POLICE BHAVAN KALABURAGI

POLICE BHAVAN KALABURAGI

30 June 2017

Kalaburagi District Reported Crimes

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ 29/06/2017 ರಂದು ಹೊನಗುಂಟಾಗ್ರಾಮದಲ್ಲಿ ಬಸ್ಸಣ್ಣ ಹಾಬಾ ಈತನು ಅಕ್ರಮ ಮಧ್ಯ ಮಾರಾಟ ಮಾಡುತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾಹಿತಿ ಬಂದ ಮೇರೆಗೆ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊನಗುಂಟಾ ಗ್ರಾಮಕ್ಕೆ ಹೋಗಿ ಮಧ್ಯ ಮಾರಾಟ ಮಾಡುವುದನ್ನು ನೋಡಿ ಖಚಿತಪಡಿಸಿಕೊಂಡು ಒಬ್ಬ ಮನುಷ್ಯನಿಗೆ ಹಿಡಿದು ವಿಚಾರಿಸಿ ಆತನ ಹೆಸರು ಬಸ್ಸಣ್ಣ ತಂದೆ ಮರೆಪ್ಪಾ ಹಾಬಾ ಸಾ: ಹೊನಗುಂಟಾ ಅಂತಾ ಹೇಳಿ ಆತನ ಹತ್ತಿರ ಇದ್ದ 30 180 ಎಮ್ ಎಲ್ ದ ಓಟಿ ಹಳದಿ ಡಬ್ಬಿಗಳನ್ನು ಅಂ ಕಿ 2040 ರೂ ನೇದ್ದು ಪಂಚರ ಸಮಕ್ಷಮ ಜಪ್ತಿ ಪಡೆಸಿಕೊಂಡು ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ಶ್ರೀಮತಿ.ಕವಿತಾ ಗಂಡ ಸಂತೋಷಕುಮಾರ ದೇಗಾಂವ, ಸಾ||ಬಾಳಿ ಗ್ರಾಮ ಇವರು ಕಲಬುರಗಿ ನಗರದ ಶ್ರೀ.ಸಂಗಮ್ಮ ವಿಧ್ಯಾಲಯದಲ್ಲಿ ಸಹಶಿಕ್ಷಕಿ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದರಿಂದ ಕಲಬುರಗಿಯಲ್ಲಿ ಮನೆಮಾಡಿಕೊಂಡು ಗಂಡಹೆಂಡತಿ ಇಬ್ಬರು ಒಟ್ಟಿಗೆ ವಾಸವಾಗಿದ್ದೇವು ಆಗಾಗ ಬಾಳಿ ಗ್ರಾಮಕ್ಕೆ ಬಂದು ಹೋಗಿ ಮಾಡುತ್ತಿರುತ್ತೇವೆ. ನನ್ನ ಗಂಡನಾದ ಸಂತೋಷಕುಮಾರ ಇವರು ಈಗ ಸುಮಾರು 6-7 ವರ್ಷಗಳಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದರಿಂದ ಅವರಿಗೆ ಕಲಬುರಗಿಯ ಪತಂಗೆ ಮನೋ ವೈಧ್ಯರ ಹತ್ತಿರ ಚಿಕಿತ್ಸೆ ಕೂಡ ಮಾಡಿಸಿದ್ದು ಇರುತ್ತದೆ. ಆದರು ಸಹ ಅವರ ಮಾನಸಿಕ ರೋಗ ಕಡಿಮೆ ಆಗಿರಲಿಲ್ಲ. ವಿಷಯವಾಗಿ ನನ್ನ ಗಂಡನು ತುಂಬ ಮನನೊಂದುಕೊಂಡಿದ್ದರು ದಿನಾಂಕ:28/06/2017 ರಂದು ಮುಂಜಾನೆ 09-30 ಗಂಟೆ ಸುಮಾರಿಗೆ ನಾನು ಕಲಬುರಗಿಯಲ್ಲಿ ನನ್ನ ಗಂಡನಿಗೆ ಹೇಳಿ ಶಾಲೆಗೆ ಹೋಗಿರುತ್ತೇನೆ. ನಂತರ ಶಾಲೆ ಮುಗಿಸಿಕೊಂಡು ಮನೆಗೆ ಬಂದಾಗ ಸಂಜೆ 6-00 ಗಂಟೆ ಸುಮಾರಿಗೆ ನನ್ನ ಗಂಡನು ನನಗೆ ಫೋನಮಾಡಿ ತಾವು ಬಾಳಿ ಗ್ರಾಮಕ್ಕೆ ಹೋಗಿರುವ ಬಗ್ಗೆ ತಿಳಿಸಿರುತ್ತಾರೆ. ಇಂದು ದಿನಾಂಕ:29-06-2017 ರಂದು ಮುಂಜಾನೆ 07-00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ಬಾಳಿ ಗ್ರಾಮದಿಂದ ನಮ್ಮ ಸಂಬಂಧಿಕರಾದ ಗುರುಲಿಂಗಪ್ಪ ತಂದೆ ಸಿದ್ದಪ್ಪ ಬಿರಾದಾರ ಇವರು ಫೋನ್ ಮಾಡಿ ನಿನ್ನ ಗಂಡನಾದ ಸಂತೋಷಕುಮಾರ ಇವರು ನಮ್ಮ ಬಾಳಿ ಗ್ರಾಮದ ಮನೆಯಲ್ಲಿ ವಿಷ ಸೇವನೆ ಮಾಡಿಕೊಂಡು ಮೃತಪಟ್ಟಿರುತ್ತಾರೆಂದು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ತಾಯಿಯಾದ ಶೋಭ ಗಂಡ ಬಾಲಚಂದ್ರ ನೆಲ್ಲೂರ ರವರು ಕೂಡಿ ಬಾಳಿ ಗ್ರಾಮಕ್ಕೆ ಬಂದು ನೋಡಲಾಗಿ ವಿಷಯ ನಿಜವಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಶೈಲಜಾ ಗಂಡ ಜಗದೀಶ ವಾಲೆ ಸಾ: ಬೋರಗಾಂವ ತಾ: ಅಕ್ಕಲಕೋಟ ಹಾ:ವ: ಜಮಗಾ (ಜೆ) ತಾ:ಆಳಂದ ರವರು ದಿನಾಂಕ:10/05/2015 ರಂದು ಬೋರಗಾಂವ ಗ್ರಾಮದ ಜಗದೀಶ ತಂದೆ ರಾಜೇಂದ್ರ ವಾಲೆ ಎಂಬವನೊಂದಿಗೆ ನಮ್ಮ ಧಾರ್ಮಿಕ ಪದ್ದತಿಯಂತೆ ಜಮಗಾ (ಜೆ) ಗ್ರಾಮದಲ್ಲಿ ಮದುವೆ ಮಾಡಿಕೊಟ್ಟಿದ್ದು ಮದುವೆ ಸಮಯದಲ್ಲಿ ಅಳಿಯನಿಗೆ 4 ತೊಲೆ ಬಂಗಾರ ಹಾಗು ಒಂದು ಲಕ್ಷ ರೂಪಾಯಿ ಕಿಮ್ಮತ್ತಿನ ಮದುವೆಯ ಗೃಹ ಬಳಕೆಯ ವಸ್ತುಗಳನ್ನು ಕೊಟ್ಟು ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ನನ್ನೊಂದಿಗೆ ನನ್ನ ಗಂಡ ಎರಡು ತಿಂಗಳ ಚೆನ್ನಾಗಿ ಇದ್ದು ನಂತರ ದಿನಗಳಲ್ಲಿ ನನಗೆ ಅಡುಗೆ ಮಾಡಲು ಬರುವುದಿಲ್ಲ ಅಂತಾ ಆಗಾಗ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದು ಮತ್ತು ಮದುವೆ ಸಮಯದಲ್ಲಿ ಮಾತನಾಡಿದ ಬಂಗಾರದಲ್ಲಿ ಇನ್ನು ಉಳಿದ 2 ತೊಲೆ ಬಂಗಾರ ತರುವಂತೆ ಒತ್ತಾಯಿಸಿ ನನಗೆ ದಿನಾಲೂ ಕಿರಿಕಿರಿ ಮಾಡುತ್ತಾ ಬಂದಿರುತ್ತಾನೆ. ಆಗ ನಾನು ನನ್ನ ಗಂಡನ ಮನೆಯಲ್ಲಿ ನಡೆದ ವಿಷಯವನ್ನು ನನ್ನ ತವರು ಮನೆಯಾದ ಜಮಗಾ (ಜೆ) ಗ್ರಾಮಕ್ಕೆ ಬಂದು ತಿಳಿಸಿದಾಗ ನನ್ನ ತಂದೆ-ತಾಯಿಯವರು ನನಗೆ ಬಿದ್ದಿವಾದ ಹೇಳಿ ಕರೆದುಕೊಂಡು ಹೋಗಿ ಮತ್ತೆ ನನ್ನ ಗಂಡನ ಮನೆಯಲ್ಲಿ ಬಿಟ್ಟಿರುತ್ತಾರೆ. ಆಗ ಸ್ವಲ್ಪ ದಿವಸಗಳ ಕಾಲ ಚೆನ್ನಾಗಿ ಇದ್ದಂತೆ ನಟನೆ ಮಾಡಿ ನಂತರದ ದಿನಗಳಲ್ಲಿ ಮತ್ತೆ ನನಗೆ ನಿಮ್ಮ ತಂದೆಯವರಿಂದ ಬಂಗಾರ ತೆಗೆದುಕೊಂಡು ಬಾ ಅಂದರು ತೆಗೆದುಕೊಂಡು ಬಂದಿರುವುದಿಲ್ಲ ರಂಡಿ ಎಂದು ಹೊಡೆಯುತ್ತಿದ್ಧಾಗ ನಮ್ಮ ಅತ್ತೆ ಅಂಬಾಬಾಯಿ , ನಾದನಿ ಪಾರ್ವತಿ , ಹಾಗು ನಾದನಿ ಗಂಡ ಶಿವರಾಜ ಇವರು ಬಂದು ಈ ರಂಡಿಗೆ ಎಷ್ಟು ಸಾರಿ ಹೇಳಿದರೂ ಕೆಲಸವು ಸರಿಯಾಗಿ ಮಾಡುವುದಿಲ್ಲಾ ಬಂಗಾರವು ತರುವುದಿಲ್ಲ ಈ ರಂಡಿ ಇವತ್ತು ಖಲಾಷ ಮಾಡು ಅಂತಾ ಬೈದು ಅವಳ ಕುದಲು ಹಿಡಿದು ಎಳೆದಾಡಿ ನೇಲಕ್ಕೆ ಹಾಕಿದಾಗ ನನ್ನ ಗಂಡ ನನಗೆ ಕಪಾಳ ಮೇಲೆ ಹೊಡೆದು ಹೊರಕ್ಕೆ ಹಾಕಿರುತ್ತಾನೆ. ನಂತರ ನಾನು ಮತ್ತೆ ತವರು ಮನೆಗೆ ಬಂದಾಗ ನನ್ನ ತಂದೆಯವರು ಈ ಬಾರಿ ಪಂಚಾಯತಿ ಮಾಡಿ ಬಿಟ್ಟಿ ಬಂದರಾಯಿತು ಅಂತಾ ನಾನು ಮತ್ತು ನನ್ನ ತಂದೆ , ನಮ್ಮ ಕಾಕ ಗುಂಡೆರಾವ ಹಾಗು ನಮ್ಮ ಸಂಬಂದಿ ಸಿದ್ದಾರಾಮ ಸಕ್ಕರಗಿ , ಮಲ್ಲಿನಾತ ಬಿರೆದಾರ ಎಲ್ಲರೂ ಕೂಡಿಕೊಂಡು ನನ್ನ ಗಂಡನ ಮನೆಗೆ ಹೋದಾಗ ಅಲ್ಲಿ ಎಲ್ಲರೂ ಸೇರಿ ಪಂಚಾಯತಿಗೆ ಕುಳಿತಾಗ ನನ್ನ ಗಂಡ , ಅತ್ತೆ , ನಾದನಿ ಹಾಗು ನಾದನಿ ಗಂಡ ಎಲ್ಲರೂ ನಮಗೆ ಹಾಗು ಪಂಚಾಯತಿ ಮಾಡಲು ಬಂದವರಿಗೆ ಮನಬಂದಂತೆ ಬೈದು ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಅಂತಾ ಬೈದು ಕಳುಹಿಸಿರುತ್ತಾರೆ. ನಂತರ ದಿನಾಂಕ 07/10/2015 ರಂದು ನಾವು ಆಳಂದ ಪೊಲೀಸ ಠಾಣೆಗೆ ಹೋಗಿ ದೂರು ಸಲ್ಲಿಸಿದಾಗ ಅವರು ಸದರಿ 4 ಜನರನ್ನು ಠಾಣೆಗೆ ಕರೆಯಿಸಿದಾಗ ಅವರು ಸದರಿ 4 ಜನರನ್ನು ಕರೆಯಿಸಿ ವಿಚಾರಣೆ ಮಾಡಿದಾಗ ಅವರು ಇನ್ನುಮುಂದೆ ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಂತಾ ಪಾಬಂದಿ ಮುಚ್ಚಳಿಕೆ ಬರೆದು ಕೊಟ್ಟು ನನ್ನ ಮಗಳನ್ನು ಕರೆದುಕೊಂಡು ಹೊದರು. ನಂತರ 15 ದಿವಸಗಳ ಕಾಲ ಚೆನ್ನಾಗಿ ಇದ್ದು ನಂತರ ದಿನಗಳಲ್ಲಿ ಮತ್ತೆ ಮೊದಲಿನಂತೆ ಕಿರಿಕರಿ ಮಾಡುತ್ತಾ ದೈಹಿಕ ಮಾನಸಿಕ ಕಿರುಕುಳ ನೀಡಲು ಪ್ರಾರಂಬಿಸಿದರು ನಂತರ ನಾನು ನನ್ನ ತಂದೆಯವರು ಕರೆಯಿಸಿ ನನ್ನ ತವರು ಮನೆಯಲ್ಲಿ ಬಂದು ಇದ್ದಿರುತ್ತೇನೆ. ಆಗ ಸ್ವಲ್ಪ ದಿವಸಗಳ ನಂತರ ಜಮಗಾ (ಜೆ) ಕ್ಕೆ ಬಂದು ಏ ರಂಡಿ ನೀನು ನಮ್ಮ ಮನೆಗೆ ಬರದೆ ಇದ್ದರೆ ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನನ್ನೊಂದಿಗೆ ಜಗಳವಾಡಿ ಹೊಗಿರುತ್ತಾನೆ .ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.