POLICE BHAVAN KALABURAGI

POLICE BHAVAN KALABURAGI

09 October 2012

GULBARGA DISTRICT REPORTED CRIME


ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ:08-10-2012 ರಂದು ಸಾಯಂಕಾಲ 6-30 ಗಂಟೆಗೆ ಗೌರ (ಬಿ) ಗ್ರಾಮದ ಅನುಸೂಯಾ ಬೂಸಿ ಇವಳು ಮೃತ ಪಟ್ಟಿದ್ದು, ಇವಳ ಶವ ಸಂಸ್ಕಾರ ಮಾಡಲು ಗ್ರಾಮದ ಪರಿಶಿಷ್ಠ  ಜಾತಿ  ರವರಿಗೆ ಸೇರಿದ ಸ್ಷಶಾನ ಜಾಗದಲ್ಲಿ ಅಂತಿಮ ಸಂಸ್ಕಾರ ಮಾಡಲು ನಾನು ಮತ್ತು ನನ್ನ ಸಂಗಡಿಗರು ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ ಮಲ್ಲಣಗೌಡ ತಂದೆ ಚಂದ್ರಷಾ ಪಾಟೀಲ ಸಂಗಡ 9 ಜನರು ಸಾ||  ಎಲ್ಲರೂ ಗೌರ (ಬಿ) ಗ್ರಾಮ ತಾ|| ಅಫಜಲಪೂರ ರವರು ನನಗೆ ಮತ್ತು ನನ್ನ ಸಂಗಡಿಗರಿಗೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಮಲ್ಲಿಕಾರ್ಜುನ ತಂದೆ ಮಹಾದೇವ ದೊಡ್ಡಮನಿ ಜಾ||ಎಸ್ ಸಿ ಸಾ|| ಗೌರ (ಬಿ) ಗ್ರಾಮ ತಾ|| ಅಫಜಲಪೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:172/2012 ಕಲಂ, 323, 324, 506 ಸಂಗಡ 149 ಐಪಿಸಿ ಮತ್ತು  3 (1) (10) ಎಸಸಿ/ಎಸಟಿ ಪಿಎ ಆಕ್ಟ 1989 ಪ್ರಕಾರ  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.