POLICE BHAVAN KALABURAGI

POLICE BHAVAN KALABURAGI

18 September 2015

Kalaburagi District Reported Crimes

ಲಾರಿ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶ್ರೀನಾಥ ತಂದೆ ರೇವಯ್ಯ ಬೇಲೂರ ಸಾ; ಹೊಳಕುಂದಾ ಗ್ರಾಮ ತಾ:ಜಿ: ಕಲಬುರಗಿ ರವರು ದಿನಾಂಕ: 31/07/2015 ರಂದು ಸಾಯಂಕಾಲ ಬೆಳಗಾಮನಿಂದ ಲೋಡ ಖಾಲಿ ಮಾಡಿಕೊಂಡು ಬಂದು ಬಿರಾದರ ಪೆಟ್ರೋಲ ಬಂಕ ಎದರುಗಡೆ ನಿಲ್ಲಿಸಿ ರಾತ್ರಿ 9-00 ಪಿಎಮ್ ಕ್ಕೆ ನನ್ನ ಲಾರಿಯನ್ನು ಲಾಕ ಮಾಡಿಕೊಂಡು ಹೋಳಕುಂದಾ ಗ್ರಾಮಕ್ಕೆ ಊರಿಗೆ ಹೋಗಿರುತ್ತೇನೆ. ನಂತರ ದಿನಾಂಕ: 01/08/2015 ರಂದು ಬೆಳಿಗ್ಗೆ 7-30 ಎಎಮ್ ಕ್ಕೆ ಬಿರಾದರ ಪೆಟ್ರೋಲ ಬಂಕ ಹತ್ತಿರ ಬಂದು ನೋಡಲು ರಾತ್ರಿ ನಿಲ್ಲಿಸಿದ್ದ ನನ್ನ ಕೆಎ-32 ಬಿ-1699 ನಂಬರಿನ ಲಾರಿ ಕಾಣಿಸಲಿಲ್ಲ. ಆಗ ನಾನು ಗಾಬರಿಯಿಂದ ಪೆಟ್ರೋಲ ಬಂಕನಲ್ಲಿ ನಿಂತ ಚಾಲಕರನ್ನು ವಿಚಾರಿಸಿ ತಕ್ಷಣ ನನ್ನ ಸ್ನೇಹಿತ ಶ್ರೀಕಾಂತನಿಗೆ ಪೋನ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಪೆಟ್ರೋಲಬಂಕನಲ್ಲಿದ್ದವರನ್ನು ವಿಚಾರಿಸಿ ಹುಮನಾಬಾದ, ಬಸವಕಲ್ಯಾಣ  ಜಹೀರಾಬಾದ, ಹೈದ್ರಾಬಾದ ಸೇಡಂ ಜೇವರ್ಗಿ ಮುಂತಾದ ಕಡೆ ಹೋಗಿ ಹುಡುಕಾಡಿದರೂ ಸಿಗಲಿಲ್ಲ. ನನ್ನ ಕೆಎ-32 ಬಿ-1699 ನಂಬರಿನ ನ್ಯಾಶನಲ್ ಕಲರ 10 ಟಯರನ ಚೆಸ್ಸಿ ನಂ-  MB1CMDWC2AHVA9413 ಇಂಜಿನ ನಂ- VAH618141 ಮತ್ತು 2010ರ ಮಾಡೆಲ್ ನ ಅ.ಕಿ= 9,50000/-ರೂ ಕಿಮ್ಮತ್ತಿನ ಲಾರಿಯನ್ನು ಯಾರೋ ಕಳ್ಳರು ದಿನಾಂಕ: 31/07/2015 ರಂದು ರಾತ್ರಿ 9-00 ಪಿಎಮ್ ದಿಂದ ದಿನಾಂಕ: 01/08/2015 ರಂದು ಬೆಳಿಗ್ಗೆ 7-30 ಎಎಮ್ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಅಬ್ದುಲ್ ಹಮೀದ್ ತಂದೆ ಮೈನೊದ್ದಿನ್ ಶೇಖ, ಸಾ:ಓಲ್ಡ್ ಸಿನಿಮಾ ರೋಡ್, ಸೇಡಂ.ಇವರು ತಮ್ಮ  ಬ್ಲಾಕ್ ಕಲರ್ ಬಜಾಜ್ ಪಲ್ಸರ್-150 ಮೋಟಾರು ಸೈಕಲ್ ನಂ-KA32 EG-6326 ನೇದ್ದನ್ನು  ದಿನಾಂಕ:12-09-2015 ರಂದು ರಾತ್ರಿ 08-00 ಗಂಟೆಯ ಸುಮಾರಿಗೆ  ನಾನು ಮತ್ತು ಸೈಯದ್ ಮಜ್ಹರ್ ಹಸನ್ ಇವರೊಂದಿಗೆ ಕೆಲಸದ ನಿಮಿತ್ಯ ಸೇಡಂ ಬಸ್ ನಿಲ್ದಾಣಕ್ಕೆ ಹೋಗಿ, ಬಸ್ ನಿಲ್ದಾಣದ ಮುಂದುಗಡೆ ನನ್ನ ಮೊಟಾರು ಸೈಕಲ್ ನಿಲ್ಲಿಸಿ, ಬಸ್ ನಿಲ್ದಾಣದ ಹಿಂದೆ ಇದ್ದ ನನ್ನ ಸಂಭಂದಿಕರ ಮನೆಗೆ ಹೋಗಿ ಮರಳಿ ಬಂದು ನೋಡಲಾಗಿ ನಾನು ಬಸ್ ನಿಲ್ದಾಣದ ಎದುರುಗಡೆ ನಿಲ್ಲಸಿದ ನನ್ನ ಮೋಟಾರು ಸೈಕಲ್ ಇರಲಿಲ್ಲ. ನಾನು ಮತ್ತು ಮಜ್ಹರ್  ಇಬ್ಬರೂ ಕೂಡಿ ಎಲ್ಲಾ ಕಡೆ ಹುಡುಕಾಡಿದೇವು. ನನ್ನ ಮೋಟಾರು ಸೈಕಲ್ ಸಿಗಲಿಲ್ಲ. ಅಂದಿನಿಂದ ಇಲ್ಲಿಯವರೆಗೆ ನನ್ನ ಮೋಟಾರು ಸೈಕಲ್ ಹುಡುಕಾಡಲಾಗಿ ಸಿಕ್ಕಿರುವದಿಲ್ಲ ಅದರ ಅಂದಾಜು ಕಿಮ್ಮತ್ತು 40,000/- ರೂಪಾಯಿಗಳು ಆಗುತ್ತದೆ. ನನ್ನ ಮೋಟಾರು ಸೈಕಲ್ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಅನೀತಾ ಗಂಡ ಭೀಮರಾವ ಧಡಕೆ ಸಾ:ಕೊಡಲ ಹಂಗರಗಾ ಇವರ ಗಂಡನಿಗೆ ಸುಮಾರು ವರ್ಷಗಳಿಂದ ತಲೆ ಸರಿ ಇರದಿದ್ದರಿಂದ ತನ್ನ ತಾನಾಗಿಯೇ ಮಾತಾಡುವದು, ನಗುವದು ಮಾಡುತ್ತಿದ್ದರಿಂದ ಅವರಿಗೆ ಗುಲಬರ್ಗಾ ಸರಕಾರಿ ದವಾಖಾನೆಯಲ್ಲಿ, ಮುಂಬೈಗೆ ಒಯ್ದು ತೋರಿಸಿಕೊಂಡು ಬಂದಿದರು ಗುಣಮುಖವಾಗಿರುವುದಿಲ್ಲಾ.  ದಿನಾಂಕ:15/09/2015 ರಂದು ಬೆಳಗ್ಗೆ 10:00 ಗಂಟೆಗೆ ನಾನು ನಮ್ಮ ಮಾವ ಫೀರಾಜಿ ಅತ್ತೆ ಲಿಂಬಾಬಾಯಿ ಕೂಡಿ ಹೊಲಕ್ಕೆ ಹೋಗುವಾಗ ನನ್ನ ಗಂಡನ ತಲೆ ಸರಿ ಇರದಿದ್ದರಿಂದ ಮನೆಯಲ್ಲಿ ಬಿಟ್ಟು ಹೋಗಿದ್ದು ಸಾಯಂಕಾಲ 06:00 ಗಂಟೆಗೆ ನಾವೆಲ್ಲರೂ ಹೊಲದಿಂದ ಮನೆಗೆ ಬಂದಾಗ ನನ್ನ ಗಂಡನು ಮನೆಯಲ್ಲಿ ವಾಂತಿ ಮಾಡುತ್ತಿದ್ದಾಗ ಏನಾಗಿದೆ ಎಂದು ಕೇಳಿದರೆ ಹೇಳಿರುವುದಿಲ್ಲ ಅವನ ಬಾಯಿಯಿಂದ ಕ್ರಿಮಿನಾಶಕ ಔಷಧ ಕುಡಿದ ವಾಸನೆ ಬರುತ್ತಿದ್ದರಿಂದ ನಮ್ಮ ಮಾಂವ ಹಾಗೂ ನಮ್ಮ ಮೌಸಿ ಭಾಗವ್ವ ಕೂಡಿ ಯಾವುದೋ ಒಂದು ಜೀಪಿನಲ್ಲಿ ಹಾಕಿಕೊಂಡು ಡಾ/ಪಿ.ಎನ್.ಶಹಾ ಆಸ್ಪತ್ರೆ ಆಳಂದಕ್ಕೆ ಒಯ್ದಗ ವೈದ್ಯರು ನೋಡಿ ಕ್ರಿಮಿನಾಶಕ ಔಷಧ ಕುಡಿದಿದ್ದಾನೆ ಗುಲಬರ್ಗಾಕ್ಕೆ ತಗೆದುಕೊಂಡು ಹೋಗಲು ತಿಳಿಸಿದಾಗ  ಒಂದು ಖಾಸಗಿ ಅಬುಲೆನ್ಸ್ ದಲ್ಲಿ ನಾನು ನಮ್ಮ ಮಾವ & ಮೌಸಿ ಭಾಗವ್ವ ಕೂಡಿ ರಾತ್ರಿ 12:00 ಗಂಟೆಗೆ ಸರ್ಕಾರಿ ದವಾಖಾನೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದಾಗ ಉಪಚಾರ ಹೊಂದುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:16/09/2015 ರಂದು ಬೆಳಗ್ಗೆ 08:00 ಗಂಟೆಗೆ ಮೃತಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

KALABURAGI DISTRICT REPORTED CRIMES

ಪತ್ರಿಕಾ ಪ್ರಕಟಣೆ
ವಿಶ್ವವಿದ್ಯಾಲಯ ಪೊಲೀಸ ಠಾಣೆಯ ವಿವಿಧ ಕಳವು ಪ್ರಕರಣಗಳಲ್ಲಿನ ಆರೋಪಿತರ ಬಂಧನ

ವಿಶ್ವವಿದ್ಯಾಲಯ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ದಿ: 24/10/14 ರಂದು ಸ್ವಾಮಿ ವಿವೇಕಾನಂದ ನಗರದ ಮನೆ ಕಳವು, ದಿ: 03/05/15 ರಂದು ಗುಲಷನ ಅರಾಫತ ಕಾಲೋನಿಯ ಮನೆ ಕಳವು, ದಿ: 28/06/15 ರಂದು ಲಕ್ಷ್ಮಿ ನಗರ ಕಾಲೋನಿಯ ಮನೆ ಕಳವು ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಆರೋಪಿತರನ್ನು ಪತ್ತೆ ಹಚ್ಚುವ ಕುರಿತು ಮಾನ್ಯ ಶ್ರೀ.ಅಮಿತ ಸಿಂಗ್ ಎಸ್.ಪಿ ಸಾಹೇಬ ಕಲಬರುಗಿ, ಮಾನ್ಯ ಶ್ರೀ.ಜಯಪ್ರಕಾಶ ಹೆಚ್ಚುವರಿ ಎಸ್.ಪಿ ಸಾಹೇಬ ಕಲಬುರಗಿ, ಮಾನ್ಯ ವಿಜಯ ಅಂಚಿ ಡಿವೈಎಸ್.ಪಿ ಸಾಹೇಬ ಗ್ರಾಮಾಂತರ ಉಪ-ವಿಭಾಗ, ಮಾನ್ಯ ಜೆ.ಹೆಚ್ ಇನಾಮದಾರ ಸಿ.ಪಿ.ಐ ಎಮ.ಬಿ ನಗರ ವೃತ್ತ ಕಲಬುರಗಿ ರವರ ಮಾರ್ಗದರ್ಶನದ ಮೇರೆಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯ ಶ್ರೀ.ಜಿ.ಎಸ್ ರಾಘವೇಂದ್ರ ಪಿ.ಎಸ್.ಐ (ಕಾ.ಸು), ಹಾಗೂ ಅಪರಾಧ ವಿಭಾಗ ಸಿಬ್ಬಂದಿಯವರಾದ ಸಂತೊಷ ಸಿ.ಪಿ.ಸಿ 935, ದ್ಯಾವಪ್ಪ ಸಿ.ಪಿ.ಸಿ 942, ಸುಲ್ತಾನ ಸಿ.ಪಿ.ಸಿ 958, ರವರ ತಂಡ ರಚಿಸಿ ಕಳವು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರಾದ 1)ಪ್ರಶಾಂತ ತಂದೆ ಗುಂಡಪ್ಪ ಮಾಲೀ ಪಾಟೀಲ, ಸಾ: ಕೋಟನೂರ (ಡಿ) 2)ಹಣಮಂತ ತಂದೆ ಕಾಂತಪ್ಪ ಪೂಜಾರಿ, ಸಾ: ಕೋಟನೂರ (ಡಿ) 3)ಸಿದ್ದು ತಂದೆ ಅಣ್ಣಪ್ಪ ಪೂಜಾರಿ, ಸಾ: ಕೋಟನೂರ (ಡಿ), 4)ಅರುಣ ತಂದೆ ಅಂಬಾರಾಯ ಪೂಜಾರಿ, ಸಾ: ಶಹಾಬಾದ, 5)ಮಾನು ತಂದೆ ಗಂಗಾರಾಮ ರಾಠೋಡ, ಸಾ: ಪಾಣೆಗಾಂವ ಇವರನ್ನು ವಶಕ್ಕೆ ತೆಗೆದುಕೊಂಡು ಮೇಲಿನ ಆರೋಪಿತರಿಂದ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 123 ಗ್ರಾಂ ಬಂಗಾರ ವಿವಿಧ ನಮೂನೆಯ ಆಭರಣಗಳು, 500 ಗ್ರಾಂ ಬೆಳ್ಳಿ ತಂಬಿಗೆ, ಹಾಗೂ ಒಂದು ದ್ವಿಚಕ್ರ ಎಲ್ಲಾ ಸೇರಿ ಒಟ್ಟು 3,51,000/- ಬೆಲೆಬಾಳುವ ಬಂಗಾರದ ಆಭರಣಗಳು, ಬೆಳ್ಳಿ ತಂಬಿಗೆ ಹಾಗೂ 1 ದ್ವಿಚಕ್ರ ವಾಹನಗಳನ್ನು ಜಪ್ತ ಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕಳವು ಪ್ರಕರಣ;
ಚೌಕ ಪೊಲೀಸ್ ಠಾಣೆ:-ದಿನಾಂಕಃ 17.09.2015 ರಂದು ಶ್ರೀ ಅನಸ್ ಕಲೋಡಿ ತಂದೆ ಇಕ್ಬಾಲ್ ಕಲೋಡಿ ಸಾಃ ಡಂಕಾ ಕ್ರಾಸ ಕಲಬುರಗಿರವರು ಠಾಣೆಗೆ ಹಾಜರಾಗಿ ತಾನು ಕಲಬುರಗಿ ನಗರದ ಗೋಳಾ ಚೌಕನಲ್ಲಿರುವ ನವಭಾರತ ಸ್ಟೀಲ್ ಅಂಗಡಿ ಇಟ್ಟಿಕೊಂಡು ವ್ಯಾಪರ ಮಾಡುತ್ತಿದ್ದು ಅಂಗಡಿಗೆ ಬೇಕಾಗುವ ಎಲ್ಲಾ ಸಾಮಾನಗಳು ನೆಹರು ಗಂಜನಲ್ಲಿರುವ ಗೋದಾಮನಲ್ಲಿಟ್ಟು ವ್ಯಾಪಾರ ಮಾಡುತ್ತಿದ್ದು ದಿ 12.09.2015 ರಂದು  ವೆಲ್ಡಿಂಗ ಬೇಕಾಗುವ ಸಾಮಾನಗಳು ಆಡರ್ ಮಾಡಿದ್ದರಿಂದ  ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಸರ್ದಾರ ಪಟೇಲ್ ಎಂಬುವನಿಗೆ ನಾನು ಗೋದಾಮಕ್ಕೆ ಹೋಗಿ 5-6 ವೆಲ್ಡಿಂಗ್ ರಾಡಗಳು ತೆಗೆದುಕೊಂಡು ಬರಲು ಹೇಳಿದ್ದು ಅವನು ನಮ್ಮ ಗೋದಾಮಕ್ಕೆ ಹೋಗಿ ನೋಡಿ ನನ್ನಗೆ ಪೋನ ಮಾಡಿ ವಿಷಯ ತಿಳಿಸಿದೆನೆಂದರೆ ನಮ್ಮ ಗೋದಾಮಿನ ಶೇಟರ್ ಮುರಿದಂತೆಕಾಣುತ್ತಿದೆ ನೀವು ಬಂದು ನೋಡಿರಿ ಅಂತಾ ಹೇಳಿದಾಗ  ನಾನು ಗಾಬರಿಗೊಂಡು ಗೋದಾಮಕ್ಕೆ ಹೋಗಿ ನೋಡಲಾಗಿ ಯಾರೋ ಕಳ್ಳರು ಗೋದಾಮಿನ ಶಟರ್ ಮುರಿದು ಗೋದಾಮಿನಲ್ಲಿಟ್ಟಿದ ಒಟ್ಟು  10 ಬಾಕ್ಸ್ ವೆಲ್ಡಿಂಗ ರಾಡಗಳು ಅಃಕಿಃ 24,850 ಕಳ್ಳತನಮಾಡಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:  ದಿ: 17.09.2015 ರಂದು ಶ್ರೀಮತಿ ಯಲ್ಲಮ್ಮ ಗಂಡ ಬಸವರಾಜ ಭಜಂತ್ರಿ ಸಾ:ಮೌನೇಶ್ವರ ನಗರ ಜೇವರಗಿ ರವರು ಠಾಣೆಗೆ ಹಾಜರಾಗಿ ದಿ:17.09.2015 ರಂದು ರಾತ್ರಿ ೦7:30 ಗಂಟೆಯ ಸುಮಾರಿಗೆ ಜೇವರಗಿ-ಕಲಬುರಗಿ ರಸ್ತೆಯ ಕೋಳಕೂರ ಕ್ರಾಸ್ ದರ್ಗಾದ ಹತ್ತಿರ ನನ್ನ ಗಂಡನು ರೋಡಿನ ಸೈಡಿನಿಂದ ನಡೆದುಕೊಂಡು ಮನೆಯ ಕಡೆಗೆ ಬರುತ್ತಿದ್ದಾಗ ಯಾವುದೋ ಒಂದು ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ನನ್ನ ಗಂಡನಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ಗಂಡನು ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಅಪಘಾತದ ನಂತರ ಅಪರಿಚಿತ ವಾಹನ ಚಾಲಕನು ತನ್ನ ವಾಹನ ನಿಲ್ಲಿಸದೆ ವಾಹನದೊಂದಿಗೆ ಓಡಿ ಹೋಗಿದ್ದು ಕಾರಣ ಸದರಿ ಚಾಲಕ ಮತ್ತು ವಾಹನ ವನ್ನು ಪತ್ತೆ ಮಾಡಿ ಅವನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಕೊಲೆ ಯತ್ನ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ದಿ:17-09-2015 ರಂದು ರಾತ್ರಿ ನನ್ನ ಗಂಡನು ಹಣಮಂತ ಘಂಟೆರ ಮೋಟಾರು ಸೈಕಲ್ ಮೇಲೆ ಹೋಗುತ್ತಿರುವಾಗ ರಾತ್ರಿ 09-00 ಗಂಟೆ ಸುಮಾರಿಗೆ ಚೆನ್ನಬಸಪ್ಪನ ಮನೆಯ ಮುಂದೆ ರೋಡಿನ ಮೇಲೆ 1)ತುಳಜಪ್ಪ ತಂದೆ ಸಿದ್ರಾಮ ತುಳಜಪ್ಪೊರ, 2) ಸಿದ್ರಾಮ ತಂದೆ ಶರಣಪ್ಪ ತುಳಜಪೊರ 3) ಭೀಮಶಂಕರ ತಂದೆ ಚೆನ್ನಬಸಪ್ಪ ತುಳಜಪೊರ, 4) ನಿಂಗಪ್ಪ ತಂದೆ ಚೆನ್ನಬಸಪ್ಪ ತುಳಜಪೊರ, 5) ಚೆನ್ನಬಸಪ್ಪ ತುಳಜಪೊರ, 6) ರತ್ನಮ್ಮ ತಂದೆ ಚೆನ್ನಬಸಪ್ಪ 7) ಮರಿಲಿಂಗಮ್ಮ  ಮತ್ತು 8) ಈರಮ್ಮ ಗಂಡ ಚೆನ್ನಬಸಪ್ಪ   ಎಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ  ಈ ಮಗನಿಗೆ ಕೊಲೆ ಮಾಡಿ ಬಿಡೊಣ ಅಂತ ಹೇಳುತ್ತಾ ತೆಕ್ಕೆಯಲ್ಲಿ ಹಿಡಿದುಕೊಂಡಾಗ ಸಿದ್ರಾಮ್ ತಂದೆ ಶರಣಪ್ಪ ಇತನು ನನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಗಂಡನ ತಲೆಗೆ ಹೊಡೆದು ಭಾರಿ ರಕ್ತಗಾಯಪಡಿಸಿದನು. ನಂತರ ಅದೇ ಕೊಡಲಿಯಿಂದ ಪುನಃ ಪುನಃ ಬಲಗೈ ತೊಳಿನಿಂದ ರಟ್ಟೆಯವರೆಗೆ ಅಲ್ಲಲ್ಲಿ ಹೊಡೆದು ಭಾರಿ ರಕ್ತಗಾಯಪಡಿಸಿದನು ಹಾಗೂ ಉಳಿದವರಾದ ರತ್ನಮ್ಮ, ಮರಿಲಿಂಗಮ್ಮ ಮತ್ತು ಈರಮ್ಮ ಇವರು ಸಹಾ ನನ್ನ ಗಂಡನಿಗೆ ಕೈಯಿಂದ ಮೈಮೇಲೆ ಅಲ್ಲಲ್ಲಿ ಹೊಡೆದರು ನನ್ನ ಗಂಡನ ಬಲಕಿವಿಯಿಂದ ರಕ್ತ ಸೋರುತ್ತಿತ್ತು ಆಗ ನಾನು ಮತ್ತು ನನ್ನ ಸವತಿಯಾದ ಗಂಗಮ್ಮ ಹಾಗೂ ನನ್ನ ಮೈದುನ ಮಲ್ಲಿಕಾರ್ಜುನ ಎಲ್ಲರೂ ಅಳುತ್ತಾ ಚೀರಾಡುತ್ತಾ ಜಗಳ ಬಿಡಿಸಿದರೂ ಸಹಾ ಹಾಗೆಯೇ ನನ್ನ ಗಂಡನಿಗೆ ಹೊಡೆಯಹತ್ತಿದರು ನನ್ನ ಗಂಡನು ಬೇಹೋಷ ಆದಾಗ ಹೊಡೆಯುವದನ್ನು ಬಿಟ್ಟು ಹೋದರು. ಆಗ ನಾವೆಲ್ಲರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ನನ್ನ ಗಂಡನಿಗೆ ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆ ತಂದು ಸೇರಿಕೆ ಮಾಡಿರುತ್ತೇವೆ ಕಾರಣ ನನ್ನ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬಯ್ದು ಕೊಲೆ ಮಾಡುವ ಉದ್ದೇಶದಿಂಧ ಹೊಡಲಿಯಿಂಧ ಹೊಡೆದ ಆರೋಪಿತ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 17-09-2015 ರಂದು ಶ್ರೀ ಅನೀಲ ತಂದೆ ಜಗನ್ನಾಥ ಬಿರಾದಾರ ಸಾ: ಕುಡಕಿ ಇವರು ತನ್ನ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಅದೇ ಗ್ರಾಮದ 1) ಶಿವರಾಯ ತಂದೆ ಅಪ್ಪಾಸಾಬ ಹೊಳಕುಂದಿ, 2) ಸಿದ್ದಪ್ಪ ತಂದೆ ಶಿವರಾಯ ಹೊಳಕುಂದಿ, 3) ಮಾಹಾದೇವಿ ಗಂಡ ಶಿವರಾಯ ಹೊಳಕುಂದಿ ಎಲ್ಲರೂ ಅಕ್ರಮವಾಗಿ ಹೊಲದಲ್ಲಿ ನುಗ್ಗಿ ಕೆಲಸ ಮಾಡುತ್ತಿದ್ದ ಅನೀಲ ತಡೆದು ಅವಾಚ್ಯ ಶಬ್ದಗಳಿಂಧ ಬಯ್ದು ಬಿಡಿಗೆಯಿಂದ ತಲೆಗೆ ಹೊಡೆದು ಜೀವ ಭಯ ಪಡೆಸಿರುವ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.