POLICE BHAVAN KALABURAGI

POLICE BHAVAN KALABURAGI

25 August 2013

ಕಳವು ಪ್ರಕರಣ :

ನೆಲೋಗಿ ಠಾಣೆ : ಶ್ರೀಮತಿ ವೀಣಾ. ಶರಣಗೌಡ ಬಾಚವಾರ  ಸಿಂಗನಳ್ಳಿ ತಾ: ಶಹಾಪೂರ ಹಾ:ವ: ಸಾ/21/75 ಖಾಜಾ ಕಾಲೋನಿ ಜೇವರರ್ಗಿ  ರವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾಳವಾರದಲ್ಲಿ ಸಹಶಿಕ್ಷಕಿಯಾಗಿ   ಕೆಲಸ ಮಾಡಿಕೊಂಡು ಇದ್ದು. ದಿನಾಂಕ: 18/08/2013 ರಂದು ಬಿಜಾಪೂರದಲ್ಲಿ ವಾಸವಾಗಿರುವ ನನ್ನ ಅಣ್ಣನಾದ ವಿಜಯ ಮಾಹಾಂತೇಶ ತಂ/ ಬಸವರಾಜ ಐನಾಪೂರ ಇವರ ವಿವಾಹ ನಿಶ್ಚಿತಾರ್ತ ಇದ್ದ ಕಾರಣ ದಿನಾಂಕ: 16/08/2013 ರಂದು ಬೆಳಿಗ್ಗೆ 10 ಗಂಟೆಗೆ ಕೆ ಎಸ್ ಆರ್ ಟಿ ಸಿ ಬಸನಲ್ಲಿ ಜೇವರ್ಗಿ ಯಿಂದ ಹೊರೆಟೆನು. ಸದರಿ ಬಸ್ಸ್ ಬಿಜಾಪೂರಕ್ಕೆ ಮದ್ಯಾಹ್ನ 01;00 ಗಂಟೆಗೆ ತಲುಪಿತು. ನಂತರ ನಾನು ಅಟೋ ರಿಕ್ಷಾದಲ್ಲಿ ಬಿಜಾಪೂರದಲ್ಲಿರುವ ನಮ್ಮ ಮನೆಗೆ ಹೋದೆನು. ಹೋದ ತಕ್ಷಣ ಮುಖ ತೊಳೆದು ಬಟ್ಟೆ ಬದಲಾಯಿಸಲು ಬ್ಯಾಗನ್ನು ನೋಡಲಾಗಿ, ಸದರಿ ಬ್ಯಾಗಿನಲ್ಲಿ ಇಟ್ಟಿದ್ದ ನನ್ನ 150 ಗ್ರಾಂ ಬಂಗಾರದ ಆಭರಣಗಳು ಹಿಗೆ ಒಟ್ಟು 3,61,150/- ರೂ ಆಭರಣಗಳು ಇರಲಿಲ್ಲಾ. ಕೂಡಲೆ ಬ್ಯಾಗನ್ನು ಪೂರ್ತಿ ಹೂಡಕಾಡಿದ್ದು ಆಬರಣಗಳಿಟ್ಟ ಟಿಪಿನ್ ಬಾಕ್ಸ ಇರಲ್ಲಿಲ್ಲಾ. ಇವುಗಳನ್ನು ಬಸ್ಸನಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿದ್ದು ನಮ್ಮ ವಸ್ತುಗಳನ್ನು ಪತ್ತೆ ಮಾಡಿಕೊಡ ಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.