POLICE BHAVAN KALABURAGI

POLICE BHAVAN KALABURAGI

06 April 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಜೇವರ್ಗಿ ಠಾಣೆ : ದಿನಾಂಕ 05-04-2015 ರಂದು ರೇವನೂರ ಹನುಮಾನ ಗುಡಿಯ ಕಟ್ಟಿಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 4 ಜನರು ಗುಂಪಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಅಂತಾ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್. ಜೇವರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ  ದಾಳಿ ಮಾಡಿ 3 ಜನರಿಗೆ ಹಿಡಿದುಕೊಂಡಿದ್ದು ಮತ್ತು ಒಬ್ಬನು ಓಡಿ ಹೋಗಿದ್ದು ಬೀರಲಿಂಗ ತಂದೆ ಶರಣಪ್ಪ ಹನ್ನೂರ  2. ಚೆನ್ನಬಸ್ಸು ತಂದೆ ರಾಮಚಂದ್ರ ಹನ್ನೂರ  3. ಬಸವರಾಜ ತಂದೆ ರೇವಣಸಿದ್ದಪ್ಪಗೌಡ ಮಾಲಿ ಪಾಟೀಲ 4. ಸಂಗಣ್ಣ ತಂದೆ ಲಕ್ಷ್ಮಣ ಹನ್ನೂರ ಸಾ|| ಎಲ್ಲರು ರೇವನೂರ ಇವರನ್ನು ದಸ್ತಗೀರ ಮಾಡಿಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ 52 ಇಸ್ಪೇಟ ಎಲೆಗಳು ಮತ್ತು ನಗದು ಹಣ 1110/-ನೇದ್ದು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಯೊಗೇಶ ತಂದೆ ಸುಭಾಸ ಬಂಡಗರ ಸಾ:ಸ್ವಾಮಿ ವಿವೇಕಾನಂದ ನಗರ ಆಳಂದ ರಸ್ತೆ ಕಲಬುರಗಿ ಇವರು ತಮ್ಮ ಹಿರೋಹೊಂಡಾ ಸ್ಪೆಂಡರ ಪ್ಲಸ್ ಮೋಟಾರ ಸೈಕಲ್ ನಂ.ಕೆಎ-32, ಆರ್-3034 ನೇದ್ದನ್ನು ದಿನಾಂಕ: 17/03/2015 ರಂದು ಸಾಯಂಕಾಲ ತಮ್ಮ ಮನೆಯ ಮುಂದೆ ನಿಲ್ಲಿಸಿ ಅದಕ್ಕೆ ಹ್ಯಾಂಡಿಲ್ ಲಾಕ ಮಾಡಿ ರಾತ್ರಿ ಊಟಮಾಡಿಕೊಂಡು ಮನೆಯಲ್ಲಿ ಮಲಗಿಕೊಂಡಿದ್ದು ಬೆಳಗ್ಗೆ ದಿನಾಂಕ: 18/03/2015 ರಂದು ಮುಂಜಾನೆ 6.00 ಗಂಟೆಗೆ ಎದ್ದು ಮನೆಯಿಂದ ಹೊರಗೆ ಬಂದಿದ್ದು ಮನೆಯ ಮುಂದೆ ತನ್ನ ಮೋಟಾರ ಸೈಕಲ ಇರಲಿಲ್ಲಾ ನಾನು ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ನನ್ನ ಮೋಟಾರ ಸೈಕಲ ಸಿಕ್ಕಿರುವದಿಲ್ಲಾ ನನ್ನ ಹಿರೋಹೊಂಡಾ ಸ್ಪೆಂಡರ ಪ್ಲಸ್ ಮೋಟಾರ ಸೈಕಲ್ ನಂ.ಕೆಎ-32, ಆರ್-3034 ಅ.ಕಿ.39955/-ರೂ ಬೆಲೆಬಾಳುವದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 04.04.2015 ರಂದು 1೦:30 ಗಂಟೆಗೆ ಶ್ರೀ ರವಿ ತಂದೆ ತಿಪ್ಪಣ್ಣ ಹಳ್ಳಿ ಸಾ|| ಬಿರಾಳ ಬಿ ಗ್ರಾಮ ಮತ್ತು ಸಿದ್ರಾಮ ಜೀರ ಇಬ್ಬರು ಕೂಡಿಕೊಂಡು ಮಾನಪ್ಪ ಈತನು ನಡೆಸುತ್ತಿ ಮೋಟಾರು ಸೈಕಲ್‌ ನಂ ಕೆ.ಎ32ಈಡಿ2381 ನೇದ್ದರ ಮೇಲೆ ಕುಳಿತುಕೊಂಡು ಜೇವರ್ಗಿಯಿಂದ ನಮ್ಮೂರಿಗೆ ಹೋಗುತ್ತಿದ್ದಾಗ ದೇವರ ಮನೆ ಲೇಔಟ್‌ ಹತ್ತಿರ ಜೇವರ್ಗಿ ಶಹಾಪುರ ಮೇನ್‌ ರೋಡಿನ ಮೇಲೆ ಹೋಗುತ್ತಿದ್ದಾಗ ನಮ್ಮ ಮುಂದುಗಡೆ ಹೋಗುತ್ತಿದ್ದ ಆಟೋ ರಿಕ್ಷಾ ನಂ ಕೆ.32ಬಿ7162 ನೇದ್ದರ ಚಾಲಕನು ತನ್ನ ಆಟೋವನ್ನು ಯಾವುದೆ ಮುನ್ಸುಚನೆ ಇಲ್ಲದೆ ಸಂಚಾರಿ ನೀಯಮ ಪಾಲಿಸದೆ ಒಮ್ಮೇಲೆ ಬಲ ಸೈಡಿಗೆ ಹೋರಳಿಸಿ ನಮ್ಮ ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿ ನನಗೆ ಮತ್ತು ಮಾನಪ್ಪ ಹಾಗು ಕು|| ಸಿದ್ದಪ್ಪ ಇವರಿಗೆ ಗಾಯ ಪೆಟ್ಟುಗೊಳಿಸಿ ತನ್ನ ಆಟೋವನ್ನು ಅಲ್ಲಿಯೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು  :
ಜೇವರ್ಗಿ ಠಾಣೆ : ಶ್ರೀ ಶಿವರಾಜ ತಂದೆ ಯಲ್ಲಣ್ಣ ಇನಾಮದಾರ ಸಾ: ನರಿಬೋಳ  ರವರು ದಿನಾಂಕ 04.04.2015 ರಂದು ೦4:30 ಗಂಟೆಗೆ ನನ್ನ ಮೋಟಾರು ಸೈಕಲ್‌ ನಂ ಕೆ.32ಎಕ್ಸ್1244 ನೇದ್ದರ ಮೇಲೆ ಕುಳಿತುಕೊಂಡು ನಮ್ಮುರ ಶಾಲೆಯಿಂದ ಮನೆಯ ಕಡೆಗೆ ಹೋಗುತ್ತಿದ್ದಾಗ 1. ಅಭಿಮಾನ @ ಅಭಿಮನ್ಯ ತಂದೆ ಮೂಕಪ್ಪ ತೆಳಗೇರಿ  2. ಮಲ್ಲಪ್ಪ ತಂದೆ ಮೂಕಪ್ಪ ತಳಗೇರಿ 3. ಮಲ್ಲಪ್ಪ ಕೋಳಕೂರ 4. ಹಣಮಂತ ಹೊಟ್ಟೆಗೋಳ 5. ಮಾರ್ತಂಡ ಮೂಕಪ್ಪ ತಳಗೇರಿ ಸಾ|| ಎಲ್ಲರು ನರಿಬೋಳ ಗ್ರಾಮ ಕೂಡಿಕೊಂಡು ಬಂದು ನಮ್ಮೂರ ಶಿವಣ್ಣ ರಾವೂರ ಇವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ನನಗೆ ತಡೆದು ನಿಲ್ಲಿಸಿ ಹಳೆಯ ವೈಶಮ್ಯದಿಂದ ನನ್ನ ಮೋಟಾರು ಸೈಕಲ್‌ಗೆ ಕಲ್ಲಿನಿಂದ ಹೊಡೆದು ಅದನ್ನು ಜಖಂ ಗೊಳಿಸಿ ನನಗೆ ಅವಾಚ್ಯವಾಗಿ ಬೈದು, ಕೊಲೆ ಮಾಡುವ ಉದ್ದೇಶದಿಂದ ರಾಡಿನಿಂದ, ಬಡೆಗೆಯಿಂದ, ಕಲ್ಲಿನಿಂದ ಮತ್ತು ಕೈಯಿಂದ ನನಗೆ ಹೊಡೆ ಬಡೆ ಮಾಡಿ ಕೋಲೆ ಮಾಡಲು ಪ್ರಯತ್ನಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀ ಚಂದ್ರಕಾಂತ ತಂದೆ ಬಸವರಾಜ ಹಲಗೆನವರ ಸಾ:ಮಂಗಲಗಿ ಹಾ.ವ:ಕುಕ್ಕುಂದಾ ಇವರು ದಿನಾಂಕ 05-04-2015 ರಂದು ಮುಂಜಾನೆ ಕುಕ್ಕುಂದಾ ಗ್ರಾಮದಲ್ಲಿ ಇದ್ದಾಗ ಮುಂಜಾನೆ ನನ್ನ ಹೆಂಡತಿಯ ತಮ್ಮನಾದ ಚಕ್ರವರ್ತಿ ತಂದೆ ಜುಮರು ಚೊಂಚರ ಈತನು ನನಗೆ ನೀನು  ಬೇರೆ ಜಾತಿಯವನಿದ್ದು ನಮ್ಮೊಂದಿಗೆ ಇದ್ದು ನಮ್ಮ ತಂಗಿಗೆ ಮಾಡಿಕೊಂಡಿದ್ದಿ ಮಗನೆ ನಿನಗೆ ನಾನು ನೋಡಿಕೊಳ್ಳುತ್ತೇನೆ. ಅಂತಾ ಹೇಳಿದ್ದನು. ಆಗ ನೀ ಏನ ಮಾಡಿಕೊಳ್ಳುತ್ತಿ ಮಾಡಿಕೊ ಅಂತಾ ಹೇಳಿ ನಾನು ಸೇಡಂಕ್ಕೆ ಹೋದೆನು. ನಂತರ ನಾನು ಸೇಡಂದಿಂದ ಮರಳಿ ಕುಕ್ಕುಂದಾ ಗ್ರಾಮಕ್ಕೆ ಇಂದು ಮಧ್ಯಾನ 2-45 ಗಂಟೆಗೆ ಮನೆಗೆ ಬಂದೆನು. ನಾನು ಬಂದಿದ್ದನ್ನು ನೋಡಿ ಚಕ್ರವರ್ತಿ ಈತನು ಮತ್ತು ಅವನ ಹೆಂಡತಿಯಾದ ಸುಮಿತ್ರ ಇಬ್ಬರು ಕೂಡಿ ನನಗೆ ಈ ಸೂಳೇ ಮಗನಿಗೆ ಇವತ್ತು ಬಿಡಬ್ಯಾಡದು ಇವನು ಬೇರೆ ಜಾತಿಯವನಿದ್ದು ನಮ್ಮ ತಂಗಿಗೆ ಮದುವೆ ಮಾಡಿಕೊಂಡಿದ್ದಾನೆ ಅಂತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿಂದ ಒಂದು ಕೊಡಲಿ ತೆಗೆದುಕೊಂಡು ಬಂದನು. ನಾನು ಮನೆಯಲ್ಲಿ ಹೋಗುತ್ತಿರುವಾಗ ನನಗೆ ಮುಂದೆ ಹೋಗದಂತೆ ಒಮ್ಮೆಲೆ ತಡೆದು ಸುಮಿತ್ರ ಇವಳು ನನಗೆ ಅವಾಚ್ಯವಾಗಿ ಬೈದು ಈ ಬಾಢಕೌಗೆ ಬಿಡಬ್ಯಾಡ ಅಂತಾ ಹೇಳಿದಳು. ಆಗ ಚಕ್ರವರ್ತಿ ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನಗೆ ಹೊಡೆದು ಕೊಲೆ ಮಾಡಲು ಬಂದನು. ಆಗ ನಾನು ಒಮ್ಮೆಲೆ ತಪ್ಪಿಸಿಕೊಂಡಾಗ ಕೊಡಲಿ ಏಟು ನನ್ನ ಬೆನ್ನಿಗೆ ಎಡಗಡೆ ಬಿತ್ತು ಆಗ ನನಗೆ ಕೊಡಲಿ ಏಟಿನಿಂದ ಬೆನ್ನಿಗೆ ಗಾಯವಾಗಿ ರಕ್ತ ಸೋರಹತ್ತಿತ್ತು. ನಾನು ಚೀರಾಡುತ್ತಿದ್ದೆನು. ಆಗ ಸಪ್ಪಳ ಕೇಳಿ ನನ್ನ ಮನೆಯ ಮುಂದೆ ಇದ್ದ ನನ್ನ ಹೆಂಡತಿ ಪುಣ್ಯವತಿ, ಮತ್ತು ಅವಳ ತಾಯಿಯಾದ ಲಕ್ಷ್ಮೀಬಾಯಿ ಇವರುಗಳು ಬಂದು ನನಗೆ ಹೊಡೆಯುವದನ್ನು ಬಿಡಿಸಿದರು. ಇಲ್ಲದಿದ್ದರೆ ನನಗೆ ಹೊಡೆದು ಕೊಲೆ ಮಾಡುತ್ತಿದ್ದರು.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರೆಕರಣ ದಾಖಲಾಗಿದೆ.