POLICE BHAVAN KALABURAGI

POLICE BHAVAN KALABURAGI

17 March 2017

KALABURAGI DISTRICT REPORTED CRIMES

ವಾಹನ ಕಳವು ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ :- ದಿನಾಂಕ:16-03-2017 ರಂದು ಶ್ರೀ ಸುಭಾಷಚಂದ್ರ ತಂದೆ ಕರಬಸ್ಸಪ್ಪಾ ನೀರವಾಣಿ ಸಾ:ಮನೆ ನಂ. 2108, ಹೀರಾ ಕಾಂಪ್ಲೆಕ್ಸ ಆಳಂದ ರಸ್ತೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತನ್ನ ಚಾವರಲೇಟ್ ಟವೇರಾ ಜೀಪ ನಂ. KA 02 AC 2508 ನೇದ್ದನ್ನು ಕಲಬುರಗಿ ನಗರದ ಕೆಪಿಟಿಸಿಎಲ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೊಟ್ಟಿದ್ದು ನನ್ನ ವಾಹನದ ಚಾಲಕನಾಗಿ ಸದ್ದಾಮ ತಂದೆ ಮುಕಬಾಲ ಪಟೇಲ್ ಸಾ: ಕುನ್ನುರ ತಾ:ಚಿತ್ತಾಪೂರ ಹಾ.ವಾ|| ಎಂ.ಎಸ್.ಕೆ ಮಿಲ್ ಮದಿನಾ ಕಾಲೋನಿ ಕಲಬುರಗಿ ಇವರಿದ್ದು. ಈತನಿಗೆ ನಾನೇ ಸಂಬಳ ಕೊಟ್ಟು ಇಟ್ಟಿಕೊಂಡಿದ್ದು. ನನ್ನ ವಾಹನವನ್ನು ನಮ್ಮ ಚಾಲಕ ದಿನಾ ಬೆಳಗ್ಗೆ 10 ಗಂಟೆಗೆ ಮನೆಯಿಂದ ತೆಗೆದುಕೊಂಡು ಹೋಗಿ ಕೆ.ಇ.ಬಿ ಕಾರ್ಯಾಲಯಕ್ಕೆ ಹೋಗಿ ಅಲ್ಲಿ ಇದ್ದಂತಹ ಕೆಲಸವನ್ನು ಮುಗಿಸಿ ಮತ್ತೆ ಸಾಯಂಕಾಲ 7-8 ಗಂಟೆಗೆ ನಮ್ಮ ಮನೆ ಮುಂದೆ ನಿಲ್ಲಿಸಿ ಹೋಗುತ್ತಾನೆ. ಎಂದಿನಂತೆ ದಿನಾಂಕ 14-3-2017 ರಂದು ಬೆಳಿಗ್ಗೆ 10-00 ಗಂಟೆಗೆ ನಮ್ಮ ವಾಹನದ ಚಾಲಕ ವಾಹನವನ್ನು ತೆಗೆದುಕೊಂಡು ಹೋಗಿ ರಾತ್ರಿ 8-00 ಗಂಟೆಗೆ ನಮ್ಮ ಮನೆ ಮುಂದೆ ನಿಲ್ಲಿಸಿ ವಾಹನದ ಡೊರ ಲಾಕ್ ಮಾಡಿ ಚಾವಿ ನನ್ನ ಕೈಯಲ್ಲಿ ಕೊಟ್ಟು ಹೋಗಿದ್ದು. ನಾನು ದಿನಾಂಕ: 15/03/2017 ರಂದು ಬೆಳಗ್ಗೆ 05-00 ಗಂಟೆಗೆ ನೋಡಲಾಗಿ  ನಮ್ಮ ವಾಹನ ಇರಲಿಲ್ಲಾ ನಾನು ನಮ್ಮ ವಾಹನದ ಚಾಲಕ ಇಬ್ಬರು ಎಲ್ಲಾ ಕಡೆ ಹುಡುಕಾಡಿದರು ವಾಹನ ಸಿಕ್ಕಿರುವುದಿದಲ್ಲಾ ಕಾರಣ ಕಳುವಾ ನನ್ನ ಚೆವರಲೇಟ್ ಟವೇರಾ ವಾಹನ ಸಿಲ್ವರ ಬಣ್ಣದ್ದು ಇದ್ದು ನಂ. KA 02 AC 2508, ಅದರ Engine No.3LL139606, Chassis No. MA6ABCM5BAH138295 ಅದರ ಅಂ.ಕಿ- 4,50,000/-ರೂ ಬೇಲೆ ಬಾಳುವುದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿ ಕೋಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:

ಜೇವರಗಿ ಪೊಲೀಸ್ ಠಾಣೆ : ದಿ. 16.03.2017 ರಂದು ಶ್ರೀ ಶರಣಪ್ಪ ತಂದೆ ಈರಣ್ಣಾ ವಾಲಿ ಸಾಃ ರಾಜವಾಳ ಠಾಣೆಗೆ ಹಾಜರಾಗಿ  ನನ್ನ ಮಗ ಶಿವಲಿಂಗಪ್ಪನು ಈಗ ಸುಮಾರು 6 ತಿಂಗಳದ ಹಿಂದೆ ನಮ್ಮೂರ ಅಪ್ಪಾಸಾಬಗೌಡ ತಂದೆ ಈಶ್ವರಪ್ಪ ತೊನಸಳ್ಳಿ ಇವರಿಗೆ ಅವರ ಮನೆ ಅಡಚಣೆಗಾಗಿ 18,000/-ರೂ ಕೈಗಡದ ರೂಪದಲ್ಲಿ ಕೊಟ್ಟಿದ್ದು . ನನ್ನ ಮಗನು ಅಪ್ಪಾಸಾಗೌಡನಿಗೆ ಹಣ ಮರಳಿ ಕೊಡು ಅಂತ ಕೇಳಿದಾಗ ಅವನು ನಾಳೆ ನಾಡಿದು ಕೊಡುವದಾಗಿ ಹೇಳುತ್ತಾ ಬಂದಿರುತ್ತಾನೆ. ಅಲ್ಲದೇ ಈ ವಿಷಯದಲ್ಲಿ ನನ್ನ ಮಗನ ಸಂಗಡ ತಕಾರು ಕೂಡಿ ಮಾಡಿದ್ದು. ದಿನಾಂಕ: 24.02.2017 ರಂದು ನಾನು ಮತ್ತು ನನ್ನ ಹೆಂಡತಿ ಇಬ್ಬರು ಹೊಲಕ್ಕೆ ಹೋಗಿದ್ದಾಗ ನನ್ನ  ಮಗ ಶಿವಲಿಂಗಪ್ಪ ಮನೆಯಲ್ಲಿ ಇದ್ದಾಗ ಅಪ್ಪಾಸಾಬಗೌಡ ನನ್ನ ಮಗನ ಸಂಗಡ ಜಗಳ ತೆಗೆದಿದ್ದು ಆಗ ನಮ್ಮ ಸೊಸೆ ನನಗೆ ಫೋನ ಮಾಡಿ ನನ್ನ ಗಂಡನಿಗೆ ಅಪ್ಪಾಸಾಬಗೌಡ ಮತ್ತು ಅವರ ಮನೆಯವರು ನನ್ನ ಗಂಡನಿಗೆ ಹೊಡೆದಿರುವ ಬಗ್ಗೆ ತಿಳಿಸಿದ್ದು. ಸಾಯಂಕಾಲ ಮನೆಗೆ ಬಂದು ನನ್ನ ಮಗ ಶಿವಲಿಂಗಪ್ಪ ವಿಚಾರಿಸಲಾಗಿ ಇಂದು ಸಾಯಾಂಕಾಲ 4.00 ಗಂಟೆ ಸುಮಾರಿಗೆ ನಮ್ಮ ಮಗ ಈತನು ಗ್ರಾಮದ ಗಂಗಮ್ಮ ಇವರ ಅಂಗಡಿ ಹತ್ತಿರ ಹೋಗಿದ್ದಾಗ ಅಲ್ಲಿದ್ದ  ಅಪ್ಪಾಸಾಬನಿಗೆ ಹಣದ ಮರಳಿ ಕೊಡುವಂತೆ ಕೇಳಿದಕ್ಕೆ ಅಪ್ಪಾಸಾಬನು ತನ್ನ ಅಣ್ಣ ತಮ್ಮಂದಿರಾದ  ಆನಂದ ತಂದೆ ಈಶ್ವರಪ್ಪ ತೊನಸಳ್ಳಿ ಸಂತೋಷ ತಂದೆ ಈಶ್ವರಪ್ಪ ತೊನಸಳ್ಳಿ, ಅವರ ತಾಯಿ ಗಂಗಮ್ಮ ಇವರಿಗೆ  ಕರೆಯಿಸಿ ಈ ಮಗನ ನಮಗೆ ಹಣ ಮರಳಿ ಕೊಡುವಂತೆ ಕೇಳುತ್ತಾ ಅವಮಾನ ಮಾಡುತ್ತಿದ್ದಾನೆ ಎನ್ನುತ್ತಾ ಅಪ್ಪಸಾಬ, ಆನಂದ, ಉಮೇಶ, ಸಂತೋಷ ಎಲ್ಲರೊ  ಜಗಳಕ್ಕೆ ಬಿದ್ದು ಕೈಯಿಂದ ,ಕಲ್ಲಿನಿಂದ , ಚಪ್ಪಲಿಂದ , ಬಡಿಗೆಯಿಂದ ಹೊಡೆದ ಬಗ್ಗೆ ತಿಳಿಸಿದ್ದು  ಅದೆ ದಿವಸ ನರಬೋಳಿ ಖಾಸಗಿ ಆಸ್ಪತ್ರೆಯಲ್ಲಿ ಇಲಾಜ ಮಾಡಿಸಿದ್ದು. ಊರಿನ ಪ್ರಮುಖರಲ್ಲಿ ಹೇಳಿ ಬಗೆ ಹರಿಸಿಕೊಳ್ಳೋಣಾ ಅಂತ 5-6 ದಿವಸಗಳವರೆಗೆ  ನಾವು ಕಾದಿದ್ದು. ಈಗ ನನ್ನ ಮಗನಿಗೆ ತಲೆ ತುಂಬಾ ನೋವಾಗುತ್ತಿರಲು ದಿನಾಂಕ: 04.03.2017 ರಂದು ಕಲಬುರಗಿ ಗಂಗಾ ಆಸ್ಪತ್ರೆಯಲ್ಲಿ ಸೇರ್ಪಡೆ ಮಾಡಿದ್ದು. ಅಲ್ಲಿನ ವೈದ್ಯರು ನನ್ನ ಮಗನ ತಲೆಯ ಆಪರೇಷನ್ ಮಾಡಿಸಬೇಕಾಗುತ್ತದೆ ಅಂತ ಹೇಳಿದರಿಂದ ನಾವು ನನ್ನ ಮಗನಿಗೆ ಉಪಚಾರ ಕೊಡಿಸಿ ಇಂದು ತಡವಾಗಿ ದೂರು ಸಲ್ಲಿಸಿರುತ್ತುವುದಾಗಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.