನು ನಮ್ಮ ಮನೆಯ ಮುಂದೆ ನಿಂತಿದ್ದಾಗ ಸಂಜು ಇವನು ತನ್ನ ಕೈಯಲ್ಲಿ ರಾಡ ಹಿಡಿದುಕೊಂಡು ಬಂದವನೆ ಏಕಾಏಕಿ ನನಗೆ ಏನನ್ನು ಕೇಳದೆ ರಾಡಿನಿಂದ ನನ್ನ ಮೈ ಕೈಗೆ ಹೊಡೆದನು, ಆಗ ನಾನು ಚಿರಾಡಿದಾಗ ರಾಡಿನಿಂದ ಪುನ ನನ್ನ ತಲೆಗೆ ಹೊಡೆದನು, ಆಗ ನಾನು ಚಿರಾಡುವುದನ್ನು ಕೇಳಿ ನಮ್ಮ ಅಕ್ಕ ಪಕ್ಕದ ಮನೆಯವರಾದ ಗಂಗಾಬಾಯಿ ಗಂಡ ಬಾಬು ಚವ್ಹಾಣ, ಶಂಕರ ತಂದೆ ಗೇಮು ಚವ್ಹಾಣ, ದೇನು ತಂದೆ ಮಾದು ಚವ್ಹಾಣ ಇವರೆಲ್ಲರೂ ಕೂಡಿ ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ನನ್ನ ಮಗ ನನಗೆ ಹೊಡೆದರಿಂದ ತಲೆಗೆ ಬಾರಿ ರಕ್ತಗಾಯ ಹಾಗೂ ಮೈ ಕೈಗೆ ಒಳ ಪೆಟ್ಟುಗಳು ಆಗಿರುತ್ತವೆ. ನಂತರ ನನ್ನನ್ನು ನನ್ನ ಗಂಡ ಹಾಗೂ ನನ್ನ ಮಗನಾದ ಶ್ರೀಮಂತ ಹಾಗು ಧೇನು ಚವ್ಹಾಣ ಮೂರು ಜನರು ಕೂಡಿ ನನ್ನನ್ನು ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಟ್ಟೆನೋವು ತಾಳಲಾರದೆ ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಮಹಾದೇವಿ ಇವರ ಮಗಳಾದ ಭಾಗ್ಯಶ್ರೀ ವಯಾಃ 13 ವರ್ಷ ಇವಳು ನಂದಿಕೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 07 ನೇ ತರಗತಿಯಲ್ಲಿ  ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಸದರಿಯವಳಿಗೆ ಮೊದಲಿನಿಂದಲೂ ಹೊಟ್ಟೆ ನೋವು ಇದಿದ್ದು, ಎಲ್ಲಾ ಕಡೆ ಆಸ್ಪತ್ರೆಗೆ ತೋರಿಸಿದ್ದರು ಕಡಿಮೆಯಾಗಿರಲಿಲ್ಲಿ. ದಿನಾಂಕ 13/09/2017 ರಂದು ಎಂದಿನಂತೆ ತನ್ನ ಶಾಲೆಯ ಸಮವಸ್ತ್ರ ಹಾಕಿಕೊಂಡು ಶಾಲೆಗೆ 9.30 ಎ.ಎಮಕ್ಕೆ ಮನೆಯಿಂದ ಹೊಗಿದ್ದು, ಸಾಯಂಕಾಲ 4.30 ಪಿ.ಎಮಕ್ಕೆ ಶಾಲೆ ಬಿಟ್ಟ ನಂತರ ಮನೆಗೆ ಮರಳಿ ಬರಬೇಕಾಗಿದ್ದು, ಮನೆಗೆ ಬರದ ಕಾರಣ ಶಾಲೆಗೆ ಹೋಗಿ ವಿಚಾರಿಸಲಾಗಿ ಶಾಲೆಗೆ ಬಂದಿರುವುದಿಲ್ಲ ಅಂತಾ ತಿಳಿಸಿದ್ದು, ಎಲ್ಲಾ ಕಡೆ ಹುಡಕಾಡಿ ಕೇಳಲಾಗಿ ಕಾಣಿಸಿರುವುದಿಲ್ಲ ಅಂತಾ ತಿಳಿಸಿದ್ದು, ನಾವು ಹುಡುಕುತ್ತಾ ನಮ್ಮೂರಿನ ಬುದ್ದಿವಂತರಾವ ಪೊಲೀಸ ಪಾಟೀಲ ಇವರ ಹೊಲದಲ್ಲಿರುವ ಬಾವಿಯ ಹತ್ತಿರ ಹೊದಾಗ ಬಾವಿಯ ದಡದಲ್ಲಿ ಭಾಗ್ಯಶ್ರೀ ಇವಳು ಶಾಲೆಗೆ ಹಾಕಿಕೊಂಡು ಹೊಗುವ ಬೂಟಗಳು ಇದಿದ್ದು, ಸಂಶಯ ಬಂದು ಊರಿನವರ ಸಹಾಯದಿಂದ ಬಾವಿಯಲ್ಲಿ ಇಳಿಸಿ ನೋಡಲಾಗಿ ಭಾಗ್ಯಶ್ರೀ ಇವಳ ಶವ ದೊರೆತ್ತಿದ್ದು, ಭಾಗ್ಯಶ್ರೀ ಇವಳು ಹೊಟ್ಟೆ ಬೇನೆ ಇರುವುದ್ದರಿಂದ ಆಸ್ಪತ್ರೆಗೆ ತೋರಿಸಿದ್ದರೂ ಕಡಿಮೆಯಾಗದಿದ್ದಕ್ಕೆ ಜೀವನದಲ್ಲಿ ಜಿಗುಪ್ಸಗೊಂಡು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಸದರಿ ಭಾವಿಯಲ್ಲಿ ಬಿದ್ದು ನೀರು ಕುಡಿದು ಉಸಿರುಗಟ್ಟಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ.ದೇವಿಬಾಯಿ ಗಂಡ ರಮೇಶ ರಾಠೋಡ ಸಾ: ನಾಮಾ ನಾಯಕ ತಾಂಡಾ ಇವರ ಮಗಳಾದ ಪಿಂಕು ಇವಳಿಗೆ ಕಲ್ಮೂಡ ಮೋನಾ ನಾಯಕ ತಾಂಡಾದ ಅರವಿಂದ ಎಂಬುವವರಿಗೆ 2 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಅವಳು ತನ್ನ ಗಂಡನ ಮನೆಯಲ್ಲಿ ಇರುತ್ತಾಳೆ. ನನ್ನ ಎರಡನೇಯ ಮಗ ರಾಹುಲ ಈತನು ಕಲ್ಮೂಡ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದಿಕೊಂಡಿರುತ್ತಾನೆ. ನನ್ನ ಕೊನೆಯ ಮಗನಾದ ಸಚೀನ ಈತನು ಮೂಕನಾಗಿದ್ದು, ಅಮ್ಮ,ಆಯಿ,ಬಾಬಾ ಅಂತಾ ಅನ್ನುತ್ತಾ ಇದ್ದು ಆತನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮೂಡದಲ್ಲಿ 7 ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ನನ್ನ ಮಗನಿಗೆ ಶಿಕ್ಷಕರು ಬರೆದುಕೊಟ್ಟಿದ್ದನ್ನು ಅದನು ನೋಡಿ ಬರೆಯುತ್ತಾನೆ ಅವನೇನು ಓದುವುದಿಲ್ಲಾ. ಹೀಗಿದ್ದು, ದಿನಾಂಕ:03-09-2017 ರಂದು ಬೆಳಗ್ಗೆ ನನ್ನ ಮಗನು ಮನೆಯಿಂದ ಹೋದವನು  ಮನೆಗೆ ಬರಲಿಲ್ಲಾ ನಾನು ಮತ್ತು ನನ್ನ ತಮ್ಮ ಅರವಿಂದ ತಂದೆ ಪ್ರೇಮಸಿಂಗ ಚವ್ಹಾಣ ಇಬ್ಬರು ಅಂದಿನಿಂದ ಇಂದಿನವರೆಗೂ ಕಲಬುರಗಿ, ಹರಸೂರ, ಕಮಲಾಪೂರ ಹಾಗೂ ನಮ್ಮ ಬಿಗರು ನೆಂಟರಲ್ಲಿ ಹುಡುಕಾಡಿದರು ನನ್ನ ಮಗನು ಪತ್ತೆಯಾಗಿರುವುದಿಲ್ಲಾ. ನನ್ನ ಅಪ್ರಾಪ್ತ ಮಗನಾದ ಸಚೀನ ಈತನಿಗೆ ಯಾರೋ ಅಪರಿಚಿತರು  ಯಾವುದೋ ಉದ್ದೇಶಕ್ಕಾಗಿ ಅಪಹರಿಸಿಕೊಂಡು ಹೋಗಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.