POLICE BHAVAN KALABURAGI

POLICE BHAVAN KALABURAGI

16 February 2014

Gulbarga District Reported Crimes

ಆಕ್ರಮ ಪಿಸ್ತೂಲನಿಂದ ಫೈರ ಮಾಡಿ ಸುಲಿಗೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಕೈಲಾಸ ತಂದೆ ಕೀಶನರಾವ ಶಹಾಪೂರ ಸಾ|| ಪಂಚಶೀಲ ನಗರ ಗುಲಬರ್ಗಾ ಇವರು ದಿನಾಂಕ: 15-02-2014 ರಂದು ಮದ್ಯಾಹ್ನ 2-30 ಪಿ.ಎಮ್ ಸುಮಾರಿಗೆ ನಾನು ನನ್ನ ಮನೆಯಿಂದ ನನ್ನ ಗೆಳೆಯ ಶರಣಬಸಪ್ಪಾ ತಂದೆ ಕಲ್ಲಪ್ಪಾ ಇವರ ಮೊಟಾರ ಸೈಕಲ ನಂ: ಕೆಎ-32 ವಾಯ್-4686 ಹಿರೋಹೊಂಡಾ ಗಾಡಿ ತಗೆದುಕೊಂಡು ಭಾಗ್ಯವಂತಿ ದೇವರ ದರ್ಶನ ಕುರಿತು ಕೊಟನೂರ(ಡಿ) ಕಡೆಯಿಂದ ಸ್ವಾಮಿ ಅಯ್ಯಪ್ಪ ಸಮಾದಾನ ಮುಖಾಂತರ ಭಾಗ್ಯವಂತಿ ದೇವರ ಗುಡಿಗೆ 3-30 ಪಿಎಮ್‌ಕ್ಕೆ ದೇವರ ದರ್ಶನ ಮಾಡಿ ಸ್ವಲ್ಪ ಕುಳಿತು ನಂತರ ಅಲ್ಲಿಂದ ಅದೇ ಮೇಲೆ ತೋರಿಸಿದ ಮೊಟಾರ ಸೈಕಲ ಮೇಲೆ ಕುಳಿತುಕೊಂಡು ನಿಧಾನವಾಗಿ ಬರುತ್ತಿರುವಾಗ ಎದುರುಗಡೆ ಯಿಂದ  ಇಬ್ಬರು ಫ್ಯಾಶನ ಮೊಟಾರ ಸೈಕಲ ಮೇಲೆ ಬಂದು ಶಿವಶರಣನಂದ ಮಠದ ಕ್ರಾಸ ಹತ್ತಿರ ನನಗೆ ತಡೆದು ನಿಲ್ಲಿಸಿ ಎಲೇ ನಿಂದರಲೇ ಅಂತಾ ಅಂದರು ಅದಕ್ಕೆ ನಾನು ನನ್ನ ಗಾಡಿ ನಿಲ್ಲಿಸಿದೇನು. ಯಾಕೇ ನನಗೆ ಯಾಕೇ ತಡೆದಿರಿ ಅಂತಾ ಅಂದಾಗ ಅವರಲ್ಲಿ ಒಬ್ಬನು ತನ್ನಲ್ಲಿ ಇರುವ ಪಿಸ್ತೋಲ ತಗೆದುಕೊಂಡು ನನ್ನ ಬಲ ಮೆಲಕಿಗೆ ಹಿಡಿದು ನಿನಗೆ ಶೂಟ್ ಮಾಡಿತ್ತಿನೀ ಅಂತಾ ಹೆದರಿಸಿ ನಿನ್ನ ಹತ್ತಿರ ಇರುವ ಹಣ ಕೊಡು ಅಂತಾ ಜೋರು ದ್ವನಿಯಿಂದ ಹೇಳಿದನು. ನಾನು ಹಣ ಕೊಡಲು ನಿರಾಕರಿಸಿದಕ್ಕೆ ನನಗೆ ಅವರು ತಂದ ಮೊಟಾರ ಸೈಕಲ ಮೇಲೆ ನನಗೆ ಕುಡಿಸಿಕೊಂಡು ಅದರಲ್ಲಿ ಒಬ್ಬನು ನನ್ನ ಮೊಟಾರ ಸೈಕಲ ತಗೆದುಕೊಂಡು ಅಲ್ಲಿಂದ ನೇರವಾಗಿ ಡಾಲರ್ಸ ಕಾಲೋನಿ ಅಂತಾ ಬೋರ್ಡ ಇರುವ ರೋಡಿನ ಮೇಲೆ ನಿಲ್ಲಿಸಿ ನನ್ನ ಹತ್ತಿರ ಇರುವ ಹಣ ಮತ್ತು ಬಂಗಾರ, ಮೊಬೈಯಲ್ ಕೊಡು ಅಂತಾ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರಲ್ಲಿ ಒಬ್ಬ ಕೈಮುಷ್ಠಿ ಮಾಡಿ ನನ್ನ ಬಲ ಕಣ್ಣಿನ ಮೇಲೆ ಜೋರಾಗಿ ಗುದಿದ್ದನು. ಇನ್ನೊಬ್ಬ ತನ್ನ ಹತ್ತಿರ ಇರುವ ಪಿಸ್ತೋಲ ತಗೆದುಕೊಂಡು ನನ್ನ ಬಲಗೈ ಅಂಗೈಗೆ ಪಿಸ್ತೋಲನಿಂದ ಫೈಯರ್ ಮಾಡಿದನು. ಅದರ ಗೋಲಿ ತಾಗಿ ಗೋಲಿ ಹೊರಬಂದಿರುತ್ತದೆ. ಅದರಿಂದ ನನಗೆ ಭಾರಿ ರಕ್ತಗಾಯವಾಯಿತು. ನನ್ನ ಕೊರಳಲ್ಲಿ ಇರುವ ಅರ್ಧ ತೊಲಿ ಬಂಗಾರ ಚೈನು ಮತ್ತು ನನ್ನ ಜೇಬಿನಲ್ಲಿ ಇರುವ 3000/- ನಗದು ಹಣ ಹಾಗೂ ನೋಕಿಯಾ ಮೊಬೈಯಲ್ ಅದರ ಮಾಡಲ್ ನಂಬರ 2310 ಅ.ಕಿ. 2000/- ರೂ. ಇವುಗಳನ್ನು ಕಸಿದುಕೊಂಡರು. ನನಗೆ ಫೈಯರ ಮಾಡಿದರಿಂದ ರೋಡಿನ ಬದಿಯಲ್ಲಿ ಬಿದ್ದಿರುತ್ತೇನೆ. ಆಗ ನನ್ನ ಎಲ್ಲ ಸಾಮಾನುಗಳು ಕಸಿದುಕೊಂಡು ಓಡಿ ಹೋದರು. ಇಬ್ಬರು ಸುಮಾರು 25 ರಿಂದ 28 ವಯಸ್ಸಿನವರು ಇರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಜು ತಂದೆ ಪುಂಡಲಿಕ ರವರು ದಿನಾಂಕ 15-02-2014 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಮನೆಯಿಂದ ಮೋಟಾರ ಸೈಕಲ ನಂಬರ ಕೆಎ-32 ವಿ-8249 ರ ಮೇಲೆ ಅವರ ಅಕ್ಕಳಾದ ವಿಜಯಲಕ್ಷ್ಮಿ ಇವರನ್ನು ಕೂಡಿಸಿಕೊಂಡು ಎಸ್.ವಿ.ಪಿ ಸರ್ಕಲ ಕಡೆಗೆ ಹೋಗುವಾಗ ಮೋಟಾರ ಸೈಕಲ ನಂಬರ ಕೆಎ-32 ಇ-7132 ರ ಸವಾರನು ಕೋರ್ಟ ರೋಡ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೇ ಎಸ್.ವಿ.ಪಿ ಸರ್ಕಲ ಕಡೆಗೆ ಹೋಗುವ ಕುರಿತು ತಿರುಗಿಸಿ ಫಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಮೋಟಾರ ಸೈಕಲ ಡ್ಯಾಮೇಜ ಮಾಡಿ ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.