POLICE BHAVAN KALABURAGI

POLICE BHAVAN KALABURAGI

30 December 2014

Kalaburagi District Reported Crimes

ಅಪ್ರಾಪ್ತಳ ಮೇಲೆ ಬಲತ್ಕಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ದಿನಾಂಕ: 29.12.2014 ರಂದು ಬನಸಿಲಾಲ ಇವನು ಕುಮಾರಿ 5 ವರ್ಷ ಇವಳು ಆಟವಾಡುತ್ತಿದ್ದಾಗ ಬಾಪು ನಗರದ ಬನಸಿಲಾಲ  ಇವನು ನನ್ನ ಮಗಳಿಗೆ ಒಳಗಡೆ ಕರೆದುಕೊಂಡು ಹೋಗಿ ಅವಳ ಮೈಮೇಲಿನ ಬಟ್ಟೆ ಬಿಚ್ಚಿ ಜಬರಿ ಸಂಬೋಗ ಮಾಡುವಾಗ ನನ್ನ ಮಗಳು ಚೀರಾಡುವುದನ್ನು ಕೇಳಿ ನನ್ನ ತಂಗಿ ಬನಸಿಲಾಲನ ರೂಮಿಗೆ ಹೋಗಿ ನನ್ನ ಮಗಳನ್ನು ಕಸಿದುಕೊಂಡಿದ್ದು ಅಸ್ಟರಲ್ಲಿ ಅಕ್ಕ ಪಕ್ಕದ ಜನರು ಕೂಡಿ ಬೈದು ಹೊಡೆಯುವಾಗ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಆರೋಪಿತರ ಬಂಧನ :
ಚೌಕ ಠಾಣೆ : ಭವಾನಿ ನಗರದಲ್ಲಿ ಕಾಶಿ @ ಕಾಶಿನಾಥ ತಂ ಮಲ್ಲೇಶಿ ಜಮಾದಾರ ಸಾಃ ಶಿವಾಜಿ ನಗರ ಕಲಬುರಗಿ ಇತನಿಗೆ ಮಾಕಾಸ್ತ್ರಗಳಿಂದ  ಹೊಡೆದು ಕೊಲೆ ಮಾಡಿದ್ದು ಈ ಬಗ್ಗೆ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದ ಆರೋಪಿತರ ಪತ್ತೆ ಕುರಿತು ಮಾನ್ಯ ಎಸ್.ಪಿ ಸಾಹೇಬರು, ಮಾನ್ಯ ಅಪರ ಎಸ್.ಪಿ ಸಾಹೇಬರು, ಮಾನ್ಯ ಡಿ.ಎಸ್.ಪಿ ಸಾಹೇಬರು (ಬಿ) ಉಪವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀ ಉಮಾಶಂಕರ ಬಿ. ಪಿ.ಐ ಚೌಕ ಪೊಲೀಸ್ ಠಾಣೆ, ಪ್ರದೀಪಕೊಳ್ಳಾ ಪಿ.ಎಸ್.ಐ(ಕಾಸು), ಹಾಗು ಸಿಬ್ಬಂದಿಯವರು  ಆರೋಪಿತರು ಕೋಟನುರ ಮಠದಲ್ಲಿರುವ ಬಗ್ಗೆ ಖಚಿತವಾದ ಬಾತ್ಮಿಯ ಮೇರೆಗೆ 1) ಮಲ್ಲು @ ಕೆಕೆ ನಗರ ಮಲ್ಲು @ ಮಲ್ಲಿಕಾರ್ಜುನ ತಂ ಬೀಮಶ್ಯಾ ವೀರನ್ ಸಾಃ ಕೆಕೆ ನಗರ ಕಲಬುರಗಿ  2) ಸಂದೀಪ ತಂ ನಾರಾಯಣ ಚವ್ಹಾಣ ಸಾಃ ರಾಮನಗರ ಲಕ್ಷ್ಮಿ ಗುಡಿಯ ಹತ್ತಿರ ಕಲಬುರಗಿ 3) ಗೌಸ @ ಮಹ್ಮದ ಗೌಸ ತಂದೆ ರಾಜಭಾಯಿ ಮುಲ್ಲಾ  ಸಾಃ ರಾಮನಗರ ಕಲಬುರಗಿ 4) ಪ್ರಭುಲಿಂಗ @ ಪ್ರಭುಲಿಂಗಯ್ಯ ತಂ ರಾಚಯ್ಯ ಸ್ವಾಮಿ ಹಿರೇಮಠ ಸಾಃ ಸುವರ್ಣ ನಗರ ಶಹಾಬಜಾರ ಕಲಬುರಗಿ  ರವರನ್ನು ದಸ್ತಗೀರ ಮಾಡಿಕೊಂಡು ಸದರಿಯವನ್ನು ನ್ಯಾಯಾಂಗ ಬಂಧನ ಕುರಿತು ಕಳುಹಿಸಿ ಕೊಡಲಾಗಿದೆ.
ಅಪಘಾತ ಪ್ರಕರಣ :
ವಾಡಿ ಠಾಣೆ : ದಿನಾಂಕ 29-12-2014 ರಂದು ಮದ್ಯಾಹ್ನ ಮೃತ ಸಂತೋಷ ತಂದೆ ಬಾಬು ಪವಾರ ಈತನು ಮೊಟರ ಸೈಕಲ ನಂ ಕೆಎ-32 ಎಸ್-1558 ನೆದ್ದನ್ನು ತೆಗೆದುಕೊಂಡು ಬಸಪ್ಪಾಗುಡಿಯ ತನ್ನ ಮನೆಯಿಂದ ಬಜಾರಕ್ಕೆ ಬರುವ ಕಾಲಕ್ಕೆ ಓವರ ಬ್ರಿಜ್ ದಾಟಿ ರೋಡಿಗೆ ಹೊರಟಾಗ ಎದುರುಗಡೆಯಿಂದ ವಾಡಿ ಕಡೆಯಿಂದ ಮ್ಯಾಕ್ಸಿಕ್ಯಾಬ ನಂ ಕೆಎ-39 1406 ನೆದ್ದರ ಚಾಲಕ ಅತಿವೇಗ ಹಾಗು ಅಲಕ್ಷತನದಿಂದ ಓಡಿಸಿಕೊಂಡು ಬಂದು ಮೋಟರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಮೊಟರ ಸೈಕಲ ಸಮೇತ ಕೇಳಗಡೆ ಬಿದ್ದ ಪರಿಣಾಮ ತಲೆಯ ಮದ್ಯಭಾಗ ಒಡೆದು ಭಾರಿ ರಕ್ತಗಾಯವಾಗಿದ್ದು ಅಲ್ಲದೆ ಮುಖಕ್ಕೆ ರಕ್ತಗಾಯವಾಗಿ ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಕಾಲಕ್ಕೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಮನೋಹರ ತಂದೆ ಬಾಬು ಪವಾರ ಸಾ : ಬಸಪ್ಪ ಗುಡಿ ಹತ್ತಿರ ವಾಡಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 29-12-2014 ರಂದು ಶ್ರೀಮತಿ ಕಲ್ಲಮ್ಮಾ ಗಂಡ ಶ್ರೀಮಂತ ಬಡಿಗೇರ ಸಾ ಘತ್ತರಗಾ ತಾ : ಅಫಜಲಪೂರ  ರವರು ಊರಿನ ಗಡ್ಡಿ ಲಕ್ಷ್ಮೀ ಗುಡಿಯ ಕಡೆಗೆ ಹೋಗುತ್ತಿದ್ದಾಗ ಸುಬಾಷ ಕಂಬಾರ ಇವರ ಮನೆಯ ಹತ್ತಿರ ಹೋದಾಗ ಸುಬಾಷ ಕಂಬಾರ, ಭಾಗಮ್ಮ ಕಂಬಾರ ಹಾಗೂ ಅವಳ ಸೋಸೆ ಶ್ರೀಧೇವಿ, ಇವರು ನಿಂತಿದ್ದು, ಇವರು ನನ್ನನ್ನು ನೋಡಿ ಗಂಡ ಅದರಲ್ಲಿ ಭಾಗಮ್ಮ ಇವಳು ನನ್ನ ಸೋಸೆ ಶ್ರೀಧೇವಿಗೆ ಯಾರು ಕೈ ಹಿಡಿದು ಏಳೆದಿದ್ದಾರೆ ನನ್ನ ಸೋಸೆ ಬಗ್ಗೆ ಜನರ ಮುಂದೆ ಏನು ಹೇಳುತ್ತಾ ತಿರುಗಾಡುತ್ತಿದ್ದಿ, ಅಂತಾ ನನ್ನ ಕೈ ಹಿಡಿದು ಏಳೆದುಕೊಂಡು ನನ್ನ ಸೀರೆ ಏಳೆದು ಅವರ ಮನೆಯ ಮುಂದೆ ಇದ್ದ ಬೇವಿನ ಗಿಡಕ್ಕೆ ನನಗೆ ಹಗ್ಗದಿಂದ ಕಟ್ಟಿದರು, ಆಗ ಭಾಗಮ್ಮ ಇವಳು ಚಪ್ಪಲಿಯಿಂದ ನನ್ನ ಮುಖಕ್ಕೆ ಹೊಡೆದು ಏನೆ ರಂಡಿ ನನ್ನ ಸೋಸೆಯ ಬಗ್ಗೆ ಜನರ ಹತ್ತಿರ ಏನು ಹೇಳುತ್ತಾ ತಿರುಗಾಡುತ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಸುಭಾಷ ಮತ್ತು ಅವನ ಮಗ ಭೀಮಣ್ಣ ಹಾಗೂ ಸಿದ್ದಣ್ಣ ಇವರುಗಳು ರಂಡಿಗೆ ಬಿಡಬ್ಯಾಡಿರಿ ಅಂತಾ ಮೂರು ಜನರ ಕಾಲಿನಿಂದ ಒದೆಯುವುದು ಕೈಯಿಂದ ಹೊಡೆಯುವುದು ಮಾಡಿದರು, ಹಾಗೂ ಶ್ರೀಧೇವಿ ಇವಳು ರಂಡಿ ನನ್ನ ಬಗ್ಗೆನೆ ಕೆಟ್ಟದಾಗಿ ಮಾತಾಡುತ್ತಿ ಅಂತಾ ನನಗೆ ಅಲ್ಲಿಯೆ ಬಿದ್ದ ಒಂದು ಬಡಿಗೆಯಿಂದ ನನ್ನ ಮೈ ಕೈಗೆ ಹೊಡೆದಳು. ಎಲ್ಲರು ನನಗೆ ಕೆಟ್ಟ ಶಬ್ದಗಳಿಂದ ಹೊಲಸು ಹೊಲಸು ಬೈಯುತ್ತಾ ಹೊಡೆದು ಅವಮಾನ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಸುಭಾಷ ತಂದೆ ಯಶವಂತ ಕಂಬಾರ ಸಾ|| ಬಗಲೂರ ಹಾ|| || ಘತ್ತರಗಾ ಇವರು ದಿನಾಂಕ 29-12-2014 ರಂದು ಬೆಳಿಗ್ಗೆ ನಾನು ಮತ್ತು ನನ್ನ ಹೆಂಡತಿ ಭಾಗಮ್ಮ ಹಾಗೂ ಸೋಸೆ ಶ್ರೀಧೇವಿ, ಮಕ್ಕಳಾದ ಭೀಮಣ್ಣ ಎಲ್ಲರೂ ನಮ್ಮ ಮನೆಯ ಮುಂದೆ ಇದ್ದಾಗ ಕಾಳಮ್ಮ ಬಡಿಗೇರ ಇವಳು ನಮ್ಮ ಮನೆಯ ಮುಂದಿನಿಂದ ಹೋಗುತ್ತಿದ್ದಳು, ಆಗ ನನ್ನ ಹೆಂಡತಿ ಕಾಳಮ್ಮ ಇವಳಿಗೆ ಕರೆದು ನನ್ನ ಸೋಸೆಗೆ ಕೈ ಹಿಡಿದು ಏಳೆದಾಡಿದ್ದಾರೆ ಅಂತಾ ಜನರ ಮುಂದೆ ಯಾಕೆ ಹೇಳುತ್ತಿದ್ದಿ ಅಂತಾ ಕೇಳಿ ನಾವೆಲ್ಲರು ಕಾಳಮ್ಮ ಇವಳಿಗೆ ವಿಚಾರ ಮಾಡುತ್ತಿದ್ದಾಗ ನಮ್ಮೂರ 1) ಚಂದಪ್ಪ ತಂದೆ ಭಗವಂತ್ರಾಯ ಬೇನೂರ, 2) ಗುಂಡಪ್ಪ ತಂದೆ ಸಿದ್ದಪ್ಪ ಹೂಗಾರ, 3) ಲಕ್ಷ್ಮಣ ಕುರಿ, 4) ಯಲ್ಲಪ್ಪ ಚೌರಾದ, 5) ರಾಘಪ್ಪ ಚೌರಾದ, 6) ದತ್ತಪ್ಪ ಚೌರಾದ, 7) ಶಿವಪ್ಪ ಚೌರಾದ ಹಾಗೂ ಇನ್ನು ಕೆಲವು ಜನರು ಕೂಡಿಕೊಂಡು ನಮ್ಮ ಹತ್ತಿರ ಬಂದು ಏನೊ ಮಕ್ಕಳ್ಯಾ ಬೇಲೂರಿನಿಂದ ಬಂದು ನಮ್ಮ ಊರಲ್ಲಿಯೆ ದಬ್ಬಾಳಿಕೆ ಮಾಡುತ್ತಿರಿ, ಕಾಳಮ್ಮಳಿಗೆ ಯಾಕೆ ಹೊಡೆಯುತ್ತಿರಿ ಅವಳೇನು ಮಾಡ್ಯಾಳ ಅಂತಾ ಎಲ್ಲರು ಅವಾಚ್ಯ ಶಬ್ದಗಳಿಂದ ಬೈಯುವುದು ಕೈಯಿಂದ ಹಾಗೂ ಬಡಿಗೆಯಿಂದ ಹೊಡೆದಿರುತ್ತಾರೆ, ಹಾಗೂ ಬಿಡಿಸಲು ಬಂದ ನನ್ನ ಮಗ ಭೀಮಣ್ಣನಿಗೂ ಎಲ್ಲರೂ ಕೈಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.