POLICE BHAVAN KALABURAGI

POLICE BHAVAN KALABURAGI

10 July 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ ಮಲ್ಲಿಕಾರ್ಜುನ ತಂದೆ ಭೀಮರಾವ ಪೊಲೀಸ್ ಪಾಟೀಲ ಸಾ|| ನಾವದಗಿ ತಾ|| ಚಿಂಚೋಳಿ ರವರು ನನ್ನ ಮಗನಾದ ಭೀಮರಾವ ಇತನು ನನ್ನ ಎರಡನೆಯ ಮಗನ ಮದುವೆಯ ಲಗ್ನ ಪತ್ರಗಳನ್ನು ಹಂಚಲು ಹಾಗು ತನ್ನ ಸಹೋದರಿಯನ್ನು ಕರೆದುಕೊಂಡು ಬರಲು ದಿನಾಂಕ 09-07-2012 ರಂದು ಸಾಯಂಕಾಲ 5:30 ಗಂಟೆಗೆ ಟಂಟಂ ಆಟೋ ನಂ. ಕೆಎ 33 4345 ನೇದ್ದರಲ್ಲಿ ಐನಾಪುರದಿಂದ ಭುಯ್ಯಾರಕ್ಕೆ ಹೋಗುವಾಗ ಐನಾಪುರ-ಖಾನಾಪುರ ರಸ್ತೆ ಮಧ್ಯೆ ಬೆಟ್ಟೆನಹಳ್ಳ ಹತ್ತಿರ ಟಂಟಂ ಚಾಲಕನಾದ ಹಣಮಂತ ಎಂಬುವವನು ತನ್ನ ಟಂಟಂ ನ್ನು ಅತಿ ವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಪಲ್ಟಿಮಾಡಿರುತ್ತಾನೆ ಪಲ್ಟಿ ಮಾಡಿದ ಪರಿಣಾಮ ಅದರಲ್ಲಿರುವ ಪ್ರಯಾಣಿಕರಿಗೆ ಸಾದಾ ಮತ್ತು ಗುಪ್ತಗಾಯಳಾಗಿದ್ದು ಭೀಮರಾವ ಇತನಿಗೆ ತಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆ ಗುನ್ನೆ ನಂ: 66/2012 ಕಲಂ 279337304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ ಗುರುನಾಥ ತಂದೆ ಸಿದ್ರಮಪ್ಪಾ ಮೈಂದರಗಿ ಸಾ: ಮಾದನ ಹಿಪ್ಪರಗಾ ನಾವು ಇಬ್ಬರೂ ಅಣ್ಣ ತಮ್ಮಂದಿರಿದ್ದು, ನಾನು ನನ್ನ ಅಣ್ಣ ಇಬ್ಬರೂ ಬೇರೆ ಬೇರೆಯಾಗಿರುತ್ತೆವೆ. ಆಸ್ತಿಯ ಸಂಬಂಧವಾಗಿ ದಿ|| 10/07/2012 ರಂದು ಬೆಳಿಗ್ಗೆ 9-00 ಗಂಟೆಗೆ ನಾನು ನಿಂಗದಳ್ಳಿ ರೋಡಿನ ಪಕ್ಕದಲ್ಲಿರುವ ದನಗಳ ಹತ್ತಿರ ಹಾಲು ಕರೆಯಲು ಹೋಗಿದ್ದಾಗ ನನ್ನ ಅಣ್ಣನಾದ ಮಲ್ಲಿನಾಥ ಮೈಂದರಗಿ, ಮತ್ತು ಆತನ ಹೆಂಡತಿ ಅನಿತಾ ಮೈಂದರಗಿ ಇಬ್ಬರೂ ಕೂಡಿ ಬಂದು ಅವಾಚ್ಯವಾಗಿ ಬೈದು ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 36/2012 ಕಲಂ 323,324,341,504,506 ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIME


ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ:ಶ್ರೀ ಖಾಜಾಹುಸೇನ ತಂದೆ ಗುಲಾಮನಬಿ ಸಾಬ ಅನ್ವರಿ ಉ:ಜೆ.. ಜೆಸ್ಕಾಂ ಸಾ||ಮನೆ ನ: 5-470/15/19/ಎ ಜುಬೇರ ಫಂಕ್ಷನ ಹಾಲ ಹಿಂದುಗಡೆ ಇಸ್ಲಾಮಾಬಾದ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:22/06/2012 ರಂದು ಮಧ್ಯಾನ 3:00 ಪಿಎಮ್ ಕ್ಕೆ ಖಾಜಾಬಂದೆನವಾಜ ದರ್ಗಾದ ಎದುರುಗಡೆ ಗ್ಯಾರಾ ಸಿಡಿಯ ಹತ್ತಿರ ಪಾರ್ಕಿಂಗದಲ್ಲಿ ಹಿರೋ ಹೊಂಡಾ ಸ್ಲೆಂಡರ  ಮೋಟಾರ ಸೈಕಲ ನಂ: ಕೆಎ 37 ಹೆಚ 7538 ನೇದ್ದನ್ನು ನಿಲ್ಲಿಸಿ ದೇವರ ದರ್ಶನ ಮಾಡುವ ಕುರಿತು ದರ್ಗಾ ಒಳಗಡೆ ಹೋಗಿ ದರ್ಶನ ಮುಗಿಸಿಕೊಂಡು ಹೊರಗಡೆ ಬಂದು ನೋಡಿದಾಗ ನನ್ನ ಮೋಟಾರ ಸೈಕಲ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ನನ್ನ ವಾಹನ ಪತ್ತೆಯಾಗಿರುವದಿಲ್ಲಾ ಯಾರೋ ಕಳ್ಳರು ನನ್ನ ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.62/2012 ಕಲಂ.379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.