POLICE BHAVAN KALABURAGI

POLICE BHAVAN KALABURAGI

01 February 2012

GULBARGA DIST REPORTED CRIME

ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ನರೋಣಾ ಪೊಲೀಸ ಠಾಣೆ:
ಶ್ರೀಮತಿ ಮಲ್ಲಮ್ಮ ಗಂಡ ಲಕ್ಷ್ಮಣ ಹರಳಯ್ಯ ಸಾ: ಬಸವನ ಸಂಗೋಳಗಿ ರವರು ನಾನು ಬಸವನ ಸಂಗೋಳಗಿಯಲ್ಲಿ ಪಂಚಾಯತ ವತಿಯಂದ ಕಸಗೂಡಿಸುವ, ಚರಂಡಿ ಸ್ವಚ್ಛ ಮಾಡುವ ಕೆಲಸ ಮಾಡುತ್ತಿರುವೆನು. ನನ್ನಂತೆ ನಮ್ಮೂರಿನ ಅಂಬಾಬಾಯಿ ಗಂಡ ಆನಂದರಾಯ ಬಾದನೆ ಗೋಳ ಇವಳು ಸಹ ನನ್ನಂತೆ ಪಂಚಾಯತ ಸಿಬ್ಬಂದಿ ಇದ್ದು ನಾವಿಬ್ಬರೂ ಕೆಲಸ ಮಾಡುತ್ತಿರುವೆವು.ಪ್ರತಿ ದಿನದಂತೆ ನಾನು ಮತ್ತು ಅಂಬಾಬಾಯಿ ಬಾದನಗೋಳ ಕೂಡಿ ಮುಂಜಾನೆ 6-00 ಗಂಟೆಯ ಸುಮಾರಿಗೆ ಊರಲ್ಲಿ ಹೋಗಿ ಕಸ ಗೂಡಿಸುತ್ತಾ ಮತ್ತು ಚರಂಡಿ ಸ್ವಚ್ಛ ಮಾಡುತ್ತಾ ಶಿವಾನಂದ ತಂದೆ ಬೀರಣ್ಣ ಪೂಜಾರಿ ಇವರ ಮನೆಯ ಹತ್ತಿರದ ಸಾರ್ವಜನಿಕ ಚರಂಡಿಯನ್ನು ನಾವಿಬ್ಬರು ಸ್ವಚ್ಛ ಮಾಡುತ್ತಿರುವಾಗ ಶಿವಾನಂದ ಪೂಜಾರಿ, ಸಿದ್ದಣ್ಣ ಪೂಜಾರಿ, ಸೂರ್ಯಕಾಂತ ಪೂಜಾರಿ, ಇವರು ಬಂದವರೆ ಅವರಲ್ಲಿ ಶಿವಾನಂದನು ಇತನು ಅವಾಚ್ಯವಾಗಿ ಬೈಯುತ್ತಿದ್ದನು. ಆಗ ನಾನು ಪಂಚಾಯತದ ಪಿ ಡಿ ಓ ಸಾಹೇಬರು ಸ್ವಚ್ಛ ಮಾಡಿರಿ ಅಂತಾ ಹೇಳಿದ್ದರಿಂದ ಸ್ವಚ್ಛ ಮಾಡುತ್ತಿದ್ದೇವು ಅಂತಾ ಅಂದಾಗ ಮೂರು ಜನರು ನನಗೆ ಸಮಗಾರತಿ ಅಂತಾ ಜ್ಯಾತಿ ಎತ್ತಿ ಅವಾಚ್ಯವಾಗಿ ಬೈಯುತ್ತಾ ತಲೆಯ ಕೂದಲು ಹಿಡಿದು ಎಳೆದಾಡಿ ನನ್ನ ಕಯಯಲ್ಲಿದ್ದ ಸಲಿಕೆಯಿಂದ ಹೊಡೆದು ರಕ್ತ ಘಾಯ ಪಡಿಸಿರುತ್ತಾರೆ. ವಿನಾಕರಣ ನನಗೆ ಜಗಳಾ ತೆಗೆದು ಬೈಯ್ದು ಜ್ಯಾತಿ ನಿಂದನೆ ಮಾಡಿ ಕೂದಲು ಹಿಡಿದು ಜಗ್ಗಿ ಅವಮಾನ ಮಾಡಿ ಹೊಡೆ ಬಡೆ ಮಾಡಿ ಹಲ್ಲೆ ಮಾಡಿದ ಮೂರು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 16/2012 ಕಲಂ 323 324 504 354 ಸಂ: 34 ಐಪಿಸಿ ಮತ್ತು 3[1][11] ಎಸ್ ಸಿ/ಎಸ್ ಟಿ ಎಕ್ಟ 1989 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:
ಆಳಂದ ಠಾಣೆ :
ಶ್ರೀ ಅಶೋಕರಡ್ಡಿ ತಂದೆ ರಾಮರಡ್ಡಿ ವ: 27 ವರ್ಷ ಪ್ರ. ಮು. ಗುರುಗಳು ಸ.ಹಿ.ಪ್ರಾ.ಶಾಲೆ ಖಂಡಾಳ ನಾನು ದಿನಾಂಕ 31/01/2012 ರಂದು ಸಾಯಾಂಕಾಲ 5.00 ಗಂಟೆಗೆ ಶಾಲೆ ಮುಚ್ಚಿಕೊಂಡು ಹೋಗಿದ್ದು ದಿನಾಂಕ 01/02/2012 ರಂದು 9.00 ಬೆಳಿಗ್ಗೆ ಗಂಟೆಗೆ ನಾನು ಮತ್ತು ಕೆಲವು ಶಾಲಾ ಮಕ್ಕಳು ಶಾಲೆಗೆ ಹೋಗಿ ನೋಡಿದಾಗ ಮುಖ್ಯ ಗುರುಗಳ ಕೋಣೆಯ ಕೊಂಡಿ ಮುರಿದ್ದು ಕೋಣೆಯಲ್ಲಿ ಇರುವ ಟಿ.ವಿ, ಟಿ.ವಿ ಬಾಕ್ಸ್ ಹಾಗೂ ಸೋಲಾರ ಬ್ಯಾಟರಿ ಅಂದಾಜು ಮೊತ್ತ 10800=00 ಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಜೂಜಾಟ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ದಿನಾಂಕ 31/01/12 ರಂದು ಮದ್ಯಾಹ್ನ ಸುಮಾರಿಗೆ ಹಮಾಲವಾಡಿ ಗಲ್ಲಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಟಿ.ಎಚ್.ಕರಿಕಲ್ ಪಿಐ ಅಶೋಕ ನಗರ ಮತ್ತು ಸಿಬ್ಬಂದಿಯವರಾದ ರಾಮು, ರಫಿಕ,ದೇವೆಂದ್ರಪ್ಪ ಪಿಸಿಗಳು ಕೂಡಿ ಜೂಜಾಟಗಾರರ ಮೆಲೆ ದಾಳಿ ಮಾಡಿ ಜೂಜಾಟಗಾರರಿಂದ ಜೂಜಾಟಕ್ಕೆ ಸಂಬಂದಿಸಿ ನಗದು ಹಣ 25300=00 ರೂ ಹಾಗೂ ಇಸ್ಪೀಟ ಎಲೆಗಳು ಜಪ್ತಿ ಮಾಡಿ ಮಲ್ಲಿಕಾರ್ಜುನ ಸಂಗಡ 5 ಜನರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಠಾಣೆ ಗುನ್ನೆ ನಂ 10/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ