POLICE BHAVAN KALABURAGI

POLICE BHAVAN KALABURAGI

11 January 2012

GULBARGA DIST REPORTED CRIME

ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:
ಶ್ರೀ ಅಜೀತ ತಂದೆ ಶ್ರೀಕಾಂತ ಯಳಮೇಲಿ ಸಾ: ಪ್ಲಾಟ ನಂ. 18 'ಸೂರ್ಯ ಕಿರಣ'ಬೇಂದ್ರೆ ನಗರ ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ನನ್ನ ತಮ್ಮ ಮಂಜುನಾಥನು ಶಿವಾನಂದರೆಡ್ಡಿಯ ತಂಗಿಯೊಂದಿಗೆ ‘ಲವ’ ಮಾಡುತ್ತಿದ್ದಾನೆ ಎಂದು ತಪ್ಪಾಗಿ ಅರ್ಥೈಸಿಕೊಂಡು ನನಗೆ ಮತ್ತು ನನ್ನ ತಮ್ಮನಿಗೆ ಹೊಡೆಯಲು ಹೊಂಚು ಹಾಕುತ್ತಿದ್ದನು. ನಾನು ಮೋಟಾರ ಸೈಕಲ್ ಮೇಲೆ ಮೋಬಾಯಿಲ್ ಅಂಗಡಿಗೆ ಬರುತ್ತಿರುವಾಗ ಶಿವಾನಂದರೆಡ್ಡಿ ತಂದೆ ಭೂತನಗೌಡ ಮಾಲಿ ಪಾಟೀಲ ಸಾ: ದತ್ತ ನಗರ ಗುಲಬರ್ಗಾ ಇತನು ಮೋಟಾರ ಸೈಕಲ್ ಮೇಲೆ ಬಂದು ನನಗೆ ಡಾ: ಎಸ್.ಎಸ್ ಪಾಟೀಲ ಮನೆಯ ಹತ್ತಿರ ರಸ್ತೆ ಮೇಲೆ ಅಡ್ಡಗಟ್ಟಿ ನಿಲ್ಲಿಸಿ ' ಏ ಹುಚ್ಚ ಸುಳ್ಯಾ ಮಗನೇ ನಿನಗೆ ಇವತ್ತು ಬಿಡಲ್ಲಾ' ಅಂತಾ ಬೈದವನೇ ನನ್ನ ತೆಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಮುಖಕ್ಕೆ ಹೊಡೆದನು ಮತ್ತು ಅಲ್ಲೆ ಬಿದ್ದಿದ್ದ ಕಲ್ಲಿನಿಂದ ನನ್ನ ತಲೆಗೆ ಹೊಡೆದಿದ್ದರಿಂದ ತಲೆ ಒಡೆದು ರಕ್ತ ಸ್ರಾವ ಆಗಿರುತ್ತದೆ. ಬಾಯಿ, ತುಟಿಗೆ, ಮುಗಿಗೆ, ಗಾಯವಾಗಿ ಮೂಗಿನಿಂದ ರಕ್ತ ಸ್ವಾವ ಆಗುತ್ತಿದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:3/2012 ಕಲಂ. 341,323,324,504,506 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Gulbarga Dist Reported Crimes

ಅಪಘಾತ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀ ತೇಜು ತಂದೆ ಮೋನು ಚಿನ್ನಾರಾಠೋಡ ಸಾ;ಬಾಚನಾಳ ಸೂಳಗುತ್ತಿ ತಾಂಡಾ ರವರು ನನ್ನ ತಮ್ಮ ವಿಜಯಕುಮಾರ ಈತನು ಖಲಖೋರಾ ದೇವಿ ತಾಂಡಾದ ಮರಿಯಮ್ಮ ದೇವಿಗೆ ದೇವರು ಮಾಡುವ ಕುರಿತು ನಾನು ಮತ್ತು ತಮ್ಮಂದಿರಾದ ಸತೀಶ್ ಮತ್ತು ಸವಿತಾ ಹಾಗೂ ತನ್ನ ಸಂಭಂದಿಕರನ್ನು ಕರೆದುಕೊಂಡು ಟಂಟಂ ನಂ: ಕೆಎ-32-ಬಿ-2919 ನೇದ್ದರಲ್ಲಿ ಬಾಚನಾಳ ಸೂಳಗುತ್ತಿ ತಾಂಡಾದಿಂದ ಖಲಖೋರಾ ತಾಂಡಾಕ್ಕೆ ಹೋಗುವ ಕುರಿತು ಟಂಟಂದಲ್ಲಿ ಕಮಲಾಪೂರ ಮಾರ್ಗವಾಗಿ ಹೋಗುತ್ತಿದ್ದಾಗ ಟಂಟಂ ಚಾಲಕನಾದ ಕಾಂತು @ ಶ್ರೀಕಾಂತ ಸಾ: ರಾಜನಾಳ ಈತನು ಟಂಟಂನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ತಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಪಡಿಸಿದ್ದು, ಈ ಅಪಘಾತದಲ್ಲಿ ನನಗೆ ಮತ್ತು ಟಂಟಂ ದಲ್ಲಿ ಕುಳಿತವರಿಗೆ ಸಾದಾ ಮತ್ತು ಭಾರಿ ರಕ್ತಗಾಯಗಳಾಗಿದ್ದು, ಸತೀಶ್ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಟಂಟಂ ಚಾಲಕನು ಟಂಟಂನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಆತನ ಮೇಲೆ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 03/2012 ಕಲಂ 279.337.338 .304[ಎ] ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಧರ್ಮಣ್ಣ ತಂದೆ ದವಲಪ್ಪ ದರೆನವರು ಸಾ: ಮನೆ ನಂ: 11 -585 ಬೋರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾರವರು ನಾನು ಲಾಲಗೇರಿ ಕ್ರಾಸ್ ದಿಂದ ಗೋವಾ ಹೊಟೇಲ್ ರೋಡಿನಲ್ಲಿ ಬರುವ ಚಾಹೂಸ ಹೊಟೇಲ ಎದುರು ರೋಡಿನ ಹೋಗುತ್ತಿದ್ದಾಗ ಮೋಟಾರ ಸೈಕಲ್ ನಂ:ಕೆಎ 32 ಎಕ್ಸ 3636 ನೆದ್ದರ ಚಾಲಕ ಲಾಲಗೇರಿ ಕ್ರಾಸ್ ಕಡೆಯಿಂದ ತನ್ನ ಮೋಟಾರ ಸೈಕಲ್ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಎದುರಿನಿಂದ ಡಿಕ್ಕಿ ಪಡಿಸಿ ಮೋಟಾರ ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಆನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 07/2012 ಕಲಂ: 279,338 ಐ.ಪಿ.ಸಿ ಸಂ: 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ :
ಶ್ರೀ ಮಹ್ಮದ ಅಬ್ದುಲ ಖದೀರ ತಂ ಮಹ್ಮದ ಅಬ್ದುಲ ಹಮೀದ ಸಾಃ ಮಹೇಬೂಬ ನಗರ ಕಾಲೋನಿ ಗುಲಬರ್ಗಾರವರು ನನ್ನ ಹಿರೊ ಹೊಂಡಾ ಸ್ಪೆಲೆಂಡರ ಮೊಟಾರ ಸೈಕಲ ನಂ ಕೆಎ-32-ವಿ-2673 ಅಃಕಿಃ 30,000/- ರೂ. ನೇದ್ದು ಕಿಂಗ ಕೊರ್ಟ ಕಾಂಪ್ಲೇಕ್ಸ ಮುಂದೆ ನಿಲ್ಲಿಸಿದ ಮೋಟಾರ ಸೈಕಲ ದಿನಾಂಕ 09.01.2012 ರಂದು 2100 ಗಂಟೆಯಿಂದ 2200 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 08/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.