POLICE BHAVAN KALABURAGI

POLICE BHAVAN KALABURAGI

26 December 2013

Gulbarga District Reported Crimes

ಕೊಲೆ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಸುನೀಲ್ ತಂದೆ ದೌಲತರಾವ್ ಸಿಂಧೆ ಸಾ|| ಗಾಂದಿ ಚೌಕ ಪೋಚಮ್ಮಾಗಲ್ಲಿ ಲಾತೂರು ರಾ|| ಮಾಹಾರಾಷ್ಟ್ರ ರವರ ಮಗಳಾದ ಸೋನಾಲಿಯನ್ನು  ಲಕ್ಷ್ಮಣ್ ತಂದೆ ಬಕ್ಕಪ್ಪ ಕುಸರಂಪಳ್ಳಿ ರೊಂದಿಗೆ ಮದುವೆ ಮಾಡಿಕೊಟ್ಟಿದ್ದು  ಬಳಿಕ 5-6 ತಿಂಗಳು ಗಂಡ, ಅತ್ತೆ, ಮಾವ ಎಲ್ಲರೂ ಸರಿಯಾಗಿ ಇದ್ದರು ನಂತರ ನನ್ನ ಅಣ್ಣನ ಮಗಳಾದ ಸೋನಾಲಿಯೂ ನನ್ನ ಹೆಂಡತಿಯಾ ಸವೀತಾಳಿಗೆ ಪೋನ ಮಾಡಿ  ಮಾತನಾಡಿದಾಗ ಸದರಿ ಗಂಡ ಹಾಗೂ ಗಂಡನ ಮನೆಯವರು ನಿನಗೆ ಅಡುಗೆ ಮಾಡಲು ಬರುವುದಿಲ್ಲ ಹಾಗೂ ನಮ್ಮ ಸೇವೆಮಾಡಲು ಬರುವುದಿಲ್ಲಾ ಹಾಗೂ ಆಕೆಯ ಗಂಡನಾದ ಲಕ್ಷ್ಮಣನು ಸೋನಾಲಿಯ ಶೀಲದ ಬಗ್ಗೆ ಶಂಕಿಸಿ ಜಗಳ ತೆಗೆದು ಅವಮಾನಿಸಿ ಹೊಡೆ ಬಡೆಮಾಡುತ್ತಿದ್ದ ಅನ್ನುವ ವಿಷಯ ನನ್ನ ಹೆಂಡತಿಯಿಂದ ನನಗೆ ತಿಳಿದು ಬರುತ್ತಿತ್ತು ಹಾಗಾಗಿ ನಾನು ಲಗ್ನವಾಗಿ ನಂತರ ಸುಮಾರು 5-6 ಸಲ ತುಮಕುಂಟಾಕ್ಕೆ ಬಂದು ಅವರೆಲ್ಲರಿಗೂ ಬುದ್ದಿವಾದ ಹೇಳಿ ಹೋಗುತ್ತಿದ್ದೆ. ದಿನಾಂಕ 25.12.2013 ರಂದು ಸಾಯಾಂಕಾಲ  04.15 ಗಂಟೆ  ಸುಮಾರಿಗೆ  ನನ್ನ ಅಣ್ಣನ ಮಗಳ ಗಂಡನಾದ  ಲಕ್ಷ್ಮಣನು ನನಗೆ ಫೋನಮಾಡಿ ನಿಮ್ಮ ಮಗಳಾದ ಸೋನಾಲಿಯು ಮೈಮೇಲೆ ಸೀಮೇ ಎಣ್ಣೆ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಸತ್ತಿರುತ್ತಾಳೆ ಅಂತಾ ತಿಳಿಸಿದನು ನಂತರ ನಾನು ನನ್ನ ಹೆಂಡತಿಯಾದ ಸವೀತಾ ನನ್ನ ಹೆಂಡತಿಯ ತಂಗಿಯಾದ ಮನಿಷಾ ನನ್ನ ಹೆಂಡತಿಯ ತಾಯಿಯಾದ ಶಕುಂತಾಲಾ ಹಾಗೂ ನನ್ನ ತಾಯಿಯಾದ ಆಶಾಬಾಯಿ ಎಲ್ಲರೂ ಕೂಡಿಕೊಂಡು ಬಾಡಿಗೆ ವಾಹನವೋಂದನ್ನು  ಮಾಡಿಕೊಂಡು ರಾತ್ರಿಯೇನೆ ತುಮಕುಂಟಾಕ್ಕೆ ಹೋಗಿ ನೋಡಲು ಮನೆಯಲ್ಲಿ ನನ್ನ ಮಗಳಾದ ಸೋನಾಲಿತಯು ಸುಟ್ಟಗಾಯಗಳಿಂದ ಸತ್ತಿದ್ದು ಕಂಡು  ಬಂದಿತ್ತು ಅವಳ ಇಡಿ ಮೈ ಸುಟ್ಟು ಚರ್ಮ ಸುಲಿದಿತ್ತು. ನನ್ನ ಅಣ್ಣನ ಮಳಾದ ಸೋನಾಲಿಯ ಗಂಡನಾದ ಲಕ್ಷ್ಮಣ್ ತಂದೆ ಬಕ್ಕಪ್ಪ ಕುಸರಂಪಳ್ಳಿ ಮಾವನಾದ ಬಕ್ಕಪ್ಪ ತಂದೆ ತಿಪ್ಪಣ್ಣಾ ಕುಸರಂಪಳ್ಳಿ ಮತ್ತು ಅವಳ ಅತ್ತೆಯಾದ ಸರಸಮ್ಮಾ ಗಂಡ  ಬಕ್ಕಪ್ಪಾ ಕುಸರಂಪಳ್ಳಿ ಎಂಬ ಮೂರೂ ಜನರು ಕೂಡಿಕೊಂಡು ನನ್ನ ಅಣ್ನ ಮಗಳಾದ ಸೋನಾಲಿಯ ಶೀಲದ ಬಗ್ಗೆ ಶಂಕಿಸಿ ನಿನಗೆ ಅಡುಗೆ ಮಾಡಲು ಬರುವುದಿಲ್ಲಾ  ಮತ್ತು ನಮ್ಮ ಸೇವೆ ಸರಿಯಾಗಿ ಮಾಡಲು ಬರುವುದಿಲ್ಲಾ  ಅಂತಾ  ಅವಳಿಗೆ  ಹೋಡೆ ಬಡೆ  ಮಾಡಿ  ಅವಳ  ಅವಳ ಮೈಮೇಲೆ  ಸೀಮೆ ಎಣ್ಣೆ  ಸುರಿದು  ಬೆಂಕಿ ಹಚ್ಚಿ ಕೊಲೆಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ  ಪರಮೇಶ್ವರ ತಂದೆ ಮಲ್ಲಪ್ಪಾ ಹುಲಿಕರ ಸಾಃ ಮರಗುತ್ತಿ ತಾಃಜಿಃ ಗುಲಬರ್ಗಾ ರವರು  ಆರಾಮವಿಲ್ಲದ ಕಾರಣ ಕಮಲಾಪೂರದಲ್ಲಿ ಆಸ್ಪತ್ರೆಗೆ ತೋರಿಸುವ ಕುರಿತು ದಿನಾಂಕ: 26-12-2013 ರಂದು ಬೆಳಿಗ್ಗೆ 10-00 ಗಂಟಗೆ ನಾನು,ಮತ್ತು ನನ್ನ ಅಣ್ಣ ಸುನೀಲ ಇಬ್ಬರು ಕೂಡಿಕೊಂಡು ನಮ್ಮ ಬಜಾಜ ಪಲ್ಸರ್ ಮೋಟಾರ ಸೈಕಲ ನಂ. ಕೆಎ:32ಈಡಿ:3606 ನೇದ್ದರ ಮೇಲೆ ಕಮಲಾಪೂರಕ್ಕೆ ಬಂದು ಆಸ್ಪತ್ರೆಗೆ ತೋರಿಸಿಕೊಂಡು ಮರಳಿ ಗುಲಬರ್ಗಾ ಹುಮನಾಬಾದ ಎನ್.ಹೆಚ್. 218 ನೇದ್ದರ ರೋಡಿನ ಮುಖಾಂತರ ನಮ್ಮೂರಿಗೆ ಹೋಗುತ್ತಿರುವಾಗ ಅಂದಾಜು ಬೆಳಿಗ್ಗ 11-30 ಗಂಟೆ ಸುಮಾರಿಗೆ ಮೋ. ಸೈಕಲನ್ನು ಚಲಾಯಿಸುತ್ತಿದ್ದ ನನ್ನ ಅಣ್ಣ ಸುನೀಲ ಈತನು ಕುದುರೆ ಹೊಡ್ಡ ಹತ್ತಿರ ನಮ್ಮ ಮೋ.ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಿದ್ದಾಗ ನಾನುನಿಧಾನವಾಗಿಚಲಾಯಿಸಲು ತಿಳಿ ಹೇಳಿದರು. ಕೂಡಾ ಹಾಗೆ ಅತೀವೇಗದಿಂದ ಚಲಾಯಿಸುತ್ತಾ ಒಮ್ಮಲೇ ಮೋಟಾರ ಸೈಕಲನ್ನು ಸ್ಕಿಡ್ಡ ಮಾಡಿದಾಗ ನಾವು ಮೋಟಾರ ಸೈಕಲ ಸಮೇತ ರೋಡಿನ ಮೇಲೆ ಬಿದಿದ್ದು. ಆಗ ನಾವಿಬ್ಬರು ಎದ್ದು ನೋಡಲಾಗಿನನಗೆ ತಲೆಗೆ ಮುಗಿಗೆ ಭಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 26-12-2013 ರಂದು ಬೆಳಿಗ್ಗೆ 8-15 ಗಂಟೆಗೆ ಶ್ರೀ ವಿಜಯಂದ್ರ ತಂದೆ ಹಣಮಂತರಾವ ನಾಯ್ಕ ರವರು ರೇಲ್ವೆ ಸ್ಟೇಶನ ರೋಡಿಗೆ ಇರುವ ಜಿಸ್ಕಾಂ ಗೇಸ್ಟ ಹೌಸನಲ್ಲಿ ನನ್ನ ಗೆಳಯನಾದ ಮುರಘೇಂದ್ರ ಇವರ ಅಳಿಯನ ಕುಪ್ಪಸ ಕಾರ್ಯಾಕ್ರಮಕ್ಕೆ ಬಂದು ಜೆಸ್ಕಾಂ ಗೇಸ್ಟ ಹೌಸ ಎದುರಿನ ರೋಡಿನ ಪಕ್ಕದಲ್ಲಿ ನಿಲ್ಲಿಸಿದ ಕಾರ ನಂಬರ ಎಪಿ-28 ಡಿಎನ್-3168 ನೇದ್ದಕ್ಕೆ ದಿನಾಂಕ 26-12-2013 ರಂದು ರಾತ್ರಿ 12-45 ಗಂಟೆ ಸುಮಾರಿಗೆ ಕಾರ ನಂಬರ ಎಮ್.ಹೆಚ್-26 ಎಲ್-304 ರ ಚಾಲಕನು ಎಸ್.ವಿ.ಪಿ ಸರ್ಕಲ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಡಿವೈಡರಕ್ಕೆ ಡಿಕ್ಕಿ ಪಡಿಸಿ ಹಾಗೇ ಬಲಗಡೆ ತಿರುಗಿಸಿ ನನ್ನ ಕಾರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಕಾರ ಡ್ಯಾಮೇಜ ಮಾಡಿರಿತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು : 
ಅಫಜಲಪೂರ ಠಾಣೆ : ಶ್ರೀ ಸಿದ್ದಪ್ಪಾ ತಂದೆ ಮಾಳಪ್ಪಾ ಕರಗೋಳ ಸಾ : ಮಲ್ಲಾಬಾದ ಇವರು  ದಿನಾಂಕ 25-12-2013 ರಂದು ರಾತ್ರಿ 08:30 ಗಂಟೆ ಸಮಯಕ್ಕೆ ತಮ್ಮ ಮನೆಯ ಮುಂದೆ ಇದ್ದಾಗ ತಮ್ಮ ಕಾಕನ ಮಗನಾದ ಗಣಪತಿ ಮತ್ತು ಅವನ ಹೆಂಡತಿ ದೇವಕ್ಕಿ ಇಬ್ಬರು ತನ್ನ ಹತ್ತಿರ ಬಂದು ನಮ್ಮ ಹೊಲದಲ್ಲಿ ನಿಮ್ಮ ಎತ್ತುಗಳು ಬಿಟ್ಟಿದ್ದಿಯಾ ಅಂತಾ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೆ ಬಿದ್ದ ಒಂದು ರಾಡಿನಿಂದ ತನ್ನ ಬೇನ್ನಿನ ಮೇಲೆ ಹೊಡೆದು  ಹೆಂಡಿತಿ ಇವಳು ಈ ಹಾಟ್ಯಾನಿಗೆ ಬಿಡಬೇಡ ಖಲಾಸ ಮಾಡು ಅಂತಾ ತನ್ನ ಕೈ ಉಗುರಿನಿಂದ ಫಿರ್ಯಾದಿಯ ಮುಖದ ಮೇಲೆ ಚೂರಿಕೈಯಿಂದ ತಲೆಗೆ ಹೊಡೆದಳು. ಸದರಿಯವರು ಹೊಡೆಯುತ್ತಿದ್ದಾಗ ತಾನು ಕೆಳಗೆ ಬಿದ್ದಿದ್ದು. ತನ್ನ ಇನ್ನೊಬ್ಬ ಕಾಕನಾದ ಅಮೋಗಿ ಈತನ ಮಗಳಾದ ಭಾಗಮ್ಮ ಇವಳು ತನ್ನ ಹತ್ತಿರ ಬಂದು ಕಾಲಿನಿಂದ ತನ್ನ ಬೇನ್ನಿನ ಮೇಲೆ ಒದ್ದಿರುತ್ತಾಳೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರಥಾಬಾದ ಠಾಣೆ :  ದಿನಾಂಕ 20-12-2013 ರಾತ್ರಿ 7-30 ಗಂಟೆಯ ಸುಮಾರಿಗೆ ತನ್ನ ತಮ್ಮ ಶ್ರೀಮಂತ ಮತ್ತು ಅವನ ಮಕ್ಕಳಾದ ಬಸವರಾಜ, ನಾಗಪ್ಪಾ ಇವರು ಕೂಡಿಕೊಂಡು ಅವರ ಎತ್ತಿನ ಬಂಡಿಯಲ್ಲಿ ಕುಳಿತುಕೊಂಡು ನಮ್ಮ ಮನೆಯ ಮುಂದಿನ ರಸ್ತೆಯಿಂದ ಹೋಗುತ್ತಿರುವಾಗ ನಾನು ಮತ್ತು ನನ್ನ ಹೆಂಡತಿ ಅಂಬವ್ವ ನೋಡಿ ಅವರಿಗೆ ನನ್ನ ಮಗ ಲಕ್ಷ್ಮಣ ಈತನಿಗೆ ಸುಮ್ನೆ ಹೊಡೆದ್ದಿರಿ ಯಾಕೆ ಅಂತಾ ಕೇಳುತ್ತಿದ್ದಂತೆ ತಮ್ಮ ಶ್ರೀಮಂತ ಈತನು ನನಗೆ ಮಾಡದು ಮಾಡಿ ನಮಗೆ ರಸ್ತೆಗ್ಯಾ ನಿಲ್ಲಿಸಿ ಕೇಳುತ್ತಿರಿ ಸುಳೆ ಮಕ್ಕಳೆ ಅಂತಾ ಅವಾಚ್ಯ ಬೈಯುತ್ತಾ ಎತ್ತಿನ ಗಾಡಿ ನಿಲ್ಲಿಸಿ ಗಾಡಿಯಲ್ಲಿದ್ದ ತೊಗರಿ ಬಡಿಯುವ ಬಡಿಗೆಯನ್ನು ತಗೆದುಕೊಂಡು ನನ್ನ ಎಡಗೈ ಮುಂಗೈ ಹತ್ತಿರ ಜೋರಾಗಿ ಹೊಡೆದು ಅದೇ ಬಡಿಗೆಯಿಂದ ನನ್ನ ಹೆಂಡತಿಯ ಎಡಗೈ ಮುಂಗೈ ಮೇಲೆ ಹೊಡೆದು ಭಾರಿ ಒಳಪೆಟ್ಟು ಮಾಡಿದನು. ಮತ್ತು ನನ್ನ ಮಗ ಲಕ್ಷ್ಮಣನು ಬಿಡಿಸಲು ಬಂದಾಗ ಬಸವರಾಜ ಈತನು ಈ ಬೋಸಡಿ ಮಗನದ್ದೆ ಅದಾ ಅಂತಾ ಎದೆಯ ಮೇಲಿನ ಅಂಗಿ ಹಿಡಿದು ನೋಕಿ ಕೊಟ್ಟು ಕೆಳಗೆ ಬಿಳಿಸಿ ಗಾಡಿಯಲ್ಲಿನ ಇನ್ನೊಂದು ಬಡಿಗೆಯನ್ನು ತಗೆದುಕೊಂಡು ನನ್ನ ಬೆನ್ನ ಮೇಲೆ ದರಿ ಬರುವಂತೆ ಹೊಡೆದನು. ನಾಗಪ್ಪಾ ಈತನು ಈ ಸೂಳೆ ಮಕ್ಕಳದೂ ಬಹಳ ಆಗಾದ ನಮ್ಮ ಹೊಲದ ವಿಷಯದಲ್ಲಿ ತಕಾರರು ಮಾಡುತ್ತಾ ಬಂದಾರ ಹೊಡೆದು ಖಲಾಸ ಮಾಡಿರಿ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಭಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ದಿನಾಂಕ 25-12-13 ರಂದು ಶ್ರೀ ಅಬ್ದುಲ್ ಸತ್ತರಮೀಯಾ ತಂದೆ ಹುಸೇನ ಸಾಬ್ ಸಾ|| ನೃಪತುಂಗ ನಗರ ಮಳಖೇಡ ರವರು  ತನ್ನ ಅಂಗಡಿಯ ಮುಂದೆ ನಿಂತಾಗ 1.ಬಸೀರ ತಂದೆ ನಜೀರ್ ಚೌಧರಿ 2.ಮೊಹ್ಮದ್ ಇಸಾಕ್ ತಂದೆ ನಜೀರ್ ಚೌಧರಿ 3. ಜಹೀರ್ ತಂದೆ ಜನೀರ್ ಚೌಧರಿ ಸಾ :  ಎಲ್ಲರು ಸ್ಟೇಷನ್ ತಾಂಡಾ ಮಳಖೇಡ ಇವರು  ವಿನಾ ಕಾರಣ ಜಗಳ ತೆಗೆದು ಮುಂದೆ ಹೋಗದಂತೆ ತಡೆದು ಕೈಯಿಂದ ಹೊಡೆ ಬಡೆ ಮಾಡಿ ದುಃಖಾಪಾತ ಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ದಿನಾಂಕ 25-12-13 ರಂದು ಶ್ರೀ ಮಹ್ಮದ್ ಬಸೀರ ತಂದೆ ನಜೀರ್ ಚೌಧರಿ ಸಾ|| ಸ್ಟೇಷನ್ ತಾಂಡಾ ಮಳಖೇಡ ರವರು  ತನ್ನ ಮೋಟಾರು ಸೈಕಲ್ ಮೇಲೆ ಮೊಟ್ಟೆಗಳನ್ನು ಇಟ್ಟುಕೊಂಡು ಅಂಗಡಿಗಳಿಗೆ ನೀಡಲು ಹೋಗುತ್ತಿದ್ದಾ 1. ಅಬ್ದುಲ್ ಸತ್ತರ ಮೀಯಾ ತಂದೆ ಹುಸೇನ ಸಾಬ್  2. ಮೊಹ್ಮದ್ ಇಬ್ರಾಹಿಂ ತಂದೆ ಹುಸೆನಚ ಚೌಧರಿ  3. ಅಬ್ದುಲ್ ರಹೀಮ್ ತಂದೆ ಹುಸೆನ ಸಾಬ್ ಚೌಧರಿ  ಸಾ|| ಎಲ್ಲರು ಸ್ಟೇಷನ್ ತಾಂಡಾ ಮಳಖೇಡ ಕೂಡಿಕೊಂಡು ಫಿರ್ಯಾದಿದಾರನಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಫಿರ್ಯಾದಿಗೆ ಬೈದು ಕಲ್ಲು ಮತ್ತು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ನಾಗಮ್ಮ ಗಂಡ ಅಮೋಗಿ ಕರಚೋಳ ಸಾ : ಮಲ್ಲಾಬಾದ ಇವರು ಮತ್ತು ಮಕ್ಕಳಾದ ಭಾಗಮ್ಮಕಾವೇರಿ  ಮೂರು ಜನರು ದಿನಾಂಕ 25-12-2013 ರಂದು ಬೆಳಿಗ್ಗೆ 08:00 ಗಂಟೆ ಸಮಯಕ್ಕೆ ನಮ್ಮ ಗ್ರಾಮದ ಶರಣಬಸವೇಶ್ವರ ಗುಡಿಯ ಮುಂದೆ ಹೊಗುತ್ತಿದ್ದಾಗ ನನ್ನ ಭಾವ ಮಾಳಪ್ಪ ಮತ್ತು ಅವನ ಹೆಂಡತಿ ಶಾರವ್ವ ಹಾಗೂ ಮಕ್ಕಳಾದ ಸಿದ್ದಪ್ಪ ಮತ್ತು ರೇಣುಕಾ ಇವರು 4 ಜನರು ನಮ್ಮ ಹತ್ತಿರ ಬಂದು ನಮ್ಮನ್ನು ತಡೆದು ನಿಲ್ಲಿಸಿಜಗಳ ತಗೆದು ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೆ ಬಿದ್ದ ಒಂದು ಕಲ್ಲು ತಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿ ನನ್ನ ಎದೆಯ ಮೇಲೆ ಉಗುರಿನಿಂದ ಚೂರಿ ತರಚಿದ ಗಾಯ ಮಾಡಿರುತ್ತಾರೆ ಮತ್ತು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಮರಣ ಪ್ರಕರಣ :
ಬ್ರಹ್ಮಪೂರ ಠಾಣೆ : ನಾಗಪ್ಪ ತಂದೆ ಅಂಬಣ್ಣ  ಸಾ|| ಸರಾಫ ಬಜಾರ ಗುಲಬರ್ಗಾ ಇವರು  ಆರಾಮ ಇರುವದಿಲ್ಲಾ ಅಂತಾ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಬಂದು ಸೇರಿಕೆಯಾಗಿದ್ದು ಇರುತ್ತದೆ. ಸದರಿ ವ್ಯಕ್ತಿಯು ಇಲ್ಲಿಯ ವರೆಗೆ ಆಸ್ಪತ್ರೆಯಲ್ಲಿ ಉಪಚಾರ ಪಡೆದಿದ್ದು ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ 25-12-2013 ರಂದು ಬೆಳಿಗ್ಗೆ 6:00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಸದರಿ ವ್ಯಕ್ತಿಯು ತನಗಿದ್ದ ಯಾವದೋ ಕಾಯಿಲೆಯಿಂದ ಗುಣ ಮುಖವಾಗದೆ ಮೃತಪಟ್ಟಿದ್ದು ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲಾ. ಮೃತ ವ್ಯಕ್ತಿಯ ಹೆಸರು ನಾಗಪ್ಪ ತಂದೆ ಅಂಬಣ್ಣ ಸಾ|| ಸರಾಫ ಬಜಾರ ಗುಲಬರ್ಗಾ ಅಂತಾ ಈ ಮೋದಲು ಅವನು ಉಪಚಾರ ಪಡೆಯಲು ಆಸ್ಪತ್ರೆಗೆ ಬಂದಾಗ ಬರೆಯಿಸಿದ್ದು ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಇರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.