POLICE BHAVAN KALABURAGI

POLICE BHAVAN KALABURAGI

18 September 2017

Kalaburagi District Reported Crimes

ಮಟಕಾ ಜೂಝಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕಃ 16.09.2017 ರಂದು  ಮಧ್ಯಾಹ್ನ ಶಹಾಬಾದ ನಗರದ ಮಡ್ಡಿ-2 ಏರಿಯಾದಲ್ಲಿ  ಮಟಕಾ ಅದೃಷ್ಟ ಸಂಖ್ಯೆಗಳನ್ನು  ಬರೆದುಕೊಳ್ಳುತ್ತಿರುವ  ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಅಸ್ಲಾಮ ಪಾಷಾ ಪಿ.ಐ. ಶಾಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಡ್ಡಿ-2 ಏರಿಯಾದಲ್ಲಿ  ಶ್ರೀ ರಾಮವಧೂತ  ಮಠದ ಹತ್ತಿರ ಹೋಗಿ ಸಾರ್ವಜನಿಕ ರಸ್ತೆಯಲ್ಲಿ  ಮಟಕಾ ನಂಬರ  ಬರೆದುಕೊಳ್ಳುತ್ತಿದ್ದವನಿಗೆ ಹಿಡಿದು ವಿಚಾರಿಸಲು  1) ರಾಜು ತಂದೆ ಪೀರಪ್ಪಾ ಕೋರೆ  ಸಾಃ ಮಡ್ಡಿ-2 ಶಹಾಬಾದ ಅಂತಾ ಹೇಳದನು. ಆರೋಪಿತನ ವಶದಲ್ಲಿದ್ದ  4 ಮಟಕಾ ಚೀಟಿಒಂದು ಬಾಲಪೆನ್ನು ಮತ್ತು  ಮಟಕಾಕ್ಕೆ ಸಂಬಂಧಪಟ್ಟ  3150/-ರೂ  ಹಣ ವಶಪಡಿಸಿಕೊಂಡು,  ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಗುರುನಾಥ ತಂದೆ ಮಲ್ಲಿಕಾರ್ಜುನ ಮರಬ ಸಾ:ಹೀರಾಪೂರ ತಾ:ಜಿ:ಕಲಬುರಗಿ ರವರು ತಿರುಗಾಡಲು ಟಾಟಾ ಇಂಡಿಕಾ ವಿಸ್ಟಾ ಕಾರ ನಂ. ಕೆಎ.28 ಎನ್.0237 ನೇದ್ದು ಖರಿದಿ ಮಾಡಿದ್ದು. ದಿನಾಂಕ:16.09.2017 ರಂದು ಮದ್ಯಾಹ್ನದ ವೇಳೆಯಲ್ಲಿ ಓಕಳಿ ಗ್ರಾಮದ ನನ್ನ ಗೆಳೆಯನಾದ ರವಿ ತಂದೆ ರೇವಣಸಿದ್ದಪ್ಪ ಶಿವಾದಿ ಈತನು ಓಕಳಿ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತಾ ನನಗೆ ಹೇಳಿ ಮೇಲ್ಕಂಡ ನನ್ನ ಕಾರನ್ನು ಕಲಬುರಗಿಯಿಂದ ನಡೆಸಿಕೊಂಡು ಹೋಗಿದ್ದು ಇರುತ್ತದೆ. ನಿನ್ನೆ ದಿನಾಂಕ:16.09.2017 ರಂದು ಮದ್ಯಾಹ್ನದ ವೇಳೆಯಲ್ಲಿ ಓಕಳಿ ಗ್ರಾಮದ ನನ್ನ ಗೆಳೆಯನಾದ ಅಂಬಾರಾಯ ಶೇರಿ ಇವರು ನನಗೆ ಫೊನ ಮಾಡಿ ಮೇಲ್ಕಂಡ ನನ್ನ ಕಾರನ್ನು ರವಿ ಈತನು ಕಮಲಾಪೂರನಿಂದ ಓಕಳಿ ಹೋಗುವ ರೋಡಿನ ವೀರಣ್ಣ ದೇವರ ಗುಡಿಯ ಹತ್ತೀರ ಅಪಘಾತ ಮಾಡಿದ್ದು. ರವಿ ಈತನು ಗಾಯಹೊಂದಿದ್ದು ಸದರಿಯವನಿಗೆ 108 ಅಂಬುಲೆನ್ಸದಲ್ಲಿ ಉಪಚಾರ ಕುರಿತು ಕಲಬುರಗಿ ಯುನೈಟೆಡ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವ ಬಗ್ಗೆ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ನಿನ್ನೆ ಸಾಯಂಕಾಲದ ವೇಳೆಯಲ್ಲಿ ಕಲಬುರಗಿ ಯುನೈಟೆಡ ಆಸ್ಪತ್ರೆಗೆ ಹೋಗಿ ನೋಡಲು ರವಿ ಈತನಿಗೆ ಬಲಗಾಲ ಹಿಮ್ಮಡಿಯ ಹತ್ತೀರ ಬಲಕಾಲ ಕಪಗಂಡಕ್ಕೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿದ್ದು. ಬಲಕೈ ಮಧ್ಯದ ಬೆರಳಿಗೆ ರಕ್ತಗಾಯ ಹಾಗೂ ಬೆನ್ನಿಗೆ ಮತ್ತು ತಲೆಯ ಹಿಂಭಾಗಕ್ಕೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದವು. ನಂತರ ಘಟನೆಯ ಬಗ್ಗೆ ಅಂಬಾರಾಯ ಈತನಿಗೆ ವಿಚಾರ ಮಾಡಲು ಅವರು ತಿಳಿಸಿದ್ದೆನಂದರೆ. ಇಂದು ಮದ್ಯಾಹ್ನ 01.00 ಗಂಟೆಯ ಸೂಮಾರಿಗೆ ನಾನು ಓಕಳಿಯಿಂದ ಮೋಟರ ಸೈಕಲ ಮೇಲೆ ಕಮಲಾಪೂರಕ್ಕೆ ಬರುತ್ತಿದ್ದಾಗ  ಅದೇ ವೇಳೆಗೆ ಎದುರಿನಿಂದ ಕಲಮಾಪೂರ ಓಕಳಿ ರೋಡಿನ ಇಳಿಜಾರಿನಲ್ಲಿ ವೀರಣ್ಣ ದೇವರ ಗುಡಿಯ ಹತ್ತೀರ ರವಿ ಶಿವಾದಿ ಈತನು ತಾನು ನಡೆಸುತ್ತಿದ್ದ ಟಾಟಾ ಇಂಡಿಕಾ ವಿಸ್ಟಾ ಕಾರ ನಂ.ಕೆಎ.28 ಎನ್.0237 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತ ಬಂದು ನಿಯಂತ್ರಣ ಕಳೆದುಕೊಂಡು ರಸ್ತೆ ಎಡಬದಿಯ ತಗ್ಗಿನಲ್ಲಿ ಕಾರ ಪಲ್ಟಿ ಮಾಡಿದ್ದು. ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಹಣಮಯ್ಯ ತಂದೆ ವೇಂಕಯ್ಯ ಗುತ್ತೇದಾರ ಸಾ: ಬಳೂರ್ಗಿ ರವರು ವಾಕಿಂಗ್ ಸಲುವಾಗಿ ಬಳೂರ್ಗಿ ಅಫಜಲಪೂರ ರೋಡಿಗೆ ನಡೆದು ಕೊಂಡು ಹೋಗುತ್ತಿದ್ದಾಗ ನಿಂಗಯ್ಯ ಸ್ವಾಮಿ ತೋಟದ ಸಮೀಪ ಒಬ್ಬ ಮೋಟಾರ ಸೈಕಲ್ ಅವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿ ಕೊಂಡು ಹಿಂದಿನಿಂದ ಬಂದು (ಅಫಜಲಪೂರ ಕಡೆಯಿಂದ) ಡಿಕ್ಕಿಪಡಿಸಿದ್ದು ನಾನು ಕೇಳಗೆ ಬಿದ್ದೇನು ಎದ್ದು ನೋಡಲು ನನಗೆ ಎರಡು ಮೋಳಕಾಲಿಗೆ ಹಣೆಗೆ ಹಿಮ್ಮಡಿಗೆ ರಕ್ತಗಾಯ ಮಾಡಿದ್ದು ಸದರಿ ಮೋಟಾರ ಸೈಕಲ್ ನೋಡಲು ಬಜಾಜ ಡಿಸ್ಕವರಿ ಅದರ ನಂಬರ ಕೆಎ-32-ಇಬಿ-3052 ಇದ್ದು ಅದರ ಮೇಲೆ ಮೂರು ಜನರು ಕುಳಿತು ಬರುತ್ತಿದ್ದು ಅವರೆಲ್ಲರೂ ಕೇಳಗೆ ಬಿದ್ದರು ಮೋಟಾರ ಸೈಕಲನ್ನು ಮಾಳಪ್ಪ ತಂದೆ ಚುಚಲಪ್ಪ ಪೂಜಾರಿ ಸಾ: ಬಳೂರ್ಗಿ ಇವರು ನಡೆಸುತ್ತಿದ್ದರು ಇನ್ನಿಬ್ಬರು ಹೆಸರು ಗೊತ್ತಿರುವುದಿಲ್ಲಾ ಸದರಿ ಮೋಟಾರ ಸೈಕಲ್ ಅಲ್ಲೇ ಬಿಟ್ಟು ಹೋಗಿರುತ್ತಾರೆ.  ಕಾರಣ ನನಗೆ ಮೋಟಾರ ಸೈಕಲ್ ನಂ  ಕೆಎ-32-ಇಬಿ-3052 ನೇದ್ದರ ಚಾಲಕನು ಅತೀವೇಗ ಹಾಗೂ ಅಲಕ್ಷತನದಿಂದ ಹಿಂದಿನಿಂದ ಬಂದು ಡಿಕ್ಕಿ ಪಡೆಸಿ ಗಾಯ ಪೆಟ್ಟುಕೊಳಿಸಿರುತ್ತಾರೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ದಿನಾಂಕ: 16/09/2017 ರಂದು 14:15 ಗಂಟೆಗೆ ಯುನೇಟೆಡ್‌‌ ಆಸ್ಪತ್ರೆ ಕಲಬುರಗಿಯಲ್ಲಿ  ರಸ್ತೆ ಅಫಘಾತದಲ್ಲಿ ಭಾರಿ ಗಾಯಹೊಂದಿ ಸೇರಿಕೆಯಾದ
ಫರತಾಬಾದ ಠಾಣೆ : ಶ್ರೀ  ಅಬ್ದುಲ ರಹಿಮಾನ  ತಂದೆ ಅಶ್ರಫಮಿಯ್ಯ ಸಾ: ತಾಜನಗರ ಕಲಬುರಗಿ ರವರ ತಾಯಿಯಾದ ಪುತಲಿಬೇಗಂ ಇವಳು ಮಹಾನಗರ ಪಾಲಿಕೆಯಲ್ಲಿ ( Deputy Mayor) ಇರುತ್ತಾರೆ ನಮ್ಮ ತಾಯಿಯವರಿಗೆ ಸರಕಾರದ ವತಿಯಿಂದ  ಒಂದು ಇನ್ನೋವಾ ಕಾರ ನಂಬರ ಕೆಎ 32 ಎನ್‌‌ 7080 ಇದ್ದು ಅದು ಅವರ ಕೆಲಸಕ್ಕೆ  ಉಪಯೋಗಿಸುತ್ತಾ ಬಂದಿರುತ್ತಾರೆ . ದಿನಾಂಕ 15/09/2017 ರಂದು ರಂಗಮಪೇಟ ದಲ್ಲಿ ನಮ್ಮ ತಾಯಿಗೆ  ಸನ್ಮಾನ ಕಾರ್ಯಕ್ರಮ ಅಲ್ಲಿಯ ಜನರು ಇಟ್ಟುಕೊಂಡಿದ್ದರಿಂದ  ಸದರಿ ಕಾರಿನಲ್ಲಿ  ನಾನು ನನ್ನ ತಾಯಿ ಪುತಲಿಬೇಗಂ ಹಾಗೂ ಬಾಬುಮಿಯಾ ಶಾಮಿಯಾನ ಕೂಡಿ ಇನ್ನೋವಾ ಕಾರ ನಂ ಕೆಎ 32 ಎನ್‌‌ 7080 ನೇದ್ದರ ಚಾಲಕ ಲಕ್ಷ್ಮಿಕಾಂತ ತಂದೆ ರಾಮಚಂದ್ರ ವಿಶ್ವಕರ್ಮ  ಸಾ: ಬ್ರಹ್ಮಪೂರ  ಕಲಬುರಗಿ ಯವನೊಂದಿಗೆ ಹೋಗಿ ಸನ್ಮಾನ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಕಲಬುರಗಿಗೆ ಬರುವಾಗ ಎನ್‌ಹೆಚ್‌ 218 ರೋಡಿನ ಸರಡಗಿ (ಬಿ) ಕ್ರಾಸ ದಾಟಿ ಮುಂದೆ ಬಂದಾಗ  ನಮ್ಮ ಕಾರಿನ  ಎದರುಗಡೆ ಒಂದು ಲಾರಿಯನ್ನು  ಟೋಚನ ಮಾಡಿಕೊಂಡು ಕಲಬುರಗಿ ಕಡೆಗೆ ಹೊಗುತ್ತಿದ್ದು ನಮ್ಮ ಕಾರ ಚಾಲಕನು  ಸದರಿ ಕಾರನ್ನು ಅತೀವೇಗದಿಂದ  ಹಾಗೂ ಅಲಕ್ಷತನದಿಂದ  ಓಡಿಸಿ ಎದುರಿನಿಂದ  ಬರುತ್ತಿದ್ದ ವಾಹನಗಳ ಹೆಡ್‌‌‌ ಲೈಟ ಬೆಳಕಿನಲ್ಲಿ  ಎದುರಿನ ಟೋಚನ ಮಾಡಿಕೊಂಡು ಹೊರಟ ಲಾರಿ ವಾಹನ ಕಾಣದಕ್ಕೆ  ಅದರ ಹಿಂಭಾಗಕ್ಕೆ  ಡಿಕ್ಕಿ ಪಡೆಯಿಸಿ  ಅಫಘಾತ ಮಾಡಿದಾಗ ಅಫಘಾತದಿಂದ ನನಗೆ ತಲೆಯ  ಎಡಭಾಗಕ್ಕೆ  ಭಾರಿ ರಕ್ತಗಾಯವಾಗಿದ್ದು ಮೂಗಿಗೆ ಎಡಗಣ್ಣಿಗೆ ಗಾಯವಾಗಿದ್ದು ಟೋಚನ ವಾಹನದ ನಂಬರ ಜಿಜೆ-01 5936 & ಲಾರಿ ನಂಬರ ಇರುವುದಿಲ್ಲಾ  ಸ್ಥಳದಲ್ಲಿಯೇ ನಿಂತಿದ್ದು ನಂತರ ನನಗೆ ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು  ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತಾರೆ ಉಳಿದ ಯಾರಿಗೂ ಗಾಯವಾಗಿರುವುದಿಲ್ಲಾ  ಕಾರಣ ಇನ್ನೋವಾ ಕಾರ ನಂಬರ ಕೆಎ 32 ಎನ್‌ 7080 ನೇದ್ದರ ಚಾಲಕ ಲಕ್ಷ್ಮಿಕಾಂತ ಅತೀವೇಗದಿಂದ ಅಲಕ್ಷತನದಿಂದ ಓಡಿಸಿ ಟೋಚನ ವಾಹನ ಲಾರಿಗೆ ಡಿಕ್ಕಿ ಪಡಿಸಿ ನನಗೆ ಭಾರಿಗಾಯಗೊಳಿಸಿ ಸದರ ಕಾರ ಜಖಂಗೊಳಿಸಿದ್ದು ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.