POLICE BHAVAN KALABURAGI

POLICE BHAVAN KALABURAGI

04 November 2016

KALABURAGI DISTRICT REPORTED CRIMES.

ಯಡ್ರಾಮಿ ಠಾಣೆ : ದಿನಾಂಕ 03-11-2016 ರಂದು 5-30 ಪಿ.ಎಂ ಕ್ಕೆ ಪಿರ್ಯಾದಿ ಶ್ರೀಮತಿ ಮಾಶಾಬಿ ತಂದೆ ಪೀರಸಾಬ ನದಾಫ ಸಾ|| ಯಡ್ರಾಮಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ಅರ್ಜಿಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೇಂದರೆ ದಿನಾಂಕ: 28-10-2016 ರಂದು 11;00 ಪಿ.ಎಂ ದಿಂದ ದಿನಾಂಕ 29-10-2016 ರಂದು 05;00 .ಎಂ ಮದ್ಯದಲ್ಲಿ ಯಾರೋ ಕಳ್ಳರು ಯಡ್ರಾಮಿ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯ ವಿದ್ಯಾಲಯದ ಡೈನಿಮಗ  ಹಾಲ ಬಾಗಿಲ ಕೊಂಡಿ ಮುರಿದು ಒಳಗೆ ಹೋಗಿ ವಿಡಿಯೋಕಾನ ಟಿವಿ ಅ;ಕಿ; 9,200/- ರೂ ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ವರದಿ ಇರುತ್ತದೆ.
ಫರಹತಾಬಾದ ಪೊಲೀಸ್ : ದಿನಾಂಕ: 03/11/16 ರಂದು 2 ಪಿಎಮಕ್ಕೆ ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಯಿಂದ ಮರಳಿ ಠಾಣೆಗೆ ಬಂದು ಸದರಿ ಪಿರ್ಯಾದಿದಾರರಾದ ಶ್ರೀ ಗುಂಡುರಾವ @ ಗುಂಡಪ್ಪಾ ತಂದೆ ವೀರಬದ್ರಪ್ಪಾ ಹೊಸಗೌಡರ ವ: 39 ವರ್ಷ ಜಾ: ಲಿಂಗಾಯತ ಉ: ಚಾಲಕ ಸಾ: ಖಾದ್ರಿಚೌಕ ಜೆ, ಆರ್‌ ನಗರ ಆಳಂದ ರೋಡ ಕಲಬುರಗಿ  ಹೇಳಿಕೆಯ ಸಾರಾಂಶವೆನೆಂದರೆ. ನಾನು ಈ ಮೇಲಿನ ವಿಳಾಸದವನಿದ್ದು ಚಾಲಕ ಕೆಲಸ ಮಾಡಿಕೊಂಡು ಪರಿವಾರದೊಂದಿಗೆ ಉಪಯೋಗಿಸುತ್ತೇನೆ. ನಮ್ಮದೊಂದು ಇನೋವಾ ಕಾರ ನಂಬರ ಕೆಎ-32 ಎನ್‌‌-8310 ಇದ್ದು ಅದನ್ನು ನಾನೇ ಚಲಾ ಯಿಸುತ್ತಾ ಬಂದಿರುತ್ತೇನೆ.  ಹೀಗಿದ್ದು ದಿನಾಂಕ: 02/11/16 ರಂದು ಬಿಜಾಪೂರದಲ್ಲಿ ನಮ್ಮ ಸಂಬಂದಿಕರ ಗೃಹ ಪ್ರವೇಶ ಕಾರ್ಯ ಕ್ರಮವಿದ್ದ ಪ್ರಯುಕ್ತ ನಾನು ಹಾಗೂ ನನ್ನ ಗೆಳೆಯ ಕವಿರಾಜ ಪೊಲೀಸ ಪಾಟೀಲ ಕೂಡಿ ಸದರಿ ಕಾರಿನಲ್ಲಿ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಕಲಬುರಗಿಗೆ ಬರುವಾಗ ನಾನು ಕಾರು ಚಲಾಯಿಸುತ್ತಿದ್ದು ಕವಿರಾಜ ಪಕ್ಕದಲ್ಲಿ ಕುಳಿತ್ತಿದ್ದು ದಿನಾಂಕ:03/11/16 ರಂದು ಬೆಳಗಿನ ಜಾವ ಜೇವರ್ಗಿ ಮುಖಾಂತರ ಬರುವಾಗ ನಾನು ರೋಡಿನ ಎಡಬದಿಯಿಂದ ಸಾವಕಾಶವಾಗಿ ಸರಡಗಿ (ಬಿ) ಕ್ರಾಸದಾಟಿ ½ ಕಿಮಿ ಎನ್‌ಹೆಚ್‌-218 ನೇದ್ದರ ಮೇಲೆ ಬಂದಾಗ ಎದುರಿನಿಂದ  ಅಂದರೆ ಕಲಬುರಗಿ ಕಡೆಯಿಂದ ಒಬ್ಬ ಟವರಸ್‌‌ ಲಾರಿ ಚಾಲಕನು ತನ್ನ ವಾಹನ ಅತೀವೇಗದಿಂದ ಅಲಕ್ಷತನದಿಂದ ಓಡಿಸುತ್ತಾ ಬಂದು ನಮ್ಮ ಕಾರಿನ ಬಲಭಾಗಕ್ಕೆ ಹಾಯಿಸಿ ಅಫಘಾತಪಡಿಸಿದಾಗ ನಮ್ಮ ಕಾರು ಮಗ್ಗಲಾಗಿ ಬಿದಿದ್ದು ಅಫಘಾತದಿಂದ ನನ್ನ ಬಲಬುಜಕ್ಕೆ ಭಾರಿಗಾಯವಾಗಿ ಬೆರಳುಗಳಿಗೆ ರಕ್ತಗಾಯವಾಗಿದ್ದು ಎದೆಗೆ ಗುಪ್ತಗಾಯವಾಗಿದ್ದು ಸದರಿ ಘಟನೆ ಆದಾಗ ಬೆಳಗಿನ ಜಾವ 3 ಗಂಟೆಯಾಗಿತ್ತು ಕವಿರಾಜನಿಗೆ ಯಾವುದೇ ಗಾಯವಾಗಿರುವುದಿಲ್ಲಾ. ಅಫಘಾತಪಡಿಸಿದ ಲಾರಿ ಚಾಲಕನು ತನ್ನ ವಾಹನವನ್ನು ಸ್ವಲ್ಪ ಮುಂದೆ ಒಯ್ದು ನಿಲ್ಲಿಸಿದ್ದು ಅದರ ನಂಬರ ಎಪಿ-24 ಎಕ್ಸ್‌‌‌-1133 ಇದ್ದು. ಚಾಲಕ ಸೈಯ್ಯದ ಸುಭಾನ ಸಾ: ನಿರ್ದೆವಲ್ಲಿ ತಾ: ಶಾದ ನಗರ ಮಹಿಬೂಬ ನಗರ ಜಿಲ್ಲೆ ಎಂದು ಗೋತ್ತಾಗಿದ್ದು ನಂತರ ಯಾರೋ ಅಂಬುಲೈನ್ಸ್‌ ವಾಹನಕ್ಕೆ ಮಾಹಿತಿ ನೀಡಿದ್ದರಿಂದ ಅಂಬುಲೈನ್ಸ್‌ ಬಂದು ಉಪಚಾರಕ್ಕಾಗಿ ಇ್ಲಲಿಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನಮ್ಮ ಇನೋವಾ ಕಾರ ನಂಬರ ಕೆಎ- 32 ಎನ್‌‌- 8310 ನೇದ್ದಕ್ಕೆ ಲಾರಿ ನಂ ಎಪಿ- 24 ಎಕ್ಸ್‌‌- 1133 ನೇದ್ದರ ಚಾಲಕ ಅತೀವೇಗದಿಂದ ಮತ್ತು ಅಲಕ್ಷತನದಿಂದ ಓಡಿಸಿ ಡಿಕ್ಕಿ ಪಡೆಯಿಸಿ ಭಾರಿಗಾಯವಾಗಿದ್ದು ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ವರದಿ ಇರುತ್ತದೆ.
ಫರಹತಾಬಾದ ಪೊಲೀಸ್ : ದಿನಾಂಕ: 03/11/2016 ರಂದು ರಾತ್ರಿ 10 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಎಮ್‌ ಸೋಮಶೇಖರ ಮುಖ್ಯ ಅಧೀಕ್ಷಕರು ತಮ್ಮ ಸಿಬ್ಬಂಧಿಯಾದ ಶ್ರೀ  ಸೂರ್ಯಕಾಂತ ಡುಮ್ಮಾ ಚೀಪ್‌ ವಾರ್ಡರ ಕೇಂದ್ರ ಕಾರಾಗೃಹ ಕಲಬುರಗಿ ರವರ ಮುಖಾಂತರ ಕಳುಹಿಸಿಕೊಟ್ಟ ಲಿಖಿತ ಪಿರ್ಯಾದಿ ಸಾರಾಂಶವೇನೆಂದರೆ  ಈ ಸಂಸ್ಥೆಯ ಶಿಕ್ಷಾ ಬಂಧಿ ಸಂಖ್ಯೆ 17691 ಮಹೇಶ ತಂಧೆ ಲಕ್ಷ್ಮಣರಾವ ಎಂಬಾತನು  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಲಬುರಗಿರವರು ಸದರಿ  ಬಂದಿಗೆ ದಿನಾಂಕ: 13/12/207 ರಂದು ಎಸ್‌ಸಿ ನಂ 533/06 ಬಾ. ದ. ಸ365 ಮತ್ತು 302 ಅಡಿಯಲ್ಲಿ ಜೀವಾಧಿ ಶಿಕ್ಷೆ ವಿಧಿಸಿರುತ್ತಾರೆ.  ಮುಂದುವರೆದಿದ್ದು ಒಪ್ಪಿಸುವುದೆನೆಂದರೆ, ಸದರಿ ಬಂಧಿಯನ್ನು ಹೊರ ತೋಟದ ಕೆಲಸಕ್ಕೆ ನೇಮಿಸಲಾಗಿರುತ್ತದೆ. ಬಂಧಿಯು ಎರಡು(02) ತಿಂಗಳಿಂದ ಹೊರ ತೋಟದಲ್ಲಿ ಕೆಲಸ ಮಾಡುತ್ತಿದ್ದನು ಇಂದು ದಿನಾಂಕ: 03/11/2016 ರಂದು ಹೊರಗಡೆ ತೋಟದ ಕೆಲಸಕ್ಕೆ  ಇನ್ನೂಳಿದು 18 ಶಿಕ್ಷಾ ಬಂಧಿಗಳೊಂದಿಗೆ  ಶ್ರೀಸೂರ್ಯಕಾಂತ ಡುಮ್ಮಾ ಪ್ರಧಾನ ವೀಕ್ಷಕರು ಹಾಗೂ ಶ್ರೀಕಾಂತ ಎಸ್‌, ಆರ್‌‌ ವೀಕ್ಷಕ ಇವರ ಬೆಂಗಾವಲಿನಲ್ಲಿ ಕಳುಹಿಸಲಾಗಿರುತ್ತದೆ. ಎಂದಿನಂತೆ ಎಲ್ಲಾ ಬಂಧಿಗಳು ಸಮಯ ಸುಮಾರು 5:30 ಕ್ಕೆ ಮುಖ್ಯ ದ್ವಾರಕ್ಕೆ ಬಂದು ಜಮಾ ಮಾಡುತ್ತಿರುವ ಸಮಯದಲ್ಲಿ ಸದರಿ ಶಿಕ್ಷಾ ಬಂದಿಯು ಬಹಿರದೇಶೆಗೆ  ಹೋಗಿ ಬರುತ್ತೇನೆ ಎಂದು ಹೇಳಿ ಹೋದವ ಮರಳಿ ಬಾರದೆ ಇರುವಾಗ ಶ್ರೀಕಾಂತ ವೀಕ್ಷಕರು  ಅನುಮಾನಗೊಂಡು  ತೋಟವೆಲ್ಲಾ ಹುಡುಕಾಡಿ ಬಂಧಿಯ ಸುಳಿವು ಸಿಗದೆ ಇದ್ದಾಗಸಾಯಂಕಾಳ 6 ಗಂಟೆಗೆ ಗೇಟಿಗೆ ಬಂದು ತಿಳಿಸಿರುತ್ತಾರೆ ನಂತರ ಇತರೆ ಸಿಬ್ಬಂದಿಗಳೊಂದಿಗೆ ಜೈಲಿನ ಹೋರಾವರಣ ಹಾಗೂ ತೋಟದಲ್ಲಿಹುಡುಕಾಡಿ ಬಂಧಿಯು ಕಾಣದೆ ಇದ್ದಾಗ ಫರಾರಿಯಾಗಿರುತ್ತಾನೆ ಎಂದು ಖಚಿತವಾಗಿರುತ್ತದೆ  ಸದರಿ  ಬಂಧಿಯು ಫರಾರಿ ಕುರಿತು ದೂರು ದಾಖಲಿಸಿಕೊಂಡು  ಮರು ಬಂಧಿಸಲು ವಿನಂತಿಸಿದೆ ಸದರಿ ಹೆಸರಿನ ವಿವರಣಾ ಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ತಮ್ಮ ದಯಾಪರ ಮಾಹಿತಿಗಾಗಿ ಒಪ್ಪಿಸಿದೆ ಅಂತಾ ಇತ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡೆನು ಬಗ್ಗೆ ವರದಿ ಇರುತ್ತದೆ.