POLICE BHAVAN KALABURAGI

POLICE BHAVAN KALABURAGI

12 January 2012

GULBARGA DIST REPORTED CRIME

ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ :
ದಿನಾಂಕ: 12/01/12 ರಂದು ಠಾಣೆಯ ಹದ್ದಿಯಲ್ಲಿ ಶ್ರೀ.ಗಜೇಂದ್ರ ಸಿ.ಪಿ.ಸಿ ಮತ್ತು ಸುಧಾಕರ ಸಿ.ಪಿ.ಸಿ ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ತಿರಂದಾಜ ಟಾಕೀಜ ಹತ್ತಿರ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಹಿಡಿದು ವಿಚಾರಿಸಲು ತನ್ನ ಹೆಸರು ಶಂಕರ ತಂದೆ ನಿಜಲಿಂಗಪ್ಪ ಕಡಾಮಗೇರಿ, ಸಾ ಬಾಪೂನಗರ ಹನುಮಾನ ಗುಡಿಯ ಹತ್ತಿರ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ. ಸದರಿಯವನನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಠಾಣಾ ಗುನ್ನೆ ನಂ: 1/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಕಳ್ಳತನ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ತೌಸಿಫ ಅಹ್ಮದ ತಂದೆ ಅಬ್ದುಲ ರಸೀದ ಅಹ್ಮದ ಸಾ ಮನೆ ನಂ 1-629 ಅಪ್ಪರ ಲೈನ ಸ್ಟೇಷನ ಬಜಾರ ಗುಲಬರ್ಗಾ ರವರು ನಾನು ದಿನಾಂಕ: 20/11/2011 ರಂದು ಸಾಯಂಕಾಲ 6-00 ಗಂಟೆಗೆ ನನ್ನ ಗೆಳೆಯನಾದ ಸೋಯಲ ರಶೀದ ಇಬ್ಬರು ಕೂಡಿಕೊಂಡು ಸುಪರ ಮಾರ್ಕೆಟ ಚೌಪಾಟಿ ಗೇಟ ಹತ್ತಿರ ಪಾನಿ ಪೂರಿ ಬಂಡಿ ಎದುರುಗಡೆ ನಿಂತು ಪಾನಿ ಪೂರಿ ತಿನ್ನುತ್ತಿರುವಾಗ ನನ್ನ ಪ್ಯಾಂಟಿನ ಹಿಂದುಗಡೆ ಜೇಬಿನಲ್ಲಿದ ಡೇಲ ಮೊಬೈಲ್ ಸ್ಟ್ರೀಕರ ಹ್ಯಾಂಡ ಸೆಟ ಐ.ಎಮ್.ಇ.ಐ ನಂ: 012214000087992 ಅಕಿ 25,302/- ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 09/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ಪ್ರದೀಪ ತಂದೆ ಅಮೃತ ಭಾಸ್ಕರ ಸಾ ಗುಲಬರ್ಗಾರವರು ನಾನು ಸುಮಾರು ಒಂದು ವರ್ಷದ ಹಿಂದೆ ನನ್ನ ಮತ್ತು ನನ್ನ ಅತ್ತೆಯ ಮಕ್ಕಳಾದ ರೋಷನ, ಸಂತೋಷ ನವರಂಗ ಇವರ ನಡುವೆ ಜಗಳವಾಗಿದ್ದು, ಆಗಿನಿಂದ ನಮ್ಮ ನಡುವೆ ವೈಮನಸ್ಸು ಬೆಳೆಸಿಕೊಂಡು ಬಂದಿರುತ್ತದೆ. ನಾನು ವಿಶ್ವನಾಥ ಪೊಲೀಸ ಪಾಟೀಲ ಇವರ ಸಂಗಡ ಮಾತಾಡುತ್ತಾ ನಿಂತಿತ್ತಿರುವಾಗ ರೋಷನ, ಸುಭಾಶ ಇವರು ಬಂದು ತಮ್ಮ ಹತ್ತಿರವಿದ್ದ ತಲವಾರ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 8/2012 ಕಲಂ: 323, 324, 307, 504 ಸಂಗಡ 34 ಐ.ಪಿ.ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ನಾಗಪ್ಪಾ ತಂದೆ ಬೀರಪ್ಪಾ ಮುತ್ಯಾ ಸಾ:ಬನ್ನೂರ ರವರು ನನ್ನ ಮಗನಾದ ಚೆನ್ನವೀರ ವಯಾ:7 ವರ್ಷ ಇತನು ದಿನಾಂಕ: 10/1/2012 ರಂದು ಸಾಯಂಕಾಲ 5 ಗಂಟೆಯ ಗ್ರಾಮದ ಶಕೀಲ ಹೋಟೇಲ ಮುಂದಿನ ರೋಡ ಬದಿ ಹಿಡಿದು ಹೊರಟಾಗ ಗಣಜಲಖೇಡ ರೋಡ ಕಡೆಯಿಂದ ಜಗಪ್ಪಾ ತಂದೆ ಮಾದುರಾಯ ಮಂಠಾಣ ಸಾ:ಗಣಜಲಖೇಡ ಇತನು ತನ್ನ ಮೋಟಾರ ಸೈಕಲ ನಂ ಕೆ.ಎ 04 ಇ.ಎಂ 7752 ನೇದ್ದರ ಚಾಲಕನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ರೋಡ ಬದಿಗೆ ಹೊರಟ ಚೆನ್ನವೀರಯ್ಯಾ ಇತನ ಬಲಗಾಲಿಗೆ ಡಿಕ್ಕಿ ಹೊಡೆದು ಬಾರಿ ಗುಪ್ತಗಾಯ ಪಡಿಸಿ ಮೋಟಾರ ಸೈಕಲ ಹಾಗೇ ಓಡಿಸಿಕೊಂಡ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 06/2011 ಕಲಂ 279 338 ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ರಮೇಶ ತಂದೆ ಶಿವರಾಮ ರಾಠೋಡ ಸಾ:ಹರಸೂರ ತಾಂಡಾ ತಾ:ಜಿ:ಗುಲಬರ್ಗಾ ರವರು ನಾನು ದಿನಾಂಕ:10/01/2012 ರಂದು ಸಂಜೆ 05:30 ಗಂಟೆ ಸುಮಾರಿಗೆ ನನ್ನ ಹಿರೋಹೊಂಡಾ ಮೋಟಾರ ಸೈಕಲ ನಂ ಕೆ.ಎ 32 ಡಬ್ಲೂ-6043 ನೇದ್ದರ ಮೇಲೆ ಹರಸೂರದಿಂದ ದೇವಿ ತಾಂಡಾದ ಪಂಚಲಗಿ ದೇವಿ ಚಾತ್ರೆಗೆ ಹೊರಟಿದ್ದು ಆಲಗೂಡ ಕ್ರಾಸ ಸಮೀಪ ಬಂದಾಗ ಹುಮನಾಬಾದ ರೋಡ ಕಡೆಯಿಂದ ಆಟೋ ರಿಕ್ಷಾ ನಂ ಕೆ,ಎ32 ಎ-1661 ನೇದ್ದರ ಚಾಲಕನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ ಹೊಡೆದು ಆಟೋ ಸ್ದಳದಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 7/2012 ಕಲಂ 279 338 ಐ.ಪಿ.ಸಿ ಸಂ 187 ಐ.ಎಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾ