POLICE BHAVAN KALABURAGI

POLICE BHAVAN KALABURAGI

12 April 2014

Gulbarga District Reported Crimes

ಕುಖ್ಯಾತ 2 ಜನ ಸರಗಳ್ಳರ ಬಂಧನ, ನಾಡ ಪಿಸ್ತೋಲ & 5 ಲಕ್ಷ ಮೌಲ್ಯದ ಬಂಗಾರದ ಸ್ವತ್ತು ಜಪ್ತಿ :
ಫರತಾಬಾದ ಠಾಣೆ : ಫರಹತಾಬಾದ ಪೊಲೀಸ ಠಾಣೆ ವ್ಯಾಪ್ತಿಯ ಡಾಲರ್ಸ ಕಾಲೋನಿಯ ಹತ್ತಿರ ನಡೆದ ಶೂಟೌಟ ಪ್ರಕರಣ ಮತ್ತು ಗುಲಬರ್ಗಾ ನಗರದಲ್ಲಿರುವ ಎಂ.ಬಿ ನಗರ ಪೊಲೀಸ ಠಾಣೆ ಮತ್ತು ವಿಶ್ವವಿದ್ಯಾಲಯದ ಪೊಲೀಸ ಠಾಣೆಯಲ್ಲಿ ವರದಿಯಾಗಿರುವ ಸರಗಳ್ಳತನ ಪತ್ತೆ ಮಾಡಲು ಮಾನ್ಯ ಶ್ರೀ ಅಮಿತ್ ಸಿಂಗ್. ಐ.ಪಿ.ಎಸ್.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗುಲಬರ್ಗಾ, ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಗುಲಬರ್ಗಾ ಮತ್ತು ಶ್ರೀ ಸಂತೋಷ ಬಾಬು. ಐ.ಪಿ.ಎಸ್.  ಸಹಾಯ ಪೊಲೀಸ್ ಅಧೀಕ್ಷಕರು ಗ್ರಾಮಾಂತ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಬಸವರಾಜ ತೇಲಿ ಸಿ.ಪಿ.ಐ ಎಂ.ಬಿ ನಗರ ವೃತ್ತ,  ಶ್ರೀ ಗಜಾನನ ಕೆ. ನಾಯ್ಕ ಪಿ.ಎಸ್.ಐ ಎಂ.ಬಿ ನಗರ ಠಾಣೆ, ಉಮೇಶ ಪಿ.ಎಸ್.ಐ ಫರತಾಬಾದ ಠಾಣೆ, ಹಸೇನ ಬಾಷಾ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ ಹಾಗು ಸಿಬ್ಬಂದಿಯವರಾದ ಶಂಕರ ಹೆಚ್.ಸಿ, ಮನೋಹರ ಸಿ.ಹೆಚ್.ಸಿ, ಅರ್ಜುನ ಎ.ಹೆಚ್.ಸಿ ಮಹ್ಮದ ರಪಿಯೋದ್ದೀನ, ಮೊಯಿಜೂದ್ದಿನ ಸಿ.ಪಿ.ಸಿ, ಮಲ್ಲಿಕಾರ್ಜುನ ಸಿ.ಪಿ.ಸಿ, ಸಿದ್ರಾಮಯ್ಯ ಸಿ.ಪಿ.ಸಿ, ವೀರಶೆಟ್ಟಿ ಸಿ.ಪಿ.ಸಿ, ಅಶೋಕ ಮುಧೋಳ ಸಿ.ಪಿ.ಸಿ, ಅಶೋಕ ಹಳಿಗೋದಿ ಸಿ.ಪಿ.ಸಿ, ಹುಸೇನಿ ಸಿ.ಪಿ.ಸಿ, ಚನ್ನಬಸಯ್ಯ ಸ್ವಾಮಿ ಸಿ.ಪಿ.ಸಿ, ಬಲರಾಮ ಸಿಪಿಸಿ, ಮಗ್ದುಮ ಅಲಿ ಸಿಪಿಸಿ, ಸುಧಾ ಮಪಿಸಿ, ರವರೆಲ್ಲರೂ ಕೂಡಿಕೊಂಡು ನಿನ್ನೆ ದಿನಾಂಕಃ 11-04-2014 ರಂದು ಈ ಕೆಳಕಂಡ ಕುಖ್ಯಾತ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿತರು ವಿಚಾರಣೆ ಕಾಲಕ್ಕೆ ಗುಲಬರ್ಗಾ ನಗರದ ಗಣೇಶ ನಗರ, ರಾಜಾಪುರ ರಿಂಗ್ ರೋಡ್, ಭರತ ನಗರ ತಾಂಡಾ, ಜಯ ನಗರ, ಡಾಲರ್ಸ ಕಾಲೋನಿ ಹಾಗೂ ಜೇವರಗಿಯಲ್ಲಿ ಹೆಣ್ಣು ಮಕ್ಕಳ ಕೊರಳಲ್ಲಿಯ ಬಂಗಾರದ ಮಂಗಳ ಸೂತ್ರ ಕಿತ್ತುಕೊಂಡ ಬಗ್ಗೆ ಪತ್ತೆಯಾಗಿದ್ದು, ಸದರಿ ಆರೋಪಿತರಿಂದ 15 ತೊಲೆ ಬಂಗಾರದ ಚಿನ್ನಾಭರಣಗಳು, ಮೊಬಾಯಿಲ್ ಪೊನ್, ಒಂದು ನಾಡ ಪಿಸ್ತೋಲ, ಹಾಗು ಸರಗಳ್ಳತನ ಮಾಡಲು ಬಳಸಿದ ಮೋಟಾರ ಸೈಕಲ್ ಹೀಗೆ ಒಟ್ಟು ಸುಮಾರು 5,00,000/- ರೂ. ಬೆಲೆ ಬಾಳುವ ಸ್ವತ್ತನ್ನು ಜಪ್ತಿ ಮಾಡಿರುತ್ತಾರೆ.
 ದಸ್ತಗಿರಿ ಮಾಡಿದ ಆರೋಪಿತರ ಹೆಸರು 1.   ಅರುಣ ತಂದೆ  ಗುರುನಾಥ ಡಂಘೆ  ಸಾಃ ಅಮೀನಾ ಮೋಹಲ್ಲಾ ಚಿತ್ತಾಪೂರ ತಾಃ ಚಿತ್ತಾಪೂರ ಹಾ.ವಃ ಸೀತನೂರ ತಾ.ಜಿಃ ಗುಲಬರ್ಗಾ 2. ಬಿಲಾಲ ಮಹ್ಮದ ಬಿಲಾಲ ತಂದೆ ಅಬ್ದುಲ ಹೈ  ಶೇಖ ಸಾ : ಕೇಶವ ನಗರ, ಆನಂದ ನಗರ ಹತ್ತಿರ ಪುಣೆ, ಹಾಲಿ ವಸ್ತಿ ಗುಲಷನ್ ಅರಾಫತ ಕಾಲೋನಿ ಹಾಗರಗಾ ರೋಡ್ ಗುಲಬರ್ಗಾ ರವರನ್ನು ದಸ್ತಗೀರ ಮಾಡಿದ್ದು ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿ ಪತ್ತೆ ತಂಡಕ್ಕೆ ರೂ 10,000/- ಬಹುಮಾನ ನೀಡಿದ್ದಾರೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಹಣಮಂತ ತಂದೆ ಜೇಟ್ಟಪ್ಪಾ ಕುಂಟನೂರ  ಸಾ:ಸೀತನೂರ ತಾ: ಜಿ: ಗುಲಬರ್ಗಾ ರವರ ಅಣ್ಣತಮ್ಮಕೀಯ ದೇವಪ್ಪಾ ಕುಂಟನೂರ ಇವರು ಸಿರನೂರ ಗ್ರಾಮದಲ್ಲಿ ಯಲ್ಲಮ್ಮಾ ದೇವಿಯ ದೇವರ ಕಾರ್ಯ ಮಾಡಿದ್ದರಿಂದ ನಾನು ಸೀತನೂರ ಗ್ರಾಮದಿಂದ ಮೋಟಾರ ಸೈಕಲ ನಂ ಕೆಎ-32 ಎಕ್ಸ್-1567 ನೆದ್ದರ ಮೇಲೆ  ಹೊರಟಿರುತ್ತೆನೆ. ಮುಂದೆ ಸಾಯಂಕಾಲ 5.30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ  ಕೇಂದ್ರ ಕಾರಾಗೃಹದ ಹತ್ತಿರ ಸಿರನೂರ ಗ್ರಾಮದ  ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ರೋಡಿನ ಎಡಗಡೆಯಿಂದ ಬಲಗಡೆಗೆ ಬಂದು ವೇಗದ ಹತೋಟಿ ತಪ್ಪಿ ನನ್ನ ಮೋಟಾರ ಸೈಕಲಗೆ ಡಿಕ್ಕಿಪಡಿಸಿ ರೋಡಿನ ಕೆಳಗೆ ಬಲಗಡೆಯ ತೆಗ್ಗಿನಲ್ಲಿ ನಿಲ್ಲಿಸಿರುತ್ತಾನೆ.ಸದರಿ ಘಟನೆಯಿಂದ ನನಗೆ ಬಲಗೈಗೆ ಮೊಳಕೈ ಹತ್ತಿರ,ಅಂಗೈಯ ಮೇಲೆ ಮತ್ತು ಬಲಗಾಲಿನ ಮೊಳಕಾಲಿನ ಕೆಳಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ.ನಂತರ ಸದರಿ ಟಿಪ್ಪರ ನಂಬರ ನೋಡಲಾಗಿ ಜಿಎ-02 ವ್ಹಿ- 7505 ನೆದ್ದು ಇರುತ್ತದೆ,ಸದರಿ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಸ್ಥಳದಲ್ಲಿ ಬಿಟ್ಟು ಓಡಿಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪಂಡಿತ ತಂದೆ ಲಕ್ಷ್ಮಣ ಮಡ್ನೆ  ಸಾ: ಭವಾನಿ ಟೆಂಪಲ ಹತ್ತಿರ ಕಮಲ ನಗರ  ಗುಲಬರ್ಗಾ  ರವರು ದಿನಾಂಕ 11-04-2014 ರಂದು ಸಾಯಂಕಾಲ 5-15 ಗಂಟೆಗೆ ಸುಪರ ಮಾರ್ಕೇಟಕ್ಕೆ ಹೋಗುವ ಸಲುವಾಗಿ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಅಟೋರೀಕ್ಷಾ ನಂ: ಕೆಎ 32-5922 ನೆದ್ದರಲ್ಲಿ ಕುಳಿತು ಎಸ್.ವಿ.ಪಿ.ಸರ್ಕಲ್ ಮುಖಾಂತರ ಸುಪರ ಮಾರ್ಕೇಟ ಕಡೆಗೆ ಹೋಗುವಾಗ ಜಗತ ಸರ್ಕಲ್ ಹತ್ತಿರ ನಾನು ಅಟೋರೀಕ್ಷಾ ಚಾಲಕನಿಗೆ ಅಟೋ ನಿಧಾನವಾಗಿ ಚಲಾಯಿಸಲು ತಿಳಿಸಿದರೂ ಕೂಡಾ ತನ್ನ ಅಟೋರೀಕ್ಷಾವನ್ನು  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ತಿರಾಂದಾಜ ಟಾಕೀಜ ಕಡೆಯಿಂದ ಮೋ/ಸೈಕಲ್ ನಂಕೆಎ 32 ಎಕ್ಸ 8743 ರ ಸವಾರನು ತನ್ನ ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಂದಾಕೊಂದು ವಾಹನಗಳು ಡಿಕ್ಕಿ ಆಗಿದ್ದರಿಂದ ಅಟೋರೀಕ್ಷಾ ಪಲ್ಟಿ ಆಗಿದ್ದರಿಂದ ನನಗೆ  ಮತ್ತು ಅಟೋರೀಕ್ಷಾ ಚಾಲಕ  ಮುರಳಿಧರನಿಗೆ ಗಾಯಗಳಾಗಿದ್ದು  ಮೋ/ಸೈಕಲ್ ಸವಾರನು ತನ್ನ ವಾಹನ ಅಲ್ಲೇ ಬಿಟ್ಟು ಸವಾರ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.