POLICE BHAVAN KALABURAGI

POLICE BHAVAN KALABURAGI

30 January 2014

Gulbarga District Reported Crimes

ಮಹಿಳೆ ಕಾಣೆಯಾದ ಪ್ರಕರಣ:
ಅಶೋಕ ನಗರ ಠಾಣೆ : ದಿನಾಂಕ 29/01/2014 ರಂದು  ಶ್ರೀ ಕುಶಾಲ ತಂದೆ ಶಿವಶರಣಪ್ಪ ಠಕ್ಕಾಳ  ಸಾ: ನಿಲೂರ ತಾ: ಅಫಜಲಪೂರ ರವರ ನನ್ನ ತಾಯಿ ಸುಶೀಲಾಬಾಯಿ ರವರು ತನ್ನ ಅಣ್ಣನಾದ ಮಾಣಿಕರಾವ ತಂದೆ ಬಸವಣ್ಣಪ್ಪಾ ಶಂಕರಶೆಟ್ಟಿ  ರವರ ಆಳಂದ ಕಾಲೋನಿ ಗುಲಬರ್ಗಾ  ಮನೆಗೆ ದಿನಾಂಕ 22-01-2014 ರಂದು ಮುಂಜಾನೆ 11 ಗಂಟೆಗೆ ಹೋಗಿ ಬರುತ್ತೇನೆ ಅಂತಾ ನೀಲೂರದಿಂದ  ಬಸ್ಸಿನಲ್ಲಿ ಕುಳಿತು ಗುಲಬರ್ಗಾಕ್ಕೆ ಬಂದಿದ್ದು,  ನಂತರ 4-5 ದಿವಸ ಆದರೂ ಸಹ ಮನೆಗೆ ಬಂದಿರುವುದಿಲ್ಲ.  ನಾವು ಎಲ್ಲಾ ಕಡೆಗೆ ಹುಡುಕಾಡಿದ್ದು ಮತ್ತು ನಮ್ಮ ಸಂಬಂಧಿಕರಿಗೆ ಪೋನ ಮಾಡಿ ಕೇಳಿದ್ದು,  ನನ್ನ ತಾಯಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ.  ನಮ್ಮೂರ ಅಪ್ಪಾಶಾ.ಎಸ. ದೊಡ್ಡಮನಿ ರವರು ದಿನಾಂಕ 22-01-2014 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಗುಲಬರ್ಗಾ ಬಸ್ಸ ಸ್ಟಾಂಡದಲ್ಲಿ ಬಸ್ಸಿನಿಂದ ಇಳಿದು ಹೋಗುತ್ತಿರುವುದನ್ನು ನೋಡಿರುವುದಾಗಿ ಹೇಳಿರುತ್ತಾರೆ.  ಕಾರಣ ನನ್ನ ತಾಯಿಯವರು ಗುಲಬರ್ಗಾ ಬಸ್ಸ ಸ್ಟಾಂಡದಿಂದ  ಕಾಣೆಯಾಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ವಾಡಿ ಠಾಣೆ : ಕುಮಾರಿ ಅಂಬಿಕಾ ತಂದೆ ಬಸವರಾಜ ವಯಾ : 19 ವರ್ಷ ಸಾ: ರಾವೂರ  ಇವಳು ಎದ್ದು ಬೈಲ್ ಕಡೆಗೆ ಹೊಗುತ್ತೇನೆ ಎಂದು ಹೋದವಳು ಮರಳಿ ಬರದೆ ಇದ್ದಾಗ ನಾವು ಮನೆಯವರು ಎದ್ದು ಆಕೆಯನ್ನು ಹುಡುಕಾಡಿದ್ದು ಅಲ್ಲದೆ ಈಗ ಸುಮಾರು ಒಂದು ವರಿ ತಿಂಗಳ ಹಿಂದೆ ನಮ್ಮ ಗ್ರಾಮದ ಬಸವರಾಜ ತಂದೆ ಮಲ್ಲಪ್ಪಾ ಈತನು ಫೋನನಲ್ಲಿ ನನ್ನ ತಂಗಿಯೊಂದಿಗೆ ಮಾತನಾಡುವುದನ್ನು ನೋಡಿದ್ದು ಆತನ ಮೇಲೆ ಸಂಶಯ ಬಂದು ಬಸವರಾಜ ಇವರ ಮನೆಗೆ ಹೋಗಿ ಆತನ ಬಗ್ಗೆ ವಿಚಾರಿಸಲಾಗಿ ಆತನು ಸಹ ಮನೆಯಲ್ಲಿ ಇರಲಿಲ್ಲ ನಮ್ಮ ತಂಗಿ  ಅಂಬಿಕಾ ಇವಳಿಗೆ ಬಸವರಾಜ ಈತನೆ ಅಪಹರಿಸಿಕೊಂಡು ಹೋಗಿದ್ದು ಇದಕ್ಕೆ ಆತನ ತಮ್ಮ ದೌಲಪ್ಪ ತಂದೆ ಮಲ್ಲಪ್ಪಾ ಹಾಗೂ ಕಂಟೆಪ್ಪಾ ಸಾ|| ರಾವೂರ ಇವರ ಪ್ರಚೋದನೆ ಇರುತ್ತದೆ. ಅಂತಾ ಕುಮಾರಿ ಜ್ಯೋತಿ ತಂದೆ ಬಸವರಾಜ ಪರೀಟ ಸಾ : ರಾವೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀ ಮಹ್ಮದ ಆರೀಫ್ ಖುರೇಷಿ ತಂದೆ ದಸ್ತಗಿರಿಸಾಬ ಸಾ : ಚವಡಾಪೂರ ತಮ್ಮ ಹಿರೋ ಕಂಪನಿಯ ಸ್ಪ್ಲೇಂಡರ ಫ್ಲಸ್ ಸೈಕಲ ಮೋಟಾರ ನಂ.KA-32 EB-9106 ಅಂತಾ ಇದ್ದು ಅದು ತನ್ನ ಹೆಸರಿನಿಂದ ಇರುತ್ತದೆ. ಅದರ ಚಸ್ಸಿ ನಂ.MBLHA10AMCHF68351ಇಂಜೀನ ನಂ, HA10EJCHF79375 ಅಂತಾ ಇರುತ್ತದೆ. ಸದರ ಮೋಟಾರ ಸೈಕಲನ್ನು ತಾನೆ ಉಪಯೋಗಿಸುತ್ತಿದ್ದು,  ದಿನಾಂಕ: 27-01-2014 ರಂದು ಸಂಜೆ 7-30 ಗಂಟೆಯ ಸುಮಾರಿಗೆ ತಾನು ತನ್ನ ಕಾಕನ ಮಗ ಸದ್ದಾಂ ಖುರೇಷಿ ಇಬ್ಬರೂ ಕೂಡಿ ಮಜ್ಜಿದ್ದಕ್ಕೆ ನಮಾಜ ಮಾಡಲು ಹೋಗಿದ್ದುಸೈಕಲ ಮೋಟಾರನ್ನು ಮಜ್ಜಿದ್ದ ಮುಂದೆ ನಿಲ್ಲಿಸಿ,  ನಮಾಜ್ ಮುಗಿಸಿಕೊಂಡು ದಿನಾಂಕ: 27-01-2014 ರಂದು ಸಂಜೆ 8-00 ಗಂಟೆಗೆ ಹೊರಗಡೆ ಬಂದು ನೋಡಲು ತಮ್ಮ ಸೈಕಲ ಮೋಟಾರ ಕಾಣಲಿಲ್ಲಾಆಗ  ಗಾಬರಿಯಾಗಿ ಊರಲ್ಲಿ ಎಲ್ಲಾ ಕಡೆ ಹುಡುಕಾಡಿದೆವು ಸಿಕ್ಕಿರುವುದಿಲ್ಲಾ  ಹೋಗಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ. ದಿನಾಂಕ: 27-01-2014 ರಂಧು ಸಂಜೆ 7-45  ಗಂಟೆಯಿಂದ ಸಂಜೆ 8-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ಮಜ್ಜಿದ್ದ ಮುಂದೆ ನಿಲ್ಲಿಸಿದ ತನ್ನ ಸಿಲ್ವರ ಕಲರ್ ಸೈಕಲ ಮೋಟಾರ ನಂ. KA-32 EB-9106 ಅ:ಕಿ: 30,000=00 ರೂ ನೇದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಬಸಯ್ಯ ತಂದೆ ವೀರಯ್ಯ ಬಳೂತಿ  ಸಾಃ ಕುಸನೂರ ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ದಿನಾಂಕ 29-01-2014 ರಂದು 03:30 ಪಿ.ಎಂ ಕ್ಕೆ ಜಯನಗರ ಕ್ರಾಸ್ ಹತ್ತಿರ ಮುಖ್ಯ ರಸ್ತೆಯ ಮೇಲೆ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಸೇಡಂ ರಿಂಗ್ ರೋಡ್ ಕಡೆಯಿಂದ ಕಾರ್ ನಂ. ಕೆ.ಎ 33 ಪಿ 8383 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಡಿಕ್ಕಿ ಹೊಡೆದ ಪರಿಣಾಮ ಎಡಕಿನ ಟೊಂಕಕ್ಕೆ, ಎಡಗೈ ಹಸ್ತಕ್ಕೆ, ಎಡಕಿನ ಹತ್ತಿರ, ಬಲ ಭುಜಕ್ಕೆ ಮತ್ತು ತಲೆಯ ಹಿಂಬದಿಗೆ ಭಾರಿ ಗುಪ್ತಗಾಯವಾಗಿದ್ದು ಹಾಗು ಎಡಕಿನ ಮೊಳಕಾಲಿಗೆ ಬಲಗಾಲಿನ ಪಾದದ ಹತ್ತಿರ ತರಚಿದ ಗಾಯಗಳಾಗಿದ್ದು ಇರುತ್ತವೆ. ಸದರ ಕಾರ್ ಚಾಲಕನು ತನ್ನ ಕಾರನ್ನು ನಿಲ್ಲಿಸದೇ ಹಾಗೇ ಚಲಾಯಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಮ್.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ.ತುಕಾರಾಮ ತಂದೆ ವೆಂಕಟಪ್ಪ ಪಿಲ್ಲಮಗೋಲೆ ಸಾ;ಕಾಂಬಳೆ ವಾಡಿ ಗ್ರಾಮ ,ಪೊಸ್ಟ : ಮಂಠಾಳ ತಾ;ಬ.ಕಲ್ಯಾಣ ಜಿ:ಬೀದರ ರವರು  ದಿನಾಂಕ: 28/01/2014 ರಂದು ಜಹಿರಾಬಾದ ಹತ್ತಿರ ಇರುವ ಕೊತ್ತೂರ ಗ್ರಾಮದಿಂದ ಬೂಸಾ ಲೋಡ ತುಂಬಿಕೊಂಡು ಆಳಂದ ತಾಲೂಕಿನ ಭೂಸನೂರ ಸಕ್ಕರೆ ಕಾರ್ಖಾನೆಗೆ ಹೋಗುವ ಬಾಡಿಗೆ ಬಂದಿದ್ದರಿಂದ  ನಾನು ಮತ್ತು ನಮ್ಮ ಲಾರಿಯ ಚಾಲಕ ಮಚ್ಚೇಂದ್ರ ಕೂಡಿಕೊಂಡು ಕೊತ್ತೂರ ಗ್ರಾಮಕ್ಕೆ ಹೋಗಿ ಅಲ್ಲಿಂದ ಬೂಸಾ ಲೋಡ ಮಾಡಿಕೊಂಡು  ರಾತ್ರಿ 09-00 ಗಂಟೆ ಸುಮಾರಿಗೆ ಕೊತ್ತೂರ ಗ್ರಾಮ ಬಿಟ್ಟಿದ್ದುಮುಂದೆ ಹುಮನಾಬಾದ ಆರ್.ಟಿ,ಓ ಆಫೀಸ್ ಹತ್ತಿರ ಬಂದು ಇಬ್ಬರೂ ಊಟ ಮಾಡಿಕೊಂಡು ದಿನಾಂಕ: 29/01/2014 ರಂದು ಬೆಳಗಿನ ಜಾವ 02-30 ಗಂಟೆ ಸುಮಾರಿಗೆ ಹುಮನಾಬಾದ ಬಿಟ್ಟು ಹುಮನಾಬಾದ – ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ರಸ್ತೆಯ ಮೂಲಕ ಕಮಲಾಪೂರ ಮಾರ್ಗವಾಗಿ ಭೂಸನೂರಕ್ಕೆ ಹೊರಟಿದ್ದುನಮ್ಮ ಲಾರಿಯನ್ನು ಮಚ್ಚೇಂದ್ರ ಈತನು ಚಲಾಯಿಸುತ್ತಿದ್ದನು. ನಾನು ಆತನೊಂದಿಗೆ ಲಾರಿ ಕ್ಯಾಬೀನದಲ್ಲಿ ಕುಳಿತುಕೊಂಡಿದ್ದೇನು. ಕಮಲಾಪೂರ ಗ್ರಾಮ ದಾಟಿದ ನಂತರ ನಮ್ಮ ಲಾರಿ ಚಾಲಕ ಮಚ್ಚೇಂದ್ರ ಈತನು ತಾನು ಚಲಾಯಿಸುತ್ತಿದ್ದ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕಮಲಾಪೂರ ಗ್ರಾಮ ಸೀಮಾಂತರದ ಡಾ;ಡಿ.ಎಂ.ಕುಲಕರ್ಣಿ ಪೆಟ್ರೋಲ ಪಂಪ ಹತ್ತಿರ ಒಮ್ಮಿಲೇ ಕಟ್ ಹೋಡೆಯಲು ಹೋಗಿ ಲಾರಿಯನ್ನು ರಸ್ತೆಯ ಪಕ್ಕದ ಎಡಗಡೆ ತಗ್ಗಿನಲ್ಲಿ ಗಿಡಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಪಲ್ಟಿ ಮಾಡಿದನು. ಆಗ ನಾನು ಮತ್ತು ಮಚ್ಚೇಂದ್ರ ಇಬ್ಬರೂ ಲಾರಿಯಿಂದ ಹೊರಗೆ ಬಂದು ನೋಡಲಾಗಿ ನಮಗೆ ಯಾವುದೇ ಗಾಯಗಳು ಆಗಿರಲಿಲ್ಲ. ಲಾರಿಯನ್ನು ನೋಡಲಾಗಿ ಲಾರಿಯ ಕ್ಯಾಬೀನ ಮತ್ತು ಮುಂದಿನ ಶೋ ಸಂಪೂರ್ಣವಾಗಿ ಜಖಂಗೊಂಡಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.