POLICE BHAVAN KALABURAGI

POLICE BHAVAN KALABURAGI

20 April 2015

Kalaburagi District Reported Crimes

ಕಳವು ಪ್ರಕರಣ :
ನಿಂಬರ್ಗಾ ಠಾಣೆ : ದಿನಾಂಕ 19/03/2015 ರಂದು 2000 ಗಂಟೆಯಿಂದ ದಿನಾಂಕ 20/03/2015 ರಂದು 0500 ಗಂಟೆಯ ಮಧ್ಯದ ಅವಧಿಯಲ್ಲಿ ಭೂಸನೂರ ತಾಂಡಾದ ವೋಡಾಪೋನ ಟಾವರಿನ ಸೆಲ್ಟರ ರೂಮಿನ ಕೀಲಿ ಮುರಿದು ಒಳಗೆ ಕೂಡಿಸಿದ 24 VRLA+600 Ah Battries Worth Rs 24000/- ನೇದ್ದವುಗಳನ್ನು  ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಜಯಸಿಂಗ ತಂದೆ ಲಕ್ಷ್ಮಣ ರಾಠೋಡ ಸಾ|| ಭೂಸನೂರ ತಾಂಡಾ ಇವರು ಸಲ್ಲಿಸಿದ ದೂರು ಸಾರಾಂಣಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳ್ಳನ ಬಂಧನ :
ಅಶೋಕ ನಗರ ಠಾಣೆ : ಅಶೋಕ ನಗರ ಪೊಲೀಸ ಠಾಣೆಯ ವ್ಯಾಫ್ತಿಯ ನ್ಯೂ ತ್ರಿಶೂಲ ಬಾರ್ & ರೆಸ್ಡೋರೆಂಟ ಎದುರುಗಡೆ ದಿನಾಂಕ 27-03-2015 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಶ್ರೀ ಆನಂದ ರೆಡ್ಡಿ ತಂದೆ ಭೀಮರೆಡ್ಡಿ ಸಾ: ವಿಜಯನಗರ ಕಾಲೋನಿ ಬ್ರಹ್ಮಪೂರ ಕಲಬುರಗಿ ರವರು ತನ್ನ ಟಿ.ವಿ.ಎಸ ಸ್ಟಾರ ಸಿಟಿ ಮೋಟಾರ ಸೈಕಲ ನಂ ಕೆಎ-33 ಹೆಚ್.-8708 ನೇದ್ದು ಕಳ್ಳತನ ಆದ ಬಗ್ಗೆ ನೀಡಿದ ಫಿರ್ಯಾದಿ ಮೇಲಿಂದ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ 44/2015  ಕಲಂ 379 ಐಪಿಸಿ ಪ್ರಕರಣ ದಾಖಲಾಗಿದ್ದು.  ನ್ಯೂ ತ್ರೀಶೂಲ ಬಾರ್ & ರೆಸ್ಟೋರೆಂಟಿನ ಸಿಸಿ ಕ್ಯಾಮಾರ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ಶ್ರೀಮತಿ ಸುಧಾ ಆದಿ ಪಿಐ ಮತ್ತು ಸಿಬ್ಬಂದಿ ಜನರಾದ ಶಿವಪ್ರಕಾಶ ಪಿಸಿ 615, ಚಂದ್ರಕಾಂತ ಪಿಸಿ 176, ರಫಿಯೋದ್ದಿನ ಪಿಸಿ 370, ಬಸವರಾಜ ಪಿಸಿ 765 ರವರನ್ನೊಳಗೊಂಡ ತಂಡವು ಆರೋಪಿ ಆನಂದ ತಂದೆ ಹಣಮಂತ ರಾಂಪೂರೆ ಸಾ:ಕಾಂತಾ ಕಾಲೋನಿ ಕಲಬುರಗಿ ಇತನಿಗೆ ಪತ್ತೆ ಹಚ್ಚಿ ಕಳುವಾದ ಟಿ.ವಿ.ಎಸ ಸ್ಟಾರ ಸಿಟಿ ಬೈಕ ಅ.ಕಿ 20,000/-ರೂ ನೇದ್ದನ್ನು ವಶಪಡಿಸಿಕೊಂಡಿದ್ದು ಇರುತ್ತದೆ.  ಮತ್ತು ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 08-04-2015 ರಂದು ನಮ್ಮ ಬುರವೇಲ ವಾಹನದ ಕೆಲಸವು ಶರಣಸಿರಸಗಿ ಗ್ರಾಮದಲ್ಲಿ ನಡೆದಿತ್ತು. ಬುರವೇಲ ಚಾಲಕ ಆರ್. ತಂಗರಾಜ ಮತ್ತು ಕ್ಲಿನರ ವಡಿವೇಲು ಇಬ್ಬರೂ ಶರಣಸಿರಸಗಿ ಗ್ರಾಮದಲ್ಲಿ ಬೆಳಿಗ್ಗಿಯಿಂದ ಇದ್ದರು. ರಾತ್ರಿ ವಡಿವೇಲು ಇತನು. ಬುರವೇಲ ಡೈನೊಮೋ ಕೆಟ್ಟಿದ್ದರಿಂದ  ನಮ್ಮ ಮನೆಗೆ ಬಂದು ತೆಗೆದುಕೊಂಡು ಹೋಗುವ ಸಲುವಾಗಿ  ವಡಿವೇಲು ಇತನು ಮೋಟಾರ ಸೈಕಲ ನಂಬರ ಟಿ.ಎನ್-34 ಕ್ಯೂ-7524 ನೇದ್ದರ ನಮ್ಮ ಮನೆಯ ಕಡೆಗೆ  ಹೈಕೋರ್ಟ ಮುಖಾಂತರ ರಾಮ ಮಂದಿರ ರಿಂಗ ರೋಡ ಕಡೆಗೆ ಬರುವಾಗ  ದಾರಿ ಮದ್ಯ ರಿಂಗ ರೋಡ ಕರುಣೇಶ್ವರ ನಗರ ಕ್ರಾಸ ಸಮೀಪ ಬರುವ ಸುಗೂರೇಶ್ವರ ನಿಲಯದ ಹಿಂದುಗಡೆ ಮೇನ ರೋಡ ಮೇಲೆ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಂದು ವಯಸ್ಸಾದ ಆಕಳಕ್ಕೆ ರಾತ್ರಿ ಮೋಟಾರ ಸೈಕಲನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರಿ ಗಾಯ ಹೊಂದಿ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಯಲ್ಲಿ ಸೇರಿಕಯಾಗಿ ಉಪಚಾರ ಹೊಂದುತ್ತಾ ವಡಿವೇಲು ಇಂದು ದಿನಾಂಕ 18-04-2015 ರಂದು ಬೆಳಿಗ್ಗೆ 8-30 ಗಂಟೆಗೆ ಉಪಚಾರ ಫಲಕಾರಿಯಾದೆ ಯುನೈಟೇಡ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಧನಶೇಖರ ತಂದೆ ರಾಸು ಕೌಂಡರ ಮು: ಸಿರಪುಲಾಪಾಳಿಯಮ ಸೂಲಾಸಿರಾಮನಿ ಪೊ: ಪಿ. ವೇಲೂರ ಜಿ: ನಾಮಕಲ ತಮಿಳನಾಡು ರಾಜ್ಯ  ಹಾ:ವ: ಜಮಶೆಟ್ಟಿ ಕಾಂಪ್ಲೇಕ್ಸ ಹಳೆ ಜೆವರ್ಗಿ ರೋಡ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.