POLICE BHAVAN KALABURAGI

POLICE BHAVAN KALABURAGI

10 May 2017

Kalaburagi District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 09.05.2017 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಮೃತ ಸಲಾವುದ್ದೀನ ಇತನು  ಆರಟಿಓ ಕ್ರಾಸ ದಿಂದ ಫಾರ್ಮಸಿ ಕಾಲೇಜ್ ಎದುರುಗಡೆ ಬರುವ ತಮ್ಮ ರೋಮಿಗೆ ಹೋಗುವ ಕುರಿತು ನಡೆದುಕೊಂಡು ರೋಡ ಮೇಲೆ ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ರಸ್ತೆ ದಾಟುತೀರುವಾಗ ಫಾರ್ಮಸಿ ಕಾಲೆಜ್ ಎದುರಿನ ರೋಡ ಮೇಲೆ ಆಟೋರಿಕ್ಷಾ ನಂ ಕೆಎ-32-ಬಿ-4024 ನೇದ್ದರ ಚಾಲಕನು ಆರಟಿಓ ಕ್ರಾಸದಿಂದ ಜಿಜಿಹಚ್ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಆಟೋರಿಕ್ಷಾ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತೀರುವ ಮೃತ ಸಲಾವುದ್ದೀನ ಇತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರಿ ಗಾಯಗೊಳಿಸಿದ್ದರಿಂದ ಸಲಾವುದ್ದೀನ ಇತನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿದ್ದು ಸಲಾವುದ್ದೀನ ಇತನು ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ರಾತ್ರಿ 8-50 ಗಂಟೆಯ ಸುಮಾರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ  ಶ್ರೀ ಅರ್ಬಾಸ ತಂದೆ ಅಯ್ಯುಬ ಬಡಕಲ   ಸಾ : ಮಾರ್ಕೇಟ ಯಾರ್ಡ ಮಾಲೆಗಾಂವ ರೋಡ ಸೋಲ್ಲಾಪೂರ ಹಾ.ವ. ಫಾರ್ಮಸಿ ಕಾಲೇಜ ಎದುರುಗಡೆ ಸೇಡಂ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ಶ್ರೀ ಗುರುಲಿಂಗಪ್ಪ ತಂದೆ ಈರಣ್ಣಾ ಗೊಗಶೆಟ್ಟಿ, ಸಾ:ಚಿಂಚನಸೂರ ಗ್ರಾಮ ಇವರ ಊರಿನ ಸೀಮಾಂತರದ ಸರ್ವೆ ನಂ. 212ನೇದ್ದರಲ್ಲಿ 02 ಎಕರೆ 12 ಗುಂಟೆ ನಿರಾವರಿ ಜಮೀನು ಇದ್ದು ವರ್ಷ ಕಬ್ಬು ನಾಟಿ ಮಾಡಿರುತ್ತೇವೆ. ನಾನು ದಿನಾಲೂ ಹೊಲಕ್ಕೆ ಹೋಗಿ ಬರುವುದು ಮಾಡುತ್ತಿರುತ್ತೇನೆ. ನಮ್ಮ ಹೊಲಕ್ಕೆ ಹೊಗಿಬರಲು ನಂಡಕಿ ನಾಲಾದಿಂದಲೆ ದಾರಿ ಇರುತ್ತದೆ. ಹೀಗಿದ್ದು ದಿನಾಂಕಃ 09/05/2017 ರಂದು ಮುಂಜಾನೆ 08-00 ಗಂಟೆ ಸುಮಾರಿಗೆ ನಾನು ನಮ್ಮ ಹೊಲದಿಂದ ಮರಳಿ ಮನೆಗೆ ಬರುವಾಗ ನಮ್ಮೂರಿನ ವಿಠಲರಾವ ಪಾಟೀಲ ಹಾಗೂ ಸೂರ್ಯಕಾಂತ ಶೃಂಗೇರಿ ಇವರ ಹೊಲದ ಹತ್ತಿರದಲ್ಲಿ ಬರುವಾಗ ನಂಡಕಿ ನಾಲದಲ್ಲಿ ಮೂಳೆ ಹೊರಗೆ ಬಂದಿದ್ದು ಅದರ ಸಮೀಪ ಹೋಗಿ ನೊಡಲಾಗಿ ಅದಕ್ಕೆ ಒಂದು ಪ್ಯಾಂಟಿನ ಬಟ್ಟೆ ಸಹ ಸಿಕ್ಕಿಬಿದ್ದಂತೆ ಕಂಡುಬಂತು. ಮತ್ತು ದುರ್ವಾಸನೆ ಬರುತ್ತಿತ್ತು. ನಂತರ ನಾನು ಗಾಬರಿಗೊಂಡು ಗ್ರಾಮಕ್ಕೆ ಹೋಗಿ ವಿಷಯವನ್ನು ನಮ್ಮೂರಿನ ಜಬ್ಬರ ಮೂಲಗೆ, ಪಂಡಿತ ಪೂಜಾರಿ, ಶೌಕತ ಮೂಲಗೆ ಹಾಗೂ ಮೈಬೂಬಸಾಬ ಜನವಾಡ ರವರುಗಳಿಗೆ ತಿಳಿಸಿ ನಂತರ ನಾನು ಮತ್ತು ಮೇಲ್ಕಂಡವರೆಲ್ಲರೂ ಸೇರಿ ಮತ್ತೆ ಮರಳಿ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಮೂಳೆಯು ಒಬ್ಬ ವ್ಯಕ್ತಿಯದೆ ಆಗಿರುವಂತೆ ಕಂಡುಬರುತ್ತಿದ್ದು, ವ್ಯಕ್ತಿಯ ಎಲುಬು ಯಾವುದೋ ಪ್ರಾಣಿಗಳು ಕೆದರಿ ತಿಂದಂತೆ ಕಂಡುಬರುತ್ತಿದೆ. ಸದರಿ ವ್ಯಕ್ತಿಯ ಕಾಲಿನ ಮೂಳೆಯ ಹೊರತು ಪಡಿಸಿ ಬೇರೆ ಯಾವುದೇ ಭಾಗ ಕಾಣಿಸದೆ ದೇಹದ ಉಳಿದ ಭಾಗ ಮಣ್ಣಿನಲ್ಲಿ ಹುತಿರುತ್ತದೆ. ಸದರಿ ವ್ಯಕ್ತಿಯ ಸಾವು ಅನುಮಾನಾಸ್ಪದವಾಗಿ ಇರಬಹುದೆಂದು ಮೇಲ್ನೊಟಕ್ಕೆ ಕಂಡುಬರುತ್ತದೆ. ಸದರಿ ವ್ಯಕ್ತಿಯ ಸಾವು ಸುಮಾರು 10-12 ದಿವಸಗಳ ಹಿಂದೆ ಸಂಭವಿಸಿರಬಹುದು. ಆದ್ದರಿಂದ ಮಾನ್ಯರು ಸದರಿ ಮೃತದೇಹವನ್ನು ಹೊರಗೆ ತೆಗೆಸಿ ಮೃತ ವ್ಯಕ್ತಿಯ ಬಗ್ಗೆ ಮತ್ತು ಸಾವಿನ ಬಗ್ಗೆ ತನಿಖೆಯಾಗಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 08-05-2017 ರಂದು ಬೆಳಿಗ್ಗೆ ಶ್ರೀ ಭೀರಪ್ಪ ತಂದೆ ಅಮೋಗಸಿದ್ದ ಜಗಲಗೊಂಡ ಸಾ|| ಹವಳಗಾ ತಾ||ಅಫಜಲಪೂರ ಮತ್ತು ನನ್ನ ತಮ್ಮನಾದ ರಾಜಕುಮಾರ ಹಾಗೂ ನಮ್ಮ ತಂದೆ ಅಮೋಗಸಿದ್ದ ಮೂರು ಜನರು ನಮ್ಮ ಮನೆಯ ಮುಂದೆ ಮಾತಾಡುತ್ತಾ ನಿಂತಿದ್ದಾಗ ನಮ್ಮ ಜೋತೆಗೆ ಜಗಳ ಮಾಡುತ್ತಿದ್ದ 1) ಸಂಜು ತಂದೆ ಪೀರಪ್ಪ ಸೋಲ್ಲಾಪೂರ 2) ರಾಜು ತಂದೆ ಪೀರಪ್ಪ ಸೋಲ್ಲಾಪೂರ 3) ಪೀರಪ್ಪ ತಂದೆ ಮಲ್ಲಪ್ಪ ಸೋಲ್ಲಾಪೂರ ಸಾ|| ಎಲ್ಲರೂ ಹವಳಗಾ ಇವರು ನಮ್ಮ ಹತ್ತಿರ ಬಂದು ಮೂರು ಜನರು ನಮಗೆ ಏನೊ ಬೋಸಡಿ ಮಕ್ಕಳ್ಯಾ ಕರೆಂಟ ವಾಯರ್ ನಾವೆ ಹರದಿವಿ ಅಂತಾ ಹೇಳಿರಿ ಯಾಕ ಸೋಕ್ಕ ಬಂದಾದ ನಿಮಗ ಅಂತಾ ಮೂರು ಜನರು ಏರಿ ಮಿಟ್ಟಿ ನಮ್ಮ ಮೈ ಮೇಲೆ ಬಂದು, ಅವರಲ್ಲಿ ಸಂಜು ಈತನು ಕಲ್ಲು ತಗೆದುಕೊಂಡು, ಅದೆ ಕಲ್ಲಿನಿಂದ ನನ್ನ ಬಲಗೈಗೆ ಹೊಡೆದು ಕಾಲಿನಿಂದ ಒದ್ದನು, ರಾಜು ಈತನು ನನ್ನ ತಮ್ಮ ರಾಜಕುಮಾರನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಹೊಡೆದು, ಕಾಲಿನಿಂದ ಒದ್ದಿರುತ್ತಾನೆ. ಪೀರಪ್ಪ ಈತನು ಕೈಯಿಂದ ನನ್ನ ತಂದೆಗೆ ಹೊಡೆದಿದ್ದು, ನನ್ನ ತಂದೆಗೆ ಅಷ್ಟೆನು ಗಾಯಗಳು ಆಗಿರುವುದಿಲ್ಲ. ಸದರಿ ಮೂರು ಜನರು ಕೂಡಿ ನನಗೆ ಮತ್ತು ನನ್ನ ತಮ್ಮನಿಗೆ ನೇಲಕ್ಕೆ ಹಾಕಿ ಕಾಲಿನಿಂದ ಒದೆಯುವುದು ಕೈಯಿಂದ ಹೊಡೆ ಬಡೆ ಮಾಡುವುದು ಮಾಡಿರುತ್ತಾರೆ. ಮಕ್ಕಳ್ಯಾ ನಿವು ಇದೆ ರೀತಿ ಮುಂದುವರೆಸ್ರಿ ನಾವು ನಿಮಗ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೇದರಿಕೆ ಹಾಕಿರುತ್ತಾರೆ.
ಅಫಜಲಪೂರ ಠಾಣೆ : ಶ್ರೀ ಕಲ್ಲಪ್ಪ ತಂದೆ ದೌಲಪ್ಪ ತಳಕೇರಿ ಸಾ|| ದಿಕ್ಸಂಗಾ(ಕೆ) ತಾ|| ಅಫಜಲಪೂರ ರವರ  ಮನೆಯ ಜಾಗದ ಸಂಬಂಧ ನಮ್ಮ ಅಣ್ಣ ತಮ್ಮಕಿಯ ನಾಗಪ್ಪ ತಂದೆ ಹಣಮಂತ  ತಳಕೇರಿ ಇವರ ನಡುವೆ ತಂಟೆ ತಕರಾರು ಇರುತ್ತದೆ. ಸದ್ಯ ಸದರಿ ನಾಗಪ್ಪ ಇವರು ಮನೆ ಕಟ್ಟುತ್ತಿದ್ದು, ಅವರ ಮನೆ ಬಾಗಿಲನ್ನು ನಮ್ಮ ಖುಲ್ಲಾ ಜಾಗದ ಕಡೆಗೆ ಬಿಡುತ್ತಿದ್ದಾರೆ. ದಿನಾಂಕ 07/05/2017 ರಂದು ನಾಗಪ್ಪ ತಂದೆ ಹಣಮಂತ ತಳಕೇರಿ ಮತ್ತು ಅವನ ತಂದೆ ಹಣಮಂತ ತಳಕೇರಿ ಇವರಿಗೆ ನಮ್ಮ ಜಾಗದ ಕಡೆಗೆ ಬಾಗಿಲು ಬಿಡಬೇಡಿ, ನಾವು ಮನೆ ಕಟ್ಟುತ್ತೇವೆ, ಆಗ ತೊಂದರೆ ಆಗುತ್ತದೆ ಎಂದು ಹೇಳಿದಕ್ಕೆ ಸದರಿ ನಾಗಪ್ಪ ಹಾಗೂ ಅವನ ತಂದೆ ಹಣಮಂತ ಇಬ್ಬರು ಕೂಡಿ ನನ್ನನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಇಬ್ಬರೂ ಕೂಡಿ ನನಗೆ ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆಸದರಿಯವರು ನನಗೆ ಹೊಡೆಯುತಿದ್ದಾಗ ಅಲ್ಲೆ ಇದ್ದ ಮಲ್ಲವ್ವ ಗಂಡ ಸಿತಾರಾಮ ದೇವರಮನಿ, ಚಂದ್ರಭಾಗವ್ವ ದೊಡ್ಡಮನಿ ರವರು ಕೂಡಿ ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಸದರಿಯವರು ಅಲ್ಲಿಂದ ಹೋಗುವಾಗ ನನಗೆ ಬೋಸಡಿ ಮಗನಾ ನಿನಗೆ ಜಿವ ಸಹಿತ ಬಿಡೊದಿಲ್ಲ ಅಂತ ಅಂದು ಅಲ್ಲಿಂದ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಬಸವರಾಜಗೌಡ ತಂದೆ ವಿಠ್ಠಲಗೌಡ ಪಾಟೀಲ ಸಾ: ಅಳ್ಳಗಿ (ಬಿ) ಇವರದು ಊರಿನಲ್ಲಿ ಅದ್ಯಕ್ಷರು ಶ್ರೀ ಶಾಂತಲಿಂಗೇಶ್ವರ ಮಹಿಳಾ ಮಂಡಳಿ ಹೆಸರಿನಲ್ಲಿ ನ್ಯಾಯಬೆಲೆ ಅಂಗಡಿ ಇದ್ದು, ಸದರಿ ನ್ಯಾಯಬೆಲೆ ಅಂಗಡಿಯ ಅದ್ಯಕ್ಷೆ ನನ್ನ ಮಗಳಾದ ಸುಧಾ ಗಂಡ ರವಿ ಹಿಂದಿನಮನಿ ಇವಳು ಇರುತ್ತಾಳೆ. ಸದರಿ ಅಂಗಡಿಯನ್ನು ಸುಮಾರು 20 ವರ್ಷಗಳಿಂದ ನಾನೆ ವ್ಯೆವಹರಿಸಕೊಂಡು ಹೊಗುತ್ತಿದ್ದು ನಮ್ಮೂರಿನ ಸೈದಪ್ಪ ತಂದೆ ಶೇಟ್ಟೆಪ್ಪ ತೇಗ್ಗಳ್ಳಿ ಈತನು ಆಹಾರ ಧಾನ್ಯವನ್ನು ವಿತರಣೆ ಮಾಡುತ್ತಿದ್ದನು, ಅದರಂತೆ ಸದರಿ ಸೈದಪ್ಪ ಈತನು ಒಂದು ವರ್ಷದ ಹಿಂದೆ ಮರಣಹೊಂದಿದ್ದರಿಂದ, ನನ್ನ ಅಣ್ಣನಾದ ಶರಣಗೌಡ ಹಾಗೂ ಅವನ ಮಗ ಅವಿನಾಶ ಹಾಗೂ ಹೆಂಡತಿ ಮಹೇಶ್ವರಿ ನನ್ನ ಮನೆಗೆ ಬಂದು ಆಹಾರ ಧಾನ್ಯ ಹಂಚಿಕೆ ಮಾಡುತ್ತಿದ್ದ ಸೈದಪ್ಪನು ಮೃತಪಟ್ಟಿದ್ದಾನೆ. ಇಂದಿನಿಂದ ನಾವೆ ಹಂಚಿಕೆ ಮಾಡುತ್ತೇವೆ ನಮಗೆ ಕೋಡು ಅಂತಾ ಕೇಳಿಕೊಂಡ ಮೇರೆಗೆ, ನಾನು ಸರಿ ನಿವೇ ಹಂಚಿಕೆ ಮಾಡಿ ಅಂತಾ ಹೇಳಿ ಆಹಾರ ಧಾನ್ಯ ಹಂಚಿಕೆ ಮಾಡಲು ಕೊಟ್ಟಿರುತ್ತೇನೆ. ಅದರಂತೆ ನನ್ನ ಅಣ್ಣ ಹಾಗೂ ಅವನ ಮನೆಯವರು ಆಹಾರ ಧಾನ್ಯವನ್ನು ಸರಿಯಾಗಿ ಹಂಚಿಕೆ ಮಾಡದೆ ಹಾಗು ಹಂಚಿಕೆ ಮಾಡಿದ ಬಗ್ಗೆ ನನಗೆ ಲೇಕ್ಕ ಪತ್ರ ಕೊಡದಿದ್ದ ಕಾರಣ, ನಾನು ಅವರನ್ನು ಆಹಾರ ಧಾನ್ಯ ವಿತರಣೆ ಮಾಡುವುದನ್ನು ಬಿಡಿಸಿ ನಾನೆ ವಿತರಣೆ ಮಾಡುತ್ತಿರುತ್ತೇನೆ. ನಾನು ಸದರಿಯವರಿಗೆ ಆಹಾರ ಧಾನ್ಯವನ್ನು ವಿತರಣೆ ಮಾಡುವುದನ್ನು ಬಿಡಿಸಿದ್ದರಿಂದ ಸದರಿಯವರು ನನ್ನ ಮೇಲೆ ಭಾರಿ ದ್ವೇಷ ಹೊಂದಿದ್ದು  ದಿನಾಂಕ 10-01-2017 ರಂದು ಬೆಳಿಗ್ಗೆ 1) ಶರಣಗೌಡ 2) ಅವಿನಾಶ 3) ಮಹೇಶ್ವರಿ ಇವರು ಮೂರು ಜನರು ನಮ್ಮ ಹೊಲಕ್ಕೆ ಬಂದು ನನಗೆ ಮಗನೆ ನೀನಗೆ ಕೊಲೆ ಮಾಡುತ್ತೇವೆ ಎಂದು ಜೀವ ಬೇದರಿಕೆ ಹಾಕಿ ಹೊಗಿರುತ್ತಾರೆ. ದಿನಾಂಕ 05-04-2017 ರಂದು ರಾತ್ರಿ 8:30 ಗಂಟೆ ಸುಮಾರಿಗೆ 1) ಶರಣಗೌಡ 2) ಅವಿನಾಶ 3) ಮಹೇಶ್ವರಿ ಇವರು ಮೂರು ಜನರು ಕೂಡಿ ನನ್ನ ಮೋಬೈಲಿಗೆ 8861907252 ನಂಬರನಿಂದ ಪೋನ ಮಾಡಿ, ನೀನು ಊರಿಗೆ ಯಾವಾಗ ಬರುತ್ತಿ, ನಿನಗೆ ಮರ್ಡರ ಮಾಡುತ್ತೇವೆ ಅಂತಾ ಬೇದರಿಕೆ ಹಾಕಿ, ರಾತ್ರಿ ಸುಮಾರು 01:00 ಗಂಟೆಗೆ ಮೂರು ಜನರು ಕೂಡಿಕೊಂಡು ನನ್ನ ಮನೆಯ ಮುಂದೆ ನಿಂತಿದ್ದ ಬೋಲ್ಲೇರೋ ವಾಹನ ನಂ ಕೆಎ-28 ಎನ್-7045 ಇದರ ಗ್ಲಾಸ ಕೂಡಾ ಒಡೆದು ಇದು ನಿನಗೆ ಶಾಂಪಲ್ ತೋರಿಸುತ್ತೇವೆ, ಮುಂದೆ ನೀನು ಊರಿಗೆ ಬಂದರೆ ಮರ್ಡರ ಮಾಡುತ್ತೇವೆ ಎಂದು ಬೇದರಿಕೆ ಹಾಕಿ ಹೋಗಿರುತ್ತಾರೆ. ದಿನಾಂಕ 06-05-2017 ರಂದು ಮದ್ಯಾಹ್ನ ನಾನು ಅಳ್ಳಗಿ (ಬಿ) ಗ್ರಾಮದ ನ್ಯಾಯಬೆಲೆ ಅಂಗಡಿಯ ಮುಂದೆ ಆಹಾರಾ ಧಾನ್ಯ ಲಾರಿಯಿಂದ ಇಳಿಸುತ್ತಿದ್ದಾಗ, ಸದರಿ 1) ಶರಣಗೌಡ 2) ಅವಿನಾಶ 3) ಮಹೇಶ್ವರಿ ಇವರು ಮೂರು ಜನರು ನ್ಯಾಯಬೆಲೆ ಅಂಗಡಿಗೆ ಬಂದು ಗಲಾಟೆ ಮಾಡಿ ನಾನು ಆಹಾರ ಧಾನ್ಯ ಇಳಿಸದಂತೆ ಬೇದರಿಕೆ ಹಾಕಿ ಕಲ್ಲು ಎತ್ತಿ ಹೊಡೆಯಲು ಬಂದು ಆಹಾರ ಧಾನ್ಯ ಲಾರಿಯಿಂದ ಇಳಿಸಲು ಅಡೆ ತಡೆ ಮಾಡಿರುತ್ತಾರೆ. ಆಗ ನಾನು ರೀತಿ ಅಡೆ ತಡೆ ಮಾಡಿದ್ದರಿಂದ ಆಹಾರ ಧಾನ್ಯವನ್ನು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಇಳಿಸಿರುತ್ತೇನೆ. ಹಾಗೂ ನನಗೆ 5 ಲಕ್ಷ ರೂಪಾಯಿ ಕೊಡು ಅಂತಾ ದಬ್ಬಾಳಿಕೆ ಮಾಡಿರುತ್ತಾರೆ, ಹಾಗೂ ನಿನಗೆ ಒಬ್ಬನೆ ಗಂಡಸು ಮಗನು ಇರುವುದರಿಂದ ನಿನಗೆ ಹಾಗೂ ನಿನ್ನ ಮಗನಿಗೆ ಮರ್ಡರ ಮಾಡಿದರೆ ಎಲ್ಲಾ ಆಸ್ತಿ ನಮಗೆ ಆಗುತ್ತದೆ ಎಂದು ಹೇಳಿರುತ್ತಾರೆ, ಇದರಿಂದ ನಾನು ಹೆದರಿ ನನ್ನ ಎಲ್ಲಾ ಆಸ್ತಿಯನ್ನು ಬೇರೆಯವರಿಗೆ ಪಾಲಿನಂತೆ ಹಚ್ಚಿರುತ್ತೇನೆ. 1) ಶರಣಗೌಡ ತಂದೆ ವಿಠ್ಠಲಗೌಡ ಪಾಟೀಲ 2) ಅವಿನಾಶ ತಂದೆ ಶರಣಗೌಡ ಪಾಟೀಲ 3) ಮಹೇಶ್ವರಿ ಗಂಡ ಶರಣಗೌಡ ಪಾಟೀಲ ಸಾ|| ಎಲ್ಲರೂ ಅಳ್ಳಗಿ (ಬಿ) ಮೂರು ಜನರು ನನಗೆ ಪದೆ ಪದೆ ಕೋಲೆ ಮಾಡುತ್ತೇನೆ ಅಂತಾ ಜೀವ ಬೇದರಿಕೆ ಹಾಕುವುದು ಹಾಗೂ ಪಡಿತರ ಆಹಾರ ಧಾನ್ಯವನ್ನು ಹಂಚಿಕೆ ಮಾಡದಂತೆ ಅಡೆ ತಡೆ ಮಾಡುವುದು ಮತ್ತು ಹೊಲಕ್ಕೆ ಬರದಂತೆ ಬೇದರಿಕೆ ಹಾಕುವುದು ಮಾಡಿರುತ್ತಾರೆ, ಹಾಗೂ ನನ್ನ ಬೋಲ್ಲೆರೊ ವಾಹವನ್ನು ಜಕಂ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.