POLICE BHAVAN KALABURAGI

POLICE BHAVAN KALABURAGI

01 July 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ವೈಶಾಲಿ ಗಂಡ ವಿಠ್ಠಲ ಹೊನ್ನಳ್ಳಿ ಸಾ: ಅಫಜಲಪೂರ ರವರು ಮತ್ತು ನನ್ನ ಗಂಡ ಮಕ್ಕಳೋಂದಿಗೆ ಹೊಟ್ಟೆ ಉಪ ಜಿವನಕ್ಕಾಗಿ 15 ವರ್ಷಗಳ ಹಿಂದೆ ಅಫಜಲಪೂರಕ್ಕೆ ಬಂದು ನನ್ನ ತವರು ಮನೆಯ ಪಕ್ಕದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇದ್ದಿರುತ್ತೇವೆ. ನನ್ನ ಗಂಡನು ಕುಡಿದು ಬಂದು ನನಗೆ ಹೊಡೆಯುತ್ತಿದ್ದರಿಂದ ನನಗೂ ನನ್ನ ಗಂಡನಿಗೂ ಜಗಳ ಆಗಿ ನನ್ನ ಗಂಡನು 3 ವರ್ಷಗಳಿಂದ ನನ್ನನ್ನು ಬಿಟ್ಟು ತಾಂಬಾದಲ್ಲಿಯೆ ಇದ್ದಿರುತ್ತಾನೆ. ನನ್ನ ಮಗಳಾದ ಭಾಗ್ಯಶ್ರೀ ಇವಳು ಮದುವೆಯಾಗುವುದಕ್ಕಿಂತ ಮುಂಚೆ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಅನೀಲ ತಂದೆ ವಿಠ್ಠಲ ಭಂಗಿ ಸಾ|| ಅಫಜಲಪೂರ ಈತನು ಚುಡಾಯಿಸುತ್ತಿದ್ದು, ಆಗಾಗ ತನ್ನ ಸ್ನೇಹಿತರಾದ, ಸಂಜೀವ ಹೇಗ್ಗಿ, ಮಲ್ಲು ಗೋಳೆದೋರ್, ಮಲ್ಲು ಇಂಗಳಗಿ,  ಪಚ್ಚು ಒಡೆಯರ್, ಬಸವರಾಜ ಕಂಡೋಳಿ ಇವರೊಂದಿಗೆ ಕೂಡಿ ನಮ್ಮ ಮನೆಯ ಮುಂದೆ ಹಾದು ಹೋಗುತ್ತಾ ನಮ್ಮ ಮನೆಯಲ್ಲಿ ಇಣುಕಿ ನೋಡುತ್ತಾ ಹೋಗಿ ಬರುವುದು ಮಾಡುತ್ತಿದ್ದನು. ಆಗ ನನ್ನ ತಮ್ಮಂದಿರು ಅನೀಲನನ್ನು ಬೈದು ಇನ್ನೊಮ್ಮೆ ನಮ್ಮ ಹುಡುಗಿಯ ತಂಟೆಗೆ ಬರಬೇಡಾ ಎಂದು ಹೇಳಿರುತ್ತಾರೆ. ಸದರಿ ಅನೀಲನಿಗೆ ನಮ್ಮ ಓಣಿಯ ಸಂಜೀವ ಹೇಗ್ಗಿ ಮತ್ತು ಮಲ್ಲು ಗುಳೆದ ಹಾಗೂ ಬಸವರಾಜ ಕಂಡೋಳಿ ಇವರು ಸಪೋರ್ಟ ಮಾಡುತ್ತಿದ್ದರು. ಮುಂದೆ ನನ್ನ ಮಗಳಾದ ಭಾಗ್ಯಶ್ರೀ ಇವಳನ್ನು ಸೋಲ್ಲಾಪೂರಕ್ಕೆ ಮದುವೆ ಮಾಡಿಕೊಟ್ಟಿರುತ್ತೇವೆ. ಸದ್ಯ ನನ್ನ ಮಗಳು ಭಾಗ್ಯಶ್ರೀ ಇವಳ ಹೇರಿಗೆಯಾಗಿದ್ದು ಒಂದು ತಿಂಗಳಿಂದ ನಮ್ಮ ಮನೆಯಲ್ಲಿಯೆ ಇದ್ದಿರುತ್ತಾಳೆ. ಸದರಿ ಅನೀಲನ ಗೆಳೆಯರಾದ ಸಂಜೀವ ತಂದೆ ಮಲ್ಲಪ್ಪ ಹೇಗ್ಗಿ ಹಾಗೂ ಬಸವರಾಜ ತಂದೆ ಶಾಮರಾಯ ಕಂಡೋಳಿ ಇವರ ಮನೆ ನಮ್ಮ ಮನೆಯ ಹತ್ತಿರವೆ ಇದ್ದು, ಇವರು ಸಹ ಬಾಳೆ ಕಾಯಿ ವ್ಯಾಪಾರ ಮಾಡುತ್ತಾರೆ. ಈಗ ಕೆಲವು ದಿನಗಳ ಹಿಂದೆ ಸದರಿ ಸಂಜೀವ ಮತ್ತು ಬಸವರಾಜ ಇಬ್ಬರು ಬಾಳೆಕಾಯಿಯ ಬಂಡಿ ಹಚ್ಚುವ ವಿಚಾರಕ್ಕೆ ನನ್ನೊಂದಿಗೆ ಜಗಳ ಮಾಡಿರುತ್ತಾರೆ. ಈಗ ಕೆಲವು ದಿನಗಳ ಹಿಂದೆ ನನ್ನ ಮಗಳು ಭಾಗ್ಯಶ್ರೀ ಹಾಗೂ ನನ್ನ ಮಗನಾದ ರಾಜಶೇಖರ ಇಬ್ಬರು ಕೂಡಿ ಬರ್ಹಿರದೇಸೆಗೆ ಹೋಗುತ್ತಿದ್ದಾಗ, ಈ ಹಿಂದೆ ನನ್ನ ಮಗಳಿಗೆ ಚುಡಾಯಿಸುತ್ತಿದ್ದ ಅನೀಲ ಭಂಗಿ ಈತನು ತನ್ನ ಗೆಳೆಯರಾದ ಪಚ್ಚು ಒಡೆಯರ್, ಮಲ್ಲು ಇಂಗಳಗಿ, ಮಲ್ಲು ಗುಳೇದ ಇವರೊಂದಿಗೆ ಬಂದು ನನ್ನ ಮಗಳನ್ನು ಚುಡಾಯಿಸಿದಾಗ ನನ್ನ ಮಗನು ನಮ್ಮ ಮಾವಂದಿರರಿಗೆ ಹೇಳುತ್ತೇನೆ ನೋಡು ಎಂದು ಬೈದಿರುತ್ತಾನೆ ಎಂದು ನನ್ನ ಮಗಳು ನನಗೆ ಹೇಳಿರುತ್ತಾಳೆ. ಇಂದು ದಿನಾಂಕ 30-06-2018 ರಂದು ನಾನು ಪ್ರತಿದಿನದಂತೆ ಬೆಳಿಗ್ಗೆಯಿಂದ ಅಫಜಲಪೂರದ ಬಸ್ ನಿಲ್ದಾಣದ ಮುಂದೆ ಬಾಳೆಕಾಯಿ ವ್ಯಾಪಾರ ಮಾಡುತ್ತಿರುತ್ತೇನೆ. ಮದ್ಯಾಹ್ನ 2:30 ಗಂಟೆಗೆ ನಾನು ಊಟಕ್ಕೆಂದು ನಮ್ಮ ಮನೆಗೆ ಹೋದಾಗ ನನ್ನ ಮಗ ಕಾಣಿಸಲಿಲ್ಲ, ಆಗ ನಾನು ಮನೆಯಲ್ಲಿದ್ದ ನನ್ನ ಹೆಣ್ಣು ಮಕ್ಕಳಿಗೆ ಕೇಳಿದಾಗ ಅವರು ಸಹ ಮನೆಗೆ ಬಂದಿಲ್ಲ ಎಂದು ತಿಳಿಸಿದರು. ನಾನು ನನ್ನ ಮಗನನ್ನು ಹುಡುಕಾಡುತ್ತಿದ್ದಾಗ ನನ್ನ ತಂಗಿಯಾದ ಸುವರ್ಣಾ ಇವಳು ರಾಜಶೇಖರನನ್ನು ಸಂಜೀವ ಹೇಗ್ಗಿ ಮತ್ತು ಮಲ್ಲು ಗುಳೇದ ಇವರು ಮೋಟರ ಸೈಕಲ ಮೇಲೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದಳು. ಮೊದಲೆ ಅವನು ನಮ್ಮ ಜಗಳ ಮಾಡುತ್ತಿದ್ದನು, ಈಗ ನನ್ನ ಮಗನನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಗಾಬರಿಯಾಗಿ ನಾನು ಮತ್ತು ನನ್ನ ತಮ್ಮಂದಿರಾದ ಲಕ್ಷ್ಮೀಪುತ್ರ ಮತ್ತು ವಿಜಯಕುಮಾರ ಮೂರು ಜನರು ಕೂಡಿ ನನ್ನ ಮಗನನ್ನು ಎಲ್ಲಾ ಕಡೆ ಹುಡುಕಾಡುತ್ತಾ ಬಸ್ ನಿಲ್ದಾಣದ ಹತ್ತಿರ ಇದ್ದಾಗ. ಸಾಯಂಕಾಲ 4:00 ಗಂಟೆ ಸುಮಾರಿಗೆ ಸಂಜೀವ ಹೇಗ್ಗಿ ಈತನು ನನ್ನ ಹತ್ತಿರ ಬಂದು ನಿನ್ನ ಮಗ ರಾಜಶೇಖರ ಎಲ್ಲಿದ್ದಾನ ಎಂದು ಕೇಳಿದನು, ನಾನು ನೀನೆ ಕರೆದುಕೊಂಡು ಹೋಗಿದಿ ಎಂದು ಹೇಳ್ಯಾರ ನನ್ನ ಮಗ ಎಲ್ಲಿ ಎಂದು ಕೇಳಿದೆನು. ಆಗ ಸಂಜೀವನು ಬಾಯಿ ತಡವರಿಸುತ್ತಾ ನನಗ ಗೋತ್ತಿಲ್ಲ ಕೇರೆಯ ಹತ್ತಿರ ಯಾವುದೊ ಒಂದು ಹುಡುಗನನ್ನು ಮರ್ಡರ ಮಾಡ್ಯಾರ ಅಂತಾ ಹೇಳಾಕತ್ತಾರ ನಾನು ಹೋಗಿ ನೋಡಿ ಬಂದಿನಿ ನಿನ್ನ ಮಗ ರಾಜಶೇಖರನ ತರಾನೆ ಕಂಡಾನ ನೋಡೊಣೊ ನಡಿ ಎಂದು ಹೇಳಿದನು. ಆಗ ನಾನು ಗಾಬರಿಯಾಗಿ ಅವನ ಮೋಟರ ಸೈಕಲ ಮೇಲೆ ಕೆರೆಯ ಹತ್ತಿರ ಹೋಗಿ ನೋಡಲಾಗಿ ನನ್ನ ಮಗನಿಗೆ ಯಾವುದೊ ಒಂದು ಹರಿತವಾದ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದರು.  ಈಗ ಕೆಲವು ದಿನಗಳ ಹಿಂದೆ ನನ್ನ ಮಗಳಾದ ಭಾಗ್ಯಶ್ರೀ ಮತ್ತು ನನ್ನ ಮಗ ರಾಜಶೇಖರ ಇಬ್ಬರು ಬರ್ಹಿರದೇಸೆಗೆ ಹೋಗುತ್ತಿದ್ದಾಗ ಅನೀಲ ತಂದೆ ವಿಠ್ಠಲ ಭಂಗಿ ಈತನು ತನ್ನ ಗೆಳೆಯರಾದ ಪಚ್ಚು ಒಡೆಯರ್, ಮಲ್ಲು ಇಂಗಳಗಿ, ಮಲ್ಲು ಗುಳೇದ ಇವರೊಂದಿಗೆ ಬಂದು ನನ್ನ ಮಗಳನ್ನು ಚುಡಾಯಿಸಿದಾಗ ನನ್ನ ಮಗ ರಾಜಶೇಖರನು ನಮ್ಮ ಮಾವಂದಿರರಿಗೆ ಹೇಳುತ್ತೇನೆ ನೋಡು ಎಂದು ಬೈದಿರುತ್ತಾನೆ. ನನ್ನ ಜೋತೆಗೆ ಈ ಹಿಂದೆ ಬಾಳಿಕಾಯಿ ಬಂಡಿ ಹಚ್ಚುವ ವಿಚಾರಕ್ಕೆ ಜಗಳ ಮಾಡಿದ ಸಂಜೀವ ಹೇಗ್ಗಿ, ಬಸವರಾಜ ಕಂಡೋಳಿ ಇವರೆಲ್ಲರೂ ಮತ್ತು ಇನ್ನು ಕೆಲವು ಜನರು ಕೂಡಿ ನನ್ನ ಮೇಲೆ ಹಾಗೂ ನನ್ನ ಮಗನ ಮೇಲೆ ದ್ವೇಷ ಮಾಡಿಕೊಂಡು ನನ್ನ ಮಗನನ್ನು ಮೋಟರ ಸೈಕಲ ಮೇಲೆ ಕರೆದುಕೊಂಡು ಹೋಗಿ ಅಫಜಲಪೂರದ ಕೆರೆಯ ಪಕ್ಕದಲ್ಲಿ ನನ್ನ ಮಗನ ತಲೆಗೆ ಹರಿತವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಕಾರಣ ನನ್ನ ಮಗನನ್ನು ಕೊಲೆ ಮಾಡಿದ 1) ಅನೀಲ ತಂದೆ ವಿಠ್ಠಲ ಭಂಗಿ 2) ಸಂಜೀವ ತಂದೆ ಮಲ್ಲಪ್ಪ ಹೇಗ್ಗಿ 3) ಮಲ್ಲು ತಂದೆ ವಿಠ್ಠಲ ಇಂಗಳಗಿ 4) ಪಚ್ಚು ತಂದೆ ಶರಣಪ್ಪ ಒಡೆಯರ 5) ಮಲ್ಲು @ ಮಲ್ಲಿನಾಥ ತಂದೆ ಶಿವಾನಂದ ಗುಳೆದ (ಮಾಶಾಳ) 6) ಬಸವರಾಜ ತಂದೆ ಶಾಮರಾಯ ಕಂಡೋಳಿ ಸಾ|| ಎಲ್ಲರೂ ಅಫಜಲಪೂರ ಇನ್ನು ಕೆಲವು ಜನರ ಮೇಲೆ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸಂಜುಕುಮಾರ ತಂದೆ ಶರಣಪ್ಪಾ ಹೆಗ್ಗೆ ಸಾ:ಮಹಾಲ್ದಾರ ಗಲ್ಲಿ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ 30/06/2018 ರಂದು ನಮ್ಮ ಓಣಿಯ ವಿರಯ್ಯಾ ಹಿರೇಮಠ ಇವರು ಪೋನ ಮಾಡಿ ನಮ್ಮ ತಂದೆ ಶರಣಪ್ಪಾ ತಂದೆ ಮನೋಹರ ಹೆಗ್ಗೆ ಸಾ:ಮಹಾಲ್ದಾರ ಗಲ್ಲಿ ಬ್ರಹ್ಮಪೂರ ಕಲಬುರಗಿ ಇವರು ಮನೆಯಲ್ಲಿ ಉರಳು ಹಾಕಿಕೊಂಡಿದ್ದಾನೆ ಅಂತಾ ತಿಳಿಸಿದರು ನಾನು ಕೂಡಲೇ ಇಳಕಲದಿಂದ ಬಂದು ನೋಡಲಾಗಿ ನಮ್ಮ ತಂದೆ ನಮ್ಮ ಮನೆಯ ಎದರು ಕೋಣೆಯ ಫ್ಯಾನಿಗೆ ಪ್ಲಾಸ್ಟೀಕ ಹಗ್ಗದಿಂದ ಉರಳು ಹಾಕಿಕೊಂಡು ಮೃತ ಪಟ್ಟಿದ್ದು ನೋಡಿದೆ ನಮ್ಮ ತಂದೆಯವರು ಮನೆಯ ಅಡಚಣೆಗಾಗಿ ಕೈಗಡ ಸಾಲ ಮಾಡಿದ್ದು ಹೇಗೆ ತಿರಿಸುವದು ಅಂತಾ ನೊಂದುಕೊಂಡಿದ್ದು ಹಾಗೂ ಪತ್ನಿ ತೀರಿಕೊಂಡಿದ್ದಾಳೆ ಬೇರೆ ಹೆಣ್ಣುಮಕ್ಕಳ ಜೊತೆ ಮಾತನಾಡಿದರೆ ಜನ ಬೇರೆ ಸಂಬಂಧ ಕಲ್ಪಿಸುತ್ತಾರೆ ಅಂತಾ ಆಗಾಗ ನಮ್ಮ ತಂದೆ ನನ್ನ ಮುಂದೆ ಹೇಳುತ್ತಿದ್ದರು ಅದಕ್ಕೆ ನಾನು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡ ಸಾಲ ನಾವು ದುಡಿದು ತಿರಿಸುತ್ತೇವೆ ಅಂತಾ ಧೈರ್ಯ ಹೇಳುತ್ತಾ ಬಂದಿದ್ದೇನೆ. ಕಾರಣ ನನ್ನ ತಂದೆಯಾದ ಶರಣಪ್ಪಾ ಇವರು ಸಾಲ ತಿರಿಸುವ ಚಿಂತೆಯಿಂದ ಮನನೊಂದು 29/06/2018 ರಂದು ರಾತ್ರಿ 11.00 ಪಿ.ಎಂ ದಿಂದ ದಿ:30/06/2018 ರಂದು 6.00 ಎಂ.ಎಂ ನಡುವಿನ ಅವಧಿಯಲ್ಲಿ ಮನೆ ಫ್ಯಾನಗೆ ಪ್ಲಾಸ್ಟೀಕ ಹಗ್ಗದಿಂದ ಉರಳು ಹಾಕಿಕೊಂಡು ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ  : ಶ್ರೀ ಸಂದೀಪ ತಂದೆ ಕೃಷ್ಣಾಜಿ ಕುಲಕರ್ಣಿ  ಉ:ಆಕ್ಷಿಸ್ ಬ್ಯಾಂಕ ಎ.ಟಿ.ಎಮ್ ಸೂಪರವೈಜರ್ ಕೆಲಸ ಮು:ವಿಧ್ಯಾನಗರ ಚೆತನಾ ಕಾಲೂನಿ ಹತ್ತೀರ ಮನೆ. ನಂ.135 ಮಿತ್ರಾವಿಶಾಲ ಪಾರ್ಕ ಹುಬ್ಬಳಿ ಜಿ:ಧಾರವಾಡ ಇವರು ಬಿಜಾಪೂರ, ಬಾಗಲಕೋಟ ಕಲಬುರಗಿ ಹಾಗೂ ಬೀದರ ಜಿಲ್ಲೆಗಳಲ್ಲಿ ಆಕ್ಷಿಸ್ ಬ್ಯಾಂಕನವರು ಅಳವಡಿಸಿದ 34 ಎ.ಟಿ.ಎಮ್ ಗಳ ಮೇಲೆ ನಾನು ಸೂಪವೈಜಿಂಗ ಕೆಲಸ ಮಾಡಿಕೊಂಡಿದ್ದು ಇರುತ್ತದೆ. ಅದರಂತೆ  ಕಲಬುರಗಿ ಜಿಲ್ಲೆಯ ಕಮಲಾಪೂರ ಗ್ರಾಮದ ಹೆದ್ದಾರಿ ಬಾಜು ಇರುವ ಗುರು ಮಾಟೂರ ಇವರ ಕಾಂಪ್ಲೆಕ್ಷನ ಕೆಳಮಹಡಿಯಲ್ಲಿ ಕೂಡಾ ನಮ್ಮ ಆಕ್ಷಿಸ್ ಬ್ಯಾಂಕನಿಂದ ಗ್ರಾಹಕರಿಗೆ ಸರಳವಾಗಿ ವ್ಯವಹಾರ ಮಾಡಲು ಎ.ಟಿ.ಎಮ್ ಐಡಿ ನಂ.swcw34219 ನೇದ್ದನ್ನು ಅಳವಡಿಸಿದ್ದು ಸದರಿ ಎ.ಟಿ.ಮ್ ನಲ್ಲಿ ಸೆಕ್ಯುರವ್ಯಾಲಿ ಕಂಪನಿಯವರು ಎ.ಟಿ.ಎಮ್ ಗಳಲ್ಲಿ ಹಣ ಖಾಲಿ ಆದಾಗ ಕ್ಯಾಶ ಲೊಡಿಂಗ ಮಾಡುತ್ತಿರುತ್ತಾರೆ. ಅದರಂತೆ ನಿನ್ನೆ ದಿನಾಂಕ:28-06-2018 ರಂದು ಮದ್ಯಾಹ್ನದ ವೇಳೆಯಲ್ಲಿ ನಾನು ಹುಬ್ಬಳ್ಳಿಯ ನನ್ನ ಮನೆಯಲ್ಲಿದ್ದಾಗ ಎ.ಜಿ.ಎಸ್ ಕಂಪನಿಯ ಸಂತೋಷ ಹಿರೆಮನಿ ಇವರು ನನಗೆ ಫೋನ ಮಾಡಿ ಕಲಬುರಗಿ ಜಿಲ್ಲೆಯ ಕಮಲಾಪೂರ ಗ್ರಾಮದ ಗುರು ಮಾಟೂರ ಇವರ ಕಾಂಪ್ಲೆಕ್ಷನ ಕೆಳ ಮಹಡಿಯ ಶಟರ ಅಂಗಡಿಯಲ್ಲಿ ಆಕ್ಷಿಸ್ ಬ್ಯಾಂಕ ಎ.ಎಟಿ.ಮ್ ಕಳ್ಳತನವಾಗಿರುತ್ತದೆ ಅಂತಾ ತಮಗೆ ಕ್ಯಾಶ ಲೊಡಿಂಗನ ಸಿಬ್ಬಂಧಿಯವರು ಇಂದು ಮದ್ಯಾಹ್ನ 01.00 ಗಂಟೆಯ ಸೂಮಾರಿಗೆ ನನಗೆ ತಿಳಿಸಿರುತ್ತಾರೆ. ನೀವು ಹೋಗಿ ವಿಚಾರಣೆ ಮಾಡಿರಿ ಅಂತಾ ನನಗೆ ಹೇಳಿದ್ದು. ನಂತರ ನಾನು ಸದರಿ ವಿಷಯವನ್ನು ನಮ್ಮ ಕಂಪನಿಯ ಸಂದೀಲ ಇವರಿಗೆ ತಿಳಿಸಿ ಇಂದು ದಿನಾಂಕ:29-06-2018 ರಂದು ಮುಂಜಾನೆ 09.30 ಗಂಟೆಯ ಸೂಮಾರಿಗೆ ಕಮಲಾಪೂರ ಗ್ರಾಮದ ಗುರು ಮಾಟೂರ ಕಾಂಪ್ಲೆಕ್ಷನಲ್ಲಿನ ಆಕ್ಷಿಸ್ ಬ್ಯಾಂಕನ ಎ.ಟಿ.ಎಮನ ಶೆಟರ ಅಂಗಡಿಗೆ ಬಂದು ನೋಡಲು ಯಾರೋ ಕಳ್ಳರು ಎ.ಟಿ.ಎಮ್ ಇರುವ ಶೆಟರ ಅಂಗಡಿಯ ಒಳಗಡೆ ಹೋಗಿ ಮಶಿನನ್ನು ಪೂರ್ತಿಯಾಗಿ ಗ್ಯಾಸ ಕಟರನಿಂದ ಕತ್ತರಿಸಿದ್ದು. ಮಿಷಿನದ ಒಳಗಡೆ ಹಣ ಇರಲಿಲ್ಲ. ನಂತರ ಸದರಿ ಎ.ಟಿ.ಎಮ್ ಇರುವ ಬ್ಯಾಕ ರೂಮನಲ್ಲಿ ಹೊಗಿ ನೋಡಲು ಎ.ಎಟಿ.ಎಮ್ ಗೆ ಅಳವಡಿಸಿದ್ದ ಡಿ.ವಿ.ಆರ್ ನ ಕನಕ್ಷನ ಕೂಡಾ ಕತ್ತರಿಸಿ ಹಾಕಿದ್ದು ಕಂಡು ಬಂದಿರುತ್ತದೆ. ನಂತರ ನಾನು ನಮ್ಮ ದಾಖಲಾತಿಗಳ ಪ್ರಕಾರ ಪರಿಶಿಲಿಸಿ ನೋಡಲು ಸದರಿ ಎ.ಟಿ.ಎಮ್ ನಿಂದ ಕೋನೆಯದಾಗಿ ದಿನಾಂಕ:28-06-2018 ರಂದು ಮಧ್ಯ ರಾತ್ರಿ 12.40 ಎ.ಎಮ್ ಕ್ಕೆ ಎ.ಟಿ.ಎಮ್ ನಿಂದ ಕೋನೆಯದಾಗಿ ಯಾರೋ ಗ್ರಾಹಕರು ಹಣವನ್ನು ಡ್ರಾ ಮಾಡಿಕೊಂಡಿರುವ ಬಗ್ಗೆ ನನಗೆ ಗೋತ್ತಾಗಿರುತ್ತದೆ. ಸದರಿ ಎಟಿ.ಎಮ್ ನಲ್ಲಿ ಇನ್ನೂ ಬಾಕಿ 6,12,800 ರೂಪಾಯಿಗಳ ಬಾಕಿ ಹಣ ಉಳಿದಿದ್ದು ಇರುತ್ತದೆ. ನಂತರ ನಾನು ಸದರಿ ಕಾಂಪ್ಲೆಕ್ಷನ ಮಾಲಿಕರಾದ ಗುರು ಮಾಟೂರ ಇವರಿಗೆ ವಿಚಾರ ಮಾಡಲು ನಮ್ಮ ಬ್ಯಾಂಕನ ಎ.ಟಿ.ಎಮ್ ನ ಮೇಲಗಡೆ ಶಟರ ಅಂಗಡಿಯಲ್ಲಿರುವ ಮನಿ ಸ್ಪಾಟ್ ಹಿಟಾಚಿ ಪೆಮೆಂಟ ಸರ್ವಿಸಸ್ ಮುಂಬೈ ರವರ ಎ.ಟಿ.ಎಮ್ ಮಷಿನ ಇರುವ ಶೆಟರ ಅಂಗಡಿಯಲ್ಲಿ ಹೋಗಿ ಅದನ್ನು ಕೂಡಾ ಒಡೆದು ಕಳ್ಳತನ ಮಾಡುವ ಸಂಭಂಧ ಮಷಿನ ಸ್ವಲ್ಪ ಡ್ಯಾಮಜ ಮಾಡಿದ್ದು. ಆದರೆ ಯಾವುದೇ ಹಣ ಕಳ್ಳತನವಾಗಿರುವುದಿಲ್ಲ ಅಂತಾ ತಿಳಿಸಿದ್ದು ಇರುತ್ತದೆ. ಯಾರೋ ಕಳ್ಳರು ದಿನಾಂಕ:28-06-2018 ರಂದು ಮಧ್ಯ ರಾತ್ರಿ 12-40 ನಿಮಿಷದಿಂದ ನಿನ್ನೆ ಮುಂಜಾನೆ 05-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಎ.ಟಿ.ಎಮ್ ಮಷಿನ ಇರುವ ಶೆಟರ ಅಂಗಡಿಯ ಒಳಗೆ ಹೋಗಿ ಗ್ಯಾಸ್ ಕಟರನಿಂದ ಮಷಿನ್ ಕತ್ತರಿಸಿ ಅದರಲ್ಲಿದ್ದ 6,12,800 ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.