POLICE BHAVAN KALABURAGI

POLICE BHAVAN KALABURAGI

22 June 2012

GULABRGA DIST REPORTED CRIMES


ವಾಹನಗಳ ಮಾಲಿಕರು / ವಾಹನಗಳ ಚಾಲಕರು ಸುಪ್ರಿಂ ಕೋರ್ಟ ಆದೇಶದನ್ವಯ ಸನ್ ಕಂಟ್ರೋಲ್ ಪೀಲ್ಮನ್ನು ಕಡ್ಡಾಯವಾಗಿ ತೆಗೆಯುವ ಬಗ್ಗೆ .
ವಾಹನದ ಗಾಜುಗಳಿಗೆ ಹಾಕಿರುವ ಸನ್ ಕಂಟ್ರೋಲ್ ಫಿಲಂನ್ನು ಸಂಪೂರ್ಣವಾಗಿ ತೆಗೆಯಬೇಕು ಅಂತಾ ಸುಪ್ರಿಂ ಕೋರ್ಟ ಆದೇಶದನ್ವಯ ದಿನಾಂಕ 22-06-2012 ರಂದು ಸಾಯಂಕಾಲ ಗುಲಬರ್ಗಾ  ನಗರದ ಸಂಚಾರಿ ಠಾಣೆಗಳ ಅಧಿಕಾರಿಗಳು ಹಾಗು ಸಿಬ್ಬಂದಿಯವರು ವಾಹನದ ಗಾಜುಗಳಿಗೆ ಅಂಟಿಸಿದ ಸನ್ ಕಂಟ್ರೋಲ ಫಿಲಂನ್ನು ಇನ್ನೂ ತೆಗೆಯದ 175 ವಾಹನಗಳನ್ನು ಪರೀಶೀಲನೆ ಮಾಡಿ, ವಾಹನಗಳ ಮಾಲಿಕರು/ ವಾಹನಗಳ ಚಾಲಕರಿಂದ ಸ್ಥಳದಲ್ಲಿಯೇ ರೂ 20,000/- ರೂ ದಂಡ ವಸೂಲ ಮಾಡಲಾಗಿರುತ್ತದೆ. ಮತ್ತು ಈಗಾಗಲೇ ವಾಹನದ  ಮಾಲಿಕರಿಗೆ ಮತ್ತು ಚಾಲಕರಿಗೆ ಪತ್ರಿಕಾ ಪ್ರಕಟಣೆಗಳ ಮೂಲಕ ತಮ್ಮ ವಾಹನದ ಗಾಜುಗಳಿಗೆ ಅಂಟಿಸಿದ ಸನ್ ಕಂಟ್ರೋಲ ಫಿಲಂನ್ನು ಸುಪ್ರಿಂ ಕೋರ್ಟ ಆದೇಶದನ್ವಯ ಸನ್ ಕಂಟ್ರೋಲ್ ಪೀಲ್ಮ ತೆಗೆಯಬೇಕೆಂದು ಪ್ರಕಟಣೆ ಮೂಲಕ ಈಗಾಗಲೇ ತಿಳಿಸಲಾಗಿದೆ. ವಾಹನಗಳ ಮಾಲಿಕರು/ ಚಾಲಕರು ತಮ್ಮ ತಮ್ಮ ವಾಹನಗಳಿಗೆ ಅಂಟಿಸಿದ ಸನ್ ಫಿಲಂನ್ನು ತೆಗೆಯದ ವಾಹನ ಮಾಲಿಕರಿಗೆ / ಚಾಲಕರಿಗೆ ಮೊದಲನೇಯ ಸಲ 100/- ರೂ ದಂಡ, ಎರಡನೆಯ ಬಾರಿಗೆ 300/- ರೂ ದಂಡ ವಿಧಿಸಲಾಗುವುದು. ಅಂತಾ ಈ ಪ್ರಕಟಣೆ ಮೂಲಕ ತಿಳಿಸಲಾಗಿದೆ.
ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ:ಶ್ರೀ, ಮಲ್ಲಿಕಾರ್ಜುನ ತಂದೆ ಚಂದ್ರಶೇಖರ ಗೋಣಿ ವ:38ವರ್ಷ ಜಾ:ಲಿಂಗಾಯತ ಸಾ:ಕುರಿಕೋಟಾ ತಾ:ಜಿ:ಗುಲಬರ್ಗಾರವರು ನಮ್ಮ ಸಂಭಂದಿಯಾದ ನಾಗರಾಜ ತಂದೆ ಅಣ್ಣಪ್ಪಾ ಇತನ ಮದುವೆ ಹುಮನಾಬಾದ ತಾಲೂಕಿನ ಮಸ್ತರಿಯಲ್ಲಿ ದಿ: 21/06/2012 ರಂದು ಇದ್ದಿದ್ದರಿಂದ  ನಾನು ಮತ್ತು ನಮ್ಮ ಸಂಭಂದಿಗಳಾದ ಕವಿತಾ ಗಂಡ ಮಲ್ಲಿಕಾರ್ಜುನ ಮತ್ತು ಇನ್ನೂ 17 ಜನರು ಕೂಡಿಕೊಂಡು ನಮ್ಮ ಗ್ರಾಮದವರೇ ಆದ  ರಾಜಕುಮಾರ ತಂದೆ ವೀರಬದ್ರಯ್ಯಾ ಮಠಪತಿ ರವರ ಟಾಟಾ ಎಸಿ-ಗಾಡಿ ನಂ-ಕೆಎ-32 ಎ-7828 ನೇದ್ದರಲ್ಲಿ ಬೆಳಿಗ್ಗೆ 10-00 ಗಂಟೆಗೆ ಹೊರಟಿದ್ದು, ರಾಜಕುಮಾರ ಮಠಪತಿ ಇತನು ವಾಹನ ಚಲಾಯಿಸುತ್ತಿದ್ದರು, ಮದುವೆ ಮುಗಿಸಿಕೊಂಡು ಸಾಯಂಕಲ 4-00 ಗಂಟೆ ಸುಮಾರಿಗೆ ಮರಳಿ ನಮ್ಮ ಗ್ರಾಮ ಕುರಿಕೊಟಾ ಗ್ರಾಮಕ್ಕೆ ಕಮಲಾಪುರ ಮಾರ್ಗವಾಗಿ  ಬರುತ್ತಿರುವಾಗ ನಮ್ಮ ಟಾಟಾ ಎಸಿ-ಗಾಡಿ ನಂ-ಕೆಎ-32 ಎ-7828 ನೆದ್ದರ ಚಾಲಕನಾದ ರಾಜಕುಮಾರ ಇತನು  ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮುಂದೆ ಹೊಗುತ್ತಿದ್ದ ಕೆ.ಎಸ.ಆರ.ಟಿ.ಸಿ ಬಸ್ಸಿಗ್ಗೆ ಓವರ ಟೇಕ ಮಾಡಿ ಮುಂದೆ ಬರುತ್ತಿರುವಾಗ ಎದುರುಗಡೆಯಿಂದ ಕೆಎ 32 ಎಪ್-1750 ನೇದ್ದರ ಕೆ.ಎಸ.ಆರ.ಟಿ.ಸಿ ಬಸ ಚಾಲಕನು ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದರಿಂದ ಎರಡು ವಾಹನಗಳ ಮಧ್ಯ ಮುಖಾ-ಮುಖಿಯಾಗಿ ಡಿಕ್ಕಿ ಆಯಿತು, ನಾವು ಓವರ ಟೆಕ ಮಾಡಿಕೊಂಡು ಬಂದ, ಬಸ್ಸು ಹಿಂದಿನಿಂದ ಅಂದರೆ ಹುಮನಾಬಾದ ಕಡೆಯಿಂದ ಬರುತ್ತಿದ್ದ ಕೆಎ 32 ಎಫ್- 527 ನೇದ್ದರ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಟಾಟಾ ಎಸಿ- ಡಿಕ್ಕಿ ಹೊಡೆದು ಡಿಕ್ಕಿ ಹೊಡೆದನು. ನಾನು ಕೆಳಗೆ ಇಳಿದು ನೊಡಲಾಗಿ ನನಗೆ ಹಾಗು ಇನ್ನಿತರರಿಗೆ ಸಾದಾಗಾಯ, ಗುಪ್ತಗಾಯವಾಗಿರುತ್ತವೆ. ಟಾಟಾ ಎಸಿ-ಗಾಡಿ ನಂ-ಕೆಎ-32 ಎ-7828 ನೇದ್ದರ ಚಾಲಕ ರಾಜಕುಮಾರ ಇತನಿಗೆ ರಕ್ತಗಾಯವಾಗಿ ಬಲಗಾಲ ತೊಡೆಯ ಹತ್ತಿರ ಮುರಿದಿರುತ್ತದೆ , ರಾಜಕುಮಾರ ತಂದೆ ವೀರಬದ್ರಯ್ಯಾ ಇತನಿಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು,  ಉಪಚಾರ ಫಲಕಾರಿ ಯಾಗದೆ ದಿ: 21/06/2012 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 71/2012 ಕಲಂ 279.337,338,304[ಎ] ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗ್ರಾಮೀಣ ಪೋಲೀಸ್ ಠಾಣೆ : ಶ್ರೀ ಅಮೃತಪ್ಪ ತಂದೆ ದ್ಯಾವಪ್ಪ  ಪೂಜಾರಿ  ಸಾ; ಎಸ ಎಮ ಕೃಷ್ಣಾ ಕಾಲೋನಿ ,  ಗುಲಬರ್ಗಾರವರು ನಾನು ದಿನಾಂಕ 17/06/12  ರಂದು ಸಾಯಂಕಲ 6-00 ಗಂಟೆ ಸಮಯಕ್ಕೆ ಮನೆಗೆ ಬಂದು  ಎರಡು  ಹೊರಿಗಳನ್ನು ಮನೆಯ ಮುಂದೆ ಕಟ್ಟಿದ್ದು  ರಾತ್ರಿ 2-00 ಗಂಟೆಯ ಸಮಯಕ್ಕೆ  ನನಗೆ ಎಚ್ಚರವಾಗಿದ್ದರಿಂದ  ಹೊರಿಗಳಿಗೆ  ಮೇವು ಹಾಕಿ  ಮಲಗಿಕೊಂಡಿರುತ್ತೆನೆ. ಮುಂಜಾನೆ 6-00 ಗಂಟೆಯ  ಸಮಯಕ್ಕೆ  ಹೊರಿಗಳಿಗೆ  ಮೇವು ಹಾಕಲಿಕ್ಕೆ ಹೋದಾಗ ಎರಡು ಹೊರಿಗಳ ಪೈಕಿ , ಒಂದು ಹೋರಿಯನ್ನು  ಯಾರೊ ಕಳ್ಳರು ಬಿಚ್ಚಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ 215/12  ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷೀಣೆ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ :
ಮಹಾಗಾಂವ ಪೊಲೀಸ್ ಠಾಣೆ: ಶ್ರೀ ಮಲ್ಲಿಕಾರ್ಜುನ ತಂದೆ ಗುರುಲಿಂಗಪ್ಪ ಪಾಟೀಲ ಸಾ|| ಹೆರೂರ (ಕೆ) ರವರು ನನ್ನ ಮಗಳಾದ ರೇಣುಕಾ ಇವಳಿಗೆ 6 ವರ್ಷಗಳ ಹಿಂದೆ ಅಣಕಲ ಗ್ರಾಮದ ಶಿವಶರಣಪ್ಪ ಪೆದ್ದಿ ಇವರ ಮಗನಾದ ರಮೇಶ ಎಂಬುವನ ಜೋತೆ  ಮದುವೆ ಮಾಡಿದ್ದು ಮದುವೆ ಕಾಲಕ್ಕೆ 1 ಲಕ್ಷ ರೂಪಾಯಿ ಹಾಗೂ 5 ತೋಲೆ ಬಂಗಾರ ವರೋಪಚಾರ ಅಂತಾ ಕೊಟ್ಟಿರುತ್ತೆವೆ. ನನ್ನ ಮಗಳಿಗೆ 5 ವರ್ಷದ ಸುನೀಲ 3 ವರ್ಷದ ಗಂಗೋತ್ರಿ ಹಾಗೂ 9 ತಿಂಗಳ ಸ್ವಪನೀಲ ಅಂತಾ ಮಕ್ಕಳಿರುತ್ತಾರೆ ನನ್ನ ಮಗಳಾದ ರೇಣುಕಾ ಇವಳ ಗಂಡ ರಮೇಶ ಮಾವ ಶಿವಶರಣಪ್ಪ ಅತ್ತೆ ಕಮಲಾಬಾಯಿ ಇವರೆಲ್ಲರೂ ನನ್ನ ಮಗಳಿಗೆ ತಾವು ಉಳ್ಳಾಗಡ್ಡಿ ,ತೋಗರಿ , ವ್ಯಾಪಾರ ಮಾಡುತ್ತೆವೆ ತವರು ಮನೆಯಿಂದ  ಹಣ ತೆಗೆದುಕೊಂಡು ಬಾ ಅಂತಾ ಅವಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಕೋಡುತ್ತಿದ್ದು ನನ್ನ ಮಗಳು ಈ ವಿಷಯವನ್ನು ನನ್ನ ಮುಂದೆ ತಿಳಿಸಿದ್ದಳು, ಆದ್ದರಿಂದ ಅವಳ ಗಂಡ ಹಾಗೂ ಅತ್ತೆಮಾವನಿಗೆ ನಮ್ಮ ಮಗಳಿಗೆ ಕಿರುಕುಳ ನೀಡಬೇಡಿರಿ ಅಂತಾ ಹೇಳಿರುತ್ತೆನೆ. ದಿ||26/6/2012 ರಂದು ಅಳಿಯನಾದ ರಮೇಶ ಇತನು ನನಗೆ ಫೋನ ಮಾಡಿ ನಿಮ್ಮ ಮಗಳು ರೇಣುಕಾ ಇವಳು ಮನೆ ಬಿಟ್ಟು ಹೋಗಿರುತ್ತಾಳೆ ಎಲ್ಲಿ ಹೋಗಿದ್ದಾಳೆ ಗೊತ್ತಿಲ್ಲಾ ಅಂತಾ ತಿಳಿಸಿದ ಮೇರೆಗೆ ನಾನು ನನ್ನ ಮಗ, ಸಂಬಂದಿಕರು ಹುಡುಕಾಡುತ್ತಾ ಕುರಿಕೋಟ ಗ್ರಾಮದ ಹತ್ತಿರ ಮಧ್ಯಾಹ್ನ 2-00 ಗಂಟೆಗೆ ಬಂದಾಗ ಅಲ್ಲಿಯ ಜನರು ಕುರಿಕೋಟ ಬ್ರೀಡ್ಜ ಮೆಲಿಂದ ಒಬ್ಬ ಹೆಣ್ಣು ಮಗಳು ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಅಂತಾ ತಿಳಿಸಿದ್ದರಿಂದ ನಾವು ನೋಡಲಾಗಿ ನನ್ನ ಮಗಳಾದ ರೇಣುಕಾ ಇವಳು ಅವಳ ಗಂಡ ರಮೇಶ ಹಾಗೂ ಮಾವ ಶಿವಶರಣಪ್ಪ ಅತ್ತೆ ಕಮಲಾಬಾಯಿ ಇವರು ಕೊಟ್ಟ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಕುರಿಕೊಟ ಬ್ರಿಡ್ಜನ ನೀರಿನಲ್ಲಿ ಬಿದ್ದು ಸಾಯಿ ಅಂತಾ ನಿಂದನೆ ಮಾಡಿದ್ದರಿಂದ ನನ್ನ ಮಗಳು ನನ್ನ ಮಗಳು ಕುರಿಕೋಟ ಬ್ರಿಡ್ಜಿನ ನೀರಿನಲ್ಲಿ ಬಿದ್ದು ಮೃತ್ತ ಪಟ್ಟಿರುತ್ತಾಳೆ. ಅವಳ ಗಂಡ ರಮೇಶ ಮಾವ ಶಿವಶರಣಪ್ಪ ಅತ್ತೆ ಕಮಲಾಬಾಯಿ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 54/12 ಕಲಂ 498 (ಎ) 306 ಸಂಗಡ 34 ಐ,ಪಿ,ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ಬಸವರಾಜ ತಂದೆ ಲಕ್ಷ್ಮಣ ತಳವಾರ ಸಾ: ಶಿವಾಜಿ ನಗರ ಗುಲಬರ್ಗಾ ರವರು  ನಾನು ಮತ್ತು ಸುಭದ್ರಭಾಯಿ ರಾಧಿಕಾ ಮೂರು ಜನರು ಕೂಡಕೊಂಡು  ದಿನಾಂಕ: 21-06-2012 ರಂದು 6-30 ಪಿ.ಎಮಕ್ಕೆ ಕೆ.ಎಮ್.ಎಪ್. ಡೈರಿಯ ಮುಂದೆ ರೋಡಿನ ಮೇಲೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಟೋರಿಕ್ಷಾ ನಂ. ಕೆಎ 32 ಬಿ- 4765 ನೇದ್ದರ ಚಾಲಕನು ತನ್ನ ಅಟೋರಿಕ್ಷಾವನ್ನು ಗಂಜ ಬಸ್ ಸ್ಟಾಂಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಮತ್ತು ಸುಭದ್ರಬಾಯಿ, ರಾಧಿಕಾ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 35/2012 ಕಲಂ 279, 337,338 ಐ.ಪಿ.ಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಸೈಯ್ಯದ ಅಪ್ಸರ ತಂದೆ ಸೈಯ್ಯದ ಫಜಲ ಸಾ: ಹುಸೆನಿ ಗಾರ್ಡನ ಹತ್ತಿರ ಎಮ್‌‌ಎಸ್‌ಕೆ ಮಿಲ ಜಿಲಾನಾಬಾದ ಗುಲಬರ್ಗಾ ರವರು ನಾನು ಮತ್ತು ಮಹಮದ ಅನ್ವರ ಕೂಡಿಕೊಂಡು ದಿನಾಂಕ:-21/06/21012 ರಂದು ಸಾಯಾಂಕಾಲ 3:30 ಗಂಟೆಯ ಸುಮಾರಿಗೆ ಮೋಟಾರ ಸೈಕಲ ನಂ ಕೆ.ಎ 01 ಇ-ಎಲ್-3226 ನೇದ್ದರ ಮೇಲೆ ಆಳಂದ ಚೆಕ್ಕ ಪೊಸ್ಟ ಹತ್ತಿರ ಈರಫಾರ ಇತನಿಗೆ ಬೇಟ್ಟಿ ಆಗುವ ಕುರಿತು ಹೋಗಿ ಮರಳಿ ಮೋಟಾರ ಸೈಕಲ ಮೇಲೆ ಬರುವಾಗ ಮಿಜಬಾನಗರ ಕ್ರಾಸ ಹತ್ತಿರ ಹಿಂದಿನಿಂದ ಲಾರಿ ನಂ ಕೆ.ಎ 32 ಬಿ-1154 ನೇದ್ದರ ಚಾಲಕ ಶಿವಕುಮಾರ ಖಾಜಾ ಕೊಟನೋರ ಇತನು ತನ್ನ ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಯಾವುದೇ ಹಾರ್ನ ವಗೈರೇ ಹಾಕದೇ ಒಮ್ಮಲೇ ತಂದು ಹಿಂದಿನಿಂದ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಿಸಿ ಲಾರಿ ಮುಂದಿನ ಎಡ ಬಾಗದ ಟೈರ  ಮಹಮ್ಮದ ಅನ್ವರ ಇತನ ತಲೆಯ ಮೇಲೆ ಹೋಗಿ ತಲೆ ಮುಖ ಪೂರ್ತಿ ಜಜ್ಜಿ ಮೆದಳು ಹೊರ ಬಂದು ಸ್ದಳದಲ್ಲಿಯೇ ಮೃತ ಪಟ್ಟಿದ್ದು ನನಗೆ ಸಾದಾ ಗಾಯಗಳು ಆಗಿರುತ್ತವೆ, ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 213/2012 ಕಲಂ 279 337 304(ಎ) ಐಪಿಸಿ ಸಂಗಡ 187 ಐಎಮ್‌ವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.