POLICE BHAVAN KALABURAGI

POLICE BHAVAN KALABURAGI

07 November 2014

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 06-11-2014 ರಂದು ವಿಶ್ವವಿದ್ಯಾಲಯ ಪೊಲೀಸ ಠಾಣೆಯ ಹದ್ದಿಯ ಕಲಬುರಗಿ-ಸೇಡಂ ಮುಖ್ಯ ರಸ್ತೆಯ ದೇವು ಬಾದಾ ಹಿಂದುಗಡೆ ಒಂದು ಖುಲ್ಲಾ ಹೊಲದ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಶ್ರೀ. ಹಸೇನ ಬಾಷಾ ಪಿ.ಎಸ್.ಐ (ಕಾ.ಸು) ವಿಶ್ವವಿದ್ಯಾಲಯ ಪೊಲೀಸ ಠಾಣೆ  ಹಾಗು ಸಿಬ್ಬಂದಿಯವರಾದ ನಾಗಭೂಷಣ ಎ.ಎಸ್.ಐ, ಅಶೋಕ ಸಿ.ಪಿ.ಸಿ 551, ಮಲ್ಲಿಕಾರ್ಜುನ ಸಿ.ಪಿ.ಸಿ 288, ಅಣ್ಣಪ್ಪ ಹೆಚ್.ಸಿ 253, ಮಲ್ಲಿಕಾರ್ಜುನ ಸಿ.ಪಿ.ಸಿ 825, ಸಂತೋಷ ಸಿ.ಪಿ.ಸಿ 935, ರವರನ್ನು ಹಾಗೂ ಪಂಚರನ್ನು ಕರೆದುಕೊಂಡು ಹೋಗಿ ದಾಳಿ ಮಾಡಿ 1) ನಂದ ಕುಮಾರ ತಂದೆ ಸಿದ್ದಣ್ಣ ನಾಯಿಕೋಡಿ, 2) ಪ್ರವೀಣ ತಂದೆ ನಂದು ರಾಠೊಡ, 3) ಸಂಜು ತಂದೆ ಗೋಪಾಲ ರಾಠೋಡ, 4) ಹಣಮಂತ ತಂದೆ ರಾಮಣ್ಣ ದೊಡ್ಡಮನಿ, ಸಾ|| ಎಲ್ಲರು ಕಾಳನುರ ಅವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ಹತ್ತಿರ ಒಟ್ಟು 9130/- ರೂಪಾಯಿ ಹಾಗೂ 52 ಇಸ್ಪೇಟ ಎಲ್ಲೆಗಳು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ವಿಶ್ವವಿದ್ಯಾಲಯ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಮಾದನ ಹಿಪ್ಪರಗಾ ಠಾಣೆ : ಶ್ರೀ.ದೇವೆಂದ್ರ ತಂದೆ ಮಾಣಿಕ ಕ್ಷತ್ರಿ ಸಾ: ಸರಸಂಬಾ ರವರು  ದಿನಾಂಕ: 05/11/2014 ರಂದು ನಾನು ಕೆಲಸಕ್ಕೆ ಹೋದಾಗ ನನ್ನ ತಂದೆಯಾದ ಮಾಣಿಕ ತಂದೆ ರಾಮಚಂದ್ರ ಕ್ಷತ್ರಿ ಯವರು ಮಹಾರಾಷ್ಟ್ರದ ವಾಗದರಿಗೆ ಹೋಗಿ ಕೈ ಬಟ್ಟಿ ಸಿಂದಿ ಕುಡಿದು ಮರಳಿ ಊರಿಗೆ ಬಂದು ಅದೇ ಅಮಲಿನಲ್ಲಿ ಸಾಯಂಕಾಲ 05:30 ಗಂಟೆ ಸುಮಾರಿಗೆ ಯಾವುದೋ ಕ್ರಿಮಿನಾಶಕ (ವಿಷ) ಸೇವನೆ ಮಾಡಿ ಅಂಗಳದಲ್ಲಿಯ ವರಸಿನ ಮೇಲೆ ಒದ್ದಾಡುತ್ತಿದ್ದಾಗ ನನ್ನ ಚಿಕ್ಕಪ್ಪ ಮಲ್ಲಿನಾಥ ತಂದೆ ವಿಠ್ಠಲ ಕ್ಷತ್ರಿ ಇವರು ನನ್ನ ತಂದೆಗೆ ಚಿಕಿತ್ಸೆಗಾಗಿ ವಾಗದರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿ ಅಲ್ಲಿ ಗುಣಮುಖವಾಗದ ಕಾರಣ ವೈದ್ಯರ ಸಲಹೆಯಂತೆ ಆಳಂದ ಸರ್ಕಾರಿ ಆಸ್ಪತ್ರೆಗೆ ತಂದಿದ್ದು ಅಲ್ಲಿ ಕೂಡ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ತಗೆದುಕೊಂಡು ಹೋಗಬೇಕು ಅಂತಾ ಹೇಳಿದಕ್ಕೆ ಇಂದು ದಿನಾಂಕ:06/11/2014 ರಂದು ರಾತ್ರಿ 01:30 ಎ.ಎಂ.ಕ್ಕೆ ಚಿಕಿತ್ಸೆಗಾಗಿ ಸರಕಾರಿ ದವಾಖಾನೆ ಕಲಬುರಗಿಗೆ  ದಾಖಲು ಮಾಡಿದ್ದು ನನ್ನ ತಂದೆಗೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 02:30 ಎ.ಎಂ.ಕ್ಕೆ ಮರಣ ಹೊಂದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ರಮೇಶ ತಂದೆ ಸೋಮಲು ರಾಠೋಡ ಸಾ||ಹೀರೂ ನಾಯ್ಕ ತಾಂಡಾ ರವರು   ಗೌರ (ಬಿ) ಸಿಮಾಂತರದಲ್ಲಿ  ಫೀರ್ಯಾದಿ ಹೊಲ ಇದ್ದು ನಿನ್ನೆ ದಿನಾಂಕ 05/11/2014 ರಂದು 4 .00 ಪಿಎಮ್  ಸುಮಾರಿಗೆ ತನ್ನ ಹೊಲದಲ್ಲಿ ಕೆಲಸ ಮಾಡುತಿದ್ದಾಗ ಬಾಳು ರಾಠೋಡ ರವರ ಹೊಲದಲ್ಲಿ ಪೈಪುಗಳು ಕಂಡವು ಸದರಿ ಪೈಪುಗಳು ಫೀರ್ಯಾದಿದಾರನು ತನ್ನದೆಂದು ತಿಳಿದು ಕೇಳುತಿದ್ದಾಗ ಬಾಳು ಇತನು ಅವಾಚ್ಯವಾಗಿ ಬೈದು ತನ್ನ ಕೈಯಲಿದ್ದ ಬಾರಕೋಲ ಗುಣಿಯಿಂದ ಫಿರ್ಯಾದಿ ಎಡಗಣ್ಣಿನ ಮೇಲೆ ಹೊಡೆದನು ಮತ್ತು ಬಾಳು ಇತನ ಹೆಂಡತಿ ಮತ್ತು ಮಗ ಮೂರು ಜನ ಕುಡಿ ಫೀರ್ಯಾದಿಗೆ ಕಾಲಿನಿಂದ ಕೈಯಿಂದ ಹೊಡೆದಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.