POLICE BHAVAN KALABURAGI

POLICE BHAVAN KALABURAGI

13 October 2014

Gulbarga District Reported Crimes

ಅಪಘಾತ ಪ್ರಕರಣ :
ಕಾಳಗಿ ಠಾಣೆ : ದಿನಾಂಕ 13/10/2014 ರಂದು ಬೆಳಗ್ಗೆ 9-50 ಗಂಟೆ ಸುಮಾರಿಗೆ ಶ್ರೀ ಮೌಲಾಲಿ ತಂದೆ ಹನೀಫಸಾಬ ಮಂಗಲಗಿ ಸಾ:ನಾವದಗಿ ತಾ:ಚಿಂಚೋಳಿ  ರವರು ಮನೆಯಲ್ಲಿರುವಾಗ ನಮ್ಮ ಗ್ರಾಮದ ಅಲ್ಲಾವೋದ್ದಿನ ಇತನಿಗೆ ಪರಿಚಯಸ್ಥರು ಫೋನ ಮಾಡಿ ಮೋಟರ ಸೈಕಲ ನಂ ಕೆಎ-32 ಎಲ್-0600 ನೇದ್ದರ ಮೇಲೆ ಹೋರಟಿದ್ದ ಇಬ್ಬರಿಗೆ ಕೆ.ಇಬಿ ಕ್ರಾಸ ಹತ್ತಿರ ಅಪಘಾತವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾರೆ ಅಂತ ತಿಳಿಸಿದ್ದು ಮೋಟರ ಸೈಕಲ ಫಿರ್ಯಾದಿ ಮಗ ನಜೀರ ಇತನದಿದ್ದು ಪಿರ್ಯಾದಿ  ಗಾಬರಿಗೋಂಡು ಸ್ಥಳಕ್ಕೆ ಬಂದು  ಹಾಜರಿದ್ದ ಜನರನ್ನು ವಿಚಾರಿಸಲಾಗಿ ಮೋಟರ ಸೈಕಲ ನಂ ಕೆಎ-32 ಎಲ್, 0600 ನೇದ್ದವರ ಮೇಲೆ ನಿಮ್ಮ ಮಗ ಹಾಗೂ ಆತನ ಹಿಂದೆ ಖಾಜಾ ಇತನನು ಕೂಡಿಸಿಕೊಂಡು ಗೊಟೋರ ಕಡೆಯಿಂದ ಕಾಳಗಿ ಕಡೆಗೆ ಬರುತ್ತಿರುವಾಗ ಎದುರಿನಿಂದ ಟಂಟಂ ನಂ ಕೆಎ-32, ಬಿ-6447 ನೇದ್ದರ ಚಾಲಕ ತನ್ನ ಟಂಟಂ ವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಮೋಟರ ಸೈಕಲನಿಗೆ ಜೋರಾಗಿ ಡಿಕ್ಕಿ ಪಡಿಸಿದ ಪರಿಣಾಮ ನಜೀರ ಹಾಗೂ ಖಾಜಾ ಇಬ್ಬರಿಗು ತಲೆ, ಹಣೆ, ಬಲಗೈ, ಕಾಲುಗಳಿಗೆ  ಭಾರಿ ರಕ್ತಗಾಯಗಳಾಗಿ ಇಬ್ಬರು ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾರೆ ಟಂಟಂ ಚಾಲಕ ತನ್ನ ಟಂಟಂವನ್ನು ಅಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮೊಸ ಮಾಡಿದ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ:07/10/2014ನೇದ್ದನ್ನು ತಂದು ಹಾಜರು ಪಡಿಸಿದ್ದು. ಮಾನ್ಯ ಎಎಸ್.ಪಿ (ಗ್ರಾ) ಉಪ-ವಿಭಾಗ ಗುಲಬರ್ಗಾ ರವರ ಜ್ಞಾಪನಾ ಪತ್ರ ಮಾನ್ಯ ನ್ಯಾಯಾಲಯದ ಆದೇಶ ಹಾಗು ಫಿರ್ಯಾದಿದಾರಳಾದ ಅನೀತಾ ತಂದೆ ಗುಂಡಪ್ಪಾ ಉ:ವಿದ್ಯಾರ್ಥಿನಿ ಸಾ:ಕಟ್ಟೋಳಿ ತಾ:ಜಿ:ಗುಲಬರ್ಗಾ ರವರು ಸಲ್ಲಿಸಿದ ಖಾಸಗಿ ದಾವೆಯ ಸಾರಾಂಶವೆನೇಂದರೆ, ಫಿರ್ಯಾದಿದಾರಳ ಮತ್ತು ಅವಳ ತಂದೆ ಗುಂಡಪ್ಪಾ ಹೆಸರಿನಲ್ಲಿ ಕಟ್ಟೋಳಿ ಮಹಾಗಾಂವ ಗ್ರಾಮ ಜಮೀನು ಸರ್ವೇ ನಂ. 94/1 ರಲ್ಲಿ 15 ಎಕರೆ 01 ಗುಂಟೆ ಜಮೀನು ಇರುತ್ತದೆ. ಇದೇ ಸರ್ವೇ ನಂಬರದಲ್ಲಿ ಆರೋಪಿತರಾದ 1) ಗುರುಪಾದಪ್ಪಾ ತಂದೆ ರೇವಣಸಿದ್ದಪ್ಪಾ ಸಂಗಡ 3 ಜನರು ಸಾ: ಎಲ್ಲರೂ ಕಟ್ಟೋಳಿ ಗ್ರಾಮ ಇವರ ಹೊಲ ಸರ್ವೇ ನಂ.94/2 ಅ ನೇದ್ದರಲ್ಲಿ 4 ಎಕರೆ 17 ಗುಂಟೆ ಜಮೀನು ಕೂಡಾ ಫಿರ್ಯಾದಿದಾರಳ ಹೊಲದ ಪಕ್ಕದಲ್ಲಿ ಇರುತ್ತದೆ. ಆದ್ದರಿಂದ ಫಿರ್ಯಾದಿದಾರಳು ಮತ್ತು ಅವಳ ತಂದೆ ತಮ್ಮ ಹೆಸರಿನಲ್ಲಿದ್ದ ಹೊಲವನ್ನು ಆರೋಪಿತರಿಗೆ ಸಹಪಾಲಿಗೆ ಹಚ್ಚಿರುತ್ತಾರೆ. ಆರೋಪಿತರು ತಮ್ಮ ಹೆಸರಿಗೆ ಇದ್ದ 04 ಎಕರೆ 17 ಗುಂಟೆ ಜಮೀನನ್ನು 1983-84 ನೇ ಸಾಲಿನಲ್ಲಿ 04 ಎಕರೆ 17 ಗುಂಟೆ ಜಮೀನಿನ ಬದಲಾಗಿ ಆರ್.ಓ.ಆರ್ ದಲ್ಲಿ 14 ಎಕರೆ 17 ಗುಂಟೆ ಜಮೀನು ಬರೆದುಕೊಂಡಿರುತ್ತಾರೆ ಈ ಬಗ್ಗೆ ಯಾವುದೇ ದಾಖಲಾತಿಗಳು ಇರದೇ ಇದ್ದರು ಕೂಡಾ ತಮ್ಮ ರಾಜಕೀಯ ಹಣದ, ಜಾತೀಯ ಬದಲಾವಣೆ ಮಾಡಿಕೊಂಡಿರುತ್ತಾರೆ. ಮತ್ತು ಪುನಃ ಆರೋಪಿತರು ಪಹಣಿ ತಿದ್ದುಪಡಿ ಮಾಡಲು ಚರ್ಚೆ ಮಾಡಿ, ದಿನಾಂಕ:12-09-2006 ರಂದು ತಹಸೀಲ್ದಾರರಾದ ಸುಲ್ತಾನ ಮಹಿಮೂದ ಇವರಿಗೆ ಅರ್ಜಿ ಸಲ್ಲಿಸಿ ತನ್ನ ಹೆಸರಿನಲ್ಲಿ ಸರ್ವೇ ನಂ. 94/2ಅ ವಿಸ್ತೀರ್ಣ 14 ಎಕರೆ 17 ಗುಂಟೆ ಜಮೀನು ಇರುತ್ತದೆ ಅಂತಾ ಫಾರಂ. 10 ಪ್ರಕಾರ ಸರ್ವೇ ನಂ.94/1 ರಲ್ಲಿ 14 ಎ. 17 ಗು. ತನ್ನ ಕಬ್ಜೆಯಲ್ಲಿದೆ ಅಂತಾ ಹೇಳಿ ಅದರಂತೆ ಪಹಣಿ ಸರಿಪಡಿಸಿ, ಹಿಸ್ಸಾ ನಂ. ತಿದ್ದುಪಡಿ ಮಾಡಲು ಕೋರಿರುತ್ತಾನೆ. ನಂತರ ಇದರ ಬಗ್ಗೆ ಆರೋಪಿ ನಂ. 5.ಸುಲ್ತಾನ ಮಹೆಮೂದ ತಹಸೀಲ್ದಾರರು ಗುಲಬರ್ಗಾ(2006) 6. ಗುರುಶಾಂತಪ್ಪಾಕಂದಾಯ ನೀರಿಕ್ಷಕರು ಮಹಾಗಾಂವ (2006) ಮತ್ತು 7. ಶಾಂತಪ್ಪಾ ಗ್ರಾಮಲೇಖ ಪಾಲಕರು ಮಹಾಗಾಂವ (2006) ಇವರು ತಮ್ಮ ಅಧೀಕಾರ ದುರುಪಯೋಗ ಪಡಿಸಿಕೊಂಡು ಬದಲಾವಣೆ ಮಾಡಿ,ಆರೋಪಿತರಿಗೆ ಸಹರಿಸಿದ್ದರಿಂದ, ನಂತರ ಆರೋಪಿತರು ಸದರ ಜಮೀನಿನ ಮೇಲೆ ಬ್ಯಾಂಕಿನಿಂದ ಸಾಲ ಪಡೆದು. ಸಮ ಪಾಲಕ್ಕೆ ಹಚ್ಚಿದ ಜಮೀನಿನಲ್ಲಿ ಪಾಲು ಕೊಡದೇ ತಮ್ಮ ಪ್ರಭಾವದಿಂದ ಆಕ್ರಮವಾಗಿ, ಫಿರ್ಯಾದಾರರ ಜಮೀನು ಕಬ್ಜೆ ಮಾಡಿ, ತುಂಬಲಾರದ ನಷ್ಟವನ್ನುಂಟು ಮಾಡಿರುತ್ತಾರೆ. ಮೇಲೆ ವಿವರಿಸಿದ ಸಂಗತಿಗಳಿಂದ ಆರೋಪಿಗಳು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ಪ್ರತಿಬಂಧ ನಿಯಮದಂತೆ ಅಪರಾಧ ಎಸಗಿದ್ದು. ತಿಳಿದುಬಂದಿರುತ್ತದೆ. ಕಾರಣ ಸದರ ಮೇಲ್ಕಂಡ 7 ಆರೋಪಿತರ ವಿರುದ್ದ ಮಾನ್ಯ ಘನ ನ್ಯಾಯಾಲಯದ ನಿರ್ದೇಶನದಂತೆ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Gulbarga District Reported Crimes

ಆಕಸ್ಮಿಕ ಬೆಂಕಿ ತಗುಲಿ ಗೃಹಣಿ ಸಾವು :
ವಿಶ್ವವಿದ್ಯಾಲಯ ಠಾಣೆ : ಶಾಣುಬಾಯಿ ಗಂಡ ಹೀರಾಲಾಲ ಚವ್ಹಾಣ, ಸಾ|| ಕೂಡ್ಲಿ ಸೀರಿ ತಾಂಡಾ ತಾ|| ಚಿಂಚೋಳಿ ಇವರ ಮಗಳಾದ ಗಂಗಾಬಯಿ ಇವಳೀಗೆ 9 ವರ್ಷಗಳ ಹಿಂದೆ ಬಾಳು ರಾಠೋಡ, ಸಾ|| ಬಾಪು ನಾಯಕ ತಾಂಡಾ ನಂದೂರ (ಬಿ) ಗೆ ಕೊಟ್ಟು ಮದುವೆ ಮಾಡಿದ್ದು ದಿನಾಂಕ: 09/10/2014 ರಂದು 1130 ಪಿ.ಎಮ್ ಕ್ಕೆ ನಮ್ಮ ಅಳಿಯ ಬಾಳು ಈತನು ಫೋನ್ ಮಾಡಿ ತಿಳಿಸಿದ್ದೆನೆಂದರೆ ಮನೆಯಲ್ಲಿ ಕರೆಂಟ ಇಲ್ಲದ ಕಾರಣ ಚಿಮಣೀಯನ್ನುಯ ಹಚ್ಚಿಕೊಂಡು ಮಲಗಿದ್ದಾಗ ರಾತ್ರಿ ಅಂದಾಜು 11:00 ಪಿ.ಎಮ ಸುಮಾರಿಗೆ ನಿದ್ರಾವಸ್ಥೆಯಲ್ಲಿ ನಮ್ಮ ಕೈ ದೀಪದ ಚಿಮಣಿ ಉರುಳಿ ಚಿಮಣಿಯಲ್ಲಿರುವ ಎಣ್ಣೆ ಹಾಸಿಗೆ ಮತ್ತು ನಾವು ಉಟ್ಟ ಬಟ್ಟೆಗೆ ಹತ್ತಿರ ಒಮ್ಮಿಂದೊಮ್ಮಲೆ ಬೆಂಕಿ ಹತ್ತಿಕೊಂಡಿದ್ದು, ಆಗ ನನ್ನ ಹೆಂಡತಿಗೆ ಎದೆಗೆ ಹೊಟ್ಟೆಗೆ, ಮತ್ತು ಇತರೆ ಭಾಗಕ್ಕೆ ಹತ್ತಿಕೊಂಡಿದ್ದು, ಆಗ ನಾನು ಆರಿಸಲೂ ಹೋದರೆ ನನಗೂ ಕೂಡ ಎಡಗೈ, ಎರಡು ಕಾಳುಗಳಿಗೆ ಬೆಂಕಿ ತಗಲಿರುತ್ತದೆ. ಆಗ ನನ್ನ ಮಕ್ಕಳಿಗೂ ಕೂಡ ಸ್ವಲ್ಪ ಹತ್ತಿರುತ್ತದೆ ನಾವು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿರುತ್ತೇವೆ ಕೂಡಲೆ ಬಾ ಅಂತಾ ತಿಳಿಸಿದ್ದರಿಂದ ನಾನು ನನ್ನ ಗಂಡ ಹಾಗೂ ಮಗ ರಾಜು ಮೂರು ಜನರು ಬಂದು ನೋಡಲು ಮೇಲಿಂದ ಬೆಂಕಿ ತಗಲಿದ್ದು, ನಿಜವಿರುತ್ತದೆ. ದಿನಾಂಕ: 11/10/2014 ರಂದು ರಾತ್ರಿ 7:00 ಪಿ.ಎಮ್ ಕ್ಕೆ ಉಪಚಾರ ಫಲಕಾರಿಯಾಗದೆ ನನ್ನ ಮಗಳು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಸಿದ್ದಪ್ಪ ತಂದೆ ಹಣಮಂತ ಪಿಡಗಡೆನವರ ಸಾ: ಹಿರೇ ವಡಗೇರಾ ತಾ:ಶಹಾಪೂರ ಜಿ: ಯಾದಗೀರ ರವರಿಗೆ ರ  ಮಗ ಕಂಬಯ್ಯ ಇವನು ಈಗ ಸುಮಾರು 11 ವರ್ಷಗಳಿಂದ ನನ್ನ ಮಗ ಕಂಬಯ್ಯ ಗುಲಬರ್ಗಾದ ಪಿಟಿಸಿಯಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಇದ್ದನು. ಈಗ ನನ್ನ ಮಗನಿಗೆ 3 ತಿಂಗಳಿಂದ ವಡಗೇರಾ ಗ್ರಾಮದಲ್ಲಿ ಕನ್ಯೆ ತೆಗೆದು ಮದುವೆ ಮಾಡಿರುತ್ತೇವೆ. ನನ್ನ ಸೊಸೆ ತನ್ನ ತವರು ಮನೆಯಲ್ಲಿಯೇ ವಾಸವಾಗಿರುತ್ತಾಳೆ. ಆಗಾಗ ಹೋಗಿ ಬುರುವುದು ಮಾಡುತ್ತಿದ್ದನು. ಸದರಿ ನನ್ನ ಮಗನು ತುಂಬಾ ದಿನದಿಂದ ಮಾನಸಿಕವಾಗಿ ಏನೂ ವಿಚಾರ ಮಾಡುತ್ತಾ ತನ್ನಷ್ಟಕ್ಕೆ ತಾನೇ ವಿಚಾರ ಮಾಡಿ ಯಾರ ಮುಂದೆ ಯಾವುದೇ ವಿಚಾರ ಬಹಿರಂಗ ಪಡಿಸುತ್ತಿರಲಿಲ್ಲ. ದಿನಾಂಕ 11-10-2014 ರಂದು 08-30 ಪಿಎಮ್ ಸುಮಾರಿಗೆ ನಾಗನಹಳ್ಳಿ ಪಿಟಿಸಿಯಿಂದ ಅಧಿಕಾರಿಯವರು ನನ್ನ ಮೊಬೈಲಗೆ ಫೋನ್ ಮಾಡಿ ವಿಷಯ ಹೇಳಿದ್ದೇನೆಂದರೆ, ನಿಮ್ಮ ಮಗ ಕಂಬಯ್ಯ ಇತನು ತಾನು ವಾಸಿಸುವ ಸಿ ಬ್ಲಾಕ್ ರೂಮ್ ನಂ- 36 ರಲ್ಲಿ ಹಾಲಿನಲ್ಲಿ ಅಳವಡಿಸಿದ ಫ್ಯಾನಗೆ ಇಸ್ರ್ತೀ ವೈರನ ಸಹಾಯದಿಂದ ನೇಣು ಹಾಕಿಕೊಂಡು, ನೇಣು ಹಾಕಿಕೊಂಡ ಇಸ್ರ್ತಿ ವೈರ ಕಡಿದು ಕೆಳಗೆ ಬಿದ್ದು, ತಲೆಯ ಹಿಂಬಾಗದಲ್ಲಿ ರಕ್ತಸ್ರಾವ ಆಗಿ ಮೃತಪಟ್ಟಿರುತ್ತಾನೆ ನೀವು ಈ ಕೂಡಲೇ ಬರಲು ತಿಳಿಸಿದ್ದರಿಂದ ನಾನು ಗಾಬರಿಗೊಂಡು ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗನ ಶವ ನೋಡಲಾಗಿ ಈ ಮೇಲಿನಂತೆ ಕುತ್ತಿಗೆಗೆ ನೇಣು ಹಾಕಿಕೊಂಡು ತಲೆಯ ಹಿಂಭಾಗದಲ್ಲಿ ರಕ್ತಗಾಯವಾಗಿ ರಕ್ತ ಬಂದು ಮೃತಪಟ್ಟಿರುತ್ತಾನೆ ನನ್ನ ಮಗ ಆಗಾಗ ಒಂದು ತರಹ ಹುಚ್ಚುಚ್ಚಾಗಿ ವರ್ತಿಸುವುದು ಮಾಢುತ್ತಿದ್ದು, ನನ್ನ ಮಗನು ಯಾವುದೋ ವಿಷಯ ಯಾರ ಮುಂದೆ ಹೇಳದೇ ತನ್ನ ತಾನೇ ತನ್ನ ಮನಸ್ಸಿನ ಮೇಲೆ ಏನೋ ಪರಿಣಾಮ ಮಾಡಿಕೊಂಡು ಈ ರೀತಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ : ಶ್ರೀ ಶರಣಪ್ಪ ತಂದೆ ಕಳಕಪ್ಪ ಗುರಿಕಾರ   ಸಾ: ಓಂ ರೆಸಿಡೆನ್ಸಿ ಆನಂದ ಆಸ್ಪತ್ರೆಯ ಹತ್ತಿರ ಹಳೆ ಜೇವರ್ಗಿ ರೋಡ  ಗುಲಬರ್ಗಾ  ರವರು ದಿನಾಂಕ: 12/10/2014 ರಂದು 7=30 ಪಿ.ಎಮ್.ಕ್ಕೆ ನಾನು ಮಕ್ಕಳಾದ ಕಳಕಪ್ಪ ವಯಾ:14 ವರ್ಷ ಮತ್ತು ಆದರ್ಶ ವಯಾ:12 ವರ್ಷ ಮೂರು ಜನರು ಮೈಲಾಪೂರ ಮಲ್ಲಯ್ಯಾನ ದೇವಸ್ಥಾನಕ್ಕೆ ಹೋಗಿ ರೈಲು ಮುಖಾಂತರ ಗುಲಬರ್ಗಾ ಸ್ಟೇಶನಕ್ಕೆ ಬಂದು ರೈಲ್ವೆ ಸ್ಟೇಶನ ದಿಂದ ಮೂರು ಜನರು ನಡೆದುಕೊಂಡು ಹಳೆ ಜೇವರ್ಗಿ ರೋಡ ಮೇಲೆ ರೋಡ ಎಡಗಡೆಯಿಂದ ಹೋಗುವಾಗ ಗಣೇಶ ನರ್ಸಿಂಗ ಹೋಮ ಎದುರು ರೋಡ ಮೇಲೆ  ಮೋಟಾರ ಸೈಕಲ್ ನಂ:ಕೆಎ 34 ಇಎ 3836 ರ ಸವಾರನು ರೈಲ್ವೆ ಅಂಡರ ಬ್ರಿಜ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರಾಮ ಮಂದಿರ ರಿಂಗ ರೋಡ ಕಡೆಗೆ ಹೋಗುವ ಕುರಿತು ಬಂದು ಫಿರ್ಯಾದಿಯ ಮಗನಾದ ಆದರ್ಶ ಇತನಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿದನು. ಆದರ್ಶ ಇತನು ಪುಟಿದು ಮುಂದಕ್ಕೆ ಹೋಗಿ ಬಿದ್ದನು. ಸದರಿಯವನಿಗೆ ಬಲ ಹಣೆಯ ಮೇಲೆ ಭಾರಿ ಪೆಟ್ಟು ,ಬಲ ಹುಬ್ಬಿಗೆ ರಕ್ತಗಾಯ, ಬಲ ಮುಂಗೈಗೆ ತರಚೀದಗಾಯ ಹಾಗು ಎಡ ಮುಂಗೈಗೆ ಗುಪ್ತ ಪೆಟ್ಟು ಮಾಡಿ ಮೋ/ಸೈಕಲ್ ಸಮೇತ ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.