POLICE BHAVAN KALABURAGI

POLICE BHAVAN KALABURAGI

06 June 2015

Kalaburagi District Reported Crimes

ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಕುರಕುಂಟಾ ಠಾಣೆ : ಶ್ರೀ ಶಾಮರಾವ ತಂದೆ ಹಣಮಂತು ವಡ್ಡರ ಸಾ|| ಮದಕಲ ತಾ|| ಸೇಡಂ ರವರು ಪಂಚಾಯತ ಚುನಾವಣೆಗೆ ನಮ್ಮೂರ ತಿರುಪತಿ ತಂದೆ ಯಂಕಪ್ಪಇವರ ಎದುರಾಳಿಯಾಗಿ ನಿಂತಿದ್ದು.ದಿನಾಮಕ;- 01-06-2015 ರಂದು ನಾನು ನನ್ನ ಅಣ್ಣ ಮತ್ತು ನನ್ನ ಅತ್ತಿಗೆ ಮನೆಯಲ್ಲಿ ಇದ್ದಾಗ ನಮ್ಮೂರ 1] ಪಾಪಯ್ಯಾ ತಂದೆ ನರಸಯ್ಯಾ 2] ದೇವಯ್ಯಾ ತಂದೆ ನರಸಯ್ಯಾ 3] ಲಸಮಯ್ಯಾ ತಂದೆ ಪೆಂಟಪ್ಪಾ 4] ವೆಂಕಟರೆಡ್ಡಿ ತಂದೆ ಮಲರೆಡ್ಡಿ 5] ರುಕ್ಮಾರೆಡ್ಡಿ ತಂದೆ ಮಲರೆಡ್ಡಿ 6] ಸಂದೀಪರೆಡ್ಡಿ ತಂದೆ ವೆಂಕಟರೆಡ್ಡಿ 7] ವಿಷ್ಣುವರ್ಧನರೆಡ್ಡಿ ತಂದೆ ವೆಂಕಟರೆಡ್ಡಿ 8] ಯಂಕಪ್ಪ ತಂದೆ ಯಂಕಪ್ಪ 9] ತಿರುಪತಿ ತಂದೆ ಯಂಕಪ್ಪ 10] ನಿಂಗಪ್ಪ ತಂದೆ ರಾಮಸ್ವಾಮಿ 11] ಹಣಮಂತು ತಂದೆ ಯಂಕಪ್ಪ 12] ಗಿರಿಸ್ವಾಮಿ ತಂದೆ ಯಂಕಪ್ಪ 13] ತಿಮ್ಮಯ್ಯಾ ತಂದೆ ಬಸಪ್ಪ  ಇವರೆಲ್ಲರೂ ಕೂಡಿಕೊಂಡು ತಿರುಪತಿ ಶಹಬಾದಕರ ಮನೆಯಿಂದ ಬಂದು ನಮ್ಮ ಮನೆಯ ಅಂಗಳದಲ್ಲಿ ನಿಂತುಕೊಂಡು ಏ ಬೋಸಡಿ ಮಗನೇ ಹೊರಗಡೆ ಬಾರೋ ನಿನಗೆ ಸೊಕ್ಕು ಬಹಳ ಇದೆಅಂತಾ ಬೈಯುತ್ತಿದ್ದಾಗ ನಾನು ನನ್ನ ಅಣ್ಣ ಲಕ್ಷ್ಮಯ್ಯಾ ಅತ್ತಿಗೆ ಮಂಜುಳ ಮತ್ತು ನಮ್ಮ ತಂದೆ ನಾವೆಲ್ಲರೂ ಬಂದು ಯಾಕರಪ್ಪಾ ನಮಗೆ ಯಾಕೆ ಬೈಯುತ್ತಿರೀ ಅಂತಾ ಕೇಳಿದಕ್ಕೆ ಯಂಕಪ್ಪ ,ತಿರುಪತಿ ಇಬ್ಬರೂ ನನ್ನ ಕೈ ಹಿಡಿದು  ಜೊಗ್ಗಾಡಿ ನೆಲಕ್ಕೆ ಹಾಕಿದರು ನಿಂಗಪ್ಪ ಮತ್ತು ಹಣಮಂತು ಇವರು ಕಲ್ಲುಗಳನ್ನು ತೆಗೆದುಕೊಂಡು ನನ್ನ ತಲೆಯ ಮೇಲೆ ಹಾಕಿ ಭಾರಿ ಗಾಯ ಮಾಡಿ ಜಾತಿ ನಿಂದನೆ ಮಾಡಿದರು. ತಿಮ್ಮಯ್ಯಾ ತಂದೆ ಬಸಪ್ಪ  ಕಲ್ಲಿನಿಂದ ನಮ್ಮ ಮನೆಯ ಬಾಗಿಲಿಗೆ ಹೊಡೆದನು. ಆಗ ನಮ್ಮ ಮನೆಯ ಬಾಗಿಲು ಮುರಿದು ಲುಕಸಾನ ಮಾಡಿದನು. ಆದರ ಕಿಮತ್ತು 2500/- ಆಗಲಿದೆ. ದೇವಯ್ಯಾ ತಂದೆ ನರಸಯ್ಯಾ ಇವನು ನನ್ನ ಅತ್ತಿಗೆಯ ಕೈ ಹಿಡಿದು ಜೊಗಿದನು. ಈ ರಂಡಿಗೆ ಸೊಕ್ಕು ಇದೆಅಂತಾ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಭೀಮಸೇನ.ಕೃ ಕಲಮದಾನಿ ಸಾ: ಕೃಷ್ಣ ಪ್ಲಾಟ ನಂ 84 (ಬಿ) ಎನ್.ಜಿ ಓ ಕಾಲೋನಿ ಓವರ ಬ್ರಿಡ್ಜ ಹತ್ತಿರ ಜೇವರ್ಗಿ ರಸ್ತೆ  ಕಲಬುರಗಿ. ನಮ್ಮ ಮನೆಯು ಜೇವರ್ಗಿ ರೋಡಿನ ಮುಖ್ಯ ರಸ್ತೆಯ ಪಕ್ಕದಲ್ಲಿ ಇದ್ದು ರಸ್ತೆಯ ವಿಸ್ತಿರ್ಣ ಕುರಿತು ಮನೆ ಡೆಮೋಲಿಷನ ಸೂಚಿಸಿದ ಮೇರೆಗೆ ವಿಜಯಕುಮಾರ ಗುತ್ತೇದಾರ ಇವರಿಗೆ ರಸ್ತೆಯಲ್ಲಿ ಬರುವ ಮನೆಯನ್ನು ಒಡೆಯುದಕ್ಕೆ ಹಚ್ಚಿ ನಾನು ಮನೆಗೆ ಬೀಗ ಹಾಕಿ ದಿನಾಂಕ 26/05/2015 ರಂದು ಬೆಂಗಳೂರಿಗೆ ಹೋಗಿದ್ದು ದಿನಾಂಕ 04/06/2015 ರಂದು ಬೆಳಿಗಿನ ವೇಳೆಗೆ ನಮ್ಮ ಎದುರುಗಡೆ ಮನೆಯ ಕಾವಲುಗಾರ ಅಶೋಕ ರವರು ನನಗೆ ಫೋನ ಮಾಡಿ ಮನೆ ಕಳ್ಳತನವಾಗಿರುವ ವಿಷಯವನ್ನು ತಿಳಿಸಿದರು ಇಂದು ದಿನಾಂಕ 05/06/2015 ರಂದು ಕಲಬುರಗಿಗೆ ಬಂದು ನನ್ನ ಮನೆಯನ್ನು ನೋಡಲು ಕೆಳಗಿನ ಹಾಲಿನಲ್ಲಿ ಇಟ್ಟಿದ್ದ 04 ಹಿತ್ತಾಳೆ ದೊಡ್ಡ ಡಬ್ಬಗಳು ಮತ್ತು ತಾಮ್ರದ ನೀರು ಕಾಯಿಸುವ ಬಾಯ್ಲರ ಹಾಗೂ ಒಂದು ದೊಡ್ಡ ಹಿತ್ತಾಳೆ ಕೋಡ ಇವುಗಳ ಅಂದಾಜು ಕಿಮ್ಮತ್ತು ರೂ 8000/- ಇದ್ದು ಕಳುವಾಗಿದ್ದು ಮೇಲಿನ ಬೆಡ್ ರೂಮಿನ ಬಾಗಿಲು ತೇರೆದು ಹೋದಾಗ ಅಲ್ಲಿದ್ದ ದೊಡ್ಡ ಅಲಮಾರಾ ಕಾಟ ಮೇಲೆ ಅಡ್ಡ ಮಲಿಗಿಸಿ ಒಡೆದಿದ್ದು ಕಂಡು ಬಂದಿದೆ. ಅಲಮಾರಾದಲ್ಲಿ ಇದ್ದ ನಗದು ಹಣ ರೂ 1,60,000/- ರೂಪಾಯಿ ಕಳುವುವಾಗಿದ್ದು ರೂಮಿನ ಎಲ್ಲಾ ವಸ್ತುಗಳು ಚಿಲ್ಲಾಪಿಲ್ಲಿಯಾಗಿದ್ದು ಬಾತ್ ರೂಮಿನ ಇನ್ನೊಂದು ಬಾಗಿಲು ತೇರಿದಿದ್ದು ಕಂಡು ಬಂದಿದೆ. ಸದರಿ ಘಟನೆಯು ದಿನಾಂಕ 03-04/06/2015 ರ ರಾತ್ರಿ ವೇಳೆಯಲ್ಲಿ ನಡೆದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.